HOME » NEWS » State » KODAGU FARMERS CHOOSE PADDY CUTTING MACHINE INSTEAD OF LABOURS LG

ಕೊಡಗಿನಲ್ಲಿ ಭತ್ತದ ಕಟಾವಿಗೆ ಯಂತ್ರಗಳ ಮೊರೆಹೋದ ರೈತರು

ಇದೇ ಐದು ಎಕರೆ ಭತ್ತದ ಬೆಳೆಯನ್ನು ಕೊಯ್ಲು ಮಾಡಲು ಕನಿಷ್ಠ 30 ಕಾರ್ಮಿಕರನ್ನು ಬಳಸಿ ಒಂದು ವಾರಗಳ ಕಾಲ ಕೊಯ್ಲು ಮಾಡಬೇಕು. ಒಂದು ದಿನಕ್ಕೆ ಒಬ್ಬ ಕಾರ್ಮಿಕರಿಗೆ ಕನಿಷ್ಠ 350 ರೂಪಾಯಿ ಕೂಲಿ ಕೊಡಬೇಕು. ಇದರಿಂದ ವೆಚ್ಚ ಹೆಚ್ಚಳವಾಗಿ ಭತ್ತದ ಬೆಳೆ ಮಾಡಿದರೆ ಲಾಭಕ್ಕಿಂತ ನಷ್ಟವೇ ಜಾಸ್ತಿಯಾಗುತ್ತದೆ.

news18-kannada
Updated:January 3, 2021, 9:50 AM IST
ಕೊಡಗಿನಲ್ಲಿ ಭತ್ತದ ಕಟಾವಿಗೆ ಯಂತ್ರಗಳ ಮೊರೆಹೋದ ರೈತರು
ಭತ್ತ ಕಟಾವು ಮಾಡುತ್ತಿರುವ ಯಂತ್ರ
  • Share this:
ಕೊಡಗು(ಜ.03): ದಿನಗಳು ಕಳೆದಂತೆ ಕೃಷಿ ಚಟುವಟಿಕೆಗೆ ಅತಿ ಹೆಚ್ಚು ವ್ಯಯಿಸಬೇಕಾದ ಆದರೆ, ಕಡಿಮೆ ಆದಾಯ ಬರುವ ಸ್ಥಿತಿ ನಿರ್ಮಾಣವಾಗಿ ಬಹಳ ದಿನಗಳೇ ಕಳೆದಿವೆ. ಮತ್ತೊಂದೆಡೆ ಕೃಷಿ ಕಾರ್ಯಗಳನ್ನು ಮಾಡಲು ಕಾರ್ಮಿಕರ ಕೊರತೆ ಇನ್ನಿಲ್ಲದಂತೆ ತೀವ್ರವಾಗಿಯೇ ಕಾಡುತ್ತಿದೆ. ಹೀಗಾಗಿ ರೈತರು ಬೆಳೆ ಕಟಾವಿಗೆ ಕಾರ್ಮಿಕರನ್ನು ಬಳಕೆ ಮಾಡುವುದಕ್ಕೆ ಬದಲಾಗಿ ಯಂತ್ರಗಳ ಮೊರೆ ಹೋಗಿದ್ದಾರೆ.

ಒಂದು ಕಾಲಕ್ಕೆ ಕೊಡಗು ಜಿಲ್ಲೆ ಭತ್ತದ ಕಣಜವೆಂದೇ ಖ್ಯಾತಿ ಪಡೆದಿತ್ತು. ಆದರೆ ಹಿಂದೆಂದಿಗಿಂತಲೂ ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಕಾಟ, ಪ್ರಾಕೃತಿಕ ವೈಪರೀತ್ಯಗಳಿಂದ ಭತ್ತದ ಬೆಳೆಯಿಂದ ಹಲವು ರೈತರು ವಿಮುಖರಾಗಿದ್ದಾರೆ. ಮತ್ತೊಂದೆಡೆ ಕಾರ್ಮಿಕರ ಕೊರತೆ ತೀವ್ರವಾಗಿ ಕಾಡುತ್ತಿದೆ. ಹೀಗಾಗಿ ಭತ್ತ ಬೆಳೆಯುವ ರೈತರು ಕಾರ್ಮಿಕರನ್ನು ಸಂಪೂರ್ಣ ಕೈಬಿಟ್ಟು ಬೆಳೆ ಕಟಾವಿಗೆ ಯಂತ್ರಗಳ ಮೊರೆ ಹೋಗಿದ್ದಾರೆ.

ಮಡಿಕೇರಿ ತಾಲ್ಲೂಕಿನ ಕಗ್ಗೋಡ್ಲಿನ ರೈತ ಗಣಪತಿ ಹದಿಮೂರು ಎಕರೆ ಪ್ರದೇಶದಲ್ಲಿ ಭತ್ತದ ಬೆಳೆ ಬೆಳೆದಿದ್ದು, ಬೆಳೆ ಕಟಾವಿಗೆ ಯಂತ್ರದ ಮೊರೆ ಹೋಗಿದ್ದಾರೆ. ಭತ್ತದ ಬೆಳೆ ತುಂಬಾ ಬೆಳೆದಿತ್ತು, ಜೊತೆಗೆ ಇತ್ತೀಚೆಗೆ ಬೀಸಿದ ಬಾರೀ ಗಾಳಿಯಿಂದ ಇಡೀ ಬೆಳೆ ಸಂಪೂರ್ಣ ನೆಲಕ್ಕೆ ಬಿದ್ದಿದೆ. ಈ ಬೆಳೆಯನ್ನು ಯಂತ್ರ ಬಳಸಿ ಕೊಯ್ಲು ಮಾಡುತ್ತಿರುವುದರಿಂದ ಸುಲಭವಾಗಿ ಮತ್ತು ಶೀಘ್ರವಾಗಿ ಕಟಾವು ಕಾರ್ಯ ಮುಗಿಯುತ್ತದೆ ಎನ್ನೋದು ರೈತ ಗಣೇಶ ಅವರ ಅಭಿಪ್ರಾಯ.

ಈ ಯಂತ್ರದಲ್ಲಿ ಭತ್ತವು ಒಂದು ದಿನಕ್ಕೆ ಕನಿಷ್ಠ 5 ಎಕರೆ ಭತ್ತದ ಬೆಳೆಯನ್ನು ಕಟಾವು ಮಾಡಲಾಗುತ್ತದೆ. ಭತ್ತದ ಬೆಳೆಯನ್ನು ಕೊಯ್ಲು ಮಾಡುವ ಯಂತ್ರವು ಅಲ್ಲಿಯೇ ಒಂದು ಟ್ಯಾಕ್ಟರ್ ಪ್ರಮಾಣದಷ್ಟು ಭತ್ತವನ್ನು ಸ್ವಚ್ಚಗೊಳಿಸಿ ಅಲ್ಲಿಯೇ ಶೇಖರಣೆ ಮಾಡಿಟ್ಟುಕೊಳ್ಳುತ್ತದೆ. ಕೊನೆಗೆ ಒಂದೇ ಬಾರಿಗೆ ಆ ಭತ್ತವನ್ನು ಸ್ಥಳಾಂತರ ಮಾಡಬಹುದು. ಇದರಿಂದ ರೈತರ ಲಾಭವಾಗುತ್ತದೆ ಎನ್ನೋದು ಜಯೇಶ್ ಅಭಿಪ್ರಾಯ.

ಕೊವಿಶೀಲ್ಡ್, ಕೋವ್ಯಾಕ್ಸಿನ್ ಬಳಕೆಗೆ ಸಬ್ಜೆಕ್ಟ್ ಎಕ್ಸಫರ್ಟ್ ಕಮಿಟಿಯಿಂದ ಒಪ್ಪಿಗೆ; ಡಿಜಿಸಿಐ ಅನುಮೋದನೆ ಬಾಕಿ

ಇದೇ ಐದು ಎಕರೆ ಭತ್ತದ ಬೆಳೆಯನ್ನು ಕೊಯ್ಲು ಮಾಡಲು ಕನಿಷ್ಠ 30 ಕಾರ್ಮಿಕರನ್ನು ಬಳಸಿ ಒಂದು ವಾರಗಳ ಕಾಲ ಕೊಯ್ಲು ಮಾಡಬೇಕು. ಒಂದು ದಿನಕ್ಕೆ ಒಬ್ಬ ಕಾರ್ಮಿಕರಿಗೆ ಕನಿಷ್ಠ 350 ರೂಪಾಯಿ ಕೂಲಿ ಕೊಡಬೇಕು. ಇದರಿಂದ ವೆಚ್ಚ ಹೆಚ್ಚಳವಾಗಿ ಭತ್ತದ ಬೆಳೆ ಮಾಡಿದರೆ ಲಾಭಕ್ಕಿಂತ ನಷ್ಟವೇ ಜಾಸ್ತಿಯಾಗುತ್ತದೆ.

ಕೊಯ್ಲು ಮಾಡಲು ಕಾರ್ಮಿಕರನ್ನು ಬಳಕೆ ಮಾಡಿದಲ್ಲಿ ಕಟಾವು ಮಾಡಿ ಕೆಲವು ದಿನಗಳ ಕಾಲ ಗದ್ದೆಯಲ್ಲೇ ಭತ್ತದ ಬೆಳೆ ಬಿಡಬೇಕು. ಈ ನಡುವೆ ಮಳೆ ಬಂದರೆ ನಷ್ಟವಾಗುವ ಸಾಧ್ಯತೆ ಇರುತ್ತದೆ. ನಂತರ ಕಟಾವು ಮಾಡಿದ ಬೆಳೆಯನ್ನು ಕಣಕ್ಕೆ ಹೊತ್ತು ಹೋಗಬೇಕು, ಮತ್ತೆ ಅಲ್ಲಿ ಅದನ್ನು ಬಡಿದು, ತೂರಿ ಸ್ವಚ್ಚಗೊಳಿಸಬೇಕು. ಇದೆಲ್ಲವೂ ನೋಡಿದರೆ ಭತ್ತದ ಬೆಳೆ ಕೊಯ್ಲಿಗೆ ಕಾರ್ಮಿಕರಿಗಿಂತ ಯಂತ್ರದ ಬಳಕೆಯೇ ಉತ್ತಮ ಎನ್ನೋದು ರೈತರ ಅಭಿಪ್ರಾಯ.ಯಂತ್ರ ಬಳಸಿ ಭತ್ತದ ಬೆಳೆ ಕೊಯ್ಲು ಮಾಡುವುದರಿಂದ ಹುಲ್ಲು ತುಂಡಾಗಿ ಹೋಗುತ್ತದೆ. ಆದರೆ ಆ ಹುಲ್ಲನ್ನೂ ಕೂಡ ದನಗಳಿಗೆ ಇಲ್ಲವೇ ಕಾಂಕ್ರಿಟ್ ರಸ್ತೆ ಮಾಡುವವರು ಬಳಕೆ ಮಾಡುವುದಕ್ಕಾಗಿ ಕೊಂಡುಕೊಳ್ಳುತ್ತಾರೆ. ಇದರಿಂದ ಹುಲ್ಲು ಕೂಡ ವೇಸ್ಟ್ ಆಗುವುದಿಲ್ಲ.

ಒಟ್ಟಿನಲ್ಲಿ ದಿನಗಳು ಕಳೆದಂತೆ ಭತ್ತದ ಕೃಷಿ ಚಟುವಟಿಕೆಗೆ ವೆಚ್ಚ ಜಾಸ್ತಿಯಾಗುತ್ತಿರುವುದರಿಂದ ರೈತರು ಅದನ್ನು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕಟಾವಿಗೆ ಯಂತ್ರಗಳ ಬಳಕೆಗೆ ಮುಂದಾಗಿದ್ದಾರೆ.
Published by: Latha CG
First published: January 3, 2021, 9:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories