Kodagu Flood: ಪ್ರವಾಹದಿಂದ ನಲುಗಿರುವ ಕೊಡಗಿಗೆ 761 ಕೋಟಿ ಅನುದಾನ ಬಾಕಿ; ಬಿಡುಗಡೆ ಮಾಡುತ್ತಾ ಸರ್ಕಾರ?

Kodagu Flood: ಈ ಬಾರಿ ಮತ್ತೆ ಎದುರಾದ ಪ್ರವಾಹ ಮತ್ತು ಭೂಕುಸಿತದಿಂದಾಗಿ ಹತ್ತಾರು ರಸ್ತೆಗಳು, ಸಾವಿರಾರು ಎಕರೆ ಕೃಷಿ ಭೂಮಿ, ಹತ್ತಾರು ಮನೆಗಳು ಸಂಪೂರ್ಣ ಹಾಳಾಗಿವೆ. ಹೀಗಾಗಿ 450 ಕೋಟಿಯಷ್ಟು ಜಿಲ್ಲೆಗೆ ನಷ್ಟವಾಗಿದ್ದು, ಕಳೆದ ಬಾರಿಯ ಪರಿಹಾರವೇ ಬಾರದಿರುವಾಗ, ಈ ಬಾರಿಯ ಪರಿಹಾರ ಇನ್ನಷ್ಟು ವಿಳಂಬವಾಗುವುದೇನೋ ಎನ್ನುವ ಅನುಮಾನವಿದೆ.

ಕೊಡಗಿನಲ್ಲಿ ಪ್ರವಾಹದಿಂದ ಭೂಕುಸಿತವಾಗಿರುವ ಜಾಗ.

ಕೊಡಗಿನಲ್ಲಿ ಪ್ರವಾಹದಿಂದ ಭೂಕುಸಿತವಾಗಿರುವ ಜಾಗ.

  • Share this:
ಕೊಡಗು(ಸೆ.05): ಕೊಡಗು ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ಪ್ರಾಕೃತಿಕ ವಿಕೋಪ ಸಂಭವಿಸುತ್ತಲೇ ಇದೆ. ಕಳೆದ ವರ್ಷ ಭಾರೀ ಭೂಕುಸಿತದ ಜೊತೆಗೆ ಪ್ರವಾಹ ಎದುರಾಗಿತ್ತು. ಹೀಗಾಗಿ ಜಿಲ್ಲೆಯಲ್ಲಿ 330 ಕೋಟಿ ಮೌಲ್ಯದಷ್ಟು ನಷ್ಟವಾಗಿತ್ತು. ಇನ್ನು ಈ ಬಾರಿಯೂ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ ಮತ್ತು ಪ್ರವಾಹದಿಂದಾಗಿ 415 ಕೋಟಿ ನಷ್ಟವಾಗಿದೆ. ಕಳೆದ ಬಾರಿ ಪ್ರಾಕೃತಿಕ ವಿಕೋಪ ಉಂಟಾದಾಗ ಕೊಡಗಿಗೆ ಬಂದಿದ್ದ ಸಿಎಂ ಯಡಿಯೂರಪ್ಪ ಅವರು 546 ಕೋಟಿಯ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು. ವಿಶೇಷ ಪ್ಯಾಕೇಜ್ ಘೋಷಿಸಿ ಒಂದು ವರ್ಷ ಕಳೆದರೂ ಇದುವರೆಗೂ ಜಿಲ್ಲೆಗೆ ಬಿಡುಗಡೆಯಾಗಿದ್ದು 200 ಕೋಟಿ ರೂಪಾಯಿ ಮಾತ್ರ. ಇನ್ನೂ 346 ಕೋಟಿ ಕಳೆದ ವರ್ಷದ ಅನುದಾನವೇ ಬರಬೇಕಾಗಿದೆ. 346 ಕೋಟಿ ಅನುದಾನ ಬಾಕಿ ಇರುವುದರಿಂದ ಕಳೆದ ಬಾರಿ ಪ್ರವಾಹ ಮತ್ತು ಭೂಕುಸಿತದಲ್ಲಿ ಕೊಚ್ಚಿ ಹೋಗಿದ್ದ ಸಾಕಷ್ಟು ಗ್ರಾಮೀಣ ಭಾಗದ ರಸ್ತೆಗಳ ಕಾಮಗಾರಿ ಇನ್ನೂ ಆಗಿಲ್ಲ. ಇದರಿಂದ ಗ್ರಾಮೀಣ ಭಾಗದ ಜನರು ಇನ್ನೂ ಸಂಕಷ್ಟದಲ್ಲೇ ಎದುರಿಸುತ್ತಲೇ ಇದ್ದಾರೆ.

ಪ್ರವಾಹದಲ್ಲಿ ಮನೆ ಕಳೆದುಕೊಂಡ ವಿರಾಜಪೇಟೆ ತಾಲ್ಲೂಕಿನ 50 ಕ್ಕೂ ಹೆಚ್ಚು ಕುಟುಂಬಗಳಿಗೆ ಇನ್ನೂ ಪರ್ಯಾಯ ಮನೆ, ಪರಿಹಾರ ಕೂಡ ದೊರೆತಿ. ಅಲ್ಲಿ ಜಾಗ ನೋಡಿದ್ದೇವೆ, ಇಲ್ಲಿ ಜಾಗ ನೋಡಿದ್ದೇವೆ ಎಂದು ಹೇಳುವುದರಲ್ಲೇ ಜಿಲ್ಲಾಡಳಿತ ಕೂಡ ಕಾಲ ಕಳೆಯುತ್ತಿದೆ. ಇನ್ನು ಈ ಬಾರಿ ಮತ್ತೆ ಎದುರಾದ ಪ್ರವಾಹ ಮತ್ತು ಭೂಕುಸಿತದಿಂದಾಗಿ ಹತ್ತಾರು ರಸ್ತೆಗಳು, ಸಾವಿರಾರು ಎಕರೆ ಕೃಷಿ ಭೂಮಿ, ಹತ್ತಾರು ಮನೆಗಳು ಸಂಪೂರ್ಣ ಹಾಳಾಗಿವೆ. ಹೀಗಾಗಿ 450 ಕೋಟಿಯಷ್ಟು ಜಿಲ್ಲೆಗೆ ನಷ್ಟವಾಗಿದ್ದು, ಕಳೆದ ಬಾರಿಯ ಪರಿಹಾರವೇ ಬಾರದಿರುವಾಗ, ಈ ಬಾರಿಯ ಪರಿಹಾರ ಇನ್ನಷ್ಟು ವಿಳಂಬವಾಗುವುದೇನೋ ಎನ್ನುವ ಅನುಮಾನವಿದೆ.

Teachers Day: ವಿಜಯಪುರದ ಈ ಗ್ರಾಮ ಶಿಕ್ಷಕರ ತವರೂರು; ಪ್ರತಿ ಮನೆಯಲ್ಲೂ ಸಿಗುತ್ತಾರೆ ಗುರುಗಳು

ಈ ಕುರಿತು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರನ್ನು ಕೇಳಿದರೆ, ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿತ್ತು. ಆಗಲೇ ಸಾಕಷ್ಟು ಅನುದಾನ ಕೊಡುವುದಾಗಿ ಹೇಳಿದ್ದರು. ಆದರೆ ಇದುವರೆಗೆ 200 ಕೋಟಿ ರೂಪಾಯಿ ನೀಡಿದ್ದು, ಉಳಿದ ಹಣವನ್ನು ಸದ್ಯದಲ್ಲೇ ಬಿಡುಗಡೆ ಮಾಡುವರೆಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ನವೆಂಬರ್ ತಿಂಗಳಲ್ಲಿ ಗ್ರಾಮ ಪಂಚಾಯಿತಿಗಳ ಚುನಾವಣೆ ಇರುವುದರಿಂದ ಅನುದಾನ ಬಿಡುಗಡೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯೂ ಇದೆ ಎನ್ನೋ ಅನುಮಾನವನ್ನೂ ಅವರೇ ವ್ಯಕ್ತಪಡಿಸಿದ್ದಾರೆ.

ಇನ್ನು ಜಿಲ್ಲಾಧಿಕಾರಿಯನ್ನು ಕೇಳಿದರೆ, ಸಾಕಷ್ಟು ಅನುದಾನ ಬಂದಿದೆ. ಅದು ನೇರವಾಗಿ ಆಯಾ ಇಲಾಖೆಗಳ ಖಾತೆಗೆ ಬಿಡುಗಡೆಯಾಗುತ್ತಿದ್ದು ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದವು. ಆದರೆ ಕೊರೊನಾದಿಂದ ಕಾರ್ಮಿಕರ ಕೊರತೆಯಿಂದ ಕಳೆದ ಐದು ತಿಂಗಳಿಂದ ಕಾಮಗಾರಿಗಳು ಸರಿಯಾಗಿ ನಡೆಯುತ್ತಿಲ್ಲ ಎನ್ನುತ್ತಿದ್ದಾರೆ. ಮತ್ತೊಂದೆಡೆ ಕೊಡಗು ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಜಿಲ್ಲೆಯಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ನಷ್ಟವಾಗಿದ್ದು, ಸಾಕಷ್ಟು ಕೆಲಸಗಳನ್ನು ಮಾಡಬೇಕಾಗಿದೆ. ಅದಕ್ಕಾಗಿ ಅನುದಾನ ಬಿಡುಗಡೆ ಮಾಡಿ ಎಂದು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ ಕೊಡಗು ಜಿಲ್ಲೆಗೆ ಕಳೆದ ಬಾರಿ ಘೋಷಣೆ ಮಾಡಿದ್ದ ವಿಶೇಷ ಪ್ಯಾಕೇಜ್ ನ 346 ಕೋಟಿ ಹಾಗೂ ಈ ಬಾರಿಯ 415 ಕೋಟಿ ಸೇರಿ ಬರೋಬ್ಬರಿ 761 ಕೋಟಿ ರೂಪಾಯಿಯನ್ನು ಸರ್ಕಾರ ಬಿಡುಗಡೆ ಮಾಡಬೇಕಾಗಿದೆ. ಇಲ್ಲದಿದ್ದರೆ ಕೊಡಗು ಸಹಜ ಸ್ಥಿತಿಯತ್ತ ಮರಳಲು ಸಾಧ್ಯವಾಗದೇ ಜನರು ಸಮಸ್ಯೆಯಲ್ಲೇ ಬದುಕಬೇಕಾಗುತ್ತದೆ.
Published by:Latha CG
First published: