ಕೊಡಗಿನಲ್ಲಿ ಅಕ್ಟೋಬರ್ 2ರಂದು ಚುನಾವಣೆ ನಡೆಸಲು ಆಯೋಗ ನಿರ್ಧಾರ ?

news18
Updated:August 28, 2018, 4:02 PM IST
ಕೊಡಗಿನಲ್ಲಿ ಅಕ್ಟೋಬರ್ 2ರಂದು ಚುನಾವಣೆ ನಡೆಸಲು ಆಯೋಗ ನಿರ್ಧಾರ ?
news18
Updated: August 28, 2018, 4:02 PM IST
- ರಮೇಶ್ ಹಿರೇಜಂಬೂರು,  ನ್ಯೂಸ್ 18 ಕನ್ನಡ

ಬೆಂಗಳೂರು (28) : ಭೂಕುಸಿತ ದಿಂದ ತತ್ತರಿಸಿರುವ ಕೊಡಗು ಜಿಲ್ಲೆಯ  ಪಟ್ಟಣ ಪಂಚಾಯತ್ ಚುನಾವಣೆಯನ್ನು ಬರುವ ಅಕ್ಟೋಬರ್ ತಿಂಗಳಿನಲ್ಲಿ ನಡೆಸಲು ಚುನಾವಣೆ ಆಯೋಗ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಇದೇ 31 ರಂದು ಚುನಾವಣೆ ನಡೆಯಬೇಕಾಗಿತ್ತು. ಕೊಡಗಿನಲ್ಲಿ ಭೂಕುಸಿತದಿಂದಾಗಿ ಚುನಾವಣೆಯನ್ನು ಮುಂದೂಡಲಾಗಿತ್ತು. ಈ ಬಗ್ಗೆ ಚುನಾವಣಾ ಆಯೋಗ ಕೊಡಗು ಚುನಾವಣೆ ನಡೆಸುವ ಸ್ಥಿತಿಗತಿ ಬಗ್ಗೆ ಜಿಲ್ಲಾಧಿಕಾರಿ ಯಿಂದ ವರದಿ ನೀಡುವಂತೆ ಕೇಳಿತ್ತು ಅದಕ್ಕೆ ಜಿಲ್ಲಾಧಿಕಾರಿಗಳು ಅಕ್ಟೋಬರ್​ನಲ್ಲಿ ಚುನಾವಣೆ ನಡೆಸಬಹುದೆಂದು ವರದಿಯನ್ನು ನೀಡಿದ್ದಾರೆ

ಚುನಾವಣಾ ಆಯೋಗ ಬರುವ ಅಕ್ಟೋಬರ್ 2ನೇ ವಾರದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದ್ದು. ಕೊಡಗು ಜಿಲ್ಲೆಯ  ವಿರಾಜಪೇಟೆ, ಸೋಮವಾರಪೇಟೆ, ಕುಶಾಲನಗರ  ಪಟ್ಟಣ ಪಂಚಾಯತ್ ಗೆ ಚುನಾವಣೆ ನಡೆಯಲಿದೆ.

ಈಗ 105 ಸ್ಥಳೀಯ ಸಂಸ್ಥೆಗಳಿಗೆ ಇದೇ ಶುಕ್ರವಾರ ಮತದಾನ ನಡೆಯುತ್ತಿದ್ದು, ಸೋಮವಾರ ಫಲಿತಾಂಶ ಹೊರಬೀಳಲಿದೆ. ಮೈಸೂರು, ತುಮಕೂರು ಮತ್ತು ಶಿವಮೊಗ್ಗ, ಮಹಾನಗರ ಪಾಲಿಕೆಗಳೂ ಚುನಾವಣೆಯಲ್ಲಿ ಬಾಗಿಯಾಗಿವೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...