ಕೊಡಗು : ಅತ್ಯಂತ ವಿಶ್ವಾಸ ಮತ್ತು ನಂಬಿಕೆ(Trust And Honest)ಗೆ ನಾಯಿ (Dog) ಹೆಸರುವಾಸಿ ಅಂತಾರೆ. ಅದು ಇಲ್ಲಿ ಅಕ್ಷರಶಃ ಸತ್ಯ ಅನ್ನೋದು ಸಾಬೀತಾಗಿದೆ. ಹೌದು ತನ್ನ ಒಡೆಯ(Owner)ನನ್ನು ಕಳೆದುಕೊಂಡು ಹತ್ತು ದಿನವಾದರೂ ಆ ನಾಯಿ ತನ್ನ ಒಡೆಯನಿಗಾಗಿ ಇನ್ನಿಲ್ಲದಷ್ಟು ನಿರಂತರವಾಗಿ ಹುಡುಕಾಡುತ್ತಿದೆ. ಮನೆಯ (Home) ಹಿಂದೆ ಹೋಗೋದು, ಮನೆಯ ಒಳಗೊಮ್ಮೆ ನುಸುಳೋದು, ಯಾರೇ ಬಂದರೂ ತನ್ನ ಒಡೆಯನೇ ಬಂದನಾ ಎಂದು ಪರೀಕ್ಷಿಸೋದನ್ನು ನಿರಂತರವಾಗಿ ಮಾಡುತ್ತಿದೆ. ಹೌದು ಕೊಡಗು ಜಿಲ್ಲೆ ವಿರಾಜಪೇಟೆ (Virajapete, Kodagu) ತಾಲೂಕಿನ ಅತ್ತೂರಿನಲ್ಲಿ ಕಳೆದ ಹತ್ತು ದಿನಗಳ ಹಿಂದೆ ಹುಲಿ ದಾಳಿ(Tiger Attack)ಯಿಂದ ಗಣೇಶ್ ಎಂಬ 28 ವರ್ಷದ ಯುವಕ ಮೃತಪಟ್ಟಿದ್ದ. ಎರಡು ವರ್ಷಗಳಿಂದ ಅತ್ಯಂತ ಪ್ರೀತಿಯಿಂದ ಗಣೇಶ್ ಟಾಮಿ ಹೆಸರಿನ ನಾಯಿಯನ್ನು ಸಾಕಿದ್ದರು.
ಹತ್ತು ದಿನಗಳ ಹಿಂದೆ ಹುಲಿ ದಾಳಿಯಿಂದ ಗಣೇಶ್ ಮೃತಪಟ್ಟಿದ್ದರೂ, ಟಾಮಿ ನಾಯಿ ಮಾತ್ರ ತನ್ನ ಮಾಲೀಕನಿಗಾಗಿ ಹುಡುಕಾಡುತ್ತಲೇ ಇದೆ. ಗಣೇಶ್ ನ ಮನೆಯೊಳಗೆ, ಆತನ ಮನೆಯ ಹಿಂದೆ, ಅಕ್ಕಪ್ಪಕದವರ ಮನೆಯ ಸುತ್ತಮುತ್ತೆಲ್ಲಾ ನಿತ್ಯ, ನಿರಂತರವಾಗಿ ಇನ್ನಿಲ್ಲದಂತೆ ತನ್ನ ಪ್ರೀತಿಯ ಒಡೆಯನಿಗಾಗಿ ಹುಡುಕಾಡುತ್ತಲೇ ಇದೆ.
ಎರಡು ವರ್ಷಗಳಿಂದ ಸಾಕಿದ್ರು!
ಟಾಮಿ ಚಿಕ್ಕ ಮರಿಯಾಗಿರುವಾಗ ಯಾರೋ ತಂದು ಒಂದೆಡೆ ಬಿಟ್ಟು ಹೋಗಿದ್ದರಂತೆ. ಅದನ್ನು ನೋಡಿ ಎತ್ತಿದ್ದ ತಂದಿದ್ದ ಗಣೇಶ್ ಎರಡು ವರ್ಷಗಳಿಂದ ತನ್ನ ಮಗುವಿನಂತೆ ಮುದ್ದಿಸಿ ಅತ್ಯಂತ ಪ್ರೀತಿಯಿಂದ ನಾಯಿಯನ್ನು ಸಾಕಿದ್ದರು.
ಇದನ್ನೂ ಓದಿ: Amit Shah ಅವರಿಗೆ ಇಂಗ್ಲಿಷ್ ಬರಲ್ವಾ? ಹುಳಿ ಹಿಂಡುವ ಹೇಳಿಕೆ ಆಘಾತಕಾರಿ: HD Kumaraswamy
ತಾನು ಎಲ್ಲಿಯೇ ಹೋದರು ತನ್ನ ಟಾಮಿಯನ್ನು ಕರೆದೊಯ್ಯುತ್ತಿದ್ದರಂತೆ. ತಾನು ತಿನ್ನುವ ಊಟದಲ್ಲೇ ಅದಕ್ಕೂ ತಿನ್ನಿಸಿ ಖುಷಿ ಪಡುತ್ತಿದ್ದರಂತೆ. ಇಷ್ಟು ಪ್ರೀತಿ ನೀಡಿದ ತನ್ನ ಒಡೆಯ ಕಳೆದ 10 ದಿನಗಳಿಂದ ಕಾಣದೇ ಇರೋದು ಟಾಮಿಗೆ ಅದೆಷ್ಟು ನೋವು ತರಿಸಿದೆ ಅನ್ನೋದನ್ನ ಅದು ತನ್ನ ಒಡೆಯನಿಗಾಗಿ ಹುಡುಕಾಡುತ್ತಿರುವ ರೀತಿಯೇ ಸಾಕ್ಷೀಕರಿಸುತ್ತಿದೆ.
10 ದಿನದ ಹಿಂದೆ ಹುಲಿ ದಾಳಿಗೆ ಗಣೇಶ್ ಸಾವು
ಎಂದಿಗೂ ತನ್ನ ಒಡೆಯನ ಜೊತೆಗೆ ಹೋಗುತ್ತಿದ್ದ ಟಾಮಿಯನ್ನು ಕರಿಮೆಣಸು ಕೊಯ್ಲು ಮಾಡಲು ಹೊರಟಿದ್ದ ಗಣೇಶ್ ಅಂದು ಅದೇಕೋ ಬರುತ್ತಿದ್ದ ಟಾಮಿಯಿಂದ ತಪ್ಪಿಸಿಕೊಂಡು ಹೋಗಿದ್ದರಂತೆ. ಅಂದು ಗಣೇಶನಿಗೆ ಅದೇನು ತೋಚಿತ್ತೋ ಏನೋ ಗೊತ್ತಿಲ್ಲ. ವಿಧಿಯಾಟ ಆತನನ್ನು ಕರೆದಿತ್ತೋ ಏನೋ. ಜೊತೆಗೆ ಬರುತ್ತಿದ್ದ ಟಾಮಿಯನ್ನು ಬಿಟ್ಟು ಹೋದ ಗಣೇಶ್ ವ್ಯಾಘ್ರನ ಅಟ್ಟಹಾಸಕ್ಕೆ ಪ್ರಾಣ ಬಿಟ್ಟಿದ್ದ.
ವಿಶ್ವಾಸದ ಕಂಗಳಿಂದ ಕಾಯುತ್ತಿರುವ ಟಾಮಿ
ಅಂದಿನಿಂದ ಇದುವರೆಗೆ ತನ್ನ ಒಡೆಯ ವಾಪಸ್ ಬರಲೇ ಇಲ್ಲ. ಅದರ ಒಡೆಯ ಇಂದಿಗೂ ಬಾರದೇ ಇರೋದು ಅದಕ್ಕೇ ಇನ್ನಿಲ್ಲದ ನೋವು ತರಿಸಿದೆ. ತನ್ನಿಂದ ತಪ್ಪಿಸಿಕೊಂಡು ಹೋದ ಮಾಲೀಕ ಹುಲಿ ದಾಳಿಯಿಂದ ಪ್ರಾಣಬಿಟ್ಟು ಹತ್ತು ದಿನ ಕಳೆದರೂ ಇಂದಿಗೂ ಬರದೇ ಇರುವುದರಿಂದ ತನ್ನ ಒಡೆಯ ಇಂದು ಬರುತ್ತಾನೆ, ನಾಳೆ ಬರುತ್ತಾನೆ ಎನ್ನೋ ವಿಶ್ವಾಸದ ಕಣ್ಣುಗಳಿಂದಲೇ ಕಾಯುತ್ತಿದೆ.
ಮನೆ ಬಳಿಗೆ ಯಾರಾದರೂ ಬಂದರೆ ಅವರೊಂದಿಗೆ ನನ್ನ ಒಡೆಯನೂ ಬಂದಿರಬಹುದೇ ಎಂದು ಎಲ್ಲರ ಸುತ್ತಲೂ ತಿರುಗಾಡಿ ಹುಡುಕಾಡುತ್ತಿದೆ. ನಾಯಿಯ ಈ ಪ್ರೀತಿಯನ್ನು ನೋಡಿದ ಅತ್ತೂರು ಗ್ರಾಮದವರು, ಮೃತ ಗಣೇಶನ ಮನೆಯವರು ಮಮ್ಮಲ ಮರುಗುತ್ತಿದ್ದಾರೆ.
ಇದನ್ನೂ ಓದಿ: Silk Saree Shops: ಬೆಂಗಳೂರಿನಲ್ಲಿ ರೇಷ್ಮೆ ಸೀರೆ ಎಲ್ಲಿ ಖರೀದಿ ಮಾಡೋದು ಅನ್ನೊ ಯೋಚ್ನೆ ಬಿಡಿ, ಈ ಅಂಗಡಿಗಳಿಗೆ ಹೋಗಿ
ಟಾಮಿಯನ್ನು ನೋಡಿ ಕುಟುಂಬಸ್ಥರು ಕಣ್ಣೀರು
ನಮಗಿಂತ ಈ ನಾಯಿ ಅತೀವ ಬೇಸರ ಮಾಡಿಕೊಂಡಿದೆ ಎಂದು ಮೃತ ಗಣೇಶನ ಭಾವ ದಿನೇಶ್ ಅವರು ಕಣ್ಣೀರಿಟ್ಟಿದ್ದಾರೆ. ನೋಡಿ ಮೂಕ ಪ್ರಾಣಿಯಾದರೂ ತನ್ನನ್ನು ಪ್ರೀತಿಯಿಂದ ಸಾಕಿದ್ದ ಗಣೇಶನ ಪ್ರೀತಿಯನ್ನು ನಾಯಿ ಟಾಮಿ ಇನ್ನೂ ಹಾಗೆಯೇ ಬೆಚ್ಚನೆ ಉಳಿಸಿಕೊಂಡಿರುವುದು ಎಂಥವರ ಕಲ್ಲು ಹೃದಯವನ್ನು ಕರಗಿಸಿಬಿಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ