Kodagu: ಕಾಡಾನೆ ನಿಯಂತ್ರಣಕ್ಕೆ ಕುಣಿದು ಹಾಡುತ್ತಾ ಹಾಡಿಯ ಕಾವಲು ಕಾಯುತ್ತಿರುವ ಗಿರಿಜನರು

ಪ್ರತಿ ರಾತ್ರಿ ಪೂರ್ತಿ ಹಾಡಿಯ ಬೀದಿಯಲ್ಲಿ ಬೆಂಕಿ ಹಾಕಿ ಚಪ್ಪಾಳೆ ತಟ್ಟುತ್ತಾ, ಹಾಡು ಹಾಡು ಕುಣಿಯುತ್ತಾ, ಹಾಡಿಯಲ್ಲಿ ಭಜನೆ ಮಾಡುತ್ತಾ ಆನೆಗಳು ಬಂದಲ್ಲಿ ಮತ್ತಷ್ಟು ಜೋರು ಶಬ್ದ ಮಾಡುತ್ತಾ ಆನೆಗಳನ್ನು ಓಡಿಸುವ ಕೆಲಸ ಮಾಡುತ್ತಿದ್ದಾರೆ.

ಹಾಡಿಯ ಗಿರಿಜನರು

ಹಾಡಿಯ ಗಿರಿಜನರು

  • Share this:
ಕೊಡಗು(ಮಾ.15): ಕಾಡಾನೆಗಳ ಹಾವಳಿ ತಪ್ಪಿಸಿ ಹಾಡಿ ಜನರಿಗೆ ರಕ್ಷಣೆ ಕೊಡೋದಕ್ಕೆ ಅಂತ ಕೊಡಗಿನ ಚನ್ನಂಗಿಬಸವನಹಳ್ಳಿ ಹಾಡಿಗೆ ಸಾಕಾನೆಗಳನ್ನು ಕಾವಲು ನೇಮಿಸಿದ್ದು ಗೊತ್ತೇ ಇದೆ. ಈ ಕುರಿತು ನ್ಯೂಸ್ 18 ಕೂಡ ವರದಿ ಪ್ರಸಾರ ಮಾಡಿತ್ತು. ಆದರೆ ಸಾಕಾನೆಗಳನ್ನು ಕಾವಲಿಗೆ ನೇಮಿಸಿದ್ದ ಅರಣ್ಯ ಇಲಾಖೆ ಒಂದೇ ವಾರಕ್ಕೆ ಆನೆಗಳನ್ನು ಹಿಂದಕ್ಕೆ ಕರೆಸಿಕೊಂಡಿದೆ. ಇದು ಹಾಡಿ ಜನರು ಕೋಪಗೊಳ್ಳುವಂತೆ ಮಾಡಿದೆ. ಹೌದು ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಚನ್ನಂಗಿ ಬಸವನಹಳ್ಳಿ ಹಾಡಿಗೆ ನಿತ್ಯ ಕಾಡಾನೆಗಳು ದಾಳಿ ಮಾಡಿ ಮನೆಗಳಿಗೆ ನುಗ್ಗುತ್ತಿದ್ದವು. ಹೀಗೆ ನುಗ್ಗಿದ ಕಾಡಾನೆಗಳು ಮನೆಯಲ್ಲಿದ್ದ ಆಹಾರ ಪದಾರ್ಥಗಳನ್ನು ತಿಂದು ಬಳಿಕ ಮನೆಗಳನ್ನೇ ಪುಡಿಗೈಯುತ್ತಿದ್ದವು. ಹೀಗಾಗಿ ಹಲವು ಮನೆಗಳು ಸಂಪೂರ್ಣ ಮುರಿದು ಬಿದ್ದಿದ್ದವು.

ಇದರಿಂದಾಗಿ ಅರಣ್ಯ ಇಲಾಖೆ ಎರಡು ಸಾಕಾನೆಗಳನ್ನು ಹಾಡಿಯ ಕಾವಲಿಗೆಂದು ನೇಮಿಸಿತ್ತು. ಆದರೆ ಒಂದೇ ವಾರಕ್ಕೆ ಆನೆಗಳನ್ನು ವಾಪಸ್ ಕರೆಸಿಕೊಂಡಿರುವುದರಿಂದ ಈಗ ಆದಿವಾಸಿ ಬುಡಕಟ್ಟು ಸಮುದಾಯದ ಮುಖಂಡರೇ ಹಾಡಿಯಲ್ಲಿ ರಾತ್ರಿ ಕಾವಲು ಕಾಯುತ್ತಿದ್ದಾರೆ. ಪ್ರತಿ ರಾತ್ರಿ ಪೂರ್ತಿ ಹಾಡಿಯ ಬೀದಿಯಲ್ಲಿ ಬೆಂಕಿ ಹಾಕಿ ಚಪ್ಪಾಳೆ ತಟ್ಟುತ್ತಾ, ಹಾಡು ಹಾಡು ಕುಣಿಯುತ್ತಾ, ಹಾಡಿಯಲ್ಲಿ ಭಜನೆ ಮಾಡುತ್ತಾ ಆನೆಗಳು ಬಂದಲ್ಲಿ ಮತ್ತಷ್ಟು ಜೋರು ಶಬ್ದ ಮಾಡುತ್ತಾ ಆನೆಗಳನ್ನು ಓಡಿಸುವ ಕೆಲಸ ಮಾಡುತ್ತಿದ್ದಾರೆ.

ಹಳದಿ ಕಲ್ಲಂಗಡಿ ಹಣ್ಣು ಸವಿದಿದ್ದೀರಾ? ಬೆಂಗಳೂರಿನ ತುಂಬಾ ಇದರದ್ದೇ ಹವಾ !

ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಸದಸ್ಯ ಜೆ ಕೆ ಅಪ್ಪಾಜಿ ಚನ್ನಂಗಿ ಬಸವನಹಳ್ಳಿ ಹಾಡಿಯಲ್ಲಿ ಸ್ಥಳೀಯರೊಂದಿಗೆ ಇಡೀ ರಾತ್ರಿ ಡ್ರಮ್ ಬಾರಿಸೋದು, ಹಾಡು ಹಾಡೋದು ಮಾಡುತ್ತಾ ಕಾಡಾನೆ ಬರದಂತೆ ಎಚ್ಚರ ವಹಿಸುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಜೆಕೆ ಅಪ್ಪಾಜಿ ನಾಲ್ಕು ದಿನಕ್ಕಾದರೆ ಯಾಕಾಗಿ ಆನೆಗಳನ್ನು ಕಾವಲಿಗೆ ಹಾಕಬೇಕಾಗಿತ್ತು.

ಆನೆಗಳನ್ನು ಕಾವಲಿಗೆ ಹಾಕುವಾಗಲೇ ಇದೆಲ್ಲಾ ಕೇವಲ ಕಣ್ಣೊರೆಸುವ ತಂತ್ರ ಎಂದು  ವಿರೋಧ ವ್ಯಕ್ತಪಡಿಸಿದ್ದೆವು. ಶಾಶ್ವತ ಪರಿಹಾರವಾಗಿ ಹಾಡಿಯ ಸುತ್ತ ಸೋಲಾರ್ ಬೇಲಿ ನಿರ್ಮಿಸುವಂತೆ ಒತ್ತಾಯಿಸಿದ್ದೆವು. ಅದನ್ನು ಮಾಡಬೇಕಾದ ಅರಣ್ಯ ಇಲಾಖೆ ಕೇವಲ ನಾಟಕೀಯವಾಗಿ ವರ್ತಿಸಿ, ನಾಲ್ಕು ದಿನ ಆನೆಗಳನ್ನು ಪಾರಾ ಹಾಕಿ. ಈಗ ವಾಪಸ್ ಕರೆಸಿಕೊಂಡಿದೆ.

ಅರಣ್ಯ ಇಲಾಖೆಯ ಈ ನಡವಳಿಕೆ ವಿರುದ್ಧ ಪ್ರತಿಭಟಿಸುವುದಕ್ಕಾಗಿ ನಾವು ಪ್ರತಿ ರಾತ್ರಿ ಭಜನೆ ಮಾಡುತ್ತಾ ನಮ್ಮನ್ನು ನಾವು ಕಾವಲು ಕಾಯ್ದುಕೊಳ್ಳುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚೆನ್ನಂಗಿಬಸವನಹಳ್ಳಿಯ ಹಾಡಿಯ ವಾರ್ಡ್ ಸದಸ್ಯರಾದ ಅರುಣ್ ಅವರು ಕೂಡ ಸಾಕಾನೆಗಳನ್ನು ಹಾಡಿಯ ಕಾವಲಿಗೆ ಹಾಕಿದ್ದಾರೆ. ಆದರೆ ಎಷ್ಟು ದಿನ ಅಂತ ಕಾವಲು ಹಾಕುತ್ತಾರೆ, ಹಾಡಿಯ ಕುಟುಂಬಗಳು ಇರುವವರೆಗೂ ಸಾಕಾನೆಗಳನ್ನು ಕಾವಲಿಗೆ ಹಾಕಲು ಸಾಧ್ಯವಿದೆಯೇ? ಇದೊಂದು ತಕ್ಷಣಕ್ಕೆ ಕಣ್ಣೊರೆಸುವ ತಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗೆ ಆಕ್ರೋಶ ವ್ಯಕ್ತಪಡಿಸಿದ್ದ ಅರುಣ್ ಅವರ ಮಾತು, ಆಲೋಚನೆ ಸತ್ಯವಾಗಿದ್ದು ಈಗ ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುವಂತೆ ಆಗಿದೆ.
Published by:Latha CG
First published: