Seema.RSeema.R
|
news18-kannada Updated:February 13, 2020, 5:55 PM IST
ಕೋಚಿಮುಲ್
ಕೋಲಾರ (ಫೆ. 13): ಕೋಲಾರ- ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಒಕ್ಕೂಟ ಹಾಲು ಖರೀದಿ ದರವನ್ನು ಎರಡು ರೂಗೆ ಹೆಚ್ಚಿಸಿದೆ. ಈ ಮೂಲಕ ಮಾರಾಟಗಾರರಿಗೆ ಬಂಫರ್ ಉಡುಗೊರೆ ನೀಡಿದೆ.
ಫೆ.16ರಿಂದ ಹಾಲು ಖರೀದಿ ದರ ಹೆಚ್ಚಳವಾಗಲಿದ್ದು, ಮಾರಾಟಗಾರರು ಲೀಟರ್ಗೆ 28ರೂ ಪಾವತಿಸಲು ನಿರ್ಧರಿಸಿದೆ. ಇದರ ಜೊತೆಗೆ ಸರ್ಕಾರದ ಬೆಂಬಲ ಬೆಲೆ ಸೇರಿ ಲೀಟರ್ಗೆ 33 ರೂವನ್ನು ಮಾರಾಟಗಾರರು ಪಡೆಯಲಿದ್ದಾರೆ ಎಂದು ಕೋಚಿಮುಲ್ ಅಧ್ಯಕ್ಷ ಶಾಸಕ ಕೆವೈ ನಂಜೇಗೌಡ ತಿಳಿಸಿದ್ದಾರೆ.
ಹಾಲು ಉತ್ಪಾದಕ ಸಾಮಗ್ರಿಗಳು ದುಬಾರಿ ಆಗಿರುವುದು ಪ್ರೋತ್ಸಹ ಧನ ಹೆಚ್ಚಿಸುವ ಈ ನಿರ್ಧಾರಕ್ಕೆ ಬಂದಿದ್ದೇವೆ. ಇದರಿಂದ ಗೋಪಾಲಕರಿಗೂ ಅನುಕಾಲವಾಗಲಿದೆ. ಅಲ್ಲದೆ ಹಾಲಿನ ಉತ್ಪಾದನೆ ಕೂಡ ಹೆಚ್ಚುವ ಭರವಸೆ ಇದೆ ಎಂದರು.
ಬರಪೀಡಿತ ಪ್ರದೇಶವಾದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1,866 ಪ್ರಾಥಮಿಕ ಹಾಲು ಸಹಕಾರ ಸಂಘಗಳಿದೆ. ಹಾಲು ಸಂಗ್ರಹಣೆಯಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿ ಕೋಚಿಮುಲ್ ಇದೆ. ಒಕ್ಕೂಟದಲ್ಲಿ ಪ್ರತಿನಿತ್ಯ ಸುಮಾರು 8.41 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದೆ.
ಇದನ್ನು ಓದಿ: ಗ್ರಾಹಕರಿಗೆ ಶಾಕ್: ಫೆ.1ರಿಂದ ಹಾಲಿನ ದರ ಏರಿಕೆ; ಲೀಟರ್ಗೆ 2 ರೂ. ಹೆಚ್ಚಳ
ಇನ್ನು ಕೆಎಂಎಫ್ ಸಂಸ್ಥೆ ಫೆ.1ರಿಂದಿ ಅನ್ವಯವಾಗುವಂತೆ ನಂದಿನಿ ಹಾಲು ಹಾಗೂ ಮೊಸರಿನ ದರವನ್ನು 2 ರೂ ಹೆಚ್ಚಳ ಮಾಡಿ ಇತ್ತೀಚೆಗೆ ನಿರ್ಧಾರ ಪ್ರಕಟಿಸಿತ್ತು.
(ವರದಿ: ರಘುರಾಜ್)
First published:
February 13, 2020, 5:43 PM IST