Kodagu Flood: ಕೊಡಗಿನ ಬ್ರಹ್ಮಗಿರಿಯಲ್ಲಿ ರಕ್ಷಣಾ ಕಾರ್ಯಾಚರಣೆ ಸ್ಥಗಿತ; ಅರ್ಚಕರ ಕುಟುಂಬ ಬದುಕಿರುವುದು ಅನುಮಾನ

Kodagu Rains: ಬ್ರಹ್ಮಗಿರಿ ಬೆಟ್ಟದಲ್ಲಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾದವರ ಶೋಧ ಕಾರ್ಯದ ಕಾರ್ಯಚರಣೆ ಸ್ಥಗಿತಗೊಳಿಸಲಾಗಿದೆ. ನಿರಂತರ ಮಳೆಯಿಂದ ಕಾರ್ಯಚರಣೆಗೆ ಅಡ್ಡಿಯಾಗಿದೆ. ನಾಳೆಯೂ ಮಳೆ ನಿಂತರಷ್ಟೆ ಕಾರ್ಯಾಚರಣೆ ಸಾಧ್ಯ. ನಾರಾಯಣ ಆಚಾರ್ಯರ ಕುಟುಂಬ ಬದುಕುಳಿದಿರೋದು ಬಹುತೇಕ ಅನುಮಾನ.

news18-kannada
Updated:August 7, 2020, 4:00 PM IST
Kodagu Flood: ಕೊಡಗಿನ ಬ್ರಹ್ಮಗಿರಿಯಲ್ಲಿ ರಕ್ಷಣಾ ಕಾರ್ಯಾಚರಣೆ ಸ್ಥಗಿತ; ಅರ್ಚಕರ ಕುಟುಂಬ ಬದುಕಿರುವುದು ಅನುಮಾನ
ಬ್ರಹ್ಮಗಿರಿ ಬೆಟ್ಟ ಕುಸಿದ ಸ್ಥಳ
  • Share this:
ಕೊಡಗು (ಆ. 7): ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಭಾಗಮಂಡಲದಲ್ಲಿ ಗುಡ್ಡ ಕುಸಿದಿತ್ತು. ಗುಡ್ಡದ ಮಣ್ಣಿನಡಿ ತಲಕಾವೇರಿ ದೇವಾಲಯದ ಅರ್ಚಕ ನಾರಾಯಣ ಆಚಾರ್ಯ ಅವರ ಕುಟುಂಬ, ಮನೆ, ಹಸುಗಳು ಹುದುಗಿಹೋಗಿತ್ತು. ಈ ಘಟನೆ ನಡೆದು 2 ದಿನಗಳಾದರೂ ಇನ್ನೂ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ, ಅವರು ಹಾಗೂ ಅವರ ಮನೆಯವರು ಬದುಕಿರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಕೊಡಗಿನಲ್ಲಿ ಪ್ರವಾಹದಿಂದಾಗಿ ಪ್ರತಿಕೂಲ ವಾತಾವರಣ ಇರುವುದರಿಂದ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ಕೊಡಗು ಉಸ್ತುವಾರಿ ಸಚಿವ ವಿ. ಸೋಮಣ್ಣ, ನಾರಾಯಣ ಆಚಾರ್ಯರ ಕುಟುಂಬ ಬದುಕುಳಿದಿರೋದು ಬಹುತೇಕ ಅನುಮಾನ. ತೋರ ಘಟನೆಯೆ ಇಲ್ಲಿ ಮರುಕಳಿಸಿದೆ. ಅದೇ ರೀತಿಯ ಆಘಾತ ಬ್ರಹ್ಮಗಿರಿಯಲ್ಲಿ ಆಗಿದೆ. ಕೆಲವೊಮ್ಮೆ ಬುದ್ದಿವಂತರು ಸಹ ಎಡವುತ್ತಾರೆ. ಆಚಾರ್ಯರು ನಮ್ಮ ಮಾತು ಕೇಳಬಹುದಿತ್ತು. ಅವರು ಅವರ ಪತ್ನಿ, ಅಣ್ಣ, ಆಪ್ತರ ಮಾತು ಕೇಳಲಿಲ್ಲ. ಅವರ ಜೊತೆ 40 ಹಸುಗಳು‌ ಕೊಚ್ಚಿ ಹೋಗಿವೆ‌. ಇದು ಕೂಡ ನೋವಿನ ಸಂಗತಿ. ಇಂದು ಕಾರ್ಯಚರಣೆ ಮಾಡಲು ಸಾಧ್ಯವಾಗಲಿಲ್ಲ. ನಾಳೆ ಮಳೆ ಕಡಿಮೆ ಆದರೆ ಕಾರ್ಯಚರಣೆ ಮಾಡುತ್ತೇವೆ. ಜಿಲ್ಲೆಯಲ್ಲಿನ ಪರಿಸ್ಥಿತಿ ಜಿಲ್ಲಾಧಿಕಾರಿ ನಿಭಾಯಿಸುತ್ತಿದ್ದಾರೆ. ಸಂತ್ರಸ್ತರ ಸ್ಥಳಾಂತರದ ವೇಳೆ ಕೊರೊನಾ ಟೆಸ್ಟ್ ಕಡ್ಡಾಯ. ಕಷ್ಟದ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತ ಕೆಲಸ ಮಾಡುತ್ತಿದೆ. ಕೊರೊನಾ ಜೊತೆ ನಾವು ಮಳೆ ನಿರ್ವಹಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಅವಾಂತರ; ಚಾರ್ಮಾಡಿ ಘಾಟ್, ಶೃಂಗೇರಿ- ಮಂಗಳೂರು ಹೆದ್ದಾರಿ​ ಬಂದ್

ಬ್ರಹ್ಮಗಿರಿ ಬೆಟ್ಟದಲ್ಲಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾದವರ ಶೋಧ ಕಾರ್ಯದ ಕಾರ್ಯಚರಣೆ ಸ್ಥಗಿತಗೊಳಿಸಲಾಗಿದೆ. ನಿರಂತರ ಮಳೆಯಿಂದ ಕಾರ್ಯಚರಣೆಗೆ ಅಡ್ಡಿಯಾಗಿದೆ. ನಾಳೆಯೂ ಮಳೆ ನಿಂತರಷ್ಟೆ ಕಾರ್ಯಾಚರಣೆ ಸಾಧ್ಯ. ಉಸ್ತುವಾರಿ ಸಚಿವ ವಿ. ಸೋಮಣ್ಣ ಇಲ್ಲಿಗೆ ಭೇಟಿ ನೀಡಿದ ನಂತರ ಕಾರ್ಯಚರಣೆ ಸ್ಥಗಿತಗೊಂಡಿರೋ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಕಳೆದ ಮೂರು ದಿನಗಳಿಂದ ಧಾರಾಕಾರವಾಗಿ ಸುರಿದಿದ್ದ ಆಶ್ಲೇಷ ಮಳೆ, ಕಾವೇರಿ ಉಗಮ ಸ್ಥಾನ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟವೇ ಸರ್ವನಾಶವಾಗುವಂತೆ ಮಾಡಿದೆ. ಭಾಗಮಂಡಲ, ತಲಕಾವೇರಿ ಸುತ್ತಮುತ್ತ 170 ಮಿಲಿ ಮೀಟರ್ ಮಳೆ ಸುರಿಯುತ್ತಿದ್ದಂತೆ ಜಿಲ್ಲೆಗೆ  ರೆಡ್ ಅಲರ್ಟ್ ಘೋಷಣೆಯಾಗಿತ್ತು. ನಿನ್ನೆ ಮುಂಜಾನೆ ಬೆಟ್ಟ ಕುಸಿದು ತಲಕಾವೇರಿಯ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಮತ್ತು ಅವರ ಕುಟುಂಬದ ಐವರು ಕಣ್ಮರೆಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಎನ್ ಡಿಆರ್ ಎಫ್ ತಂಡ ಸ್ಥಳಕ್ಕೆ ದೌಡಾಯಿಸಲು ಪ್ರಯತ್ನಿಸಿತ್ತು. ಆದರೆ ಭಾಗಮಂಡಲದ ತ್ರಿವೇಣಿ ಸಂಗಮ ಮುಳುಗಡೆ ಆಗಿದ್ದರಿಂದ ಆ ಪ್ರದೇಶವನ್ನು ದಾಟಿ ಹೋಗಬೇಕಾದ ಸವಾಲಿತ್ತು.

ಇದನ್ನೂ ಓದಿ: Kerala Rains: ಪ್ರವಾಹದ ಹೊಡೆತಕ್ಕೆ ಕೇರಳ ತತ್ತರ; ಇನ್ನೂ 4 ದಿನ 3 ಜಿಲ್ಲೆಗಳಲ್ಲಿ ರೆಡ್ ಅಲರ್ಟ್​ ಘೋಷಣೆ

ಹೀಗೆ ಜಿಲ್ಲೆಯೇ ಮುಳುಗುವಷ್ಟು ತೀವ್ರ ಮಳೆಯಾಗುತಿದ್ದರಿಂದ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ಇದ್ದ ನಾರಾಯಣ ಆಚಾರ್ಯ ಅವರ ಕುಟುಂಬಕ್ಕೆ ಅಲ್ಲಿಂದ ಸ್ಥಳಾಂತರ ಆಗುವಂತೆ ಹಲವರು ಬುಧವಾರ ಸಂಜೆಯಷ್ಟೇ ಪರಿಪರಿಯಾಗಿ ಹೇಳಿದ್ದರಂತೆ. ಆದರೆ ತಾವು ಹುಟ್ಟಿ ಬೆಳೆದ ಊರು. ಬಿಟ್ಟು ಹೋಗುವುದು ಹೇಗೆ?, ಏನೂ ಆಗುವುದಿಲ್ಲ ಎಂದು ನಾರಾಯಣ ಆಚಾರ್ಯ ಸುಮ್ಮನಾಗಿದ್ದರಂತೆ. ಆದರೆ ಗುರುವಾರ ಬೆಳಗ್ಗೆ ತೋಟದ ರೈಟರ್ ಅಲ್ಲಿಗೆ ಹೋಗಿ ನೋಡಿದಾಗ ನಾರಾಯಣ ಆಚಾರ್ಯ ಅವರ ಕುಟುಂಬದ ಎರಡು ಮನೆಗಳು ಅಷ್ಟೇ ಅಲ್ಲ, ಇಡೀ ಬೆಟ್ಟವೇ ಅಲ್ಲಿಂದ ಕಣ್ಮರೆಯಾಗಿದೆ. ಇದರೊಂದಿಗೆ ಕುಟುಂಬದ ಐವರು, 30ಕ್ಕೂ ಹೆಚ್ಚು ಜಾನುವಾರುಗಳು, ಮತ್ತು ಎರಡು ಕಾರುಗಳು ನಾಪತ್ತೆಯಾಗಿವೆ.

ಸರ್ಕಾರಕ್ಕೆ ಸಂಸದ ಪ್ರತಾಪ್ ಸಿಂಹ ಮನವಿ: 

ಬ್ರಹ್ಮಗಿರಿಯಲ್ಲಿ ನಡೆದಿರುವ ದುರಂತದ ಬಗ್ಗೆ ಮಾತನಾಡಿರುವ ಕೊಡಗು ಸಂಸದ ಪ್ರತಾಪ್ ಸಿಂಹ, ಬ್ರಹ್ಮಗಿರಿ ಬೆಟ್ಟದಲ್ಲಿ ಸ್ಥಳ ಪರಿಶೀಲನೆ ಮಾಡಿದ್ದೇವೆ. ಆಚಾರ್ಯರ ಕುಟುಂಬಸ್ಥರ ಪತ್ತೆ ಈ ಪರಿಸ್ಥಿತಿಯಲ್ಲಿ ಅಸಾಧ್ಯ. ಇಂದು ಕಾರ್ಯಾಚರಣೆ ಆರಂಭವಾಗಿಲ್ಲ. ಅಲ್ಲಿ ಕಾರ್ಯಾಚರಣೆ ಮಾಡೋಕು ಸಾಧ್ಯವಿಲ್ಲ. NDRF ತಂಡ ಇದ್ದರೂ ಆಗೋಲ್ಲ. ಎರಡು ವರ್ಷದ ಅನುಭವ ನೋಡಿದರೆ ಅವರು ಪತ್ತೆಯಾಗೋ ಸಾಧ್ಯತೆ ಅನುಮಾನ. ಅಲ್ಲಿಗೆ ಜೆಸಿಬಿ ಹೋಗಲು ಸಾಧ್ಯವಿಲ್ಲ. ಆಚಾರ್ಯರು ನಮಗೆಲ್ಲ ಗುರುವಿನ ಸ್ಥಾನದಲ್ಲಿದ್ದರು. ಅವರು ಘಟನೆ ನಂತರ ತಾಲ್ಲೂಕು ಆಡಳಿತ ಮಾತು ಕೇಳಿದ್ದರೆ ಚೆನ್ನಾಗಿತ್ತು ಅಂದುಕೊಳ್ಳೋದು ಸಹಜ. ಘಟನೆ ಬೇರೆ ಬೇರೆ ಕಾರಣ ಹೇಳಬಹುದು. ಆದರೆ ಕೊಡಗಿನ ಜನರಿಗೆ ಮಾತ್ರ ಕಾವೇರಿ ಬಗ್ಗೆ ಗೊತ್ತಿದೆ. ಕೊಡಗಿಗೆ ಶಾಶ್ವತ ಪರಿಹಾರ ಬಜೆಟ್‌ನಲ್ಲೆ ಘೋಷಣೆ ಮಾಡಬೇಕು. ಈಗಲಾದರೂ ಸರ್ಕಾರ ಈ ಬಗ್ಗೆ ಗಮನ ಹರಿಸಲಿ ಎಂದಿದ್ದಾರೆ.
Published by: Sushma Chakre
First published: August 7, 2020, 3:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading