Kodagu Floods: ಕೊಡಗಿನ ಬ್ರಹ್ಮಗಿರಿ ಬೆಟ್ಟ ಕುಸಿತ; ಅರ್ಚಕ ನಾರಾಯಣ ಆಚಾರ್ಯರ ಆಸ್ತಿಯೆಷ್ಟು ಗೊತ್ತಾ?

Kodagu Landslide: ತಲಕಾವೇರಿಯಲ್ಲಿ ಪ್ರಧಾನ ಅರ್ಚಕರಾಗಿದ್ದ ನಾರಾಯಣ ಆಚಾರ್ಯ ಅವರ ಬಳಿ ಕೋಟಿಗಟ್ಟಲೆ ಆಸ್ತಿಯಿತ್ತು. 10 ಎಕರೆ ಕಾಫಿ ತೋಟ, 35 ಎಕರೆ ಕಾಡು ತೋಟವಿತ್ತು. ಅದರಲ್ಲಿ ಎರಡು ಎಕರೆ ಏಲಕ್ಕಿ ಬೆಳೆ ಬೆಳೆಯುತ್ತಿದ್ದರು. ಕೇರಳ ರಸ್ತೆಯಲ್ಲಿ ಆಚಾರ್ಯರಿಗೆ 75 ಎಕರೆ ಭೂಮಿ ಇತ್ತು. ಬೆಂಗಳೂರಿನಲ್ಲಿ ಒಂದು ಬಂಗಲೆಯಿತ್ತು.

news18-kannada
Updated:August 12, 2020, 10:22 AM IST
Kodagu Floods: ಕೊಡಗಿನ ಬ್ರಹ್ಮಗಿರಿ ಬೆಟ್ಟ ಕುಸಿತ; ಅರ್ಚಕ ನಾರಾಯಣ ಆಚಾರ್ಯರ ಆಸ್ತಿಯೆಷ್ಟು ಗೊತ್ತಾ?
ಕೊಡಗಿನಲ್ಲಿ ಪ್ರವಾಹದಿಂದ ಭೂಕುಸಿತವಾದ ಜಾಗ
  • Share this:
ಕೊಡಗು (ಆ. 12): ಕೊಡಗಿನ ಭಾಗಮಂಡಲದ ಬಳಿಯ ಬ್ರಹ್ಮಗಿರಿ ಬೆಟ್ಟ ಕುಸಿದು ಒಂದೇ ಕುಟುಂದ ಐವರು ಭೂಸಮಾಧಿಯಾಗಿದ್ದರು. ತಲಕಾವೇರಿ ಪ್ರಧಾನ ಅರ್ಚಕ ನಾರಾಯಣ ಆಚಾರ್ಯ ಅವರ ಕುಟುಂಬ ಹಾಗೂ ಮನೆ ಮಣ್ಣಿನಡಿ ಹುದುಗಿಹೋಗಿತ್ತು. 2 ದಿನಗಳ ಹಿಂದೆ ನಾರಾಯಣ ಆಚಾರ್ಯರ ಸೋದರನ ಶವ ಪತ್ತೆಯಾಗಿತ್ತು. ನಿನ್ನೆ ನಾರಾಯಣ ಆಚಾರ್ಯರ ಶವ ಪತ್ತೆಯಾಗಿದ್ದು, ಇನ್ನೂ ಮೂವರು ಮೃತದೇಹಗಳ ಶೋಧ ಕಾರ್ಯ ಮುಂದುವರೆದಿದೆ. ನಾರಾಯಣ ಆಚಾರ್ಯರ ಬಗ್ಗೆ ಅನೇಕ ಕುತೂಹಲಕಾರಿ ಸಂಗತಿಗಳನ್ನು ಅವರ ಕಾರು ಚಾಲಕ ಬಿಚ್ಚಿಟ್ಟಿದ್ದಾರೆ.

ತಲಕಾವೇರಿಯಲ್ಲಿ ಪ್ರಧಾನ ಅರ್ಚಕರಾಗಿದ್ದ ನಾರಾಯಣ ಆಚಾರ್ಯ ಅವರ ಬಳಿ ಕೋಟಿಗಟ್ಟಲೆ ಆಸ್ತಿಯಿತ್ತು. 10 ಎಕರೆ ಕಾಫಿ ತೋಟ, 35 ಎಕರೆ ಕಾಡು ತೋಟವಿತ್ತು. ಅದರಲ್ಲಿ ಎರಡು ಎಕರೆ ಏಲಕ್ಕಿ ಬೆಳೆ ಬೆಳೆಯುತ್ತಿದ್ದರು. ಕೇರಳ ರಸ್ತೆಯಲ್ಲಿ ಆಚಾರ್ಯರಿಗೆ 75 ಎಕರೆ ಭೂಮಿ ಇತ್ತು. ಬೆಂಗಳೂರಿನಲ್ಲಿ ಒಂದು ಬಂಗಲೆಯಿತ್ತು. ತಲಕಾವೇರಿಯ ಬ್ರಹ್ಮಗಿರಿಯಲ್ಲಿ 40x40 ಅಳತೆಯ ಮನೆಯಿತ್ತು. ಅವರ ಮನೆಯಲ್ಲಿದ್ದ ಕ್ವಿಂಟಾಲ್‌ಗಟ್ಟಲೆ ಕಾಳು ಮೆಣಸು, ಏಲಕ್ಕಿ ಶೊಧ ಕಾರ್ಯದ ವೇಳೆ ಮಣ್ಣಿನಡಿ ಪತ್ತೆಯಾಗಿದೆ.

ಇದನ್ನೂ ಓದಿ: ಇನ್ನೆರಡು ದಿನ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​; ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ಗುರುವಾರ ಮುಂಜಾನೆ ಬ್ರಹ್ಮಗಿರಿ ಬೆಟ್ಟ ಕುಸಿದು, ನಾರಾಯಣ ಆಚಾರ್ಯರ ಕುಟುಂಬ ಕೊಚ್ಚಿಹೋಗಿತ್ತು. ಅದರ ಹಿಂದಿನ ದಿನ ಸಂಜೆ ಅವರ ಕಾರು ಚಾಲಕ ಜಯಂತ್ ನಾರಾಯಣ ಆಚಾರ್ಯರನ್ನು ಕೊನೆಯ ಬಾರಿ ಭೇಟಿ ಮಾಡಿದ್ದರು. ಆಚಾರ್ಯರನ್ನು ಮನೆಗೆ ಬಿಟ್ಟು ಜೀಪನ್ನು ತನ್ನ ಮನೆಗೆ ತೆಗೆದುಕೊಂಡಿದ್ದ ಹೋಗಿದ್ದರು ಜಯಂತ್. ಇದೀಗ ನಾರಾಯಣ ಆಚಾರ್ಯರ ನೆನಪಿಗಾಗಿ ಆ ಜೀಪ್ ಒಂದೇ ಉಳಿದಿದೆ. ಮರುದಿನ ಬೆಳಗ್ಗೆ 7 ಗಂಟೆಗೆ ಜಯಂತ್ ಆಚಾರ್ಯರ ಮನೆಗೆ ತೆರಳಿದಾಗ ಮನೆ‌ಮೇಲೆ ಗುಡ್ಡ ಕುಸಿದಿತ್ತು. ತಕ್ಷಣ ಪಿಡಿಓಗೆ ಕರೆ ಮಾಡಿ, ಮಕ್ಕಳಿಗೆ‌‌ ಮಾಹಿತಿ ನೀಡಿದ್ದರು ಜಯಂತ್‌.

Kodagu Landslide Brahmagiri Hills Priest Brother Dead Body Found
ಅರ್ಚಕ ನಾರಾಯಣ ಆಚಾರ್ಯ


ಆಚಾರ್ಯರು ನನಗೆ ಗುರುಗಳ ಸಮಾನ. ನನ್ನನ್ನು ಮಗನಂತೆ ನೋಡಿಕೊಳ್ಳುತ್ತಿದ್ದರು. ಅವರ ಬಗ್ಗೆ ಸುಳ್ಳು ಅಪಪ್ರಚಾರ ಬೇಡ. ಅವರ ಮನೆಯಲ್ಲಿ ಅಪಾರ ಚಿನ್ನ ಇರಲಿಲ್ಲ. ಮೆಣಸು, ಏಲಕ್ಕಿ‌ ಇದ್ದದ್ದು ನಿಜ. ಮೂರು ಕಡೆ ಒಟ್ಟು 120 ಎಕರೆ ಭೂಮಿ ಇದೆ. ಒಂದು ಮನೆ ಇದೆ. ಎರಡು ಕಾರು, ಒಂದು ಜೀಪ್ ಹಾಗೂ ಸ್ಕೂಟರ್ ಇತ್ತು. ಸುಮ್ಮನೆ ಅವರ ಬಗ್ಗೆ ಅಪಪ್ರಚಾರ ಬೇಡ ಎಂದು ಜಯಂತ್ ಹೇಳಿದ್ದಾರೆ.

ಇದನ್ನೂ ಓದಿ: Bengaluru Riots: ಗಲಭೆಯನ್ನು ಬೇಗ ತಡೆಯೋದು ಬಿಟ್ಟು ಏನು ಮಾಡುತ್ತಿದ್ರಿ?; ಕಮಿಷನರ್​ಗೆ ಸಿಎಂ ಯಡಿಯೂರಪ್ಪ ತರಾಟೆಹ್ಮಗಿರಿ ಬೆಟ್ಟ ಕುಸಿತದ ವೇಳೆ ನಾಪತ್ತೆಯಾದ ನಾರಾಯಣ ಅಚಾರ್ಯರ ಮನೆಯಲ್ಲಿ 30 ಕ್ವಿಂಟಾಲ್ ಕಾಳು ಮೆಣಸು, 7 ಕ್ವಿಂಟಾಲ್ ಏಲಕ್ಕಿ, ಸುಮಾರು 50 ಬಾಟಲಿ ಜೇನು, ಒಂದು ಡಸ್ಟರ್, ಅಂಬಾಸಿಡರ್ ಕಾರು, 30ಕ್ಕೂ ಹೆಚ್ಚು ಹಸುಗಳಿತ್ತು. ಅವೆಲ್ಲವೂ ಗುಡ್ಡ ಕುಸಿತದ ವೇಳೆ ಕೊಚ್ಚಿ ಹೋಗಿವೆ. 5 ದಿನಗಳ ಹಿಂದೆ ಬೆಟ್ಟದಡಿಯಲ್ಲಿ ಹೂತುಹೋದ ನಾರಾಯಣ ಆಚಾರ್ಯ ಅವರ ಕುಟುಂಬದವರನ್ನು ತೀವ್ರ ಮಳೆಯಿಂದಾಗಿ ಹುಡುಕಲು ಸಾಧ್ಯವೇ ಆಗಿರಲಿಲ್ಲ. ಕೊಡಗಿನಲ್ಲಿ ಭಾರೀ ಮಳೆಯಾಗಿದ್ದರಿಂದ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ಇದ್ದ ಅರ್ಚಕ ನಾರಾಯಣ ಆಚಾರ್ಯ ಅವರ ಕುಟುಂಬಕ್ಕೆ ಅಲ್ಲಿಂದ ಸ್ಥಳಾಂತರ ಆಗುವಂತೆ ಹಲವರು ಬುಧವಾರ ಸಂಜೆಯಷ್ಟೇ ಹಲವರು ಪರಿಪರಿಯಾಗಿ ಹೇಳಿದ್ದರಂತೆ. ಆದರೆ, ತಾವು ಹುಟ್ಟಿ ಬೆಳೆದ ಊರು, ಬಿಟ್ಟು ಹೋಗುವುದು ಹೇಗೆ?, ಏನೂ ಆಗುವುದಿಲ್ಲ ಎಂದು ನಾರಾಯಣ ಆಚಾರ್ಯ ಸುಮ್ಮನಾಗಿದ್ದರಂತೆ.

ಆದರೆ, ಗುರುವಾರ ಬೆಳಗ್ಗೆ ತೋಟದ ರೈಟರ್ ಅಲ್ಲಿಗೆ ಹೋಗಿ ನೋಡಿದಾಗ ನಾರಾಯಣ ಆಚಾರ್ಯ ಅವರ ಕುಟುಂಬದ ಎರಡು ಮನೆಗಳು ಅಷ್ಟೇ ಅಲ್ಲ, ಇಡೀ ಬೆಟ್ಟವೇ ಅಲ್ಲಿಂದ ಕಣ್ಮರೆಯಾಗಿದೆ. ಇದರೊಂದಿಗೆ ಕುಟುಂಬದ ಐವರು, 30ಕ್ಕೂ ಹೆಚ್ಚು ಜಾನುವಾರುಗಳು, ಮತ್ತು ಎರಡು ಕಾರುಗಳು ನಾಪತ್ತೆಯಾಗಿತ್ತು. ಈಗಾಗಲೇ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಇನ್ನೂ ಮೂವರ ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ.
Published by: Sushma Chakre
First published: August 12, 2020, 10:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading