HOME » NEWS » State » KODAGU DISTRICT ADMINISTRATION PRE WORKOUT TO DEAL WITH LANDSLIDES FLOODS RSK SESR

Kodagu Rain: ಭೂಕುಸಿತ, ಪ್ರವಾಹದ ಪರಿಸ್ಥಿತಿ ಎದುರಿಸಲು ಪೂರ್ವ ತಾಲೀಮು 

ಕಾವೇರಿ ನದಿಯಲ್ಲಿ ಭಾರೀ ಪ್ರಮಾಣದ ನೀರು ಹರಿಯುತಿದ್ದು, ಹಲವೆಡೆ ಪ್ರವಾಹದ ಭೀತಿ ಎದುರಾಗಿದೆ. ಈ ಬಾರಿಯೂೂ ಪ್ರವಾಹ ಮತ್ತು ಭೂಕುಸಿತದ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ಅಂತಹ ಪರಿಸ್ಥಿತಿ ಎದುರಿಸಲು ಸಕಲ ಸಿದ್ಧತೆ ನಡೆಸಿದೆ.

news18-kannada
Updated:June 19, 2021, 10:45 PM IST
Kodagu Rain: ಭೂಕುಸಿತ, ಪ್ರವಾಹದ ಪರಿಸ್ಥಿತಿ ಎದುರಿಸಲು ಪೂರ್ವ ತಾಲೀಮು 
kodagu rain
  • Share this:
ಕೊಡಗು (ಜೂ. 19):  ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಕಳೆದ ಮೂರು ವರ್ಷಗಳಿಂದ ಪ್ರವಾಹ ಭೂಕುಸಿತ ಸಂಭವಿಸುತ್ತಲೇ ಇದೆ. ಈಗಾಗಲೇ ಈ ವರ್ಷವೂ ಜೂನ್ ತಿಂಗಳಲ್ಲೇ ಮಳೆ ಸುರಿಯುತ್ತಿದ್ದು, ಕಾವೇರಿ ನದಿಯಲ್ಲಿ ಭಾರೀ ಪ್ರಮಾಣದ ನೀರು ಹರಿಯುತಿದ್ದು, ಹಲವೆಡೆ ಪ್ರವಾಹದ ಭೀತಿ ಎದುರಾಗಿದೆ. ಈ ಬಾರಿಯೂೂ ಪ್ರವಾಹ ಮತ್ತು ಭೂಕುಸಿತದ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ಅಂತಹ ಪರಿಸ್ಥಿತಿ ಎದುರಿಸಲು ಸಕಲ ಸಿದ್ಧತೆ ನಡೆಸಿದೆ. ಈಗಾಗಲೇ ಜಿಲ್ಲೆಯಲ್ಲಿ ಈ ವರ್ಷ 77 ಗ್ರಾಮಗಳ 2800 ಕ್ಕೂ ಹೆಚ್ಚು ಮನೆಗಳು ಅಪಾಯ ಎದುರಿಸುತ್ತಿವೆ. ಹೀಗಾಗಿ ಜಿಲ್ಲಾಡಳಿತ ಪ್ರವಾಹ ಮತ್ತು ಭೂಕುಸಿತದಂತಹ ಕಷ್ಟದ ಪರಿಸ್ಥಿತಿ ನಿಭಾಯಿಸಲು ತಾಲೀಮು ನಡೆಸುತ್ತಿದೆ. 20 ಜನರ ಒಂದು ಎನ್ ಡಿ ಆರ್ ಎಫ್ ತಂಡ, 20 ಜನರ ಎಸ್ ಡಿಆರ್ ಎಫ್ ಸಿವಿಲ್ ಪೊಲೀಸರ ನಾಲ್ಕು ತಂಡ ಡಿಆರ್ ಪೊಲೀಸರ ಒಂದು ತಂಡ ಮತ್ತು ಅಗ್ನಿಶಾಮಕ ದಳದ ಒಂದು ತಂಡ ಜನರ ರಕ್ಷಣಾ ತಾಲೀಮು ನಡೆಸುತ್ತಿವೆ.

ಭೂಕುಸಿತ ಆದಲ್ಲಿ ಅಂತಹ ಸ್ಥಳದಿಂದ ಜನರ ರಕ್ಷಣೆ ಮಾಡುವುದು ಹೇಗೆ ಅಂತ ಜಿಲ್ಲಾಡಳಿತ ಕಚೇರಿಯನ್ನೇ ಬಳಸಿಕೊಂಡು ತಾಲೀಮು ನಡೆಸಿದರು. ಕಟ್ಟಡದಲ್ಲಿ ಸಿಲುಕಿದವರನ್ನು ರಕ್ಷಿಸುವುದು ಹೇಗೆ ಎನ್ನೋದನ್ನು ಎನ್ ಡಿ ಆರ್ ಎಫ್ ಮತ್ತುು ಅಗ್ನಿಶಾಮಕ ಪೊಲೀಸ್ ಸಿಬ್ಬಂದಿ ತಾಲೀಮು ನಡೆಸಿದರು. ಬಳಿಕ ಹಾರಂಗಿ ಜಲಾಶಯಕ್ಕೆ ತೆರಳಿದ ಎನ್ ಡಿ ಆರ್ ಎಫ್, ಎಸ್ ಡಿಆರ್ ಎಫ್ ಮತ್ತು ಪೊಲೀಸರ ತಂಡ ಜಲಾಶಯದ ನೀರಿನಲ್ಲಿ ತಾಲೀಮು ಮಾಡಿದರು.

ಇದನ್ನು ಓದಿ: ಬೆಳಗಾವಿಯಲ್ಲಿ ಮುಂಗಾರು ಮಳೆಯ ಅಬ್ಬರ ಓರ್ವ ಮೀನುಗಾರ ಸಾವು; ನೀರಿನಲ್ಲಿ ಕೊಚ್ಚಿಹೋದ ರೈತನಿಗಾಗಿ ಶೋಧ ಕಾರ್ಯ

ಪ್ರವಾಹದ ನೀರಿನಲ್ಲಿ ಮುಳುಗುತ್ತಿದ್ದವರ ರಕ್ಷಣೆ, ಪ್ರವಾಹದಲ್ಲಿ ಮುಳುಗಿದ್ದ ಮೃತದೇಹವನ್ನು ಹೊರ ತೆಗೆದದ್ದು, ನದಿಯ ಆಚೆ ಇದ್ದವರನ್ನು ರಕ್ಷಣೆ ಮಾಡಿ ಕರೆತರುವುದು, ಪ್ರವಾಹದಲ್ಲಿ ಅಗ್ಗದ ಮೂಲಕ  ರಕ್ಷಣೆ. ಹೀಗೆ ವಿವಿಧ ಕಷ್ಟದ ಸನ್ನಿವೇಶದಲ್ಲಿ ಸಿಲುಕಿದ್ದವರ ರಕ್ಷಣೆ ಮಾಡುವ ತಾಲೀಮು ನಡೆಸಿದರು. ಹಾರಂಗಿ ಜಲಾಾಶಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜೊತೆಗೆ ಬೋಟ್ ಹೇರಿ ಎನ್ ಡಿ ಆರ್ ಎಫ್ ತಂಡಗಳೊಂದಿಗೆ  ಹಾರಂಗಿ ಜಲಾಶಯದಲ್ಲಿ ನಡೆದ ರಕ್ಷಣಾ ಕಾರ್ಯಯಾಚರಣೆಯಲ್ಲಿ ಭಾಗವಹಿಸಿ ಪರಿಶೀಲಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ವಿವಿಧ ರಕ್ಷಣಾ ತಂಡಗಳು ಈಗಾಗಲೇ ಪ್ರವಾಹ ಮತ್ತು ಭೂಕುಸಿತದ ಸಾಧ್ಯತೆ ಇರುವ ಸ್ಥಳಗಳಿಗೆ ಹೋಗಿ ಪರಿಶೀಲನೆ ಮಾಡಿವೆ. ರಕ್ಷಣೆಗೆ ಬೇಕಾಗಿರುವ ಎಲ್ಲಾ ಪರಿಕರಗಳನ್ನು ಸಿದ್ಧಗೊಳಿಸಿಕೊಂಡಿದ್ದೇವೆ. ರಕ್ಷಣಾ ಕಾರ್ಯಕ್ಕೂ ಮೊದಲು ಪ್ರವಾಹದ ಮತ್ತು ಭೂಕುಸಿತದ ಸ್ಥಳಗಳಿಂದ ಜನರನ್ನು ಮೊದಲೇ ಸ್ಥಳಾಂತರ ಮಾಡಲು ಸಿದ್ಧತೆ ನಡೆಸಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಕೊಡಗಿನಲ್ಲಿ ಈ ಬಾರಿಯೂ ಪ್ರವಾಹ ಮತ್ತು ಭೂಕುಸಿತದ ಆತಂಕ ಮನೆ ಮಾಡಿದೆ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
Published by: Seema R
First published: June 19, 2021, 10:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories