HOME » NEWS » State » KODAGU FOREST DEPARTMENT CARES FOR A 7 MONTH OLD BABY ELEPHANT SEPARATED FROM HER MOTHER RSK SESR

Baby Elephant: ತಾಯಿಯಿಂದ ಬೇರ್ಪಟ್ಟ 7 ತಿಂಗಳ ಕಾಡಾನೆಮರಿಗೆ ಅರಣ್ಯ ಇಲಾಖೆ ಆರೈಕೆ

ಕುಶಾಲನಗರ ಸಮೀಪದ ಬೆಟ್ಟಗೇರಿಯಲ್ಲಿ ತಾಯಿಯಿಂದ ಬೇರ್ಪಟ್ಟು ಇದೀಗ ಆನೆಕಾಡು ಆನೆ ಶಿಬಿರದಲ್ಲಿ ಮಾವುತರು ಕವಾಡಿಗರ ಆರೈಕೆಯಲ್ಲಿರುವ 7 ತಿಂಗಳ ಗಂಡಾನೆಮರಿ ಎಲ್ಲರ ಚಿತ್ತಾಕರ್ಷಗೊಳಿಸಿದೆ.

news18-kannada
Updated:March 27, 2021, 5:15 PM IST
Baby Elephant: ತಾಯಿಯಿಂದ ಬೇರ್ಪಟ್ಟ 7 ತಿಂಗಳ ಕಾಡಾನೆಮರಿಗೆ ಅರಣ್ಯ ಇಲಾಖೆ ಆರೈಕೆ
ಕಾಡಾನೆಮರಿ
  • Share this:
ಕೊಡಗು (ಮಾ. 27) : ಆನೆ ಎಂದ ಕೂಡಲೇ ಯಾರಿಗಾದರೂ ಭಯ ಆಗದೆ ಇರೋದಿಲ್ಲ. ಇನ್ನು ಅದು ಎದುರಿಗೆ ಬಂದ್ರೆ ಕೇಳ್ಬೇಕಾ, ಪ್ರಾಣ ಉಳಿದರೆ ಸಾಕು ಅಂತಾ ಎದ್ನೋ ಬಿದ್ನೋ ಎಂದು ಓಡಿ ಬಿಡಬಹುದು. ಆದರೆ ಇಲ್ಲೊಂದು ಆನೆಮರಿಯೊಂದು ಎಲ್ಲರಿಗೂ ಖುಷಿಕೊಡುತ್ತಾ ತನ್ನತ್ತ ಎಲ್ಲರನ್ನು ಸೆಳೆಯುತ್ತಿದೆ. ಹೌದು ತಾಯಿಯಿಂದ ಬೇರ್ಪಟ್ಟು ಅರಣ್ಯ ಇಲಾಖೆಯವರಿಂದ ರಕ್ಷಿಸಲ್ಪಟ್ಟಿರುವ ಪುಟಾಣಿ ಆನೆ ಮರಿಯೊಂದು ತುಂಟಾಟ ಮಾಡುತ್ತಾ, ಎಲ್ಲರ ಗಮನಸೆಳೆದಿದೆ ಜಿಲ್ಲೆ ಕುಶಾಲನಗರ ಸಮೀಪದ ಬೆಟ್ಟಗೇರಿಯಲ್ಲಿ ತಾಯಿಯಿಂದ ಬೇರ್ಪಟ್ಟು ಇದೀಗ ಆನೆಕಾಡು ಆನೆ ಶಿಬಿರದಲ್ಲಿ ಮಾವುತರು ಕವಾಡಿಗರ ಆರೈಕೆಯಲ್ಲಿರುವ 7 ತಿಂಗಳ ಗಂಡಾನೆಮರಿ ಎಲ್ಲರ ಚಿತ್ತಾಕರ್ಷಗೊಳಿಸಿದೆ. ಪುಟ್ಟ ಪುಟ್ಟ ಕಾಲುಗಳು, ಚಿಕ್ಕ ಸೊಂಡಿಲು. ಚಿಕ್ಕ ಸೊಂಡಿಲಲ್ಲೇ ಮಾವುತರು ಕವಾಡಿಗರನ್ನು ಹಿಡಿದೆಳೆಯುವ ಆನೆಮರಿ. ಮಾವುತ ಗರಿಕೆ ಹುಲ್ಲು ತಂದು ಹಾಕಿದರೆ ಸಾಕು ಆಕಳು ಕರುವಿನಂತೆ ನಾಲ್ಕು ನಾಲ್ಕು ಗರಿಯನ್ನೇ ಹಿಡಿದು ತಿನ್ನುತ್ತದೆ.. ಪುಟಾಣಿ ಸೊಂಡಿಲಿನಿಂದ ಹಿಡಿದೆಳೆಯುತ್ತಾ ತುಂಟಾಟ ಮಾಡುತ್ತಿರುವ ಈ ಆನೆಮರಿ ಎಲ್ಲರ ಮೆಚ್ಚುಗೆ ಪಡೆದಿದೆ. 

ತುಂಟಾಟ ಆಡುತ್ತಾ ಮಾವುತ ಕವಾಡಿಗರಿಗೆ ಕ್ವಾಟ್ಲೇ ಕೊಡುವ ಈ ಆನೆಮರಿಗೆ ಮಾವುತರು ಮಾಣಿಕ್ಯ ಎಂದು ಹೆಸರಿಟ್ಟಿದ್ದಾರೆ. ನೋಡೋಕೆ ಇನ್ನು ಚಿಕ್ಕ ಮರಿಯಾದರೂ ಒಬ್ಬ ವ್ಯಕ್ತಿಯನ್ನು ಹೊಡೆದು ಹಾಕುವ ಗಡ್ಸು ಈ ಆನೆಮರಿಗೆ ಇದೆ ಎನ್ನುತ್ತಾರೆ ಕವಾಡಿಗ ಸಂಜು. ಕಳೆದ ಒಂದು ತಿಂಗಳ ಹಿಂದೆಯಷ್ಟೇ ತಾಯಿಯಿಂದ ಬೇರ್ಪಟ್ಟು ರೈತರ ಜಮೀನುಗಳಲ್ಲಿಯೇ ಈ ಆನೆ ಮರಿ ಇತ್ತಂತೆ. ಆ ವೇಳೆ ರೈತರು ನಮಗೆ ಕರೆ ಮಾಡಿ ಇಲ್ಲೊಂದು ಆನೆಮರಿ ಇದೆ ಎಂದು ಹೇಳಿದ್ದರು. ಸ್ಥಳಕ್ಕೆ ಹೋಗಿ ಚಿಕ್ಕಮರಿಯೆಂದು ಹಿಡಿಯಲು ಹೋದ ಹೋದವರಿಗೆ ಆನೆಮರಿ ಹೊಡೆದಿದ್ದಂತೆ. ಆಗಲೇ ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಭಯಪಟ್ಟು ನಿಂತಿದ್ದರಂತೆ. ಹೇಗೋ ಪ್ರಯತ್ನಪಟ್ಟು ಹಿಡಿದಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಗಲಾಟೆ ಮಾಡುತ್ತಲೇ ಇತ್ತಂತೆ. ಕಳೆದ ಒಂದು ತಿಂಗಳಲ್ಲಿ ಈಗ ಸ್ವಲ್ಪ ಸಮಾಧಾನವಾಗಿದೆ, ಆದರೆ ಯಾವುದೇ ಮಾತು ಕೇಳುತ್ತಿಲ್ಲ ಎನ್ನುತ್ತಾರೆ ಮಾವುತರು.


ಕಾಡಾನೆಗಳು ತೋಟ ಜಮೀನುಗಳಿಗೆ ನುಗ್ಗಿದಾಗ ಜನರು ಪಟಾಕಿ ಸಿಡಿಸುತ್ತಾರೆ, ಜೊತೆಗೆ ಬೊಬ್ಬೆಯೊಡೆದು ಕೂಗಾಡುತ್ತಾರೆ. ಇದರಿಂದ ಹೆದರಿದ ಆನೆಗಳು ಕಾಡಿನತ್ತ ಓಡಿರುತ್ತವೆ. ಆದರೆ, ಯಾವುದೋ ಕಾರಣದಿಂದ ಕಾಲಿಗೆ ಗಾಯ ಮಾಡಿಕೊಂಡಿರುವ 7 ತಿಂಗಳ ಈ ಗಂಡಾನೆ ಮರಿ ಆನೆ ಹಿಂಡಿನ ಜೊತೆಗೆ ಓಡಲಾರದೆ ಜಮೀನಿನಲ್ಲೇ ಉಳಿದಿಕೊಂಡಿರಬೇಕು ಎನ್ನೋದು ಅರಣ್ಯ ಅಧಿಕಾರಿಗಳ ಮಾತು. ಒಟ್ಟಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗೆ ಸಿಕ್ಕಿ, ಅವರ ಲಾಲನೆ ಪಾಲನೆಯಲ್ಲಿ ಬೆಳೆಯುತ್ತಾ, ತುಂಟಾಟ ಮಾಡುತ್ತಾ ಮಾವುತ ಕವಾಡಿಗರನ್ನು ಕಾಡುತ್ತಿರುವ ಆನೆಮರಿ ಈಗ ಎಲ್ಲರ ಗಮನಸೆಳೆದಿದೆ ಎಂದು ಸ್ಥಳೀಯರಾದ ವಿ.ಪಿ. ಶಶಿಧರ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
Published by: Seema R
First published: March 27, 2021, 5:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories