• Home
  • »
  • News
  • »
  • state
  • »
  • Kodagu Adventure Games: ಸಾಹಸ ಪ್ರದರ್ಶಿಸಿದ ಆಫ್ ರೋಡ್ ರ್‍ಯಾಲಿ; ಸಖತ್ ಥ್ರಿಲ್ ನೀಡಿದ ಸ್ಪರ್ಧೆ

Kodagu Adventure Games: ಸಾಹಸ ಪ್ರದರ್ಶಿಸಿದ ಆಫ್ ರೋಡ್ ರ್‍ಯಾಲಿ; ಸಖತ್ ಥ್ರಿಲ್ ನೀಡಿದ ಸ್ಪರ್ಧೆ

ಆಫ್ ರೋಡ್​  ರ್‍ಯಾಲಿ

ಆಫ್ ರೋಡ್​ ರ್‍ಯಾಲಿ

ಪಶ್ಚಿಮಘಟ್ಟದ ಪುಷ್ಪಗಿರಿ ತಪ್ಪಲು ಕೊಡಗಿನ ಸೌಂದರ್ಯದ ಖನಿ, ಇಂತಹ ಹಚ್ಚ ಹಸಿರಿನ ಸಿರಿಯ ನಡುವೆ ಸಾಗಿಬರೋ ರ್ಯಾಲಿಯನ್ನ ಕಣ್ತುಂಬಿಕೊಳ್ಳೋದು ನಿಜಕ್ಕೂ ವಿಶೇಷ ಅನುಭವ.

  • Share this:

ಕೊಡಗು: ಸಾಹಸಮಯ ಕ್ರೀಡೆಗಳು ಅಂದ್ರೆ ಕೊಡಗಿನ (Kodag) ಜನರಿಗೆ ಎಲ್ಲಿಲ್ಲದ ಆಸಕ್ತಿ, ಅದಕ್ಕೆ ಸಾಕ್ಷಿ ಇಲ್ಲಿ ಆಗಿಂದ್ದಾಗ್ಗೆ ನಡೆಯೋ ಆಫ್ ರೋಡ್  Rallyಗಳು (Off Road Rally). ಸೋಮವಾರಪೇಟೆ (Somavarapete) ಸುತ್ತಮುತ್ತ ನಡೆದ ಆಕರ್ಷಕ ಜೀಪ್ ರೇಸ್ (Jeep Race) ಸಾಹಸಿಗರಿಗೆ ಸಖತ್ ಖುಷಿ ನೀಡಿತ್ತು. ಕಾಡಿನ ನಡುವೆ ದುರ್ಗಮ ಹಾದಿಯಲ್ಲಿ ಸಾಗಿದ ವಾಹನ ಸವಾರರು ತಮ್ಮ ಚಾಣಾಕ್ಷತೆ ಮೂಲಕ ಗುರಿಮುಟ್ಟಿ ಸಾಮರ್ಥ್ಯ ಸಾಬೀತು ಪಡಿಸಿ ಸೈ ಎನ್ನಿಸಿಕೊಂಡರು. ಕೊಡಗು ಅಂದ್ರೆ ಹಾಗೆ ಸಾಹಸಮಯ ಕ್ರೀಡೆಗಳಿಗೆ (Adventure Games) ಫೇಮಸ್. ಕಾಡಿನ ನಡುವೆ, ಹಳ್ಳಕೊಳ್ಳಗಳ ದಾಟಿ, ಎದೆ ನಡುಗಿಸೋ ದಾರಿಯಲ್ಲಿ ಜೀಪ್ ರೇಸ್ ಆಡ್ವೇಂಚರಸ್ ಗೇಮ್ ಇಷ್ಟಪಡೋರಿಗೆ ಸಖತ್ ಖುಷಿ ನೀಡುತ್ತದೆ.


ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿ‌ನ ಬೆಟ್ಟದಳ್ಳಿ, ಶಾಂತಿ, ಕೊತ್ತ್ನಳ್ಳಿ, ಕುಂದಳ್ಳಿ,ಗಣಗೂರಿನ ಸುತ್ತಮುತ್ತ ರೋಡ್ ರ್‍ಯಾಲಿ ನಡೆಯಿತು.ಇಂತಹ ಅಡ್ವೆಂಚರಸ್ ಗೇಮ್ ಆಯೋಜಿಸಿದ್ದು ಟೀಮ್ 12 ಆಫ್ ರೋಡರ್ಸ್ ಮತ್ತು ವೈಟ್ ಲೋಟಸ್ ಎಂಟರ್‌ಟೇನರ್ ವತಿಯಿಂದ. ಸುಮಾರು 8 ಕಿ.ಮೀ ಕಡಿದಾದ ರಸ್ತೆಯನ್ನ ನಿರ್ಮಿಸಿದ್ದು.  ರೈಡರ್ಸ್ ಗೆ ಸಖತ್ ಥ್ರಿಲ್ ನೀಡಿತ್ತು.


Kodagu Adventure Games off road rally somavarapete rsk mrq
ಸ್ಪರ್ಧೆ


ಕೊಡಗಿನ ಜನರ ಸಾಹಸಮಯ ಕ್ರೀಡಾ ಸ್ಪೂರ್ತಿ


ಸೋಮವಾರಪೇಟೆಯಲ್ಲಿ ನಡೆದ ಆಫ್ ರೋಡ್ ರ್‍ಯಾಲಿ ಕೊಡಗಿನ ಸಾಹಸಮಯ ಕ್ರೀಡಾ ಸ್ಪೂರ್ತಿಯನ್ನ ತೆರೆದಿಟ್ಟಿತು. ವ್ರೂಂ.. ವ್ರೂಂ ಸದ್ದು ಮಾಡುತ್ತಾ ರಸ್ತೆಯೇ ಇಲ್ಲದ ಕಡೆಗಳಲ್ಲಿ ಸಂಚರಿಸುತ್ತಾ ತಮ್ಮ ಚಾಣಾಕ್ಷತೆಯನ್ನ ಪ್ರದರ್ಶಿಸಿದ ಸವಾರರು  ಕಾಡಿನ ರಸ್ತೆಯಲ್ಲಿ ಸಾಗುತ್ತಾ  ರ್‍ಯಾಲಿಯ ಮಜವನ್ನ ಅನುಭವಿಸಿದರು.


ಇದನ್ನೂ ಓದಿ:  PFI ಮುಖಂಡರಿಗೆ ಮುಗಿಯದ ಕಂಟಕ, ಅನುಮಾನಾಸ್ಪದರ ವಿಚಾರಣೆ; ಪೊಲೀಸರಿಂದ ಮಾರ್ನಿಂಗ್ ಶಾಕ್


Kodagu Adventure Games off road rally somavarapete rsk mrq
ಸ್ಪರ್ಧೆ


ಹೊಂಡ ಗುಂಡಿಗಳಿಂದ ಕೂಡಿದ ರಸ್ತೆ


ಕಡಿದಾದ ದಾರಿ, ಸಂಪೂರ್ಣ ಹೊಂಡ ಗುಂಡಿಗಳಿಂದಾವೃತವಾದ ದಾರಿಯಲ್ಲಿ ಭಾರೀ ಸದ್ದು ಮಾಡುತ್ತಾ ರಸ್ತೆಯನ್ನ ಸೀಳಿ ಬರೋ ವಾಹನಗಳು, ನೀರಿನಲ್ಲಿ ತೇಲಿ ಬರೋ ಜೀಪ್ ಗಳು, ಇನ್ನೇನು ಮುಳುಗಿ ಬಿಡುತ್ತೇವೇನೋ ಎನ್ನುವಷ್ಟರಲ್ಲಿ ಮೇಲೆದ್ದು ಬರೋ ಜಿಪ್ಸಿಗಳು, ವಾಹನ ಸಾಗುತ್ತಿದ್ದರೆ ರಾಕೆಟ್ ಹೋದಂತಾ ಸದ್ದು, ನೋಡುಗರ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದವು. ‘


ಅಲ್ಲಿನ ಸವಾರಿ ನಿಜಕ್ಕೂ ಜೀವದ ಜೊತೆಗೆ ನಡೆಯೋ ಹೋರಾಟ. ಕೆಲ ವಾಹನಗಳು ತಮ್ಮ ಸಾಮರ್ಥ್ಯ ಹಾಗೂ ಚಾಲಕನ ಚಾಣಾಕ್ಷತೆ, ಅನುಭವದ ಚಾಲನೆಯಿಂದ ಒಂದೇ ಪ್ರಯತ್ನಕ್ಕೆ ಸವಾಲನ್ನೆದುರಿಸಿ ಮುಂದೆ ಸಾಗಿದರೆ, ಮತ್ತೆ ಕೆಲ ವಾಹನಗಳಿಗೆ ಎಷ್ಟೇ ಪ್ರಯತ್ನಪಟ್ಟರೂ ಮೇಲೇರಲು ಆಗೋದೇ ಇಲ್ಲ.


Kodagu Adventure Games off road rally somavarapete rsk mrq
ಸ್ಪರ್ಧೆ


ಭಾಗವಹಿಸುವ ಸ್ಪರ್ಧಿಗಳಿಗೆ ಎಂಟೆದೆ ಇರಬೇಕು


ಈ ವೇಳೆ ಇತರೆ ವಾಹನಗಳ ನೆರವು ಪಡೆದು ವಾಹನ ಮುಂದೆ ಸಾಗಲು ಅವಕಾಶ ಮಾಡಿಕೊಡಲಾಯಿತು. ಕೆಲವು ಕಡೆಗಳಲ್ಲಂತು ವಾಹನಗಳನ್ನು ನೂಕುತ್ತಾ ಎಳೆಯುತ್ತಾ ನೆರವಾಗುತ್ತದೆ. ಹೆಜ್ಜೆ ಹೆಜ್ಜೆಗೂ ಎದುರಾಗೋ ಅಪ್, ಡೌನ್ ಹೊಂಡ ಗುಂಡಿ ನದಿ ತೊರೆಗಳನ್ನು ಯಶಸ್ವಿಯಾಗಿ ದಾಟಬೇಕಂದ್ರೆ ಅದಕ್ಕೆ ಎಂಟೆದೆ ಇರಲೇಬೇಕು.


ಜೊತೆಗೆ ವಾಹನವೂ ಅಷ್ಟೇ ಶಕ್ತಿಶಾಲಿ ಆಗಿರಬೇಕು. ಪಶ್ಚಿಮಘಟ್ಟದ ಪುಷ್ಪಗಿರಿ ತಪ್ಪಲು ಕೊಡಗಿನ ಸೌಂದರ್ಯದ ಖನಿ, ಇಂತಹ ಹಚ್ಚ ಹಸಿರಿನ ಸಿರಿಯ ನಡುವೆ ಸಾಗಿಬರೋ ರ್ಯಾಲಿಯನ್ನ ಕಣ್ತುಂಬಿಕೊಳ್ಳೋದು ನಿಜಕ್ಕೂ ವಿಶೇಷ ಅನುಭವ.


ಇದನ್ನೂ ಓದಿ:  Mangaluru: ಒಂದೇ ಮಳೆಗೆ ಮಾಯವಾಯ್ತು 30 ಕೋಟಿ ವೆಚ್ಚದ ರಸ್ತೆ; ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ


ವೀಕ್ಷಕರನ್ನು ಕ್ರೀಡಾ ಜಗತ್ತಿಗೆ ಕರೆದುಕೊಂಡ ಹೋದ ಸ್ಪರ್ಧೆ


ಒಟ್ಟಿನಲ್ಲಿ ಎತ್ತರಕ್ಕೆ ಏರುತ್ತಾ ಇಳಿಜಾರಿನಲ್ಲಿ ಜಾರುತ್ತಾ ವಾಹನಗಳು ಸಾಗಿ ಬರುತ್ತಿದ್ದರೆ ಹಸಿರ ಸಿರಿಯ ನಡುವಿನ ಈ ಗೇಮ್ ಎಲ್ಲರನ್ನೂ ಬೇರೊಂದು ಜಗತ್ತಿಗೆ ಕರೆದೊಯ್ದಿತ್ತು.


Kodagu Adventure Games off road rally somavarapete rsk mrq
ಸ್ಪರ್ಧೆ


ಜೀಪ್ ಹಾಗೂ ಜಿಪ್ಸಿಗಳು ರ್‍ಯಾಲಿಯಲ್ಲಿದ್ದವು, ಕರ್ನಾಟಕದ ಮಂಗಳೂರು, ಉಡುಪಿ, ಹಾಸನ, ಬೆಂಗಳೂರು, ಸೇರಿದಂತೆ ನೆರೆಯ ತಮಿಳುನಾಡು, ಆಂಧ್ರ, ಕೇರಳ ರಾಜ್ಯಗಳಿಂದಲೂ ಸ್ಪರ್ಧಿಗಳು ಭಾಗವಹಿಸಿದ್ದರು. ಸಖತ್ ಥ್ರಿಲ್ಲಿಂಗ್ ಆಗಿದ್ದ ಗೇಮ್  ಇಡೀ ದಿನ ನೆರೆದಿದ್ದವರನ್ನು ರೋಚಕ ಅಲೆಯಲ್ಲಿ ತೇಲಿಸಿತು.

Published by:Mahmadrafik K
First published: