ಕೊಡಗು: ಕೊಡಗು ಜಿಲ್ಲೆಯಲ್ಲಿ (Kodagu District) 2018 ರಲ್ಲಿ ಭೀಕರ ಭೂಕುಸಿತ (Land Slide), ಪ್ರವಾಹ (Flood) ಸಂಭವಿಸಿದ್ದು ಇಂದಿಗೂ ಕಣ್ಮುಂದೆ ಇದೆ. ಅಂದು ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದ ಸಾವಿರಾರು ಜನರಲ್ಲಿ ಇಂದಿಗೂ ನೂರಾರು ಜನರಿಗೆ ಸೂರು (House) ದಕ್ಕಿಲ್ಲ. ಮನೆಗಳನ್ನು ಕಳೆದುಕೊಂಡು ಬಾಡಿಗೆ ಮನೆಗಳಲ್ಲಿ ಬದುಕುತ್ತಿರುವ ಕುಟುಂಬಗಳಿಗೆ ನಾಲ್ಕು ವರ್ಷಗಳಾದರೂ ಮನೆ ಸಿಗದಿರುವುದು ಕಣ್ಣೀರಿನಲ್ಲಿ ಕೈತೊಳೆಯುವಂತೆ ಆಗಿದೆ. ಕೊಡಗಿನಲ್ಲಿ (Kodagu Rains) ಬರೋಬ್ಬರಿ ನಾಲ್ಕೈದು ತಿಂಗಳ ಕಾಲ ನಿರಂತರ ಮಳೆ ಸುರಿಯುತ್ತದೆ. ಇದೀಗ ಮತ್ತೆ ಮಳೆಗಾಲ ಆರಂಭವಾಗುತ್ತಿದ್ದು, ಮನೆ ಸಿಗದ ಸಂತ್ರಸ್ಥರು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ.
ಮನೆ ಕಳೆದುಕೊಂಡ ಸಂತ್ರಸ್ಥರಿಗೆ ಒಂದು ವರ್ಷದ ಒಳಗಾಗಿ ಮನೆ ನಿರ್ಮಿಸಿಕೊಡುವುದಾಗಿ ಅಂದು ಆಡಳಿತದಲ್ಲಿದ್ದ ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಿಎಂ ಹಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದರು. ಅದೇ ಜೋಷಿನಲ್ಲಿ 1,040 ಮನೆಗಳ ಕಾಮಗಾರಿಗೆ ಚಾಲನೆಯೂ ದೊರೆತಿತ್ತು.
176 ಕುಟುಂಬಗಳಿಗೆ ಸಿಗದ ಮನೆ
ವರ್ಷದ ಒಳಗಾಗಿ ಮನೆ ನಿರ್ಮಿಸಿಕೊಡುತ್ತೇವೆ, ಅದುವರೆಗೆ ಪ್ರತೀ ತಿಂಗಳ 10 ಸಾವಿರ ಬಾಡಿಗೆ ನೀಡುತ್ತೇವೆ. ನೀವು ಬಾಡಿಗೆ ಮನೆಗಳಲ್ಲಿ ಇರಬಹುದು ಎಂದು ಹೇಳಿದ್ದರು. ಸರ್ಕಾರದ ಮಾತು ನಂಬಿದ ಸಂತ್ರಸ್ತರು ಬಾಡಿಗೆ ಮನೆಗಳಲ್ಲಿ ಬದುಕು ದೂಡಲು ಆರಂಭಿಸಿದ್ದರು. ವಿಪರ್ಯಾಸವೆಂದರೆ ಇದುವರೆಗೆ ಇದುವರಗೆ 627 ಸಂತ್ರಸ್ಥ ಕುಟುಂಬಗಳಿಗೆ ಮಾತ್ರವೇ ಮನೆಯನ್ನು ಹಸ್ತಾಂತರ ಮಾಡಲಾಗಿದೆ. ಇನ್ನೂ 176 ಕುಟುಂಬಗಳಿಗೆ ಮನೆಗಳ ಹಸ್ತಾಂತರ ಮಾಡಿಲ್ಲ.
ಇದನ್ನೂ ಓದಿ: Hubli: ನನ್ನ- ಸಿಎಂ ಭೇಟಿಯಲ್ಲಿ ವಿಶೇಷತೆಯಿಲ್ಲ: ಪ್ರಹ್ಲಾದ್ ಜೋಶಿ
ಕಳೆದ ಜವರಿಯಲ್ಲಿಯೇ ಕಾಮಗಾರಿ ಪೂರೈಸಿ ಎಲ್ಲಾ ಫಲಾನುಭವಿಗಳಿಗೆ ಹಸ್ತಾಂತರ ಮಾಡುವುದಾಗಿ ಹಿಂದಿನ ಉಸ್ತುವಾರಿ ಸಚಿವರಾಗಿದ್ದ ವಿ.ಸೋಮಣ್ಣ ಅವರು ಹೇಳಿದ್ದರು. ಹಸ್ತಾಂತರ ಮಾತಿರಲಿ, ಇಂದಿಗೂ ಮನೆಗಳ ಕಾಮಗಾರಿಯೇ ಪೂರ್ಣ ಪ್ರಮಾಣದಲ್ಲಿ ಮುಗಿದಿಲ್ಲ.
ಈ ಬಡಾವಣೆಗೆ ವಿದ್ಯುತ್ ಸಂಪರ್ಕವೇ ಇಲ್ಲ
ಮಡಿಕೇರಿ ಹೊರವಲಯದ RTO ಕಚೇರಿ ಸಮೀಪ ನಿರ್ಮಾಣ ಮಾಡಲಾಗುತ್ತಿರುವ 70 ಕ್ಕೂ ಹೆಚ್ಚು ಮನೆಗಳಿರುವ ಬಡಾವಣೆಗೆ ವಿದ್ಯುತ್ ಸಂಪರ್ಕವೇ ಆಗಿಲ್ಲ. ಕೇವಲ ವಿದ್ಯುತ್ ಕಂಬಗಳನ್ನು ಮಾತ್ರ ಹಾಕಲಾಗಿದೆ. ಅಷ್ಟೇ ಅಲ್ಲ, ಯಾವ ಮನೆಗಳಿಗೂ ಪೂರ್ಣ ಪ್ರಮಾಣದಲ್ಲಿ ವೈರಿಂಗ್ ಮಾಡಲಾಗಿಲ್ಲ. ಪ್ಲಂಬಿಂಗ್ ಕೆಲಸ ಕೂಡ ಈಗಷ್ಟೇ ಆರಂಭವಾಗಿದ್ದು ಅದನ್ನು ಪೂರ್ಣಗೊಳಿಸಲು ಕನಿಷ್ಠ ಇನ್ನೂ ಒಂದು ತಿಂಗಳು ಸಮಯವಕಾಶಬೇಕು.
ಶೀಘ್ರದಲ್ಲಿಯೇ ಮನೆ ಹಸ್ತಾಂತರ; ಉಪವಿಭಾಗಧಿಕಾರಿ
ಯಾವುದೇ ಮನೆಗಳಿಗೆ ಬಾತ್ ರೂಮ್ ಗಳ ಬಾಗಿಲು ಜೋಡಿಸಲು ಆಗಿಲ್ಲ. ಒಂದೇ ಒಂದು ಮನೆಗೂ ಬಣ್ಣ ಬಳಿದಿಲ್ಲ. ಇವೆಲ್ಲವನ್ನೂ ನೋಡಿದರೆ ಈ ವರ್ಷವೂ ಉಳಿದ ಸಂತ್ರಸ್ತರಿಗೆ ಮನೆ ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಈ ಕುರಿತು ಉಪವಿಭಾಗಧಿಕಾರಿಯನ್ನು ವಿಚಾರಿಸಿದರೆ, ಈಗಾಗಲೇ ಮನೆಗಳ ಕಾಮಗಾರಿ ಪೂರ್ಣಗೊಳ್ಳುವ ಹಂತ ತಲುಪಿದೆ. ಸದ್ಯದಲ್ಲಿಯೇ ಮನೆ ಹಸ್ತಾಂತರ ಮಾಡುತ್ತೇವೆ ಎಂದಿದ್ದಾರೆ.
ಆದರೆ ಸಾಕಷ್ಟು ಫಲಾನುಭವಿಗಳು ಮನೆಗಳು ಬೇಡ ನಮಗೆ ಹಣ ನೀಡಿ ನಾವೇ ಮನೆ ನಿರ್ಮಿಸಿಕೊಳ್ಳುತ್ತೇವೆ ಎನ್ನುತ್ತಿದ್ದಾರೆ. ಇನ್ನು ಕೆಲವರು ಈಗಾಗಲೇ ನಾವೇ ಮನೆ ಕಟ್ಟಿಕೊಳ್ಳುತ್ತೇವೆ ಎಂದು ಹಣ ಪಡೆದಿದ್ದವರು ನಾವು ಹಣ ವಾಪಸ್ ಮಾಡುತ್ತೇವೆ. ನಮಗೆ ಮನೆಯನ್ನೇ ನೀಡಿ ಎಂದು ಮನವಿ ಮಾಡಿದ್ದಾರೆ ಎಂದು ಉಪವಿಭಾಗಧಿಕಾರಿ ಡಾ. ಯತೀಶ್ ಉಳ್ಳಾಲ್ ಎಂದಿದ್ದಾರೆ.
ಇದನ್ನೂ ಓದಿ: Udupi: ಮಲ್ಪೆ ಬೀಚ್ನಲ್ಲಿ ತೇಲುವ ಸೇತುವೆ, ನೀರಿನ ಮೇಲೆ ನಡೆದಾಡಿದ ಪ್ರವಾಸಿಗರು ಫುಲ್ ಖುಷ್
ಮನೆಯೂ ಇಲ್ಲ, ಬಾಡಿಗೆ ಹಣವೂ ಇಲ್ಲ
ಸಂತ್ರಸ್ತರು ಮಾತ್ರ ಮನೆ ಹಂಚಿಕೆ ಮಾಡುವುದಾಗಿ ಹೇಳಿ ಮನೆಗಳ ನಂಬರ್ ವಿತರಿಸಿ ವರ್ಷವೇ ಆಗಿದೆ. ಆದರೆ ಇದುವರೆಗೆ ಮನೆ ನೀಡಿಲ್ಲ. ಅತ್ತ ಬಾಡಿಗೆಯೂ ಇಲ್ಲದೆ ಸ್ವತಃ ಕೂಲಿ ನಾಲಿ ಮಾಡಿ ಬಾಡಿಗೆ ಕಟ್ಟಿಕೊಂಡು ಜೀವನ ನಡೆಸಬೇಕಾಗಿದೆ ಎನ್ನುವುದು ಸಂತ್ರಸ್ತರ ಅಳಲು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ