HOME » NEWS » State » KODAGU DRUNKER WHO SET FIRE TO HIS HOUSE COMMITTED SUICIDE RSK SESR

Kodagu Crime: ಕುಡಿದ ಮತ್ತಿನಲ್ಲಿ ಮನೆಗೆ ಬೆಂಕಿ ಇಟ್ಟು ಏಳು ಜನರ ಜೀವಂತ ದಹನ ಮಾಡಿದ ಆರೋಪಿ ಆತ್ಮಹತ್ಯೆ

ತಾನು ಮನೆಗೆ ಬೆಂಕಿ ಹಚ್ಚಿದ ಸ್ಥಳದಿಂದ ಸ್ವಲ್ಪ ದೂರದಲ್ಲೇ ಕಾಫಿ ತೋಟದಲ್ಲಿ ಭೋಜನ ಮೃತದೇಹ ಪತ್ತೆಯಾಗಿದೆ.

news18-kannada
Updated:April 6, 2021, 6:14 PM IST
Kodagu Crime: ಕುಡಿದ ಮತ್ತಿನಲ್ಲಿ ಮನೆಗೆ ಬೆಂಕಿ ಇಟ್ಟು ಏಳು ಜನರ ಜೀವಂತ ದಹನ ಮಾಡಿದ ಆರೋಪಿ ಆತ್ಮಹತ್ಯೆ
ಆರೋಪಿ ಭೋಜ
  • Share this:
ಕೊಡಗು (ಏ. 6) : ಮದ್ಯದ ಅಮಲಿನಲ್ಲಿ ತನ್ನ ಅಳಿಯನ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಏಳು ಜನರ ಜೀವಂತ ದಹನ ಮಾಡಿ ಪರಾರಿ ಆಗಿದ್ದ ಆರೋಪಿ ಪಾಪಿ ಭೋಜ ಕೊನೆಗೂ ಶವವಾಗಿ ಪತ್ತೆಯಾಗಿದ್ದಾನೆ. ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಮುಗುಟೂರಿನಲ್ಲಿ ವಸಂತ ಎಂಬುವರ ತೋಟದ ಲೈನ್ ಮನೆಯಲ್ಲಿದ್ದ ಮಂಜು ಎಂಬುವರ ಮನೆಗೆ ಮಾವನೇ ಆದ ಭೋಜ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ತನ್ನ ಪತ್ನಿಯ ಮೇಲಿದ್ದ ದ್ವೇಷದಿಂದ ಸಾಯಿಸಲೆಂದೇ ಮನೆಯಲ್ಲಿ ಮಲಗಿದ್ದ 8 ಜನರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದರು. ಸುಟ್ಟ ಗಾಯಗಳಿಂದ ಗಂಭೀರವಾಗಿ ಗಾಯಗೊಂಡು ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಐವರ ಪೈಕಿ ಮೂವರು ಮೃತಪಟ್ಟಿದ್ದರು. ಪೆಟ್ರೋಲ್ ಸುರಿದು ಬೆಂಕಿ ಹಂಚಿದ್ದ ಭೋಜ, ಕೂಡಲೇ ಅಲ್ಲಿಂದ ಪರಾರಿಯಾಗಿದ್ದ. ಮಾರನೇ ದಿನ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಭೋಜನಿಗಾಗಿ ಪೊನ್ನಂಪೇಟೆ ಪೊಲೀಸರು ಹುಡುಕಾಟ ನಡೆಸಿದ್ದರು. ನಾಲ್ಕು ದಿನಗಳಾದರೂ ಭೋಜನ ಸುಳಿವೇ ಪತ್ತೆಯಾಗಿರಲಿಲ್ಲ. ಆದರೆ ಮಂಗಳವಾರ ಮುಂಜಾನೆ ತಾನು ಮನೆಗೆ ಬೆಂಕಿ ಹಚ್ಚಿದ ಸ್ಥಳದಿಂದ ಸ್ವಲ್ಪ ದೂರದಲ್ಲೇ ಕಾಫಿ ತೋಟದಲ್ಲಿ ಭೋಜನ ಮೃತದೇಹ ಪತ್ತೆಯಾಗಿದೆ.

ಭೋಜ ಅಳಿಯನ ಮನೆಗೆ ಬೆಂಕಿ ಹಚ್ಚಿದ ಸ್ವಲ್ಪ ಸಮಯದಲ್ಲೇ ತನ್ನ ಹಿರಿಯ ಮಗಳು ಸುಚಿಗೆ ಫೋನ್ ಕರೆ ಮಾಡಿದ್ದ. ನಿನ್ನವ್ವ ಕಳೆದ 12 ದಿನಗಳಿಂದ ಕರೆದರೂ ಮನೆಗೆ ಬಂದಿರಲಿಲ್ಲ. ಹೀಗಾಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದೇನೆ ಎಂದು ಹೇಳಿದ್ದ ಎನ್ನಲಾಗಿದೆ. ಈ ಕುರಿತ ಫೋನ್ ವಾಯ್ಸ್ ರೆಕಾರ್ಡ್ ಕೂಡ ದೊರೆತಿತ್ತು. ಈ ವಾಯ್ಸ್ ನಲ್ಲಿ ತಾನೂ ಕೂಡ ಸಾಯುತ್ತಿರುವುದಾಗಿ ಹೇಳಿದ್ದಾನೆ. ಹೀಗಾಗಿ ಭೋಜ ಬೆಂಕಿ ಹಚ್ಚಿದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿತ್ತು. ಘಟನೆ ನಡೆದ ದಿನ ಸ್ಥಳಕ್ಕೆ ಬಂದಿದ್ದ ದಕ್ಷಿಣ ವಲಯ ಐಜಿಪಿ ಪ್ರವೀಣ್ ಪವಾರ್, ಸ್ಥಳೀಯ ಎಸ್‍ಐ ಜಯರಾಂ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ಭೋಜನ ಬಂಧನಕ್ಕೆ ಬಲೆ ಬೀಸಿದ್ದರು. ಆದರೆ, ಭೋಜ ತಾನೂ ಇಡೀ ಕುಟುಂಬವನ್ನು ಬಲಿ ತೆಗೆದುಕೊಂಡ ಬಳಿಕ ಪಶ್ಚತಾಪ ಪಟ್ಟುಕೊಂಡನೇ, ಹೀಗಾಗಿಯೇ ಬೆಂಕಿ ಹಚ್ಚಿದ ಬಳಿಕ ತಾನು ಎಲ್ಲಿಯಾದರೂ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಎಂದು ಸ್ಥಳೀಯರೇ ಅನುಮಾನಪಟ್ಟಿದ್ದರು.

ಇದನ್ನು ಓದಿ: ಗೋಕಾಕ್ ಆಸ್ಪತ್ರೆಗೆ ಭೇಟಿ ನೀಡಿದ ಎಸ್.ಐ.ಟಿ ತಂಡ; ರಮೇಶ್ ಜಾರಕಿಹೊಳಿ ಆರೋಗ್ಯದ ಕುರಿತು ಮಾಹಿತಿ ಕಲೆ

ಆದರೆ ತನ್ನ ಪತ್ನಿ, ಮಕ್ಕಳು, ಮೊಮ್ಮಕ್ಕಳು ಇದ್ದಾರೆ. ಅವರ ಪ್ರಾಣಕ್ಕೂ ಕುತ್ತು ಬರುತ್ತೆ ಎನ್ನೋ ಸಣ್ಣ ಅಳುಕು ಮೂಡದ ಭೋಜ ಪಶ್ಚಾತಾಪದಿಂದ ಮೃತಪಡುವುದಕ್ಕೆ ಬದಲಿಗೆ ಪೊಲೀಸರ ಕೈಗೆ ಸಿಕ್ಕರೆ ನನ್ನನ್ನೂ ಉಳಿಸುವುದಿಲ್ಲ ಎಂದು ಹೆದರಿ ಆತ್ಮಹತ್ಯೆ ಮಾಡಿಕೊಂಡನಾ ಎನ್ನೋ ಅನುಮಾನವಿದೆ.

ಮಂಗಳವಾರ ಆತನ ಮೃತದೇಹ ದೊರೆತ್ತಿದ್ದರೆ, ಅತ್ತ ಬೆಂಕಿಯಲ್ಲಿ ಗಂಭೀರವಾಗಿ ಸುಟ್ಟಗಾಯಗಳಿಂದ ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತೋಲನ ಪತ್ನಿ ಭಾಗ್ಯ ಮಂಗಳವಾರ ಅಸುನೀಗಿದ್ದಾರೆ. ಭೋಜನ ಶವವಾಗಿ ಪತ್ತೆಯಾಗಿರುವ ವಿಷಯ ತಿಳಿಯುತ್ತಿದ್ದಂತೆ, ಸ್ಥಳಕ್ಕೆ ಕೊಡಗು ಎಸ್‍ಪಿ ಕ್ಷಮಾ ಮಿಶ್ರಾ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಏಳು ಜನರ ಸಾವಿಗೆ ಕಾರಣವಾದ ಪಾಪಿ ಭೋಜನ ಅಂತ್ಯವೂ ಆಗಿದೆ.
Published by: Seema R
First published: April 6, 2021, 6:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories