ದಸರಾ ಜಂಬೂಸವಾರಿ; ಅಂಬಾರಿ ಹೊತ್ತಿರುವ ಆನೆಗಳ ಬಗ್ಗೆ ನಿಮಗೆಷ್ಟು ಗೊತ್ತು:?

Sushma Chakre | news18
Updated:October 12, 2018, 3:50 PM IST
ದಸರಾ ಜಂಬೂಸವಾರಿ; ಅಂಬಾರಿ ಹೊತ್ತಿರುವ ಆನೆಗಳ ಬಗ್ಗೆ ನಿಮಗೆಷ್ಟು ಗೊತ್ತು:?
ಸಾಂದರ್ಭಿಕ ಚಿತ್ರ
  • News18
  • Last Updated: October 12, 2018, 3:50 PM IST
  • Share this:
ನ್ಯೂಸ್​18 ಕನ್ನಡ

ಮೈಸೂರು (ಅ. 12): ಮೈಸೂರು ದಸರಾ ಉತ್ಸವ ವಿಶ್ವವಿಖ್ಯಾತವಾಗಲು ಜಂಬೂ ಸವಾರಿಯೂ ಒಂದು ಕಾರಣ. ಚಾಮುಂಡೇಶ್ವರಿ ದೇವಿಯನ್ನು ಹೊತ್ತ ಅಂಬಾರಿ ಅರಮನೆ ಮುಂಭಾಗದಲ್ಲಿ ಸಾಗುವುದನ್ನು ನೋಡಲು ಲಕ್ಷಾಂತರ ಜನರು ಸೇರುತ್ತಾರೆ. ಆದರೆ, ಆ ಅಂಬಾರಿಯ ಇತಿಹಾಸ, ಅಂಬಾರಿ ಹೊರುವ ಆನೆಗಳ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿವೆ ಕೆಲವು ಕುತೂಹಲಕಾರಿ ಮಾಹಿತಿಗಳು...

ಕೃಷ್ಣದೇವರಾಯ ಒಡೆಯರ್ ಕಾಲದಲ್ಲಿ ಪಿರಿಯಾಪಟ್ಟಣದ ಬೆಟ್ಟದಪುರದ ಬಳಿ ಸೆರೆಸಿಕ್ಕ ಜಯಮಾರ್ತಾಂಡ ಆನೆ ಮೈಸೂರು ದಸರಾದಲ್ಲಿ ಮೊದಲ ಬಾರಿ ಅಂಬಾರಿಯನ್ನು ಹೊತ್ತಿತ್ತು. ಒಡೆಯರ್ ಕಾಲದಲ್ಲಿ ಆರಂಭವಾದ ವಿಜಯದಶಮಿಯಿಂದ ಅಂದಾಜು 45 ವರ್ಷಗಳ ಕಾಲ ಚಿನ್ನದ ಅಂಬಾರಿಯನ್ನು ಹೊತ್ತ ಹಿನ್ನೆಲೆಯಲ್ಲಿ ಮಹಾರಾಜರ ಪ್ರೀತಿಗೆ ಪಾತ್ರವಾಗಿತ್ತು.  ಅರಮನೆಯ ಮಹಾದ್ವಾರಗಳಲ್ಲೊಂದಕ್ಕೆ ಜಯಮಾರ್ತಾಂಡ ದ್ವಾರ ಎಂದು ಹೆಸರಿಡುವ ಮೂಲಕ ಒಡೆಯರು ತಮ್ಮ ಪ್ರೀತಿಯ ಆನೆಯ ಹೆಸರನ್ನು ಚಿರಸ್ಥಾಯಿಗೊಳಿಸಿದರು.

ಹಾಲಿವುಡ್ ಸಿನಿಮಾದಲ್ಲೂ ಕಾಣಿಸಿಕೊಂಡಿತ್ತು ಮೈಸೂರಿನ ಆನೆ:

1902ರಿಂದ ದಸರಾದಲ್ಲಿ ಅಂಬಾರಿ ಹೊತ್ತ ಆನೆಗಳೆಂದರೆ, ವಿಜಯ ಬಹದ್ದೂರ್,  ನಂಜುಂಡ, ರಾಮಪ್ರಸಾದ್, ಮೋತಿಲಾಲ್, ಸುಂದರ್ ರಾಜ್​, ಗಜೇಂದ್ರ, ಬಿಳಿಗಿರಿ, ರಾಜೇಂದ್ರ, ದ್ರೋಣ ಮತ್ತು ಐರಾವತ. 1935ರಲ್ಲಿ ಐರಾವತ ಆನೆಯನ್ನು ಹಾಲಿವುಡ್ ಚಿತ್ರ 'ದಿ ಎಲಿಫೆಂಟ್ ಬಾಯ್'ಗೆ ಬಳಸಿಕೊಳ್ಳಲಾಯಿತು. ಈ ಆನೆಯ ಮಾವುತನೇ ಚಿತ್ರದ ನಾಯಕನಾಗಿದ್ದ. ಜಗತ್ತಿನಾದ್ಯಂತ ಪ್ರದರ್ಶನಗೊಂಡ ಈ ಸಿನಿಮಾದಲ್ಲಿ ಮಾವುತನಾಗಿ ಕಾಣಿಸಿಕೊಂಡಿದ್ದು 7 ವರ್ಷದ ಹುಡುಗ ಮೈಸೂರು ಸಾಬು!.

ಬಿಳಿಗಿರಿ:  ಇದುವರೆಗೂ ಅಂಬಾರಿಯನ್ನು ಹೊತ್ತ ಆನೆಗಳಲ್ಲಿ ಬಿಳಿಗಿರಿ ಅತ್ಯಂತ ದೈತ್ಯ ಆನೆಯಾಗಿದೆ. ಇದರ ಎತ್ತರ 10.5 ಅಡಿ. ಇದು ಸುಮಾರು 7 ಸಾವಿರ ಕೆ.ಜಿ. ತೂಕವಿತ್ತು. ಮಹಾರಾಜ ಕೃಷ್ಣದೇವರಾಯ ಒಡೆಯರ್​ ಅವರನ್ನು ಹೊತ್ತೊಯ್ದ ಕೊನೆಯ ಆನೆ ಬಿಳಿಗಿರಿ ಎಂಬುದು ಇದರ ಹೆಗ್ಗಳಿಕೆ.

ರಾಜೇಂದ್ರ:  'ಗಂಧದ ಗುಡಿ' ಚಿತ್ರದಲ್ಲಿ ಡಾ. ರಾಜ್​ಕುಮಾರ್ ಆನೆಯ ದಂತದ ಮೇಲೆ ಕುಳಿತು ಹಾಡುವ ಹಾಡು ಯಾರಿಗೆ ತಾನೆ ನೆನಪಿಲ್ಲ? ಈ ಆನೆಯ ಹೆಸರು ರಾಜೇಂದ್ರ. ಗಂಧದಗುಡಿಚಿತ್ರದುದ್ದಕ್ಕೂ ಇದು ಕಾಣಿಸಿಕೊಂಡಿತ್ತು. ಇದು ರಾಜ್​ಕುಮಾರ್​ಗೆ ಅಚ್ಚುಮೆಚ್ಚಿನ ಆನೆ ಕೂಡ.

ದ್ರೋಣ: 10.25 ಎತ್ತರದ ಆನೆ ದ್ರೋಣ. ಅದು ಸುಮಾರು 6,400 ಕೆ.ಜಿ ತೂಕವಿತ್ತು. ದ್ರೋಣ ಆನೆ 18 ವರ್ಷ ಸತತವಾಗಿ ಅಂಬಾರಿಗೆ ಬೆನ್ನುಕೊಟ್ಟ ಖ್ಯಾತಿಯನ್ನು ಹೊಂದಿದೆ. ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ದಿ ಸೋರ್ಡ್ ಆಫ್ ಟಿಪ್ಪುಸುಲ್ತಾನ್'ನ
ಟಿಪ್ಪು ಪಾತ್ರಧಾರಿಯನ್ನು ಹೊತ್ತೂಯ್ದದ್ದೂ ಇದೇ ದ್ರೋಣ. 1998ರಲ್ಲಿ ಹೈ ಟೆನ್ಶನ್ ವಿದ್ಯುತ್ ತಗುಲಿ  ದ್ರೋಣ ಸಾವನ್ನಪ್ಪಿತು.

ಅರ್ಜುನ: ದ್ರೋಣನ ನಂತರ ಅರ್ಜುನ ಒಮ್ಮೆ ಅಂಬಾರಿ ಹೊತ್ತಿದ್ದ. ಆದರೆ ನಂತರದ ದಿನಗಳಲ್ಲಿ ಮಾವುತನನ್ನು ಕೊಂದ ಆರೋಪದಲ್ಲಿ ಅರ್ಜುನನನ್ನು ಉತ್ಸವದಿಂದ
ಹೊರಗುಳಿಸಲಾಯಿತು.

ಇದನ್ನೂ ಓದಿ: ವಿಶ್ವವಿಖ್ಯಾತ ಮೈಸೂರು ದಸರಾ: ಗಜಪಡೆ ತಾತ್ಕಾಲಿಕ ಪಟ್ಟಿ ಸಿದ್ದ; ಆ.23ಕ್ಕೆ ಗಜಪಯಣ

ಬಲರಾಮ: ಅರ್ಜುನನ ನಂತರ ಬಲರಾಮನಿಗೆ ಅಂಬಾರಿ ಹೊರಿಸಲಾಯಿತು. ಬಲರಾಮ ಶಾಂತ ಸ್ವಭಾವದ ಆನೆಯಾಗಿದ್ದು, 1987ರಲ್ಲಿ ಕಟ್ಟೆಪುರದಲ್ಲಿ ಬಲರಾಮ, ಗಜೇಂದ್ರ, ವಿಕ್ರಮ, ಹರ್ಷ, ಪ್ರಶಾಂತ ಎಂಬ ಆನೆಗಳನ್ನು ಹಿಡಿದಿದ್ದರು. ಹನ್ನೊಂದು ವರ್ಷಗಳ ಕಾಲ ಅಂಬಾರಿ ಹೊತ್ತ ಬಲರಾಮನಿಗೆ ಕಳೆದ ವರ್ಷ ನಿವೃತ್ತಿ ದೊರೆತಿದೆ.

ಅರ್ಜುನ: ದ್ರೋಣನ ಮರಣದ ನಂತರ ಒಮ್ಮೆ ಅಂಬಾರಿ ಹೊತ್ತಿದ್ದ ಅರ್ಜುನನ ಗುಣದಲ್ಲಿ ಸ್ವಲ್ಪ ಕೀಟಲೆ ಸ್ವಭಾವವಿರುವ ಅರ್ಜುನನ ಮೇಲೆ ಸಾಕಷ್ಟು ಟೀಕೆಗಳು ಬಂದಿತ್ತು. ಆದರೂ ಬಲರಾಮನಿಗೆ ವಯಸ್ಸಾದ ಕಾರಣ ಕಳೆದ ವರ್ಷದಿಂದ ಅಂಬಾರಿ ಹೊರುವ ಜವಾಬ್ದಾರಿಯನ್ನು ಅರ್ಜುನನಿಗೆ ನೀಡಲಾಗಿದೆ. ಅರ್ಜನ ಬರೋಬ್ಬರಿ 5,535 ಕೆ.ಜಿ. ತೂಕವನ್ನು ಹೊಂದುವ ಮೂಲಕ ತಂಡದ ಎಲ್ಲಾ ಆನೆಗಳಿಗಿಂತಲೂ ಬಲಿಷ್ಠನಾಗಿದ್ದಾನೆ.

First published: October 12, 2018, 3:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading