Kodagu: ಹಿಂದೂ ಕಾರ್ಯಕರ್ತರ ಮೇಲೆ ರೌಡಿ ಶೀಟರ್ ಪ್ರಕರಣ! ಬೃಹತ್ ಪ್ರತಿಭಟನೆ

ಹಿಂದೂ ಜಾಗರಣ ವೇದಿಕೆ ಯುವ ವಾಹಿನಿ ಜಿಲ್ಲಾ ಸಂಚಾಲಕ ವಿನಯ್  ಮಾತನಾಡಿ ಜಿಲ್ಲೆಯ ವಿವಿಧೆಡೆ ಪೊಲೀಸರು ಒಂದು ರೀತಿ ಇದ್ದರೆ ಕುಶಾಲನಗರ ಸರ್ಕಲ್ ಇನ್ಸ್‌ಪೆಕ್ಟರ್ ಒಂದು ರೀತಿಯಲ್ಲಿ ಇದ್ದಾರೆ. ಹೀಗಾಗಿ ಅವರ ವಿರುದ್ಧ ಜಿಲ್ಲೆಯ ವಿವಿಧ ಕಡೆಯಿಂದ ಕಾರ್ಯಕರ್ತರು ಆಗಮಿಸಿ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿದ್ದೇವೆ ಎಂದರು.

ಕೊಡಗಿನಲ್ಲಿ ಪ್ರತಿಭಟನಾ ಮೆರವಣಿಗೆ

ಕೊಡಗಿನಲ್ಲಿ ಪ್ರತಿಭಟನಾ ಮೆರವಣಿಗೆ

  • Share this:
ಕೊಡಗು(ಜು.30): ಹಿಂದೂ ಕಾರ್ಯಕರ್ತರ ಮೇಲಿರುವ ರೌಡಿಶೀಟರ್ ಪ್ರಕರಣಗಳ ತೆರವುಗೊಳಿಸಲು ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಮಡಿಕೇರಿಯಲ್ಲಿ (Madikeri) ನೂರಾರು ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಿಂದ ಪ್ರತಿಭಟನಾ ಮೆರವಣಿಗೆಗೆ (Protest March) ಆರಂಭಿಸಿದ ವೇದಿಕೆ ಕಾರ್ಯಕರ್ತರು ತಿಮ್ಮಯ್ಯ ವೃತ್ತದಿಂದ ಕೊಡಗು (Kodagu) ಪೊಲೀಸ್ ವರಿಷ್ಠಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಚೌಕಿ, ಪೇಟೆ ರಾಮಮಂದಿರ ರಸ್ತೆ ಮಾರ್ಗವಾಗಿ ಎಸ್ಪಿ ಕಚೇರಿ ತಲುಪಿದರು. ನೂರಾರು ಪ್ರತಿಭಟನಾಕಾರರು ಇದ್ದ ಹಿನ್ನೆಲೆಯಲ್ಲಿ ಪೊಲೀಸರು (Police) ಮಡಿಕೇರಿಯಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

ಸ್ವತಃ ಎಸ್ಪಿ ಎಂ ಎ ಅಯ್ಯಪ್ಪ ಅವರು ಇಂದಿರಾಗಾಂಧಿ ವೃತ್ತದಲ್ಲಿ ಎಚ್ಚರಿಕೆ ವಹಿಸಿ ಫೀಲ್ಡಿಗಿಳಿದಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಈ ಸಂದರ್ಭ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣ ವೇದಿಕೆ ಯುವ ವಾಹಿನಿ ಜಿಲ್ಲಾ ಸಂಚಾಲಕ ವಿನಯ್  ಮಾತನಾಡಿ ಜಿಲ್ಲೆಯ ವಿವಿಧೆಡೆ ಪೊಲೀಸರು ಒಂದು ರೀತಿ ಇದ್ದರೆ ಕುಶಾಲನಗರ ಸರ್ಕಲ್ ಇನ್ಸ್‌ಪೆಕ್ಟರ್ ಒಂದು ರೀತಿಯಲ್ಲಿ ಇದ್ದಾರೆ. ಹೀಗಾಗಿ ಅವರ ವಿರುದ್ಧ ಜಿಲ್ಲೆಯ ವಿವಿಧ ಕಡೆಯಿಂದ ಕಾರ್ಯಕರ್ತರು ಆಗಮಿಸಿ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿದ್ದೇವೆ ಎಂದರು.

ನಮ್ಮ ಸಂಘಟನೆ ನಮಗೆ ಸಂಸ್ಕೃತಿ ಕಲಿಸಿದೆ

ಸಂವಿಧಾನಬದ್ಧವಾಗಿ ಹೋರಾಟ ಮಾಡುವ ನಮ್ಮ ವಿರುದ್ಧ ಕ್ರಮಕೈಗೊಳ್ಳುವ ಬದಲು ಸ್ಟೇಷನ್ ಗೆ ಬಾಂಬ್ ಹಾಕುವ, ಮನೆಗಳಿಗೆ ಬೆಂಕಿ ಹಾಕುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು. ನಮ್ಮ ಸಂಘಟನೆ ನಮಗೆ ಸಂಸ್ಕೃತಿ ಕಲಿಸಿದೆ ಎಂದರು.



ಕುಶಾಲನಗರದ ಸಿಪಿಐ ಅವರು ಯಾರೋ ಸುಳ್ಳು ಕೇಸು ನೀಡಿದ್ದನ್ನು ದಾಖಲಿಸಿಕೊಂಡು ನಮ್ಮ ಕಾರ್ಯಕರ್ತರನ್ನು ಬಂಧಿಸಿದರು. ಮುಸಲ್ಮಾನರಿಗೆ ಒಂದು ಕಾನೂನು ಹಿಂದೂಗಳಿಗೆ ಒಂದು ಕಾನೂನು ಎನ್ನುವಂತೆ ವರ್ತಿಸುತಿದ್ದಾರೆ ಎಂದರು. ಗೋರಕ್ಷಣೆ ಮಾಡಿದವರ ವಿರುದ್ಧ ಗೂಂಡಾ ಪ್ರಕರಣ ದಾಖಲು ಮಾಡಲಾಗುತ್ತಿದೆ. ಹೊರಗಿನಿಂದ ಬರುವ ಅಧಿಕಾರಿಗಳಿಗೆ ಕೊಡಗಿನ ಪರಿಸ್ಥಿತಿ ಗೊತ್ತಿಲ್ಲ.

ಸಿಪಿಐಯನ್ನು ವರ್ಗಾವಣೆ ಮಾಡುವವರೆಗೆ ನಮ್ಮ ಹೋರಾಟ

ಅಂತಹ ಸಿಪಿಐಯನ್ನು ವರ್ಗಾವಣೆ ಮಾಡುವವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ. ಕೊಡಗಿನಲ್ಲಿ ಗೋಹತ್ಯೆ ತಡೆದಿದ್ದರೆ ಅವುಗಳನ್ನು ರಕ್ಷಣೆ ಮಾಡಿಕೊಳ್ಳುವುದು ಕೊಡಗಿನ ರೈತರಿಗೆ ಗೊತ್ತಿದೆ ಎಂದರು.



ಹಿಂದೂ ಜಾಗರಣ ವೇದಿಕೆ ಪ್ರಾಂತ ಸಂಯೋಜಕ್ ಲೋಹಿತ್ ಅರಸ್ ಮಾತನಾಡಿ ಹಿಂದಿನಿಂದಲೂ ಹಿಂದೂ ಸಮಾಜದ ರಕ್ಷಣೆಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ. ಆದರೆ ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳನ್ನು ಹಾಕಲಾಗುತ್ತಿದೆ. ಇಂತಹ ಅಧಿಕಾರಿಗಳು ಪೊಲೀಸ್ ಇಲಾಖೆಯಲ್ಲಿ ಇರುವುದು ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ. ಹಿಂದೂಪರ ಸಂಘಟನೆಗಳಲ್ಲಿ ಗೋರಕ್ಷಣೆ ಅಥವಾ ದೇಶ ರಕ್ಷಣೆಗಾಗಿ ಹೋರಾಡುತ್ತೇವೆ. ಅಥವಾ ಲವ್ ಜಿಹಾದ್ ಮಾಡುವುದರ ವಿರುದ್ಧ ಹೋರಾಡುತ್ತೇವೆ. ಹೀಗಿರುವಾಗ ನಮ್ಮ ಮೇಲೆ ಕಮ್ಯುನಲ್ ಗೂಂಡಾ ಪ್ರಕರಣ ದಾಖಲಿಸಿ ಸಂಘಟನೆ ಶಕ್ತಿ ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ.

ಇದನ್ನೂ ಓದಿ: Kolara: ಕಾಂಗ್ರೆಸ್ ಕಿತ್ತಾಟ, ವಿಡಿಯೋ ಶೂಟ್ ಮಾಡಿದ ಪತ್ರಕರ್ತನ ಮೇಲೆ ಮಾಜಿ ಸ್ಪೀಕರ್ ಹಲ್ಲೆ

ಅದು ಕೂಡ ಬಸವರಾಜ ಬೊಮ್ಮಾಯಿ ಅವರು ಸಿಎಂ ಆದ ಬಳಿಕ ಇಂತಹ ಘಟನೆಗಳು ತೀವ್ರಗೊಂಡಿವೆ ಎಂದರು. ತಡರಾತ್ರಿ 10 ಗಂಟೆವರೆಗೆ ಎಸ್ಪಿ ಕಚೇರಿ ಎದುರೇ ಪ್ರತಿಭಟನೆ ಮಾಡಲಾಗುತ್ತಿತ್ತು. ಉಸ್ತುವಾರಿ ಸಚಿವ ಬಿ ಸಿ ನಾಗೇಶ್ ಪ್ರತಿಭಟನಾಕಾರರಿಗೆ ಫೋನ್ ಮಾಡಿ ಆ ಪೊಲೀಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು.
Published by:Divya D
First published: