Mysuru Dasara: ಈ ಬಾರಿ ದಸರಾಗೆ ಆನೆಗಳು ಬರಲ್ವಾ? ಮಾವುತರ ನಿರ್ಧಾರವೇನು?

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂ ಸವಾರಿ (Jmboo Savari) ನಡೆಯುವುದೋ ಇಲ್ಲವೋ ಎಂಬ ಅನುಮಾನ ಕಾಡತೊಡಗಿದೆ. ಅದಕ್ಕೆ ಕಾರಣ ಸಾಕಾನೆ ಶಿಬಿರಗಳ ಮಾವುತರು ಮತ್ತು ಕವಾಡಿಗರು ದಸರಾಕ್ಕೆ (Dasara) ಆನೆಗಳನ್ನು ನಾವು ಕರೆದೊಯ್ಯುವುದಿಲ್ಲ ಎಂದು ಹಠ ಹಿಡಿದು ಕುಳಿತಿದ್ದಾರೆ.

ಆನೆಗಳೊಂದಿಗೆ ಮಾವುತರು

ಆನೆಗಳೊಂದಿಗೆ ಮಾವುತರು

  • Share this:
ಕೊಡಗು(ಜು.29): ವಿಶ್ವ ಪ್ರಸಿದ್ಧ ಮೈಸೂರು ದಸರಾಕ್ಕೆ (Mysuru Dasara) ಈಗಾಗಲೇ ದಿನಗಳ ಗಣನೆ ಆರಂಭವಾಗಿದೆ. ಆಗಸ್ಟ್ 7 ರಂದು ಎಲ್ಲಾ ಆನೆ ಶಿಬಿರಗಳಿಂದ ಗಜಪಯಣವೂ (Elephants) ಹೊರಡಬೇಕಾಗಿದೆ. ಆದರೆ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂ ಸವಾರಿ (Jmboo Savari) ನಡೆಯುವುದೋ ಇಲ್ಲವೋ ಎಂಬ ಅನುಮಾನ ಕಾಡತೊಡಗಿದೆ. ಅದಕ್ಕೆ ಕಾರಣ ಸಾಕಾನೆ ಶಿಬಿರಗಳ ಮಾವುತರು ಮತ್ತು ಕವಾಡಿಗರು ದಸರಾಕ್ಕೆ (Dasara) ಆನೆಗಳನ್ನು ನಾವು ಕರೆದೊಯ್ಯುವುದಿಲ್ಲ ಎಂದು ಹಠ ಹಿಡಿದು ಕುಳಿತಿದ್ದಾರೆ. ಇದೇ ಕಾರಣಕ್ಕೆ ದಸಾರದಲ್ಲಿ ಜಂಬೂ ಸವಾರಿ ನಡೆಯುವುದಿಲ್ಲವೇ ಎಂಬ ಅನುಮಾನು ಕಾಡುತ್ತಿದೆ.

ಅಷ್ಟಕ್ಕೂ ಮಾವುತರು ಮತ್ತು ಕವಾಡಿಗರು ಪ್ರತಿಭಟನೆ ಮಾಡುತ್ತಿರುವುದಾದರೂ ಏತಕ್ಕೆ ಗೊತ್ತಾ. ಕಳೆದ ಎರಡು ದಶಕಗಳಿಂದ ಮಾವುತರು ಮತ್ತು ಕವಾಡಿಗರಿಗೆ ಇದುವರೆಗೆ ವೇತನ ಪರಿಷ್ಕರಣೆ ಆಗಿಲ್ಲ ಎನ್ನುತ್ತಿದ್ದಾರೆ ಮಾವುತರು ಮತ್ತು ಕವಾಡಿಗರು.

11 ವರ್ಷಗಳಿಂದ ವೇತನ ಪರಿಷ್ಕರಣೆಯೇ ಆಗಿಲ್ಲ

ಕಳೆದ 11 ವರ್ಷಗಳಿಂದ ತಮ್ಮ ವೇತನ ಪರಿಷ್ಕರಣೆ ಮಾಡುವಂತೆ ಆಗ್ರಹಿಸಿ ಪ್ರತೀ ಬಾರಿಯೂ ದಸರಾದ ಸಂದರ್ಭದಲ್ಲೇ ಮಾವುತರು ಕವಾಡಿಗರು ಸ್ವತಃ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿ ವೇತನ ಪರಿಷ್ಕರಣೆ ಮಾಡುವಂತೆ ಒತ್ತಾಯಿಸಿದ್ದರಂತೆ. ಆದರೂ ಇದುವರೆಗೆ ಯಾವೊಬ್ಬ ಮುಖ್ಯಮಂತ್ರಿಯೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇದೀಗ ಮಾವುತರು ಮತ್ತು ಕವಾಡಿಗರು ಪ್ರತಿಭಟನೆ ಆರಂಭಿಸಿದ್ದಾರೆ.ಮಾವುತರ ದೃಢ ನಿರ್ಧಾರ

ರಾಜ್ಯದ ನಾಲ್ಕು ಸಾಕಾನೆ ಶಿಬಿರಗಳ ಮಾವುತರು ಮತ್ತು ಕವಾಡಿಗರು ಕೊಡಗಿನ ದುಬಾರೆಯಲ್ಲಿರುವ ಸಾಕಾನೆ ಶಿಬಿರದಲ್ಲಿ ಸಭೆ ನಡೆಸಿ ವೇತನ ಪರಿಷ್ಕರಣೆ ಮಾಡದ ಹೊರತ್ತು ದಸರಾಕ್ಕೆ ಆನೆಗಳನ್ನು ಕೊರೆದೊಯ್ಯುವುದು ಬೇಡ ಎಂಬ ದೃಢ ನಿರ್ಧಾರಕ್ಕೆ ಬಂದಿದ್ದಾರೆ.

ಇದನ್ನೂ ಓದಿ: Karnataka Weather: ರಾಜ್ಯದಲ್ಲಿ ಮತ್ತೆ ಮಳೆ ಆರಂಭ; ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ಆಗಸ್ಟ್ 7 ರಂದು ಶಿಬಿರಗಳಿಂದ ಮೈಸೂರಿಗೆ ಗಜಪಯಣ

ಆಗಸ್ಟ್ 7 ರಂದು ಶಿಬಿರಗಳಿಂದ ಮೈಸೂರಿಗೆ ಗಜಪಯಣ ಆರಂಭವಾಗಲಿದೆ. ಅಷ್ಟರ ಒಳಗಾಗಿ ನಮ್ಮ ವೇತನ ಪರಿಷ್ಕರಿಸಿ ಹೆಚ್ಚಳ ಮಾಡಬೇಕು. ಅರೆಕಾಲಿಕ ಮಾವುತರು ಮತ್ತು ಕವಾಡಿಗರನ್ನು ಖಾಯಂಗೊಳಿಸಬೇಕು. ಇಲ್ಲದಿದ್ದರೆ ನಮ್ಮ ವಿರುದ್ಧ ಸರ್ಕಾರ ಯಾವುದೇ ಕಠಿಣ ಕ್ರಮಕೈಗೊಂಡರು ನಾವು ದಸರಾಕ್ಕೆ ಆನೆಗಳನ್ನು ಕರೆದೊಯ್ಯುವುದಿಲ್ಲ ಎಂದು ಮಾವುತ ಮತ್ತು ಕವಾಡಿಗರ ಸಂಘದ ರಾಜ್ಯ ಉಪಾಧ್ಯಕ್ಷ ಮಾವುತ ಡೋಬಿ ಹೇಳಿದ್ದಾರೆ.20 ವರ್ಷಗಳಿಂದಲೂ ನಮ್ಮ ವೇತನ ಹೆಚ್ಚಳ

20 ವರ್ಷಗಳಿಂದಲೂ ನಮ್ಮ ವೇತನ ಹೆಚ್ಚಳ ಮಾಡಿಲ್ಲ. ಅಂದು ಎಷ್ಟು ಸಂಬಳ ಸಿಗುತಿತ್ತೋ ಇಂದಿಗೂ ಅದೇ ಸಂಬಳಕ್ಕೆ ದುಡಿಯುತ್ತಿದ್ದೇವೆ. ಎಷ್ಟೇ ಮನವಿ ಮಾಡಿದರೂ ನಮ್ಮ ಮನವಿ ಸ್ವೀಕರಿಸುವ ಮುಖ್ಯಮಂತ್ರಿಗಳು ಅದನ್ನು ಮೂಲೆಗೆ ಎಸೆದು ಬಿಡುತ್ತಾರೆ. ಆನೆಗಳನ್ನು ಪಳಗಿಸಿ ನೂರಾರು ಜನರಿಗೆ ರಕ್ಷಣೆ ನೀಡುತ್ತಿದ್ದೇವೆ. ಆದರೆ ನಮಗೆ ಏನಾದರೂ ಆದಲ್ಲಿ ಯಾವುದೇ ಆರೋಗ್ಯದ ಭತ್ಯೆಗಳಿಲ್ಲ. ಇದನ್ನು ಹಲವು ಬಾರಿ ಪ್ರಶ್ನಿಸಿದ್ದರೂ ಯಾರು ಗಮನಹರಿಸಿಲ್ಲ.

ಇದನ್ನೂ ಓದಿ: Praveen Nettaru: ರಾಜೀನಾಮೆ ನೀಡುವ ಬಿಜೆಪಿ ಪದಾಧಿಕಾರಿಗಳಿಗೆ ಅಭಿನಂದನೆ; ಬಿಜೆಪಿ ವಿರುದ್ಧ ಮುತಾಲಿಕ್ ಕಿಡಿ

ಹೀಗಾಗಿ ದಸರಾ ಅಷ್ಟೇ ಅಲ್ಲ, ವೇತನ ಪರಿಷ್ಕರಣೆ ಮಾಡದಿದ್ದರೆ ನಾವು ಆನೆ ಕಾರ್ಯಾಚರಣೆ ಮತ್ತು ಹುಲಿ ಕಾರ್ಯಾಚರಣೆಗಳಿಗೂ ಹೋಗುವುದಿಲ್ಲ. ನಮ್ಮ ವಿರುದ್ಧ ಸರ್ಕಾರ ಅದ್ಯಾವ ಕಠಿಣ ಶಿಸ್ತು ಕ್ರಮ ಕೈಗೊಂಡರೂ ನಾವು ನಮ್ಮ ಈ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಕವಾಡಿ ಮೇಘರಾಜ್ ಹೇಳಿದ್ದಾರೆ. ಒಟ್ಟಿನಲ್ಲಿ ಸರ್ಕಾರ ಇವರ ಬೇಡಿಕೆಯನ್ನು ಆಲಿಸುತ್ತಾ ಇಲ್ಲ ಮತ್ತೆ ಮನವೊಲಿಸಿ ಸುಮ್ಮನಾಗಿ ಬಿಡುತ್ತಾ ಕಾದು ನೋಡಬೇಕಾಗಿದೆ.
Published by:Divya D
First published: