• Home
  • »
  • News
  • »
  • state
  • »
  • Kodagu: ಆರೋಪಿಗಳು ಬಾಯಿಬಿಟ್ಟ ವರ್ಷದ ಹಿಂದೆ ಹುಲಿ ಕೊಂದ ಕತೆ

Kodagu: ಆರೋಪಿಗಳು ಬಾಯಿಬಿಟ್ಟ ವರ್ಷದ ಹಿಂದೆ ಹುಲಿ ಕೊಂದ ಕತೆ

ಆರೋಪಿಗಳು

ಆರೋಪಿಗಳು

ಸತ್ತ ಹುಲಿಯ ಕಳೇಬರವನ್ನು ಮಣ್ಣು ಮಾಡಿದ್ದರು. ಈ ಆರೋಪಿಗಳು ಅಷ್ಟಕ್ಕೆ ಸುಮ್ಮನಾಗಿದ್ದರೆ ಹೂತಿಟ್ಟ ಈ ಸತ್ಯ ಹೊರಕ್ಕೇ ಬರುತ್ತಿರಲಿಲ್ಲ.

  • Share this:

ಕೊಡಗು (ಏ. 4): ವರ್ಷದ ಹಿಂದೆ ಸಾವನ್ನಪ್ಪಿದ ಹುಲಿಯ (Tiger) ಸಾವಿನ ರಹಸ್ಯ ಇದೀಗ ಹೊರ ಬಂದಿದೆ. ಹುಲಿ ಸಾವನ್ನು ಲಾಭ (Profit) ಮಾಡಿಕೊಳ್ಳಲು ಮುಂದಾದ ಜನರು ಇದೀಗ ಜೈಲು ಸೇರುವಂತೆ ಹಾಕಿದೆ. ದರುದೃಷ್ಟವೆಂದರೇ ಹುಲಿಯ ಅಚಾನಕ್​ ಸಾವು ಇದೀಗ ಅವರ ಹಣದ ಆಸೆಯಿಂದ ಜೈಲಿ ಕಂಬಿ ಏರಿಸುವಂತೆ ಮಾಡಿದೆ.


ಏನಿದು ಘಟನೆ


ಸುಲಭವಾಗಿ ಲಕ್ಷಾಂತರ ರೂಪಾಯಿ ಗಳಿಸುವ ಆಸೆಗೆ ಬಿದ್ದಿದ್ದ ಅವರು ಹುಲಿಯ  17 ಉಗುರುಗಳನ್ನು ಮಾರಾಟ ಮಾಡಲು ಯತ್ನಿಸಿದ್ದರು. 'ಹಾಲು ಕುಡಿದ ಮಕ್ಕಳೇ ಬದುಕೋದು ಕಷ್ಟ, ಇನ್ನು ವಿಷ ಕುಡಿದ ಮಕ್ಕಳು ಬದುಕೋದು ಸಾಧ್ಯವೇ' ಎನ್ನೋ ಗಾದೆ ಮಾತಿನಂತೆ ಅವರ ಅದೃಷ್ಟ ಕೈಕೊಟ್ಟಿತ್ತು ಎನಿಸುತ್ತೆ. ಅಂತು ಅರಣ್ಯ ಸಂಚಾರಿ ದಳ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಹೌದು ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಮರೂರು ಗ್ರಾಮದ ಗಣೇಶ್ ಮತ್ತು ಯೋಗೇಶ್ ಎಂಬುವವರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ವಿವಿಧ ಬೆಳೆಗಳನ್ನು ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ವರ್ಷದ ಹಿಂದೆ ತಂತಿ ಬೇಲಿಗೆ ವಿದ್ಯುತ್ ಹರಿಸಿದ್ದರು. ಬೆಳೆಗಳನ್ನು ತಿನ್ನಲು ಬರಬೇಕಾಗಿದ್ದ ಕಾಡು ಹಂದಿ, ಆನೆಗಳ ಬದಲಾಗಿ ಆಹಾರ ಅರಸಿ ಹುಲಿಯೇ ಬಂದಿತ್ತು. ಹಸಿವು ನೀಗಿಸಿಕೊಳ್ಳಲು ಬಂದ ಆ ವ್ಯಾಘ್ರ ವಿದ್ಯುತ್ ಶಾಖ್ ನಿಂದ ಸ್ಥಳದಲ್ಲಿಯೇ ಮೃತಪಟ್ಟಿತ್ತು.


ಹುಲಿ ಕಳೇಬರ


ಹಂದಿ ಸತ್ತಿರಬಹುದು ಎಂದು ಏಣಿಸಿದವರಿಗೆ ಆಗಿದ್ದು ಆಘಾತ


ನಿತ್ಯವೂ ಬೆಳಿಗ್ಗೆ ಎದ್ದು ತಮ್ಮ ಹೊಲಗಳ ಕಡೆಗೆ ಹೋಗುತ್ತಿದ್ದ ಗಣೇಶ್ ಮತ್ತು ಯೋಗೇಶ್ ಎಂದಿನಂತೆ ಹೋಗಿದ್ದರು. ಕಾಡು ಹಂದಿಗಳು ಸತ್ತಿರಬಹುದೆಂದು ಯೋಚಿಸಿ ಹೋದವರಿಗೆ ಭಾರೀ ಘಾತ್ರದ ಹುಲಿ ಸತ್ತು ಬಿದ್ದಿರೋದು ನೋಡಿ ಆಶ್ಚರ್ಯ, ಭಯ ಎರಡು ಒಟ್ಟಿಗೆ ಆಗಿದ್ದವು. ಅದೇ ಭಯದಲ್ಲೇ ಜಮೀನಿನ ಅತ್ತಿರದಲ್ಲೇ ಗುಂಡಿ ತೆಗೆದು ಸತ್ತ ಹುಲಿಯ ಕಳೇಬರವನ್ನು ಮಣ್ಣು ಮಾಡಿದ್ದರು. ಈ ಆರೋಪಿಗಳು ಅಷ್ಟಕ್ಕೆ ಸುಮ್ಮನಾಗಿದ್ದರೆ ಹೂತಿಟ್ಟ ಈ ಸತ್ಯ ಹೊರಕ್ಕೇ ಬರುತ್ತಿರಲಿಲ್ಲ.


ಇದನ್ನು ಓದಿ: ಮೈಸೂರಿಗೂ ಬರಲಿದೆ ಮೆಟ್ರೋ ರೈಲು; ವರದಿ ತಯಾರಿಗೆ ನಗರಾಭಿವೃದ್ಧಿ ಬಜೆಟ್​ನಲ್ಲಿ1 ಕೋಟಿ ಮೀಸಲು


ಅಷ್ಟಕ್ಕೆ ಸುಮ್ಮನಾಗಿದ್ರೆ ಈ ಸಮಸ್ಯೆ ಆಗುತ್ತಿರಲಿಲ್ಲ


ಸುಲಭವಾಗಿ ಹಣ ಗಳಿಸುವ ಆಸೆಗೆ ಬಿದ್ದಿದ್ದ ಇವರು ಅಂದು ರಾತ್ರಿಯೇ ಹೂತಿಟ್ಟ ಹುಲಿಯ ಹೊರ ತೆಗೆದು ಅದರ ಒಂದು ಕೋರೆ ಹಲ್ಲು,  17 ಉಗುರುಗಳನ್ನು ಕಿತ್ತುಕೊಂಡು ಹುಲಿ ಶವವನ್ನು ಮತ್ತೆ ಮುಚ್ಚಿಟ್ಟಿದ್ದರು. ಈ ಘಟನೆ ಆಗಿ ವರ್ಷದ ಬಳಿಕ ಎಲ್ಲವೂ ಮರೆತು ಹೋಗಿದೆ ಎಂದು ಹಣದ ಆಸೆಗೆ ಬಿದ್ದಿದ್ದ ಅವರು ಮೊನ್ನೆಯಷ್ಟೇ ಅಂದರೆ ಇದೇ ಏಪ್ರಿಲ್ 2 ರಂದು ಹುಲಿ ಉಗುರು ಮಾರಾಟಕ್ಕೆ ಮುಂದಾಗಿದ್ದವರು ಪೊಲೀಸರ ಅತಿಥಿಯಾಗಿದ್ದಾರೆ.


ಕಡೆಗೂ ಹೊರ ಬಂತು ಸತ್ಯ


ಅರಣ್ಯ ಸಂಚಾರಿ ದಳ ಪೊಲೀಸರು ಇಬ್ಬರನ್ನು ಬಂಧಿಸಿ ತಮ್ಮದೇ ಭಾಷೆಯಲ್ಲಿ ಬಾಯಿ ಬಿಡಿಸಿದಾಗಲೇ ಹುಲಿಯ ಕಳೇಬರವನ್ನು ಹೂತಿಟ್ಟ ಸತ್ಯ ಹೊರಕ್ಕೆ ಬಂದಿತ್ತು. ಕೂಡಲೇ ಕಾರ್ಯ ಪ್ರವೃತರಾದ ಅರಣ್ಯ ಸಂಚಾರಿ ದಳ ಪೊಲೀಸರು ಮರೂರು ಗ್ರಾಮದ ಗಣೇಶ್ ಮತ್ತು ಯೋಗೇಶ್ ಅವರ ಜಮೀನು ಬಳಿಗೆ ಹೋಗಿ ಹೂತ್ತಿದ್ದ ಜಾಗವನ್ನು ಹಗೆಸಿದ್ದಾರೆ.


ಇದನ್ನು ಓದಿ: ರಾಮ ಜನ್ಮದಿನದ ಹಿಂದಿನ ಕಥೆ ಇದು


ಆಗಲೇ ಸತ್ಯ ಹೊರಗೆ ಬಂದಿದೆ. ಹುಲಿಯ ತಲೆ ಬುರುಡೆ ಕಾಲು ಮೂಳೆ ಸೇರಿದಂತೆ ಇಡೀ ಅಸ್ತಿಪಂಜರವೇ ದೊರೆತ್ತಿದೆ. ಇನ್ನು ಹುಲಿಯ ದೇಹದಿಂದ  ಹಲ್ಲು, ಉಗುರು ಮುಂತಾದವುಗಳನ್ನು ಕಿತ್ತು ಅದರ ಕಳೇಬರವನ್ನು ಹೂಳುವುದಕ್ಕೆ ಸಹಕರಿಸಿದ್ಧ ಗ್ರಾಮದ ನವೀನ್, ರಮೇಶ್, ದೊರೇಶ್ ಮತ್ತು ನಟೇಶ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಹುಲಿಯ ಉಗುರು ಮಾರಾಟಕ್ಕೆ ಬಳಸಿದ್ದ ಬೈಕನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ 7 ಜನರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Published by:Seema R
First published: