Kodagu Flood: ಕೊಡಗಿನ ಬ್ರಹ್ಮಗಿರಿ ದುರಂತ; ಅರ್ಚಕ ನಾರಾಯಣ ಆಚಾರ್ಯರ ಮನೆಯಲ್ಲಿ ಏನೇನಿತ್ತು ಗೊತ್ತಾ?

Kodagu Landslide: ಬ್ರಹ್ಮಗಿರಿ ಬೆಟ್ಟ ಕುಸಿತದ ವೇಳೆ ನಾಪತ್ತೆಯಾದ ನಾರಾಯಣ ಅಚಾರ್ಯರ ಮನೆಯಲ್ಲಿ 30 ಕ್ವಿಂಟಾಲ್ ಕಾಳು ಮೆಣಸು, 7 ಕ್ವಿಂಟಾಲ್ ಏಲಕ್ಕಿ, ಸುಮಾರು 50 ಬಾಟಲಿ ಜೇನು, ಒಂದು ಡಸ್ಟರ್, ಅಂಬಾಸಿಡರ್ ಕಾರು, 30ಕ್ಕೂ ಹೆಚ್ಚು ಹಸುಗಳಿತ್ತು. ಅವೆಲ್ಲವೂ ಗುಡ್ಡ ಕುಸಿತದ ವೇಳೆ ಕೊಚ್ಚಿ ಹೋಗಿವೆ.

news18-kannada
Updated:August 11, 2020, 8:00 AM IST
Kodagu Flood: ಕೊಡಗಿನ ಬ್ರಹ್ಮಗಿರಿ ದುರಂತ; ಅರ್ಚಕ ನಾರಾಯಣ ಆಚಾರ್ಯರ ಮನೆಯಲ್ಲಿ ಏನೇನಿತ್ತು ಗೊತ್ತಾ?
ಭೂಕುಸಿತವಾಗಿರು ಸ್ಥಳ
  • Share this:
ಕೊಡಗು (ಆ. 11): ಕೊಡಗಿನ ಬ್ರಹ್ಮಗಿರಿ ಬೆಟ್ಟ ಕುಸಿದು ತಲಕಾವೇರಿ ಪ್ರಧಾನ ಅರ್ಚಕ ನಾರಾಯಣ ಆಚಾರ್ಯ ಅವರ ಕುಟುಂಬ ಮಣ್ಣಿನಡಿ ಹೂತುಹೋಗಿತ್ತು. ಈ ಘಟನೆ ನಡೆದು ಐದು ದಿನಗಳಾಗಿದ್ದರೂ ಇನ್ನೂ ನಾಲ್ವರ ಶವ ಪತ್ತೆಯಾಗಿಲ್ಲ. ಆದರೆ, ನಿನ್ನೆಯ ಶೋಧ ಕಾರ್ಯಾಚರಣೆ ವೇಳೆ ಆಚಾರ್ಯರ ಮನೆಯಲ್ಲಿದ್ದ ವಸ್ತುಗಳು ಸಿಕ್ಕಿದ್ದು, ಇದು ಊರಿನೆಲ್ಲೆಡೆ ಭಾರೀ ಚರ್ಚೆಗೆ ಕಾರಣವಾಗಿದೆ.

ಮಣ್ಣಿನಡಿ ಹೂತುಹೋಗಿದ್ದ ಐವರ ಪೈಕಿ ನಾರಾಯಣ ಆಚಾರ್ಯರ ಸಹೋದರನ ಶವ ಭಾನುವಾರ ಪತ್ತೆಯಾಗಿತ್ತು. ಉಳಿದ ನಾಲ್ವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ನಾರಾಯಣ ಆಚಾರ್ಯರ ಮಕ್ಕಳು ನಿನ್ನೆ ವಿದೇಶಗಳಿಂದ ಆಗಮಿಸಿದ್ದಾರೆ. ಮಣ್ಣಿನ ಅಡಿಯಲ್ಲಿ ಸಿಲುಕಿರೋ ನಾಲ್ವರಿಗಾಗಿ ಶೋಧ ಕಾರ್ಯ ಚುರುಕುಗೊಂಡಿದೆ. ಮೂರು ಹಿಟಾಚಿ, ಎನ್‌ಡಿಆರ್​ಎಫ್, ಎಸ್​ಡಿಆರ್​ಎಫ್ ಮೂಲಕ ನಿನ್ನೆ ಜಂಟಿ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ನಾರಾಯಣ ಆಚಾರ್ಯರ ಮನೆಯ ಲಕ್ಷಾಂತರ ರೂ. ಬೆಲೆ ಬಾಳುವ ವಸ್ತುಗಳು ಮಣ್ಣಿನಡಿ ಪತ್ತೆಯಾಗಿವೆ.

ಇದನ್ನೂ ಓದಿ: ಜನ ಸಿಡಿದೆದ್ದು, ರಾಜಕಾರಣಿಗಳನ್ನು ಬೀದಿಯಲ್ಲಿ ಹೊಡೆಯಬೇಕು; ಪ್ರಮೋದ್ ಮುತಾಲಿಕ್ ವಿವಾದ

ಇಂದು ಮಳೆ ನಡುವೆಯೇ ನಾಪತ್ತೆಯಾದ ಅರ್ಚಕರ ಕುಟುಂಬದ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮೂರು ಹಿಟಾಚಿಗಳನ್ನ ಬಳಸಿ ಕಾರ್ಯಾಚರಣೆಗೆ ಸಿದ್ದತೆ ನಡೆಸಲಾಗಿದೆ. ಹಿಟಾಚಿ ಜೊತೆ NDRF ತಂಡ‌ದಿಂದಲೂ ಕಾರ್ಯಾಚರಣೆ ನಡೆಯಲಿದೆ. ನಿನ್ನೆ ಶೋಧ ಕಾರ್ಯಾಚರಣೆ ವೇಳೆ ಅರ್ಚಕ ನಾರಾಯಣ ಆಚಾರ್ಯರ ಮನೆಯಲ್ಲಿ ಲಕ್ಷಾಂತರ ರೂ. ಬೆಲೆ ಬಾಳುವ ನಾಣ್ಯಗಳು, ಕ್ವಿಂಟಾಲ್​ಗಟ್ಟಲೆ ಕಾಳು ಮೆಣಸು, ಏಲಕ್ಕಿ ಮುಂತಾದ ವಸ್ತುಗಳು ಪತ್ತೆಯಾಗಿವೆ.

ಬ್ರಹ್ಮಗಿರಿ ಬೆಟ್ಟ ಕುಸಿತದ ವೇಳೆ ನಾಪತ್ತೆಯಾದ ನಾರಾಯಣ ಅಚಾರ್ಯರ ಮನೆಯಲ್ಲಿ 30 ಕ್ವಿಂಟಾಲ್ ಕಾಳು ಮೆಣಸು, 7 ಕ್ವಿಂಟಾಲ್ ಏಲಕ್ಕಿ, ಸುಮಾರು 50 ಬಾಟಲಿ ಜೇನು, ಒಂದು ಡಸ್ಟರ್, ಅಂಬಾಸಿಡರ್ ಕಾರು, 30ಕ್ಕೂ ಹೆಚ್ಚು ಹಸುಗಳಿತ್ತು. ಅವೆಲ್ಲವೂ ಗುಡ್ಡ ಕುಸಿತದ ವೇಳೆ ಕೊಚ್ಚಿ ಹೋಗಿವೆ. ಕೊಡಗಿನ ಸುತ್ತಮುತ್ತ ನಾರಾಯಣ ಆಚಾರ್ಯ 100 ಎಕರೆ ಕಾಫಿ ತೋಟ ಹೊಂದಿದ್ದರು. ಆಚಾರ್ಯ ಅವರ ಮನೆಯಲ್ಲಿ ಅಪಾರ ಪ್ರಮಾಣದ ನಾಣ್ಯಗಳು ಕೂಡ ಇದ್ದವು. ಬ್ರಹ್ಮಕುಂಡಿಕೆಯಲ್ಲಿ ಹಾಕಲಾಗುತ್ತಿದ್ದ ನಾಣ್ಯಗಳೆಲ್ಲವನ್ನೂ ಆಚಾರ್ಯ ಅವರೇ ಕೊಂಡ್ಯೊಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರು ಲಕ್ಷಾಂತರ ಮೌಲ್ಯದ ನಾಣ್ಯಗಳನ್ನು ಸಂಗ್ರಿಸಿಟ್ಟಿದ್ದರು. ಆಚಾರ್ಯ ಅವರ ಮನೆಯಲ್ಲಿ ಚಿನ್ನ ಹಾಗೂ ನಗದು ಸಹ ಇತ್ತು ಎಂಬುದರ ಬಗ್ಗೆ ಮಾಹಿತಿ ಸಿಕ್ಕಿದೆ. ಸ್ಥಳಿಯ ಜನರಿಂದ ಆಚಾರ್ಯ ಅವರ ಮನೆಯಲ್ಲಿದ್ದ ವಸ್ತುಗಳ ಬಗ್ಗೆಯೇ ಚರ್ಚೆ ಶುರುವಾಗಿದೆ.

ಇದನ್ನೂ ಓದಿ: Kodagu Floods: ಕೊಡಗಿನ ಬ್ರಹ್ಮಗಿರಿ ದುರಂತ; ಆಚಾರ್ಯರ ಮನೆಯ ಪುಸ್ತಕ, ಬಟ್ಟೆಗಳು ಪತ್ತೆ; ನಾಲ್ವರಿಗಾಗಿ ಶೋಧ

ನಾಲ್ಕು ದಿನಗಳ ಹಿಂದೆ ಬೆಟ್ಟದಡಿಯಲ್ಲಿ ಹೂತುಹೋದ ನಾರಾಯಣ ಆಚಾರ್ಯ ಅವರ ಕುಟುಂಬದವರನ್ನು ತೀವ್ರ ಮಳೆಯಿಂದಾಗಿ ಹುಡುಕಲು ಸಾಧ್ಯವೇ ಆಗಿರಲಿಲ್ಲ. ಕೊಡಗಿನಲ್ಲಿ ಭಾರೀ ಮಳೆಯಾಗಿದ್ದರಿಂದ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ಇದ್ದ ಅರ್ಚಕ ನಾರಾಯಣ ಆಚಾರ್ಯ ಅವರ ಕುಟುಂಬಕ್ಕೆ ಅಲ್ಲಿಂದ ಸ್ಥಳಾಂತರ ಆಗುವಂತೆ ಹಲವರು ಬುಧವಾರ ಸಂಜೆಯಷ್ಟೇ ಹಲವರು ಪರಿಪರಿಯಾಗಿ ಹೇಳಿದ್ದರಂತೆ. ಆದರೆ, ತಾವು ಹುಟ್ಟಿ ಬೆಳೆದ ಊರು, ಬಿಟ್ಟು ಹೋಗುವುದು ಹೇಗೆ?, ಏನೂ ಆಗುವುದಿಲ್ಲ ಎಂದು ನಾರಾಯಣ ಆಚಾರ್ಯ ಸುಮ್ಮನಾಗಿದ್ದರಂತೆ.

ಆದರೆ, ಗುರುವಾರ ಬೆಳಗ್ಗೆ ತೋಟದ ರೈಟರ್ ಅಲ್ಲಿಗೆ ಹೋಗಿ ನೋಡಿದಾಗ ನಾರಾಯಣ ಆಚಾರ್ಯ ಅವರ ಕುಟುಂಬದ ಎರಡು ಮನೆಗಳು ಅಷ್ಟೇ ಅಲ್ಲ, ಇಡೀ ಬೆಟ್ಟವೇ ಅಲ್ಲಿಂದ ಕಣ್ಮರೆಯಾಗಿದೆ. ಇದರೊಂದಿಗೆ ಕುಟುಂಬದ ಐವರು, 30ಕ್ಕೂ ಹೆಚ್ಚು ಜಾನುವಾರುಗಳು, ಮತ್ತು ಎರಡು ಕಾರುಗಳು ನಾಪತ್ತೆಯಾಗಿವೆ.
Published by: Sushma Chakre
First published: August 11, 2020, 7:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading