Kodagu Floods: ಕೊಡಗಿನ ಬ್ರಹ್ಮಗಿರಿ ಬೆಟ್ಟ ದುರಂತ; 3 ದಿನಗಳ ಬಳಿಕ ಒಬ್ಬರ ಮೃತದೇಹ ಪತ್ತೆ 

Kodagu Rain: ಮೂರು ದಿನಗಳ ಹಿಂದೆ ಬ್ರಹ್ಮಗಿರಿ ಬೆಟ್ಟದಡಿ ಹೂತುಹೋದ ನಾರಾಯಣ ಆಚಾರ್ಯ ಅವರ ಕುಟುಂಬದವರನ್ನು ತೀವ್ರ ಮಳೆಯಿಂದಾಗಿ ಹುಡುಕಲು ಸಾಧ್ಯವಾಗಿರಲಿಲ್ಲ. ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಎನ್ ಡಿಆರ್ ಎಫ್ ತಂಡಕ್ಕೆ ನಾರಾಯಣ ಆಚಾರ್ಯರ ಸಹೋದರ ಆನಂದತೀರ್ಥ ಅವರ ಮೃತದೇಹ ಸಿಕ್ಕಿದೆ.

news18-kannada
Updated:August 9, 2020, 8:05 AM IST
Kodagu Floods: ಕೊಡಗಿನ ಬ್ರಹ್ಮಗಿರಿ ಬೆಟ್ಟ ದುರಂತ; 3 ದಿನಗಳ ಬಳಿಕ ಒಬ್ಬರ ಮೃತದೇಹ ಪತ್ತೆ 
ಕೊಡಗಿನಲ್ಲಿ ಪ್ರವಾಹದಿಂದ ಭೂಕುಸಿತವಾದ ಜಾಗ
  • Share this:
ಕೊಡಗು : ಐದು ದಿನಗಳು ಸುರಿದ ರಣಭೀಕರ ಮಳೆಗೆ ಬ್ರಹ್ಮಗಿರಿ ಬೆಟ್ಟ ಕುಸಿದು ನಾಪತ್ತೆಯಾಗಿದ್ದ ನಾರಾಯಣ ಆಚಾರ್ಯರ ಸಹೋದರ ಆನಂದತೀರ್ಥ ಅವರ ಮೃತದೇಹ ಕೊನೆಗೂ ಮೂರು ದಿನಗಳ ಬಳಿಕ ಪತ್ತೆಯಾಗಿದೆ. ಬ್ರಹ್ಮಗಿರಿ ಬೆಟ್ಟ ಕುಸಿದ ಪರಿಣಾಮ ಆಚಾರ್ಯರ ಕುಟುಂಬದ ಐವರು ಮಣ್ಣಿನಡಿ ಸಿಲುಕಿದ್ದರು. ಉಳಿದವರ ಶವ ಇನ್ನೂ ಪತ್ತೆಯಾಗಿಲ್ಲ.

ಮತ್ತೊಂದೆಡೆ ಸಚಿವ ವಿ. ಸೋಮಣ್ಣ ಪ್ರವಾಹದಲ್ಲಿ ಮುಳುಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ಥರ ಸಮಸ್ಯೆ ಆಲಿಸಿದ್ದರು. ಆದರೂ ಕೊಡಗಿನ ಜನರ ನೋವು ಹೇಳತೀರದು.  ಕೊಡಗಿನ ಜೀವನದಿ, ಕೊಡಗಿನ ಕುಲದೇವತೆ ಕಾವೇರಿ, ಸುರಿಯುತ್ತಿರುವ ಆಶ್ಲೇಷ ಮಳೆಗೆ ಉಗ್ರ ರೂಪ ತಾಳಿ ಉಕ್ಕಿ ಹರಿದಿದ್ದಾಳೆ. ಪರಿಣಾಮ ಜಿಲ್ಲೆಯ 40 ಕ್ಕೂ ಹೆಚ್ಚು ಹಳ್ಳಿಗಳನ್ನು ತನ್ನ ಪ್ರವಾಹದಲ್ಲಿ ಮುಳುಗಿಸಿ ಜನರನ್ನು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದ್ದಾಳೆ. ಮೂರು ದಿನಗಳ ಹಿಂದೆ ಕುಸಿದ ಬ್ರಹ್ಮಗಿರಿ ಬೆಟ್ಟದ ಅಡಿಯಲ್ಲಿ ಕಣ್ಮರೆಯಾದ ಇದೇ ಕಾವೇರಿ ಮಾತೆಗೆ ನಿತ್ಯವೂ ಪೂಜೆ ಸಲ್ಲಿಸುತ್ತಿದ್ದ ಪ್ರಧಾನ ಅರ್ಚಕ ನಾರಾಯಣ ಆಚಾರ್ಯ ಅವರ ಕುಟುಂಬವನ್ನು ಬೆಟ್ಟದಡಿಗೆ ಸೇರುವಂತೆ ಮಾಡಿದ್ದಾಳೆ.

Kodagu Landslide Brahmagiri Hills Priest Brother Dead Body Found
ಭೂಕುಸಿತದಲ್ಲಿ ಸಿಲುಕಿ ನಾಪತ್ತೆಯಾಗಿರುವ ಅರ್ಚಕ ನಾರಾಯಣ ಆಚಾರ್ಯ


ಮೂರು ದಿನಗಳ ಹಿಂದೆ ಬೆಟ್ಟದಡಿಯಲ್ಲಿ ಹೂತುಹೋದ ನಾರಾಯಣ ಆಚಾರ್ಯ ಅವರ ಕುಟುಂಬದವರನ್ನು ತೀವ್ರ ಮಳೆಯಿಂದಾಗಿ ಹುಡುಕಲು ಸಾಧ್ಯವೇ ಆಗಿರಲಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ಮಾಡಿದ ಸಚಿವ ವಿ ಸೋಮಣ್ಣ ಇಂದು ಹೇಗಾದರೂ ಸರಿ ರಕ್ಷಣಾ ಕಾರ್ಯಾಚರಣೆ ಮಾಡಲೇಬೇಕು ಅಂತಾ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಇದನ್ನೂ ಓದಿ: ಮಲೆನಾಡಿನಲ್ಲಿ ಕೊಂಚ ತಗ್ಗಿದ ಮಳೆಯ ಆರ್ಭಟ; ಪ್ರವಾಹ ಪೀಡಿತ ಸ್ಥಳಕ್ಕೆ ಬಂದ ಜನಪ್ರತಿನಿಧಿಗಳಿಗೆ ಸ್ಥಳೀಯರ ತರಾಟೆ

ಅಷ್ಟರಲ್ಲೇ ಭೂ ಕುಸಿತದ ಸ್ಥಳದಲ್ಲಿ ಬೀಡುಬಿಟ್ಟಿದ್ದ ಎನ್ ಡಿಆರ್ ಎಫ್ ತಂಡ ಮಳೆ ಕಡಿಮೆ ಆಗಿದ್ದೇ ತಡ ರಕ್ಷಣಾ ಕಾರ್ಯಾಚರಣೆ ಆರಂಭಿಸಿತ್ತು. ಮತ್ತೊಂದೆಡೆ ತಮ್ಮನ ಕುಟುಂಬ ಭೂ ಕುಸಿತದಲ್ಲಿ ಕಣ್ಮರೆಯಾಗಿರುವ ಸುದ್ದಿ ತಿಳಿದು ಮಂಗಳೂರಿನಿಂದ ಬಂದಿದ್ದ ನಾರಾಯಣ ಆಚಾರ್ಯ ಅವರ ಸಹೋದರಿ ಸುಶೀಲಾ ತಮ್ಮನ ಕುಟುಂಬ ಬದುಕಿರುವ ಬಗ್ಗೆ ಯಾವುದೇ ನಂಬಿಕೆ ಇಲ್ಲ. ಕೊನೆ ಪಕ್ಷ ಅವರ ದೇಹಗಳನ್ನಾದರೂ ಹುಡುಕಿ ಕೊಡಿ ಅಂತ ಕಣ್ಣೀರು ಸುರಿಸಿದರು.

ಹೀಗೆ ಗೋಳಾಡುತ್ತಿರುವಾಗಲೇ ಕಾರ್ಯಚರಣೆ ನಡೆಸುತಿದ್ದ, ಎನ್ ಡಿಆರ್ ಎಫ್ ತಂಡಕ್ಕೆ ನಾರಾಯಣ ಆಚಾರ್ಯ ಅವರ ಸಹೋದರ ಆನಂದತೀರ್ಥ ಅವರ ಮೃತದೇಹ ಸಿಕ್ಕಿತ್ತು.ಸಹೋದರ ಆನಂದತೀರ್ಥ ಅವರ ಮೃತದೇಹವನ್ನು ಕಂಡು ಹಿರಿಜೀವ ಸುಶೀಲ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟರು.

ಇತ್ತ ಸಚಿವ ವಿ ಸೋಮಣ್ಣ ಪ್ರವಾಹದಲ್ಲಿ ಮುಳುಗಿದ್ದ ಕುಶಾಲನಗರದ ಸಾಯಿ ಬಡಾವಣೆ, ಕುವೆಂಪು ಬಡಾವಣೆ ಸೇರಿದಂತೆ ಹಲವು ಬಡಾವಣೆಗಳಿಗೆ ಭೇಟಿ ನೀಡಿ ಸಂತ್ರಸ್ಥರ ಸಮಸ್ಯೆ ಆಲಿಸಿ ಸಾಂತ್ವನ ಹೇಳಿದ್ರು. ಅಲ್ಲದೆ ಪರಿಹಾರ ಕೇಂದ್ರಗಳಲ್ಲಿ ಇರುವ ಕುಟುಂಬಗಳಿಗೆ ತಕ್ಷಣವೇ ತಲಾ ಹತ್ತು ಸಾವಿರ, ಸಂಪೂರ್ಣ ಮನೆ ಕಳೆದುಕೊಂಡವರಿಗೆ ತಲಾ ಇದು ಲಕ್ಷ ರೂಪಾಯಿ ಪರಿಹಾರದ ಘೋಷಣೆ ಮಾಡಿದ್ರು. ಮೃತಪಟ್ಟ ನಾರಾಯಣ ಆಚಾರ್ ಅವರ ಕುಟುಂಬಕ್ಕೂ ರಾಜ್ಯದಿಂದ 5 ಮತ್ತು ಕೇಂದ್ರದಿಂದ 2 ಲಕ್ಷ ಸೇರಿ ಒಟ್ಟು 7 ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು.

ಒಟ್ಟಿನಲ್ಲಿ ಕೊಡಗಿನ ಕುಲದೇವತೆಯೇ ಮುನಿದು ತನ್ನ ಸಾವಿರಾರು ಮಕ್ಕಳಿಗೆ ಸಂಕಷ್ಟ ತಂದಿದ್ದಾಳೆ ಕಾವೇರಿ. ಇನ್ನು ಪ್ರವಾಹದ ನೀರು ಹಲವೆಡೆ ನಿಂತಿದ್ದು, ಜನರ ಗೋಳು ಮಾತ್ರ ತಪ್ಪಿಲ್ಲ.

(ವರದಿ: ರವಿ.ಎಸ್ ಹಳ್ಳಿ )
Published by: Sushma Chakre
First published: August 9, 2020, 8:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading