‘ನಾನೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ: ಸತೀಶ್​​ ಜಾರಕಿಹೊಳಿ ಬೆನ್ನಲ್ಲೇ ಬೇಡಿಕೆಯಿಟ್ಟ ಕೆ.ಎನ್​​​ ರಾಜಣ್ಣ

ರಾಜ್ಯ ಉಪಚುನಾವಣೆ ಸೋಲಿನ ಹೊಣೆ ಹೊತ್ತು ದಿನೇಶ್​​ ಗುಂಡೂರಾವ್​​ ರಾಜೀನಾಮೆ ನೀಡಿದ ಬೆನ್ನಲ್ಲೇ ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಿದ್ದೇನೆ. ಈ ಬಗ್ಗೆ ಹೈಕಮಾಂಡ್​​ ಜೊತೆಗೆ ಚರ್ಚಿಸಲು ಜನವರಿ 9ನೇ ತಾರಕಿನಂದು ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದೇನೆ- ಕೆ.ಎನ್​​​ ರಾಜಣ್ಣ

news18-kannada
Updated:January 7, 2020, 3:30 PM IST
‘ನಾನೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ: ಸತೀಶ್​​ ಜಾರಕಿಹೊಳಿ ಬೆನ್ನಲ್ಲೇ ಬೇಡಿಕೆಯಿಟ್ಟ ಕೆ.ಎನ್​​​ ರಾಜಣ್ಣ
ಕೆ.ಎನ್. ರಾಜಣ್ಣ
  • Share this:
ತುಮಕೂರು(ಜ.07):ಕರ್ನಾಟಕ ಉಪಚುನಾವಣೆಯಲ್ಲಿ ಕಾಂಗ್ರೆಸ್​​ ಹೀನಾಯ ಸೋಲಿನ ಹೊಣೆ ಹೊತ್ತು ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್​​ ಶಾಸಕಾಂಗ ನಾಯಕ ಮತ್ತು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಂತೆಯೇ ದಿನೇಶ್​ ಗುಂಡೂರಾವ್​​ ಕೂಡ ಸೋಲಿನ ನೈತಿಕ ಜವಾಬ್ದಾರಿ ಹೊತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇಬ್ಬರ ರಾಜೀನಾಮೆ ಅಂಗೀಕಾರ ಆಗುವ ಮುನ್ನವೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ವಿಪಕ್ಷ ಸ್ಥಾನಕ್ಕೆ ಹೈಕಮಾಂಡ್​​ ಬಳಿ ಕಾಂಗ್ರೆಸ್​​ ನಾಯಕರು ಲಾಬಿಗೆ ಮುಂದಾಗಿದ್ದಾರೆ. ಮಾಜಿ ಸಚಿವ ಡಿ.ಕೆ ಶಿವಕುಮಾರ್​​, ಎಚ್​​. ಕೆ ಪಾಟೀಲ್​​, ಕೆ. ಎಚ್ ಮುನಿಯಪ್ಪ​​ ಕೆಪಿಸಿ ಅಧ್ಯಕ್ಷ ಸ್ಥಾನ ಮತ್ತು ವಿಪಕ್ಷ ಸ್ಥಾನದ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಕೆ. ಎಚ್​​ ಮುನಿಯಪ್ಪ ಬೆಂಬಲಕ್ಕೆ ಬಿ.ಕೆ ಹರಿಪ್ರಸಾದ್​​ ನಿಂತಿದ್ದು, ಎಚ್​.ಕೆ ಪಾಟೀಲ್​​ ಬೆನ್ನಿಗೆ ಹಿರಿಯ ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ್​​ ಖರ್ಗೆ ನಿಂತಿದ್ಧಾರೆ. ಈಗಾಗಲೇ ರಾಹುಲ್​​ ಭೇಟಿಗೆ ಯತ್ನಿಸಿದರೂ ವಿಫಲವಾಗಿದ್ದು, ಸೋನಿಯಾ ಗಾಂಧಿ ಅವರನ್ನಾದರೂ ಭೇಟಿಯಾಗಬೇಕೆಂದು ಮುಂದಾಗಿದ್ದಾರೆ. ಇವರ ಜತೆಗೆ ಬೆಳಗಾವಿಯ ಪ್ರಭಾವಿ ಶಾಸಕ ಸತೀಶ್ ಜಾರಕಿಹೊಳಿ ಕೂಡ ಕೆಪಿಸಿಸಿ ಸ್ಥಾನ ಆಕಾಂಕ್ಷಿಯಾಗಿದ್ದಾರೆ. ಈ ಬೆನ್ನಲ್ಲೀಗ ನಾನು ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್. ರಾಜಣ್ಣ ಹೊಸ ಬಾಂಬ್ ಸಿಡಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಕೆ.ಎನ್​​ ರಾಜಣ್ಣ, ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಉಮೇದುದಾರ. ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್​ ಹೈಕಮಾಂಡ್​​ಗೆ ನನ್ನನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವಂತೆ ಮನವಿ ಪತ್ರ ಬರೆದಿದ್ದೇನೆ ಎಂದರು.

ರಾಜ್ಯ ಉಪಚುನಾವಣೆ ಸೋಲಿನ ಹೊಣೆ ಹೊತ್ತು ದಿನೇಶ್​​ ಗುಂಡೂರಾವ್​​ ರಾಜೀನಾಮೆ ನೀಡಿದ ಬೆನ್ನಲ್ಲೇ ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಿದ್ದೇನೆ. ಈ ಬಗ್ಗೆ ಹೈಕಮಾಂಡ್​​ ಜೊತೆಗೆ ಚರ್ಚಿಸಲು ಜನವರಿ 9ನೇ ತಾರಕಿನಂದು ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದೇನೆ. ನಾನು ದೆಹಲಿಗೆ ಹೋಗುವ ಮುನ್ನವೇ ಹೈಕಮಾಂಡ್​ ಬೇರೆ ಯಾರನ್ನಾದರೂ ಕೆಪಿಸಿಸಿ ಅಧ್ಯಕ್ಷರನ್ನಾಗಿಸಿದರೆ ಏನು ಮಾಡಲಿಕ್ಕಾಗುವುದಿಲ್ಲ ಎಂದರು.

ಇದನ್ನೂ ಓದಿ: ಹೈಕಮಾಂಡ್​​ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ನಿಭಾಯಿಸುತ್ತೇನೆ: ಮಾಜಿ ಸಚಿವ ಸತೀಶ್​​ ಜಾರಕಿಹೊಳಿ

ಇತ್ತೀಚೆಗಷ್ಟೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ ಎನ್ನುವ ಮೂಲಕ ಸತೀಶ್​​​ ಜಾರಕಿಹೊಳಿ ತಮ್ಮ ಮನದಾಳದ ಆಸೆ ಬಿಚ್ಚಿಟ್ಟಿದ್ದರು. ನಾನು ಕಾಂಗ್ರೆಸ್​​ ಶಿಸ್ತಿನ ಸಿಪಾಯಿ. ಹೈಕಮಾಂಡ್ ಯಾವುದೇ ಜವಾಬ್ದಾರಿ ಕೊಟ್ಟರೂ ನಿರ್ವಹಿಸುತ್ತೇನೆ. ಕಾಂಗ್ರೆಸ್​​ ಉಪಚುನಾವಣೆಯಲ್ಲಿ ಸೋತಿದೆ. ಇಂತಹ ಸಂದರ್ಭದಲ್ಲಿ ಪಕ್ಷ ಕಟ್ಟುವುದು ಅತ್ಯಂತ ಮುಖ್ಯವಾಗಿದೆ. ಯಾರಿಗೆ ಕೆಪಿಸಿಸಿ ಅಧ್ಯಕ್ಷ ನೀಡಬೇಕು ಎಂಬುದು ಹೈಕಮಾಂಡ್ ಬಿಟ್ಟದ್ದು. ಯಾರಿಗೆ ಜವಾಬ್ದಾರಿ ನೀಡಿದರೂ ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ನಿರ್ಣಯ ಮಾಡಿದ್ದೇವೆ ಎಂದಿದ್ದರು. ಈ ಬೆನ್ನಲ್ಲೇ ವಾಲ್ಮಿಕಿ ಸಮಾಜದ ಮತ್ತೋರ್ವ ನಾಯಕ ಕೆ.ಎನ್​​​ ರಾಜಣ್ಣ ಕೂಡ ತಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಹೇಳಿರುವುದು ಅಚ್ಚರಿ ಮೂಡಿಸಿದೆ.
First published: January 7, 2020, 3:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading