Kodagu Teacher: ವಿದ್ಯಾರ್ಥಿಗಳಿಗಾಗಿ ತಮ್ಮ ಸಂಬಳದ 1 ಲಕ್ಷ ರೂಪಾಯಿ ಮೀಸಲಿರಿಸುವ ಶಿಕ್ಷಕ

ಒಟ್ಟಿನಲ್ಲಿ ಈ ಶಾಲೆಗೆ ಬರುತ್ತಿರುವ ಅಷ್ಟು ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳಿಗೆ ಬೇಕಾಗಿರುವಷ್ಟು ನೋಟ್ ಪುಸ್ತಕ ಪೆನ್ನು, ಪೆನ್ಸಿಲ್ ಗಳನ್ನು ಕೊಡಿಸುವಷ್ಟು ಆರ್ಥಿಕವಾಗಿ ಸಬಲರಾಗಿಲ್ಲ. ಇದನ್ನು ಅರಿತಿರುವ ಶಿಕ್ಷಕ ಹೆಚ್ ಕೆ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಅಗತ್ಯವಿರುವಷ್ಟು ಕಲಿಕಾ ಸಾಮಗ್ರಿಗಳನ್ನು ಕೊಡಿಸುತ್ತಿದ್ದಾರೆ.

ಶಿಕ್ಷಕ ಎಚ್.ಕೆ.ಕುಮಾರ್

ಶಿಕ್ಷಕ ಎಚ್.ಕೆ.ಕುಮಾರ್

  • Share this:
ಕೊಡಗು, Kodagu : ಸರ್ಕಾರಿ ಶಾಲೆಗಳ (Government Schools) ಅಭಿವೃದ್ಧಿ ಮಾಡೋದೆಲ್ಲಾ ಸರ್ಕಾರದ ಜವಾಬ್ದಾರಿ, ನಮ್ಮದೇನಿದ್ರು ಪಾಠ (Teaching) ಮಾಡೋದಷ್ಟೇ ಕೆಲಸ ಎನ್ನೋ ಮನೋಭಾವವಿರೋದು ಸುಳ್ಳೇನಲ್ಲ. ಆದರೆ ಇಲ್ಲೊಬ್ಬ ಶಿಕ್ಷಕ (Teacher) ತಾವು ಕರ್ತವ್ಯ ನಿರ್ವಹಿಸುವ ಶಾಲೆಗೆ (School) ತಾವಿರೋವರೆಗೂ ಪ್ರತೀ ವರ್ಷ ಒಂದು ಲಕ್ಷ ರೂಪಾಯಿಯನ್ನು ಆ ಶಾಲೆಯ ಮಕ್ಕಳಿಗಾಗಿ (Students) ವ್ಯಯಿಸುತ್ತಿದ್ದಾರೆ. ಅಷ್ಟೇ ಯಾಕೆ ಶಾಲೆಯ ಭೌತಿಕ ಅಭಿವೃದ್ಧಿಗಾಗಿ ದಾನಿಗಳ ಸಹಾಯ ಪಡೆದು ಆ ಶಾಲೆಯನ್ನು ಖಾಸಗಿ ಶಾಲೆಗಳಿಗೆ (Private Schools) ಕಮ್ಮಿ ಇಲ್ಲದಂತೆ ಸ್ಮಾರ್ಟ್ ಶಾಲೆಗಳನ್ನಾಗಿ (Smart Class) ಪರಿವರ್ತಿಸುತ್ತಿದ್ದಾರೆ.

ಹೌದು ಕೊಡಗು ಜಿಲ್ಲೆ ಕುಶಾಲನಗರ (Kushala nagara) ತಾಲ್ಲೂಕಿನ ವಾಲ್ನೂರು ತ್ಯಾಗತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎಚ್ ಕೆ ಕುಮಾರ್ ಅಂತಹ ಆದರ್ಶ ಶಿಕ್ಷಕ. ಕಳೆದ 6 ವರ್ಷಗಳ ಹಿಂದೆ ವಾಲ್ನೂರು ತ್ಯಾಗತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Kodagu Government school teacher spend own money for their Students (2)
ತ್ಯಾಗತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ


ಶಾಲೆಗೆ ಬಂದಾಗಿನಿಂದ ಕುಮಾರ್ ಅವರು ಪ್ರತೀ ವರ್ಷ ತಮ್ಮ ಶಾಲೆಯ ಎಲ್ಲಾ ಮಕ್ಕಳಿಗೆ ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ನೋಟ್ ಪುಸ್ತಕ, ಪೆನ್ನು ಮತ್ತು ಪೆನ್ಸಿಲ್ ಗಳನ್ನು ಉಚಿತವಾಗಿ ತಮ್ಮ ಸ್ವಂತ ಖರ್ಚಿನಿಂದ ಕೊಡುತ್ತಿದ್ದಾರೆ. ಹೀಗೆ ಕೊಡೋದಕ್ಕೂ ಒಂದು ಕಾರಣವಿದೆ.

ಇದನ್ನೂ ಓದಿ:  Gol Gumbaz ಸ್ಮಾರಕ ವೀಕ್ಷಿಸಿದ  ಡಾ.ವೀರೇಂದ್ರ ಹೆಗ್ಗಡೆ: ಫೋಟೋಗಳಲ್ಲಿ ನೋಡಿ

ಆದಿವಾಸಿ ಸಮುದಾಯಕ್ಕೆ ಸೇರಿದ ಮಕ್ಕಳು

ಈ ಶಾಲೆಗೆ ಬರುವ 175 ವಿದ್ಯಾರ್ಥಿಗಳ ಪೈಕಿ 110 ವಿದ್ಯಾರ್ಥಿಗಳು ಪರಿಶಿಷ್ಟ ಪಂಗಡ ಅಂದರೆ ಆದಿವಾಸಿ ಸಮುದಾಯಕ್ಕೆ ಸೇರಿದ ಮಕ್ಕಳು. ಇನ್ನುಳಿದ 65 ವಿದ್ಯಾರ್ಥಿಗಳಲ್ಲಿ 25 ವಿದ್ಯಾರ್ಥಿಗಳು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಾದರೆ, 25 ವಿದ್ಯಾರ್ಥಿಗಳು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿದ್ದಾರೆ. ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರವೇ ಇತರೆ ಜಾತಿಯ ವಿದ್ಯಾರ್ಥಿಗಳು.

Kodagu Government school teacher spend own money for their Students (3)
ತ್ಯಾಗತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ


ಆರ್ಥಿಕವಾಗಿ ಹಿಂದುಳಿದ ಪೋಷಕರು 

ಒಟ್ಟಿನಲ್ಲಿ ಈ ಶಾಲೆಗೆ ಬರುತ್ತಿರುವ ಅಷ್ಟು ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳಿಗೆ ಬೇಕಾಗಿರುವಷ್ಟು ನೋಟ್ ಪುಸ್ತಕ ಪೆನ್ನು, ಪೆನ್ಸಿಲ್ ಗಳನ್ನು ಕೊಡಿಸುವಷ್ಟು ಆರ್ಥಿಕವಾಗಿ ಸಬಲರಾಗಿಲ್ಲ. ಇದನ್ನು ಅರಿತಿರುವ ಶಿಕ್ಷಕ ಹೆಚ್ ಕೆ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಅಗತ್ಯವಿರುವಷ್ಟು ಕಲಿಕಾ ಸಾಮಗ್ರಿಗಳನ್ನು ಕೊಡಿಸುತ್ತಿದ್ದಾರೆ.

ಇದನ್ನೂ ಓದಿ: School Fees: 2020-21ನೇ ಸಾಲಿನ ಖಾಸಗಿ ಶಾಲೆಗಳಿಗೆ ಹೆಚ್ಚುವರಿ ಶುಲ್ಕ ವಾಪಸ್ ನೀಡಲು ಸರ್ಕಾರದ ಆದೇಶ

ಇನ್ನು ಅಚ್ಚರಿಯ ವಿಷಯವೆಂದರೆ 2015 ರಲ್ಲಿ ಕುಮಾರ್ ಅವರು ಈ ಶಾಲೆಗೆ ಮುಖ್ಯ ಶಿಕ್ಷಕರಾಗಿ ಬಂದಾಗ ಶಾಲೆಯಲ್ಲಿ ಇದ್ದದ್ದೇ 130 ವಿದ್ಯಾರ್ಥಿಗಳು. ಆ ಬಳಿಕ ಶಾಲೆಗೆ 50 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕೋವಿಡ್ ಆದ ಬಳಿಕ ಖಾಸಗಿ ಶಾಲೆಗಳ 18 ವಿದ್ಯಾರ್ಥಿಗಳು ಈ ಶಾಲೆಗೆ ದಾಖಲಾಗಿದ್ದಾರೆ. ಹೀಗಾಗಿ ಸದ್ಯ ಶಾಲೆಯಲ್ಲಿ 175 ವಿದ್ಯಾರ್ಥಿಗಳಿದ್ದಾರೆ.

Kodagu Government school teacher spend own money for their Students (4)
ತ್ಯಾಗತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ


ದಾನಿಗಳ ಸಹಾಯದಿಂದ ಸ್ಮಾರ್ಟ್ ಕ್ಲಾಸ್

ಅಷ್ಟು ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್ ಗಳನ್ನು ಕೊಡಿಸುವ ಶಿಕ್ಷಕ ಕುಮಾರ್ ತಮಗೆ ಪರಿಚಯವಿರುವ ಉದ್ಯಮಿಗಳಲ್ಲಿ ಮನವಿ ಮಾಡಿ 6 ವರ್ಷಗಳಲ್ಲಿ 15 ಲಕ್ಷ ರೂಪಾಯಿ ಮೌಲ್ಯದ ಕಂಪ್ಯೂಟರ್, ಎಲ್ ಸಿಡಿ ಪ್ರೊಜೆಕ್ಟರ್ ಗಳು, ಗ್ರೀನ್ ಬೋರ್ಡ್ ಟೇಬಲ್ ಸೇರಿದಂತೆ ವಿವಿಧ ಪೀಠೋಪಕರಣ ಮತ್ತು ಪಾಠೋಪಕರಣಗಳನ್ನು ಕೊಡುಗೆಯಾಗಿ ತರುವ ಮೂಲಕ ಶಾಲೆಯನ್ನು ಅಭಿವೃದ್ಧಿಗೊಳಿಸಿದ್ದಾರೆ.

ಅವನತಿಯತ್ತ ಹೋಗುತ್ತಿದ್ದ ಶಾಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ದಿರುವುದಕ್ಕೆ ಗ್ರಾಮಸ್ಥರು ಶಿಕ್ಷಕ ಕುಮಾರ್ ಅವರನ್ನು ಅಭಿನಂದಿಸುತ್ತಿದ್ದಾರೆ. ಶಿಕ್ಷಕ ಕುಮಾರ್ ಅವರ ಪರಿಶ್ರಮಕ್ಕೆ ಪಂಚಾಯಿತಿ ಸದಸ್ಯ ಭುವನೇಂದ್ರ ಸಂಪೂರ್ಣ ಸಾಥ್ ನೀಡುತ್ತಿದ್ದಾರೆ.

ಖಾಸಗಿ ಶಾಲೆಗಳಿಗೆ ಪೈಪೋಟಿ

ಇನ್ನು ಭೋದನೆಗೆ ಅಳವಡಿಸಿಕೊಂಡರುವ ವಿಧಾನವನ್ನು ಗಮನಿಸಿರುವ ಎನ್ ಸಿಆರ್ ಟಿ ಕೂಡ ಶಾಲೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಒಟ್ಟಿನಲ್ಲಿ ದಿನಗಳು ಕಳೆದಂತೆ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಸಂದರ್ಭದಲ್ಲಿ ಈ ಶಾಲೆ ಖಾಸಗಿ ಶಾಲೆಗೆ ಸಡ್ಡು ಹೊಡೆದು ಬೆಳೆಯೋದಕ್ಕೆ ಶಿಕ್ಷಕ ಕುಮಾರ್ ವಿಶೇಷ ಶ್ರಮಹಿಸುತ್ತಿರೋದು ನಿಜಕ್ಕೂ ಶ್ಲಾಘನೀಯ.
Published by:Mahmadrafik K
First published: