ಏಷ್ಯಾದಲ್ಲೇ ಪ್ರಸಿದ್ಧಿ ಕೊಡಗಿನ ಮಡಿಕೆ ಜೇನು; ಔಷಧ ಗುಣ ಹೊಂದಿರುವ ಈ ಕಲತ್ತೇನ್​ಗೆ ಭಾರೀ ಬೇಡಿಕೆ

ಮಡಿಕೆ ಜೇನಿಗೆ ಇರುವ ವಿಶೇಷ ಗುಣಮಟ್ಟ ಏಷ್ಯಾಖಂಡದಲ್ಲೇ ಪ್ರಸಿದ್ಧಿ ಹೊಂದುವಂತೆ ಮಾಡಿದೆ.

ಮಡಿಕೆ ಜೇನಿಗೆ ಇರುವ ವಿಶೇಷ ಗುಣಮಟ್ಟ ಏಷ್ಯಾಖಂಡದಲ್ಲೇ ಪ್ರಸಿದ್ಧಿ ಹೊಂದುವಂತೆ ಮಾಡಿದೆ.

ಮಡಿಕೆ ಜೇನಿಗೆ ಇರುವ ವಿಶೇಷ ಗುಣಮಟ್ಟ ಏಷ್ಯಾಖಂಡದಲ್ಲೇ ಪ್ರಸಿದ್ಧಿ ಹೊಂದುವಂತೆ ಮಾಡಿದೆ.

  • Share this:
ಕೊಡಗು (ಆ. 30): ಇಂದು ಮಾರುಕಟ್ಟೆಗಳಲ್ಲಿ ವಿವಿಧ ಕಂಪನಿಗಳ ಜೇನಿನ (honey) ಜಾಹಿರಾತುಗಳು ಭಾರೀ ಅಬ್ಬರ ಮಾಡುತ್ತಿವೆ. ಆದರೆ ರುಚಿ, ಔಷಧಿಗುಣ ಮತ್ತು ಸುವಾಸನೆ ಸೇರಿದಂತೆ ಹಲವು ಕಾರಣಗಳಿಂದ ಕೊಡಗಿನ 'ಕಲತ್ತೇನ್' (klaten honey)  ಅಂದರೆ ಮಡಿಕೆ ಜೇನು ಏಷ್ಯಾಖಂಡದಲ್ಲೇ ಪ್ರಸಿದ್ಧಿ ಪಡೆದಿದೆ. ಹೌದು ಅಷ್ಟಕ್ಕೂ ಈ ಜೇನು ಉತ್ಪಾದನೆ ಆಗೋದು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಮುಟ್ಲು, ಹಮ್ಮಿಯಾಲ ಗ್ರಾಮಗಳಲ್ಲಿ. ಪಶ್ಚಿಮ ಘಟ್ಟದಲ್ಲಿರುವ ಈ ಗ್ರಾಮಗಳ ಕೆಲವೇ ಕೆಲವು ಕುಟುಂಬಗಳು ಈ ಮಡಿಕೆ ಜೇನು ಉತ್ಪಾದಿಸುತ್ತವೆ. ಅಷ್ಟಕ್ಕೂ ಆಧುನಿಕವಾಗಿ ಜೇನು ಉತ್ಪಾದಿಸಲು ಮರದ ಪೆಟ್ಟಿಗೆ ಬಳಸಲಾಗುತ್ತದೆ. ಆದರೆ ಪೆಟ್ಟಿಗೆ ಕೊಳ್ಳಲು ಸಾವಿರಾರು ರೂಪಾಯಿ ವ್ಯಯಿಸಬೇಕಾಗಿರುವುದರಿಂದ ಈ ಕುಟುಂಬಗಳು ಕಡಿಮೆ ಬೆಲೆಯಲ್ಲಿ ಸಿಗುವ ಮಣ್ಣಿನ ಮಡಿಕೆಗಳನ್ನೇ ಬಳಸಿಕೊಂಡು ಜೇನು ಉತ್ಪಾದನೆ ಮಾಡುತ್ತವೆ. ಅರ್ಥಾತ್ ಬಡತನವೇ ಈ ಮಡಿಕೆ ಜೇನು ಉತ್ಪಾದನೆಗೆ ಮೂಲ ಕಾರಣ ಎನ್ನುತ್ತಾರೆ ಜೇನು ಉದ್ಯಮಿ ತಮ್ಮು ಪೂವಯ್ಯ. ಆದರೆ ಮಡಿಕೆ ಜೇನಿಗೆ ಇರುವ ವಿಶೇಷ ಗುಣಮಟ್ಟ ಏಷ್ಯಾಖಂಡದಲ್ಲೇ ಪ್ರಸಿದ್ಧಿ ಹೊಂದುವಂತೆ ಮಾಡಿದೆ.

ಪಶ್ಚಿಮಘಟ್ಟದಲ್ಲಿ 9 ಸಾವಿರಕ್ಕೂ ಹೆಚ್ಚು ಸಸ್ಯ ಪ್ರಭೇದಗಳಿದ್ದು, ಅವುಗಳಲ್ಲಿ 6700 ಪ್ರಭೇಧದ ಸಸ್ಯಗಳು ಡಿಸೆಂಬರ್ ನಿಂದ ಮೇ ಅಂತ್ಯದವರೆಗೆ ಇವು ಹೂಬಿಡುತ್ತವೆ. ಹೀಗಾಗಿ ಮೇ ಅಂತ್ಯ ಅಥವಾ ಜೂನ್ ಆರಂಭದಲ್ಲಿ ಮಾತ್ರವೇ ಮಡಿಕೆ ಜೇನು ಉತ್ಪಾದನೆ ಆಗುತ್ತದೆ. ಡಿಸೆಂಬರ್ ತಿಂಗಳಲ್ಲಿ ಜೇನಿನ ಮೇಣವನ್ನು ಕರಗಿಸಿ ಅದನ್ನು ಮಡಿಕೆಗೆ ಸವರಿ ಕಲ್ಲುಬಂಡೆಗಳು ಮತ್ತು ಮರಗಳ ಪೊಟರೆಗಳಲ್ಲಿ ಇರಿಸಲಾಗುತ್ತದೆ. ಈ ಮಡಿಕೆಗಳಿಗೆ ಜೇನು ಹುಳುಗಳು ಬಂದು ಕುಳಿತುಕೊಳ್ಳುತ್ತವೆ. ಬಳಿಕ ಈ ಮಡಿಕೆಗಳನ್ನು ತಮ್ಮ ಮನೆಯ ಹಿಂದಿನ ತೋಟ ಅಥವಾ ಕಾಡಿನಲ್ಲಿ ಇರಿಸಿಕೊಳ್ಳುತ್ತಾರೆ. ಹೀಗೆ ಡಿಸೆಂಬರ್ ನಿಂದ ಮೇ ಅಂತ್ಯದವರೆಗೆ ಸಂಗ್ರಹವಾದ ಜೇನನ್ನು ಜೂನ್ ತಿಂಗಳಲ್ಲಿ ಕೊಯ್ಲು ಮಾಡಲಾಗುತ್ತದೆ ಎನ್ನುತ್ತಾರೆ ಮುಟ್ಲು ಗ್ರಾಮದ ಜೇನು ಕೃಷಿಕ ಕಾರ್ಯಪ್ಪ.ಸದ್ಯ ಕಾರ್ಯಪ್ಪ ಅವರು 50 ಮಡಿಕೆಗಳಲ್ಲಿ 300 ರಿಂದ 350 ಬಾಟಲ್ ಮಡಿಕೆ ಜೇನು ಉತ್ಪಾದಿಸಿ ಪ್ರತೀ ಬಾಟಲ್ ಗೆ 600 ರೂಪಾಯಿಯಂತೆ 1.50 ಲಕ್ಷದವರೆಗೆ ಆದಾಯ ಗಳಿಸುತ್ತಿದ್ದಾರೆ. ಆಧುನಿಕ ಪದ್ಧತಿಯಲ್ಲಿ ಮರದ ಪೆಟ್ಟಿಗೆಯಲ್ಲಿ ಬೆಳೆಯುವ ಜೇನು ವರ್ಷದಲ್ಲಿ ಮೂರರಿಂದ ನಾಲ್ಕು ಬಾರಿ ಜೇನು ಉತ್ಪಾದನೆ ಮಾಡುತ್ತವೆ. ಆದರೆ ಮಡಿಕೆ ಜೇನು ವಸಂತ ಮಾಸದಲ್ಲಿ ಅರಳುವ ಹೂವಿನಿಂದ ಮಾತ್ರವೇ ಮಧುವನ್ನು ಸಂಗ್ರಹಿಸುತ್ತವೆ. ಅಂದರೆ ಡಿಸೆಂಬರ್ ನಿಂದ ಮೇ ಅಂತ್ಯದವರೆಗೆ ಅರಳುವ ಹೂವುಗಳಿಂದ ಜೇನುಹುಳುಗಳು ಮಕರಂದವನ್ನು ಹೀರಿ ಸಂಗ್ರಹಿಸುತ್ತವೆ. ಹೀಗಾಗಿ ಈ ಜೇನಿನಲ್ಲಿ ಅತ್ಯಂತ ಹೆಚ್ಚು ಔಷಧಿ ಗುಣವಿರುತ್ತದೆ ಎನ್ನುತ್ತಾರೆ ಮಡಿಕೆ ಜೇನು ಕೃಷಿ ಮಾಡುವ ನೇತ್ರಾವತಿ.

ಒಮ್ಮೆ ದೆಹಲಿಯಲ್ಲಿ ನಡೆದ ಜೇನು ಮೇಳದಲ್ಲಿ ಏಷ್ಯಾಖಂಡದ ವಿವಿಧ ದೇಶಗಳ ಹಲವು ಕಂಪನಿಗಳ ಜೇನನ್ನು ಇರಿಸಲಾಗಿತ್ತು. ಆದರೆ ಕೊಡಗಿನ ಮಡಿಕೆ ಜೇನು ಎಲ್ಲವನ್ನೂ ಮೀರಿದ ಗುಣಮಟ್ಟ ಹೊಂದಿತ್ತು. ಹೀಗಾಗಿ ಏಷ್ಯಾದಲ್ಲೇ ಮಡಿಕೆ ಜೇನಿಗೆ ಹೆಚ್ಚಿನ ಬೇಡಿಕೆಯೂ ಇದೆ ಎನ್ನುತ್ತಾರೆ ಉದ್ಯಮಿ ತಮ್ಮು ಪೂವಯ್ಯ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Seema R
First published: