• Home
  • »
  • News
  • »
  • state
  • »
  • Organ Donate: ಎಂಟು ಜನರ ಜೀವನಕ್ಕೆ ಆಶಾಕಿರಣವಾದ ಆಶಾ ಟೀಚರ್

Organ Donate: ಎಂಟು ಜನರ ಜೀವನಕ್ಕೆ ಆಶಾಕಿರಣವಾದ ಆಶಾ ಟೀಚರ್

ಆಶಾ, ಶಿಕ್ಷಕಿ

ಆಶಾ, ಶಿಕ್ಷಕಿ

ಆಶಾ ಅವರು ಕಣ್ಣು, ಕಿಡ್ನಿ, ಹೃದಯ, ಲಿವರ್ ಸೇರಿದಂತೆ ಅಂಗಾಂಗ ದಾನ ಮಾಡುವುದರೊಂದಿಗೆ ಎಂಟು ಮಂದಿಯ ಬಾಳಿನ ಆಶಾಕಿರಣವಾಗಿದ್ದಾರೆ ಎಂದು ಜನರು ಕೊಂಡಾಡುತ್ತಿದ್ದಾರೆ.

  • Share this:

ಕೊಡಗು: ಒಂದುವರೆ ದಶಕಗಳಿಗೂ ಹೆಚ್ಚು ಸಮಯದಿಂದ ನೂರಾರು ವಿದ್ಯಾರ್ಥಿಗಳಿಗೆ (Students) ಶಿಕ್ಷಣ ನೀಡುತ್ತಿದ್ದ ಶಿಕ್ಷಕಿ (Teacher), ಮಕ್ಕಳ ಹೆಸರಿನಲ್ಲಿಯೇ ತನ್ನ ಬಹು ಅಂಗಾಂಗಳ ದಾನ (Organ Donates) ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಇಂತಹ ಮನಮಿಡಿಯುವ, ಹೃದಯ ವಿದ್ರಾವಕ ಘಟನೆ ನಡೆದಿರುವುದು ಮಡಿಕೇರಿ (Madikeri) ನಗರದ ಸುದರ್ಶನ್ ಬಡಾವಣೆಯಲ್ಲಿ. ಇಲ್ಲಿನ ನಿವಾಸಿ, ಆಶಾ ಅವರು 18 ವರ್ಷಗಳಿಂದ ನೂರಾರು ವಿದ್ಯಾರ್ಥಿಗಳ ಪಾಲಕಿ, ಶಿಕ್ಷಕಿಯಾಗಿ ಮಕ್ಕಳಿಗೆ ತಾಯಿಯಂತೆ (Mother) ಇದ್ದವರು. ಆದರೆ ದುರ್ವಿಧಿ ಅವರ ಬದುಕಿನಲ್ಲಿ ಆಟವಾಡಿ ಅವರನ್ನು ಬಾರದ ಲೋಕಕ್ಕೆ ಸೆಳೆದೊಯ್ದಿದೆ.


ಸುದರ್ಶನ ಬಡಾವಣೆಯಲ್ಲಿ ಕಳೆದ 18 ವರ್ಷಗಳಿಂದ ಬೇಬಿ ಸಿಟ್ಟಿಂಗ್ ಕೇಂದ್ರ ಸ್ಥಾಪಿಸಿಕೊಂಡಿದ್ದ ಆಶಾ ಮುಂಜಾನೆಯಿಂದಲ್ಲೂ ಮಕ್ಕಳ ಪಾಲನೆ, ಬೋಧನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ರು. ಆದ್ರೆ ಕಳೆದ ಶನಿವಾರ ಬೆಂಗಳೂರಿನಲ್ಲಿರುವ ತಮ್ಮ ಮಗಳ ಮನೆಗೆ ತೆರಳಿದ್ರು. ಅಲ್ಲಿ ಅವರ ಮಿದುಳಿಗೆ ಪಾರ್ಶ್ವವಾಯು ತಗುಲಿತ್ತು.


ಬಹು ಅಂಗಾಂಗ ದಾನ 


ವಿಷಯ ಗೊತ್ತಾಗುತ್ತಿದ್ದಂತೆ ತಕ್ಷಣವೇ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆ ಅವರು ಕೊನೆಯುಸಿರು ಎಳೆದಿದ್ದಾರೆ. ಹೀಗಾಗಿ ನಿನ್ನೆ ಶಿಕ್ಷಕಿ ಆಶಾ ಅವರ ಕಣ್ಣು, ಕಿಡ್ನಿ, ಲಿವರ್, ಹೃದಯ ಸೇರಿದಂತೆ ಬಹು ಅಂಗಾಂಗಳನ್ನು ದಾನ ಮಾಡಲಾಗಿದೆ.


ತಾಯಿಯ ಆಸೆಯಂತೆ ಅಂಗಾಂಗ ದಾನ


ಇದರಿಂದ ಶಿಕ್ಷಕಿ ಆಶಾ ತಾನು ಜೀವಬಿಟ್ಟರೂ ಎಂಟು ಜನರ ಜೀವ ಉಳಿಸಿದ್ದಾರೆ. ಮುಂಜಾನೆಯಿಂದ ಸಂಜೆಯವರೆಗೂ ನಮ್ಮಮ್ಮ ಮಕ್ಕಳ ಲಾಲನೆ ಪಾಲನೆಯಲ್ಲಿ ತೊಡಗಿಕೊಳ್ಳುತ್ತಾ ಇದ್ದರು. ಮಕ್ಕಳೆಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ತಮ್ಮ ಸಾವಿನಲ್ಲೂ ತಮ್ಮ ಬಹು ಅಂಗಾಂಗಗಳನ್ನು ಮಕ್ಕಳಿಗೆ ದಾನ ಮಾಡಬೇಕೆಂದು ಬಯಸಿದ್ದರಂತೆ, ಹೀಗಾಗಿ ಅವರ ಆಸೆಯಂತೆ ಮಕ್ಕಳ ಹೆಸರಿನಲ್ಲೇ ಕೊನೆಗೆ ಮಕ್ಕಳಿಗೆ ಅವರ ಅಂಗಾಂಗಗಳನ್ನು ದಾನ ಮಾಡಿದ್ದೇವೆ ಎಂದು ತಮ್ಮಮ್ಮನನ್ನು ನೆನೆದು ಆಶಾ ಅವರ ಪುತ್ರ ಸೋಮಣ್ಣ ಬಿಕ್ಕಳಿಸುತ್ತಲೇ ನುಡಿದ್ದಾರೆ.


Kodagu Asha teacher saves lives of eight through her organs rsk mrq
ಆಶಾ, ಶಿಕ್ಷಕಿ


ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಅಂಗಾಂಗಗಳನ್ನು ದಾನ ಮಾಡಲಾಗಿದ್ದು, ಮೈಸೂರಿನ ಆಸ್ಪತ್ರೆಯಲ್ಲಿ ಈ ಅಂಗಾಂಗಗಳ ಅಗತ್ಯವಿದ್ದವರಿಗೆ ದಾನ ಮಾಡಲಾಗಿದೆ.


ಕೊಡವ ಸಂಪ್ರದಾಯದಂತೆ ಅಂತ್ಯಸಂಸ್ಕಾರ


ಮಂಗಳವಾರ ಬೆಂಗಳೂರಿನ ನಾರಾಯಣ ಹೃದಯಾಲಯದಿಂದ ಆಶಾ ಅವರ ಪಾರ್ಥಿವ ಶರೀರವನ್ನು ಮಡಿಕೇರಿಗೆ ತರಲಾಗಿದ್ದು, ಕೊಡವ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ ಸಂಸ್ಕಾರ ಮಾಡಲಾಯಿತು.


ಇದನ್ನೂ ಓದಿ:  Naked Man: ರಾತ್ರಿ ಬೆತ್ತಲೆಯಾಗಿ ಬರ್ತಾನೆ, ಮನೆ ಕಿಟಕಿ ಇಣುಕಿ ನೋಡ್ತಾನೆ! ಈ ಯುವಕನ ಬಗ್ಗೆ ಹುಷಾರ್ ಹುಷಾರ್


ಆಶಾ ಅವರ ಅಂತಿಮ ದರ್ಶನಕ್ಕೆ ಜನಸಾಗರ


ನೂರಾರು ಮಕ್ಕಳ ಪಾಲನೆ ಮಾಡುವುದರ ಜೊತೆಗೆ ವಿದ್ಯಾದಾನ ಮಾಡುತ್ತಿದ್ದ ಶಿಕ್ಷಕಿ ಆಶಾ ಅವರ ಸಾವಿನ ವಿಷಯ ತಿಳಿದು ನೂರಾರು ಜನರು ದುಃಖತಪ್ತರಾಗಿದ್ದರು. ಅಷ್ಟೇ ಅಲ್ಲ ಅವರ ಸಾವಿನ ಬಳಿಕ ಅಂಗಾಂಗ ದಾನ ಮಾಡಿದ ವಿಷಯ ಜನರನ್ನು ಮತ್ತಷ್ಟು ಮಂತ್ರ ಮುಗ್ಧರನ್ನಾಗಿಸಿತು. ಹೀಗಾಗಿ ಬೆಂಗಳೂರಿನಿಂದ ಮಡಿಕೇರಿಯ ಅವರ ಸ್ವಗೃಹಕ್ಕೆ ಪಾರ್ಥೀವ ಶರೀರ ಬರುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜನರು ಬಂದು ಆಶಾ ಅವರನ್ನು ಅಂತಿಮವಾಗಿ ದರ್ಶನ ಪಡೆದು ಗೌರವ ಸಲ್ಲಿಸಿದರು.


Kodagu Asha teacher saves lives of eight through her organs rsk mrq
ಆಶಾ, ಶಿಕ್ಷಕಿ


ಎಂಟು ಜನರ ಜೀವನಕ್ಕೆ ಆಶಾಕಿರಣ


ಆಶಾ ಅವರು ಕಣ್ಣು, ಕಿಡ್ನಿ, ಹೃದಯ, ಲಿವರ್ ಸೇರಿದಂತೆ ಅಂಗಾಂಗ ದಾನ ಮಾಡುವುದರೊಂದಿಗೆ ಎಂಟು ಮಂದಿಯ ಬಾಳಿನ ಆಶಾಕಿರಣವಾಗಿದ್ದಾರೆ ಎಂದು ಜನರು ಕೊಂಡಾಡುತ್ತಿದ್ದಾರೆ.


ಇದನ್ನೂ ಓದಿ:  Kannada: ಕನ್ನಡದಲ್ಲಿ ಮಾತಾಡಿ ಪಾಸ್ ಆದ ರೈಲ್ವೆ ಸಚಿವರು; ಧಾರವಾಡ ಪೇಡೆ ಸಿಗುತ್ತೆ ಅಂತ ಅಶ್ವಿನಿ ವೈಷ್ಣವ್ ಖುಷಿ


ಒಟ್ಟಿನಲ್ಲಿ ಮಕ್ಕಳಿಗಾಗಿಯೇ ಬದುಕಿದ್ದ ಶಿಕ್ಷಕಿ ಆಶಾ ಅವರು ಸಾವಿನ ಬಳಿಕವೂ ಮಕ್ಕಳಿಗಾಗಿಯೇ ಅಂಗಾಂಗ ದಾನ ಮಾಡಿ, ಎಂಟು ಜನರ ಜೀವ ಉಳಿಸಿದ ನೆಚ್ಚಿನ ಶಿಕ್ಷಕಿಯಷ್ಟೇ ಅಲ್ಲ, ಮಹಾತಾಯಿಯಾಗಿದ್ದಾರೆ.

Published by:Mahmadrafik K
First published: