ಗ್ರಾಹಕರಿಗೆ ಶಾಕ್​: ಫೆ.1ರಿಂದ ಹಾಲಿನ ದರ ಏರಿಕೆ; ಲೀಟರ್​ಗೆ 2 ರೂ. ಹೆಚ್ಚಳ

ಹಾಲಿನ ದರವನ್ನು ಲೀಟರ್​ಗೆ 3 ರೂ ಏರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಸರ್ಕಾರ 2 ರೂ ಏರಿಕೆಗೆ ಅನುಮತಿ ನೀಡಿದೆ. ಇದರ ಜೊತೆಗೆ ಮೊಸರಿನ ದರವನ್ನು ಕೂಡ 2 ರೂ ಏರಿಸಲಾಗಿದೆ 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಜ.30): ಹಾಲಿನ ದರವನ್ನು ಹೆಚ್ಚಿಸುವ ಕುರಿತು ಸಲ್ಲಿಸಲಾಗಿದ್ದ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಫೆ.1ರಿಂದ ಪ್ರತಿ ಲೀಟರ್​ಗೆ 2 ರೂ ಏರಿಕೆಯಾಗಲಿದೆ ಎಂದು ಕೆಎಂಎಫ್​ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. 

ಈ ಕುರಿತು ಮಾತನಾಡಿದ ಅವರು,  14 ಹಾಲು ಒಕ್ಕೂಟಗಳ ವತಿಯಿಂದ ಹಾಲಿನ ದರ ಹೆಚ್ಚಳಕ್ಕಾಗಿ ಕೆಎಂಎಫ್ ಗೆ ಪ್ರಸ್ತಾವನೆ ಸಲ್ಲಿಸಿದ್ದವು. ಪ್ರತೀ ಲೀಟರ್ ಗೆ ಎರಡರಿಂದ ಮೂರು ರೂ ಹೆಚ್ಚಳ ಮಾಡುವಂತೆ ಬೇಡಿಕೆ ಬಂದಿತ್ತು. ಈ ಕುರಿತು ಆಡಳಿತ ಮಂಡಳಿ ಸಭೆಯಲ್ಲಿ ಕೂಡ ಚರ್ಚಿಸಿ ತೀರ್ಮಾನ ಕೈ ಗೊಳ್ಳಲಾಗಿತ್ತು ಎಂದರು.

ಇದನ್ನು ಓದಿ: ರಮೇಶ ಜಾರಕಿಹೊಳಿಗೆ ನೀರಾವರಿ ಖಾತೆ ಕೊಟ್ಟರೆ ಬಿಜೆಪಿಯನ್ನೇ ಮುಳುಗಿಸುತ್ತಾರೆ: ಲಖನ್

ಇನ್ನು ಹಾಲಿನ ದರವನ್ನು ಲೀಟರ್​ಗೆ 3 ರೂ ಏರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಸರ್ಕಾರ 2 ರೂ ಏರಿಕೆಗೆ ಅನುಮತಿ ನೀಡಿದೆ. ಇದರ ಜೊತೆಗೆ ಮೊಸರಿನ ದರವನ್ನು ಕೂಡ 2 ರೂ ಏರಿಸಲಾಗಿದೆ
First published: