Karnataka Politics: ಸಿದ್ದರಾಮಯ್ಯ ಅವರ ಅಭಿಪ್ರಾಯ ರಾಜಣ್ಣನಿಂದ ಹೊರ ಬಂದಿದೆ; HDK

ಅಧಿಕಾರದಲ್ಲಿದ್ದ ಪಕ್ಷ 78 ಕ್ಕೆ ಇಳಿದಿದ್ದಾರೆ. ಇವತ್ತು ಹೇಳ್ತಿದ್ದೀನಿ ಬರೆದಿಟ್ಡುಕೊಳ್ಳಿ ಕಾಂಗ್ರೆಸ್ ಪಕ್ಷ 70 ದಾಟಲ್ಲ ಎಂದು ಭವಿಷ್ಯ ನುಡಿದರು .

ಹೆಚ್ ಡಿ ಕುಮಾರಸ್ವಾಮಿ

ಹೆಚ್ ಡಿ ಕುಮಾರಸ್ವಾಮಿ

  • Share this:
ಇಂದು ಜೆಪಿ ಭವನದಲ್ಲಿ ಜೆಡಿಎಸ್ ನಾಯಕರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (Former CM HD Kumaraswamy), ನಿನ್ನೆ ಜನತಾ ಮಿತ್ರ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದೇವೆ. ಪಕ್ಷ ಸಂಘಟನೆ ದೃಷ್ಟಿಯಿಂದ ಕಾರ್ಯಕ್ರಮ ಜಾರಿ ಮಾಡಲಾಗ್ತಿದೆ. 75ನೇ ವರ್ಷದ ಸಿದ್ದರಾಮಯ್ಯ ಸಭೆಗೂ ನಮಗೂ ಯಾವುದೇ ಸಂಬಂಧ ಇಲ್ಲ. ಮಾಜಿ ಶಾಸಕ ಕೆಎನ್ ರಾಜಣ್ಣ (Ex MLA KN Rajanna) ದುರುಪಯೋಗ ಪಡೆಸಿಕೊಂಡು ನಾವು ಏನು ಲಾಭ ಪಡೆಯುವ ಅವಶ್ಯಕತೆ ಇಲ್ಲ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ Former PM HD Devegowda) ಕೊಡುಗೆ ಏನೆಂದು ಗೊತ್ತಿದೆ. ಹೀಗಾಗಿ ಇವರ ಬಗ್ಗೆ ರಾಜಣ್ಣರಿಂದ ಸರ್ಟಿಫಿಕೇಟ್ ಪಡೆಯುವ ಅಗತ್ಯತೆ ಇಲ್ಲ ಎಂದು ತಿರುಗೇಟು ನೀಡಿದರು. ಸಿದ್ದರಾಮಯ್ಯ (Siddaramaiah) ಮೇಲೆ ನಾನು ಯಾಕೆ ದ್ವೇಷ ಮಾಡಲಿ. ಕಳೆದ ಒಂದು ತಿಂಗಳಲ್ಲಿ ನಾನು ಸಿದ್ದರಾಮಯ್ಯ ಹೆಸರೇ ಎತ್ತಿಲ್ಲ. ನನ್ನ ಪಕ್ಷದ ಮೇಲೆ, ನನ್ನ ಮೇಲೆ ಅವರು ಪ್ರಶ್ನೆ ಮಾಡಿದಾಗ ನಾನು ಮಾತಾಡಬೇಕು. ನಮ್ಮ ಪಕ್ಷದ ಮೇಲೆ ಇವರು ಸಣ್ಣತನ ಇಟ್ಟುಕೊಂಡಿದ್ದಾರೆ ಎಂದು ಕಿಡಿಕಾರಿದರು.

ಪಾಪ ಸಿದ್ದರಾಮಯ್ಯ 75 ವರ್ಷ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ನಾನು ಸಿದ್ದರಾಮಯ್ಯ ಹುಟ್ಟು ಹಬ್ಬ ಕಾರ್ಯಕ್ರಮಕ್ಕೆ ವಿರೋಧ ಮಾಡಲ್ಲ. 2008 ರಿಂದ 2013 ರವರೆಗೂ ಅಧಿಕಾರ ನಡೆಸಿದ್ದು ಬಿಜೆಪಿ ಸರ್ಕಾರ. ಆಮೇಲೆ ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸಿದೆ ಎಂದರು.

ಇದಕ್ಕೆಲ್ಲಾ ಮುಖ್ಯಮಂತ್ರಿಗಳು ಉತ್ತರ ಕೊಡ್ತಾರಾ?

ನಾನು 14 ತಿಂಗಳು ಮೈತ್ರಿ ಸರ್ಕಾರದಲ್ಲಿದ್ದೆ. ಹಿಂದಿನ ಸರ್ಕಾರಗಳ ಬೆಂಗಳೂರು ಅಭಿವೃದ್ಧಿ ಕುರಿತ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರಿಗೆ ನಮ್ಮ ಕೊಡುಗೆ ಬಹಳ ದೊಡ್ಡದಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿಯೇ ಮಾಡಿಲ್ಲ. ಅಭಿವೃದ್ಧಿ ಹೆಸರಲ್ಲಿ ರಾಜ್ಯದಲ್ಲಿ ಲೂಟಿ ಆಗ್ತಿದೆ. ನಾವು ಸ್ಯಾಟಲೈಟ್ ಟೌನ್ ಮಾಡಲು ಮುಂದಾಗಿದ್ದೇವು. ಆದರೆ ಇವರು ಅಧಿಕಾರಕ್ಕೆ ಬಂದ ಮೇಲೆ ಬಿಬಿಎಂಪಿ ಕಚೇರಿಗೆ ಬೆಂಕಿ ಹಾಕಿದರು.ಇದಕ್ಕೆಲ್ಲಾ ಮುಖ್ಯಮಂತ್ರಿಗಳು ಉತ್ತರ ಕೊಡ್ತಾರಾ ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ:  Karnataka Assembly Election: ರಾಜ್ಯದಲ್ಲಿ ಇದೇ ಡಿಸೆಂಬರ್‌ನಲ್ಲಿ ಎಲೆಕ್ಷನ್! ತಯಾರಿ ಮಾಡಿಕೊಳ್ಳುವಂತೆ ಕಾರ್ಯಕರ್ತರಿಗೆ ಎಚ್‌ಡಿಕೆ ಕರೆ

ಎರಡು ಪಕ್ಷಗಳು ಬೆಂಗಳೂರಿನ ಅಭಿವೃದ್ಧಿ ನಿರ್ಲಕ್ಷ್ಯ ಮಾಡಿರೋದು. ಸಿಎಂ ಬೊಮ್ಮಾಯಿ‌ಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದರು. 2008 ರಲ್ಲಿ ಔಟರ್ ಪೆರಿಪೆರಿಯಲ್ ರಿಂಗ್ ರೋಡ್ ನಿರ್ಮಾಣಕ್ಕೆ ನಾನು ಚಾಲನೆ ಕೊಟ್ಟಿದ್ದು. ಇನ್ನರ್ ರಿಂಗ್ ರೋಡ್‌ಗೆ ಅನುದಾನ ನೀಡಿದ್ದೆ. ಈಗ ಎಲ್ಲಾ ನೆನೆಗುದಿಗೆ ಬಿದ್ದಿದೆ.

ಬಿಬಿಎಂಪಿ ದಾಖಲೆಗೆ ಬಿಜೆಪಿ ಅವರು ಬೆಂಕಿ ಇಟ್ಟರು

ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆ ಅನುದಾನವನ್ನು 6 ಸಾವಿರ ಕೋಟಿಗೆ ಕೆಳಗಿಳಿಸಿದ್ದಾರೆ. ಔಟರ್ ಪೆರಿಪೆರಿಯಲ್ ರಿಂಗ್ ರೋಡ್‌ಗೆ 1 ಸಾವಿರ ಕೋಟಿ ಭೂಒತ್ತುವರಿ ಮಾಡಿಕೊಟ್ಟೆ. 25 ಸಾವಿರ ಕೋಟಿ ಅನುದಾನವನ್ನು ಮೈಸೂರು ಬೆಂಗಳೂರಿಗೆ 2007-08 ರಲ್ಲಿ ನೀಡಿದ್ದೆ. ಬಿಬಿಎಂಪಿ ದಾಖಲೆಗೆ ಬಿಜೆಪಿ ಅವರು ಬೆಂಕಿ ಇಟ್ಟರು. ಅದಕ್ಕೆ ಸಿಎಂ ಉತ್ತರ ಕೊಡ್ತಾರಾ ಎಂದು ಕೇಳಿದರು.

ಎರಡು ಪಕ್ಷಗಳು ಬೆಂಗಳೂರಿನ ಅಭಿವೃದ್ಧಿ ನಿರ್ಲಕ್ಷ್ಯ ಮಾಡಿರೋದು. ಸಿಎಂ ಬೊಮ್ಮಾಯಿ‌ಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದರು. 2008 ರಲ್ಲಿ ಔಟರ್ ಪೆರಿಪೆರಿಯಲ್ ರಿಂಗ್ ರೋಡ್ ನಿರ್ಮಾಣಕ್ಕೆ ನಾನು ಚಾಲನೆ ಕೊಟ್ಟಿದ್ದು. ಇನ್ನರ್ ರಿಂಗ್ ರೋಡ್‌ಗೆ ಅನುದಾನ ನೀಡಿದ್ದೆ. ಈಗ ಎಲ್ಲಾ ನೆನೆಗುದಿಗೆ ಬಿದ್ದಿದೆ.

ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸೆಂಟರ್‌ ಅನ್ನು ನಾನು ಸಿಎಂ ಆದಾಗಲೇ ಮಾಡಿದ್ದೆ. ಈಗ ಅದಕ್ಕೆ ಸುಣ್ಣ ಬಣ್ಣ ಹೊಡೆದು ಚಾಲನೆ ನೀಡಿದ್ದಾರೆ ಎಂದು ಸಿಎಂ ಹೇಳಿಕೆಗೆ ಕುಮಾರಸ್ವಾಮಿ ಕಿಡಿಕಾರಿದರು.

ಅದು ಸಿದ್ದರಾಮಯ್ಯ ಅವರ ಅಭಿಪ್ರಾಯ

ದೇವೇಗೌಡರು ಇನ್ನೂ ಎಷ್ಟು ದಿನ ಇರ್ತಾರೆ, ಅವರಿಂದ ಇನ್ನೇನು ಸಾಧ್ಯ ಎಂದು ಸಿದ್ದರಾಮಯ್ಯ ಟೀಮ್ ನಲ್ಲಿ ಚರ್ಚೆ ಆಗಿರೋದು. ಕೆಲವು ಬಾರಿ ಸೇರಿದಾಗ ಇದನ್ನೆಲ್ಲ ಚರ್ಚೆ ಮಾಡಿದ್ದಾರೆ. ಆದರೆ ಇದನ್ನು ಬಾಯ್ತಪ್ಪಿ ಇವರು ಇಲ್ಲಿ ಹೇಳಿದ್ದಾರೆ. ಅವರು ಏನೋ ಕಾರ್ಯಕ್ರಮ ನಮಗೇನು ಸಂಬಂಧ. ಇದು ಸಿದ್ದರಾಮಯ್ಯ ಅವರ ಅಭಿಪ್ರಾಯ, ಆದರೆ ಇದು ರಾಜಣ್ಣನಿಂದ ಹೊರಗಡೆ ಬಂದಿದೆ ಅಷ್ಟೇ ಎಂದು ಆರೋಪಿಸಿದರು .

ಇದನ್ನೂ ಓದಿ:  Chitradurga: ರಾಹುಲ್ ಗಾಂಧಿಯನ್ನು ಹೆದರಿಸಲು ಬಿಜೆಪಿ ತಂತ್ರ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರೋಪ

ಕಾಂಗ್ರೆಸ್ ನಲ್ಲಿ ಅವರದ್ದೇ ಆದ ಟೀಮ್ ಇದೆ. ಕಾಂಗ್ರೆಸ್ ನಲ್ಲಿ ಒಂದು ಎರಡು ಮೂರು ಟೀಮ್ ಗಳಿವೆ. ಆದರೆ ಈ ಮಾತು ಸಿದ್ದರಾಮಯ್ಯ ಟೀಮ್ ನಿಂದ ಹೊರಗೆ ಬಂದಿರೋದು ಎಂದು ಹೇಳುವ ಮೂಲಕ ರಾಜಣ್ಣ ಹೇಳಿಕೆ ಸಿದ್ದರಾಮಯ್ಯ ಅವರದ್ದೇ ಎಂದರು.

ಕಾಂಗ್ರೆಸ್ ಪಕ್ಷ 70 ದಾಟಲ್ಲ

ಆಂತರಿಕ ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸೀಟ್ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ನವರ ಸಮೀಕ್ಷೆ ಪ್ಲ್ಯಾಂಟೆಡ್ ಎಂದರು. ಕಾಂಗ್ರೆಸ್‌ನವರ ಶಕ್ತಿ 60-65 ಅಷ್ಟೇ. ಹಿಂದೆ ಯಡಿಯೂರಪ್ಪನವರು ಇನ್ನೊಂದು ಪಕ್ಷ ಮಾಡದಿದ್ದರೆ ಸಿದ್ದರಾಮಯ್ಯ ಅಂದು ಸಿಎಂ ಆಗ್ತಿರಲಿಲ್ಲ. ಅಧಿಕಾರದಲ್ಲಿದ್ದ ಪಕ್ಷ 78 ಕ್ಕೆ ಇಳಿದಿದ್ದಾರೆ. ಇವತ್ತು ಹೇಳ್ತಿದ್ದೀನಿ ಬರೆದಿಟ್ಡುಕೊಳ್ಳಿ ಕಾಂಗ್ರೆಸ್ ಪಕ್ಷ 70 ದಾಟಲ್ಲ ಎಂದು ಭವಿಷ್ಯ ನುಡಿದರು .
Published by:Mahmadrafik K
First published: