kodagu: ಕೊಡಗಿಗೆ ತಪ್ಪದ ಜಲ ಗಂಡಾಂತರ; ರಾಮಕೊಲ್ಲಿ ಬೆಟ್ಟದಲ್ಲಿ ಜಲಸ್ಫೋಟ

ಜನಪ್ರತಿನಿಧಿಗಳಿಂದ ಸ್ಥಳ ಪರಿಶೀಲನೆ

ಜನಪ್ರತಿನಿಧಿಗಳಿಂದ ಸ್ಥಳ ಪರಿಶೀಲನೆ

ಸೋಮವಾರ ಸಂಜೆ ಏಳು ಗಂಟೆ ವೇಳೆಗೆ ಭಾರೀ ಶಬ್ಧದ ಜೊತೆಗೆ ಜಲಸ್ಫೋಟಗೊಂಡಿದೆ. ಹೀಗಾಗಿ ಸಾವಿರಾರು ಲೋಡ್ ಪ್ರಮಾಣದ ಮಣ್ಣು ಕೆಸರಿನಂತಾಗಿ ನದಿಯಂತೆ ಹರಿದು ಹೋಗಿದೆ.

  • Share this:

ಕೊಡಗು: ಜಿಲ್ಲೆ ಮತ್ತೆ ಗಂಡಾಂತರಕ್ಕೆ (Dangerous) ಸಿಲುಕಿತೇ ಎನ್ನುವ ಭಯ ಆವರಿಸಿದೆ. ಮಡಿಕೇರಿ ( Madikeri) ತಾಲ್ಲೂಕಿನ ಎರಡನೇ ಮೊಣ್ಣಂಗೇರಿ ಸಮೀಪದ ಕಡ್ಯದ ಮನೆ ಎಂಬಲ್ಲಿ ಭಯಾನಕ ಜಲಸ್ಫೋಟವಾಗಿದೆ. ಸೋಮವಾರ ಸಂಜೆ ಏಳು ಗಂಟೆ ವೇಳೆಗೆ ಭಾರೀ ಶಬ್ಧದ ಜೊತೆಗೆ ಜಲಸ್ಫೋಟಗೊಂಡಿದೆ. ಹೀಗಾಗಿ ಸಾವಿರಾರು ಲೋಡ್ ಪ್ರಮಾಣದ ಮಣ್ಣು ಕೆಸರಿನಂತಾಗಿ ನದಿಯಂತೆ ಹರಿದು ಹೋಗಿದೆ. ಅದು ಹರಿದ ರಭಸಕ್ಕೆ ಕೊಲ್ಲಿಯಲ್ಲಿನ ನೂರಾರು ಮರ, ಗಿಡ ಮತ್ತು ಬಂಡೆಗಳ ಸಮೇತ ಎಲ್ಲವೂ ಕೊಚ್ಚಿಹೋಗಿವೆ. ಕಡ್ಯದ ಮನೆಯ ಭಾಗದಲ್ಲಿ 8 ಕುಟುಂಬಗಳಿದ್ದು ಅವುಗಳನ್ನು ಸೋಮವಾರ ಸಂಜೆಯೇ ಸುರಕ್ಷಿತವಾದ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿತ್ತು. ಹೀಗಾಗಿ ನಡೆಯಬಹುದಾಗಿದ್ದ ದೊಡ್ಡ ಅನಾಹುತದಿಂದ ಎಲ್ಲರೂ ಪಾರಾಗಿದ್ದಾರೆ.


ಕೊಚ್ಚಿಕೊಂಡು ಹೋದ ಸೇತುವೆ 


ಕಳೆದ ಒಂದು ವಾರದಿಂದಲೇ ಕೊಲ್ಲಿಯಲ್ಲಿ ಕೆಸರು ಮಿಶ್ರಿತ ನೀರು ಬರಲಾರಂಭಿಸಿತ್ತು. ಹೀಗಾಗಿ ಎಚ್ಚೆತ್ತುಕೊಂಡಿದ್ದ ಪಂಚಾಯಿತಿ ಅಧಿಕಾರಿಗಳು ಊರಿನವರ ಸಹಕಾರದೊಂದಿಗೆ ಎಂಟು ಕುಟುಂಬಗಳನ್ನು ಸುರಕ್ಷಿತವಾಗಿರುವ ಮನೆಗಳಿಗೆ ಸ್ಥಳಾಂತರ ಮಾಡಿದ್ದರು. ಭಾರೀ ರಭಸವಾಗಿ ಹರಿದಿರುವ ನೀರು ಕೆಳಭಾಗದಲ್ಲಿರುವ ರಾಮಕೊಲ್ಲಿಯಲ್ಲಿ ಸೇತುವೆಯನ್ನು ಕೊಚ್ಚಿಕೊಂಡು ಹೋಗಿದೆ. ಪರಿಣಾಮ ರಾಮಕೊಲ್ಲಿಯಲ್ಲಿ ಹಲವು ಕುಟುಂಬಗಳು ಸುರಕ್ಷಿತ ಸ್ಥಳಗಳಿಗೆ ಬರುವುದಕ್ಕೂ ಅವಕಾಶ ಇಲ್ಲದೆ ಪರದಾಡುತ್ತಿದ್ದವು. ಈ ವೇಳೆ ತಕ್ಷಣವೇ ಸಹಾಯಕ್ಕೆ ಬಂದಿದ್ದು, ಎನ್‍ಡಿಆರ್‍ಎಫ್ ತಂಡದಿಂದ ತರಬೇತಿ ಪಡೆದ ಸ್ಥಳೀಯ ಯುವಕರ ತಂಡ. ನಿನ್ನೆ ಸಂಜೆಯಿಂದಲೇ ದೊಡ್ಡ ದೊಡ್ಡ ವಿದ್ಯುತ್ ಕಂಬಗಳನ್ನು ಕೊಚ್ಚಿ ಹೋಗಿರುವ ರಾಮಕೊಲ್ಲಿ ಸೇತುವೆಗೆ ಅಡ್ಡಲಾಗಿ ಹಾಕಿ ಅವುಗಳ ಮೇಲೆ ಜನರನ್ನು ಹೊರಕ್ಕೆ ಕರೆತಂದಿದ್ದಾರೆ.


ಭಾರೀ ಪ್ರಮಾಣದ ಕೆಸರು 


ಕುಡಿಯ ಹಾರಿದ ಕಲ್ಲಿನ ಭಾಗದಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದ್ದರೂ ಅಲ್ಲಿಯ ಜಾನುವಾರುಗಳು ಮಾತ್ರ ಅಲ್ಲಿಯೇ ಇದ್ದವು. ಹೀಗಾಗಿ ಮಂಗಳವಾರ ಬೆಳಿಗ್ಗೆ ಗಾಳಿಬೀಡು ಗ್ರಾಮ ಪಂಚಾಯಿತಿ ಪಿಡಿಒ ಶಶಿಕಿರಣ ಮತ್ತು ಎನ್‍ಡಿಆರ್‍ಎಫ್ ತರಬೇತಿ ಪಡೆದ ಸ್ಥಳೀಯರ ತಂಡ ಕಡ್ಯದ ಮನೆ ಭಾಗದಿಂದ ಜಾನುವಾರುಗಳನ್ನು ರಕ್ಷಿಸಲು ಪ್ರಯತ್ನಿಸಿತು. ಆದರೆ ಕೊಲ್ಲಿಯಲ್ಲಿ ಭಾರೀ ಪ್ರಮಾಣದಲ್ಲಿ ಕೆಸರು ತುಂಬಿರುವುದರಿಂದ ಅದನ್ನು ದಾಟಲು ತಂಡವು ಯತ್ನಿಸಿದರೂ ಪ್ರಯೋಜನವಾಗಲಿಲ್ಲ.


ಇದನ್ನೂ ಓದಿ: Tungabhadra Dam: ತುಂಬುತ್ತಿದೆಯಾ ತುಂಗಭದ್ರಾ ಜಲಾಶಯ? ನೀರಿನ ಸಂಗ್ರಹದ ಬಗ್ಗೆ ನೀಡಲಾಗ್ತಿದ್ಯಾ ತಪ್ಪುಲೆಕ್ಕ?


ಧೈರ್ಯ ತುಂಬಿದ ಶಾಸಕರು, ಡಿಸಿ 


ಬಳಿಕ ಸ್ಥಳಕ್ಕೆ ಸ್ಥಳಕ್ಕೆ ಬಂದ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಮತ್ತು ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ ಅವರು ಪರಿಶೀಲನೆ ನಡೆಸಿದರು. ಜೊತೆಗೆ ಜನರು ಹೆದರಿಕೊಳ್ಳುವ ಬದಲು ಧೈರ್ಯದಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಆಗಿ ಎಂದು ಧೈರ್ಯ ಹೇಳಿದರು. ಈ ಸಂದರ್ಭ ಮಾತನಾಡಿದ ವಿರಾಜಪೇಟೆ ಕ್ಷೇತ್ರ ಕೆ.ಜಿ. ಬೋಪಯ್ಯ 2018 ರಲ್ಲಿ ಜಲಸ್ಫೋಟವಾದ ರೀತಿಯಲ್ಲಿಯೇ ಈ ಬಾರಿಯೂ ಆಗಿದೆ. ಈ ಬೆಟ್ಟದ ಭಾಗದಲ್ಲಿ ಯಾವುದೇ ಹೋಂಸ್ಟೇ ಅಥವಾ ರೆಸಾರ್ಟ್‍ಗಳು ಆಗಿಲ್ಲ. ಆದರೂ ರೀತಿ ಭೂಮಿಯಲ್ಲಿ ನೀರು ಶೇಕರಣೆಯಾಗಿ ನಂತರ ಬ್ಲಾಸ್ಟ್ ಆಗಿರುವುದು ಹೇಗೆ. ಅದಕ್ಕೆ ವೈಜ್ಞಾನಿಕ ಕಾರಣ ಏನು ಎಂಬುದನ್ನು ಕಂಡು ಹಿಡಿಯಬೇಕಾಗಿದೆ ಎಂದು ಹೇಳಿದ್ದಾರೆ.


ಮಳೆಯಿಂದ ಮತ್ತಷ್ಟು ಸಮಸ್ಯೆ 


ಇನ್ನು ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ್ ಅವರು ಮಾತನಾಡಿ ಈ ರೀತಿ ಬ್ಲಾಸ್ಟ್ ಆಗಿ ನೀರು ಹರಿದಿರುವುದರಿಂದ ಅಪಾರ ಪ್ರಮಾಣದ ಮರದ ದಿಮ್ಮಿಗಳು ಬಂದು ರಾಮಕೊಲ್ಲಿಯ ಸೇತುವೆಯಲ್ಲಿ ಸಿಲುಕಿವೆ. ಮತ್ತೆ ಮಳೆ ಜಾಸ್ತಿಆಗಿದ್ದೇ ಆದಲ್ಲಿ ಮತ್ತಷ್ಟು ಸಮಸ್ಯೆ ಎದುರಾಗಬಹುದು. ಹೀಗಾಗಿ ತಕ್ಷಣವೇ ಮರದ ದಿಮ್ಮಿಗಳನ್ನು ತೆಗೆಸಿ ನೀರಿನ ಸರಾಗ ಹರಿಯುವಿಕೆಗೆ ಅನುಕೂಲ ಮಾಡಲಾಗುವುದು. ಇನ್ನು ರೀತಿ ಬ್ಲಾಸ್ಟ್ ಆಗಿರುವುದಕ್ಕೆ ಕಾರಣವೇನು ಎಂಬುದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವುದಕ್ಕೆ ಕೂಡಲೇ ಭೂಗರ್ಭ ಶಾಸ್ತ್ರಜ್ಞರ ತಂಡ ಬರಲಿದೆ ಎಂದು ಹೇಳಿದ್ದಾರೆ.


ಕಡ್ಯದ ಮನೆ ಮೇಲ್ಭಾಗದಲ್ಲಿ 25 ಎಕರೆಯಷ್ಟು ಭೂಪ್ರದೇಶ ಅಂದಾಜು ಐದು ಅಡಿ ಆಳಕ್ಕೆ ಕುಸಿದು ಹಾಗೇ ನಿಂತಿದೆ. ಇನ್ನು ಒಂದೂವರೆ ತಿಂಗಳ ಕಾಲ ಕೊಡಗಿನಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಅದೂ ಕೂಡ ಕುಸಿದು ಬರುವ ಸಾಧ್ಯತೆ ಇದೆ. ಇದು ಈ ಭಾಗದ ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.

top videos
    First published: