• Home
  • »
  • News
  • »
  • state
  • »
  • ವಿವಾದದ ನಡುವೆಯೇ ತಲಕಾವೇರಿಯಲ್ಲಿ ಪೂಜೆ ಆರಂಭಿಸಿದ ಬ್ರಾಹ್ಮಣ ಸಮಾಜದ ಅರ್ಚಕರು 

ವಿವಾದದ ನಡುವೆಯೇ ತಲಕಾವೇರಿಯಲ್ಲಿ ಪೂಜೆ ಆರಂಭಿಸಿದ ಬ್ರಾಹ್ಮಣ ಸಮಾಜದ ಅರ್ಚಕರು 

ತಲಕಾವೇರಿಯಲ್ಲಿ ಪೂಜೆ ಮಾಡುತ್ತಿರುವ ಬ್ರಾಹ್ಮಣ ಸಮಾಜದ ಅರ್ಚಕರು

ತಲಕಾವೇರಿಯಲ್ಲಿ ಪೂಜೆ ಮಾಡುತ್ತಿರುವ ಬ್ರಾಹ್ಮಣ ಸಮಾಜದ ಅರ್ಚಕರು

ನಿಯಮದ ಪ್ರಕಾರ ಶಂಕರ ಆಚಾರ ಅವರ ಕುಟುಂಬಸ್ಥರು ಪೂಜಾರಿಕೆ ಆರಂಭಿಸಿದ್ದಾರೆ. ಇದು 250 ವರ್ಷಗಳ ಹಿಂದೆ ಕಾವೇರಿ ಮಾತೆಗೆ ಪೂಜೆ ಸಲ್ಲಿಸುತ್ತಿದ್ದ ನಮಗೆ ಪೂಜಾರಿಕೆಯ ಹಕ್ಕನ್ನು ಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದ ಅಮ್ಮಕೊಡವರ ಕಣ್ಣನ್ನು ಕೆಂಪಗಾಗಿಸಿದೆ.

  • Share this:

ಕೊಡಗು(ಸೆ.13): ತಲಕಾವೇರಿಯಲ್ಲಿ ಪ್ರಧಾನ ಅರ್ಚಕರಾಗಿದ್ದ ನಾರಾಯಣ ಆಚಾರ್ ಭೂಕುಸಿತದಲ್ಲಿ ಸಾವನ್ನಪ್ಪುತ್ತಿದ್ದಂತೆ ಪೂಜಾರಿಕೆಗೆ ಸಂಬಂಧಿಸಿದಂತೆ ವಿವಾದ ಸೃಷ್ಟಿಯಾಗಿದ್ದು ಗೊತ್ತೇ ಇದೆ. ಹೊತ್ತಿಕೊಂಡ ವಿವಾದದ ಕಿಡಿ ಬೆಂಕಿಯಾಗುತ್ತಿದ್ದರೆ, ಆ ಜ್ವಾಲೆಯ ನಡುವೆಯೇ ಬ್ರಾಹ್ಮಣ ಅರ್ಚಕರು ತಲಕಾವೇರಿಯಲ್ಲಿ ಪೂಜಾ ಕೈಂಕರ್ಯಗಳನ್ನು ಆರಂಭಿಸಿದ್ದಾರೆ. ಅರ್ಚಕ ನಾರಾಯಣ ಆಚಾರ್ ಸಂಬಂಧಿಗಳಾದ ಎಂಟು ಕುಟುಂಬಗಳು ಸರದಿಯಂತೆ ಕಾವೇರಿ ಮಾತೆಗೆ ಪೂಜೆ ಸಲ್ಲಿಸುತ್ತಿದ್ದವು. ಆಗಸ್ಟ್ ಕೊನೆಯಷ್ಟರಲ್ಲಿ ನಾರಾಯಣ ಆಚಾರ್ ಅವರ ಸರದಿ ಮುಗಿಯುತ್ತಿತ್ತು. ಅಷ್ಟರಲ್ಲೇ ನಾರಾಯಣ ಆಚಾರ್ ಭೂಕುಸಿತದಲ್ಲಿ ಸಾವನ್ನಪ್ಪಿದರು. ಸೆಪ್ಟೆಂಬರ್ ತಿಂಗಳಲ್ಲಿ ನಾರಾಯಣ ಆಚಾರ್ ಅವರ ಸಂಬಂಧಿಗಳೇ ಆದ ಶಂಕರ ಆಚಾರ್ ಅವರ ಕುಟುಂಬಸ್ಥರಿಗೆ ಪೂಜಾರಿಕೆಯ ಸರದಿ ಆರಂಭವಾಗುತ್ತಿತ್ತು. ಹೀಗಾಗಿ ನಿಯಮದ ಪ್ರಕಾರ ಶಂಕರ ಆಚಾರ ಅವರ ಕುಟುಂಬಸ್ಥರು ಪೂಜಾರಿಕೆ ಆರಂಭಿಸಿದ್ದಾರೆ. ಇದು 250 ವರ್ಷಗಳ ಹಿಂದೆ ಕಾವೇರಿ ಮಾತೆಗೆ ಪೂಜೆ ಸಲ್ಲಿಸುತ್ತಿದ್ದ ನಮಗೆ ಪೂಜಾರಿಕೆಯ ಹಕ್ಕನ್ನು ಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದ ಅಮ್ಮಕೊಡವರ ಕಣ್ಣನ್ನು ಕೆಂಪಗಾಗಿಸಿದೆ.


ಕೃಷ್ಣಾ, ತುಂಗಭದ್ರಾ ನದಿಗಳಲ್ಲಿ ಅಕ್ರಮ ಮರಳು ದಂಧೆ; ವರದಿ ಕೇಳಿದ ಹಸಿರು ನ್ಯಾಯಾಧೀಕರಣ
ಈ ಆಗಸ್ಟ್ ಕೊನೆಯಷ್ಟರಲ್ಲಿ ನಾರಾಯಣ ಆಚಾರ್ ಅವರ ಸರದಿ ಮುಗಿದು, ಸೆಪ್ಟೆಂಬರ್ ತಿಂಗಳಲ್ಲಿ ನಮ್ಮ ಸರದಿ ಶುರುವಾಗುತಿತ್ತು. ಈಗ ನಮ್ಮ ಸರದಿಯಂತೆ ನಾವು ಪೂಜೆ ಆರಂಭಿಸಿದ್ದೇವೆ ಎನ್ನುತ್ತಾರೆ ಶಂಕರ ಆಚಾರ್ ಅವರ ಮಗ ಅರ್ಚಕ ರವಿರಾಜ್ ಆಚಾರ್. ಇತ್ತ ಅಮ್ಮಕೊಡವರು ನಮಗೆ ನಮ್ಮ ಹಕ್ಕನ್ನು ಕೊಡಬೇಕು. ಜೊತೆಗೆ ದೇವಾಲಯ ವ್ಯವಸ್ಥಾಪನಾ ಸಮಿತಿಯಲ್ಲೂ ಸ್ಥಾನಮಾನ ಕೊಡಬೇಕು ಎಂದು ಅಮ್ಮಕೊಡವ ಮುಖಂಡ ಮುರಳಿ ಒತ್ತಾಯಿಸುತ್ತಿದ್ದಾರೆ.
ಆದರೆ ಇದು ಮುಜರಾಯಿ ಇಲಾಖೆ ದೇವಾಲಯವಾಗಿದ್ದು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ನಿಯಮಗಳ ಪ್ರಕಾರ ಯಾರಿಗೆ ಪೂಜಾರಿಕೆ ಹೋಗಬೇಕೆಂದು ನಿರ್ಧಾರವಾಗುತ್ತೋ ಹಾಗೆ ದೇವಾಲಯ ವ್ಯವಸ್ಥಾಪನಾ ಸಮಿತಿಯೂ ಬದ್ಧವಾಗಿರುತ್ತದೆ ಎನ್ನುತ್ತಿದ್ದಾರೆ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತಮ್ಮಯ್ಯ.


ಒಟ್ಟಿನಲ್ಲಿ ತಲಕಾವೇರಿಯಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸುತ್ತಿದ್ದ ಪ್ರಧಾನ ಅರ್ಚಕರಾಗಿದ್ದ ನಾರಾಯಣ ಆಚಾರ್ ಕುಟುಂಬ ಸಾವನ್ನಪ್ಪುತ್ತಿದ್ದಂತೆ ಶುರುವಾದ ಪೂಜಾರಿಕೆಯ ಹಕ್ಕಿನ ವಿವಾದ ಬಗೆಹರಿಯುವ ಮೊದಲೇ ಬ್ರಾಹ್ಮಣ ಸಮಾಜದ ಅರ್ಚಕರು ಪೂಜೆ ಆರಂಭಿಸಿರುವುದು ಮತ್ತೆ ವಿವಾದಕ್ಕೆ ಕಾರಣವಾಗಿದೆ.

Published by:Latha CG
First published: