ಕನ್ನಡ ಸಿನಿಮಾ ನಿರ್ದೇಶಕರ ಪಾಲಿನ ಸ್ವರ್ಗವಾಗಿದ್ದ ಕೊಡಗು ಈಗ ನರಕ ಸದೃಶವಾಗಿದೆ

news18
Updated:August 22, 2018, 11:17 AM IST
ಕನ್ನಡ ಸಿನಿಮಾ ನಿರ್ದೇಶಕರ ಪಾಲಿನ ಸ್ವರ್ಗವಾಗಿದ್ದ ಕೊಡಗು ಈಗ ನರಕ ಸದೃಶವಾಗಿದೆ
news18
Updated: August 22, 2018, 11:17 AM IST
ನ್ಯೂಸ್​ 18 ಕನ್ನಡ 

ಕೊಡಗು-ಸ್ಕಾಟ್‍ಲೆಂಡ್​ ಆಫ್ ಇಂಡಿಯಾ ಎಂದೇ ಖ್ಯಾತಿ ಪಡೆದ ನಾಡು. ಇದು ಕನ್ನಡ ಮಾತ್ರವಲ್ಲದೆ ಹಿಂದಿ ಸಿನಿಮಾಗಳಿಗೂ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದ ಜಾಗ. ಅದರಲ್ಲೂ ಕಡಿಮೆ ಬಜೆಟ್​ನ ನಿರ್ಮಾಪಕರ ಪಾಲಿಗೆ ನಿಜಕ್ಕೂ ಸ್ವರ್ಗವೇ ಆಗಿತ್ತು ಎಂದರೆ ತಪ್ಪಾಗದು. ಉಳ್ಳವರು ವಿದೇಶಗಳಲ್ಲಿ ಚಿತ್ರೀಕರಣ ಮಾಡಿದರೆ, ಕಡಿಮೆ ಹಣ ಹಾಕಿ ಸಿನಿಮಾ ಮಾಡುತ್ತಿದ್ದವರಿಗೆ ಕೊಡಗು ಕೈ ಬೀಸಿ ಕರೆಯುತ್ತಿತ್ತು. ಹೀಗೆ ಬಡ ನಿರ್ಮಾಪಕರ ಪಾಲಿನ ಆಪದ್ಭಾಂಧವನಂತಿತ್ತು.  ಹೀಗಾಗಿಯೇ ಕನ್ನಡದ ಸಾಕಷ್ಟು ಸಿನಿಮಾಗಳು ಈ ನೆಲದಲ್ಲೇ ಚಿತ್ರೀಕರಣಗೊಂಡು ಬಾಕ್ಸಾಫಿಸ್​ ಅನ್ನು ಕೊಳ್ಳೆ ಹೊಡೆದಿವೆ.

'ಮಂಜಿನ ಹನಿ', 'ಗಾಳಿಪಟ', 'ಮುಂಗಾರಿನ ಮಿಂಚು', 'ಮುತ್ತಿನ ಹಾರ', 'ಹುಲಿಯ ಹಾಲಿನ ಮೇವು', 'ಎಡಕಲ್ಲು ಗುಡ್ಡದ ಮೇಲೆ', 'ಮುಂಗಾರುಮಳೆ', 'ಸಂಜು ವೆಡ್ಸ್​ ಗೀತಾ', 'ಮಳೆ ಬರಲಿ ಮಜು ಇರಲಿ', 'ಸಿಪಾಯಿ', 'ರಾಜಕುಮಾರಿ', 'ಜೀವನದಿ', 'ಕೊಡಗಿನ ಕಾವೇರಿ', 'ಮೊದಲಾಸಲ' ಸೇರಿದಂತೆ ಹಲವಾರು ಸಿನಿಮಾಗಳು ಕೊಡಗಿನಲ್ಲೇ ಚಿತ್ರೀಕರಣಗೊಂಡಿವೆ. ಇನ್ನೂ ಪ್ರಿಯಾಂಕಾ ಚೋಪ್ರಾ ಅಭಿನಯದ 'ಸಾತ್​ ಖೂನ್​ ಮಾಫ್​' ಸಿನಿಮಾದ ಸ್ವಲ್ಪ ಭಾಗ ಸಹ ಇಲ್ಲೇ ಚಿತ್ರೀಕರಣಗೊಂಡಿತ್ತು.ರವಿಚಂದ್ರನ್ ಅಭಿನಯದ 'ದೃಶ್ಯ' ಸಿನಿಮಾದ ಬಹುತೇಕ ದೃಶ್ಯಗಳು ಶೂಟ್ ಆದದ್ದು ಕೊಡಗಿನಲ್ಲಯೇ.  ರವಿಚಂದ್ರನ್  ಅವರು ಹೆಣ್ಣು, ಹಣ್ಣು ಹಾಗೂ ಹಸಿರನ್ನು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಆಕರ್ಷಕವಾಗಿ ತೋರಿಸಿದ ನಿರ್ದೇಶಕ. ಹಸಿರು ಅಂದರೆ ಈ ಕನ್ನಡದ ಕ್ರೇಜಿಸ್ಟಾರ್​ಗೆ ಇನ್ನಿಲ್ಲದ ಕ್ರೇಜ್. ಅಂತಹ ಕ್ರೇಜಿಸ್ಟಾರ್ ಅಚ್ಚುಮೆಚ್ಚಿನ ತಾಣ ಕೊಡಗು.


Loading...

ಆದರೆ, ಈಗ ಎಲ್ಲವೂ ಸರ್ವನಾಶ.. ಏನೇನೂ ಉಳಿದಿಲ್ಲ.. ಇದೇನಾ ಆ ಕೊಡಗು ಅನ್ನಿಸುವಂತಿದೆ ಅಲ್ಲಿನ ದೃಶ್ಯಗಳು.. ಒಂದು ಕಾಲದಲ್ಲಿ ದೃಶ್ಯ ವೈಭವ ಮೆರೆಯುತ್ತಿದ್ದ ಕೊಡಗು ಈಗ ನರಕ ಸದೃಶವಾಗಿದೆ. ಹಸಿರು ಇದ್ದ ಜಾಗದಲ್ಲೆಲ್ಲಾ ಕೆಂಪು ಮಣ್ಣು.. ಕಲ್ಲು.. ಕೆಸರು..

ಕಡಿಮೆ ಬಜೆಟ್ ಸಿನಿಮಾದವರ ಪಾಲಿಗೆ ಕಲ್ಪವೃಕ್ಷದಂತಿದ್ದ ಕೊಡಗು ಈಗ ಏನೂ ಇಲ್ಲದೇ ಖಾಲಿ ಖಾಲಿ ಹೊಡೆಯುತ್ತಿದೆ. ತಮಗೆ ಜೀವನ ಕಟ್ಟಿಕೊಟ್ಟ ಕೊಡಗಿಗೆ, ಮರಳಿ ಕೊಡುವ ಮನಸ್ಸು ಮಾಡಿದ್ದಾರೆ ಸ್ಯಾಂಡಲ್​ವುಡ್​ ಮಂದಿ.
First published:August 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...