ನಂದಿನಿ ಹಾಲು, ಮೊಸರಿನ ಬೆಲೆ ಏರಿಕೆ (Milk And Curd Price) ಬೆನ್ನಲ್ಲೇ ಕೆಎಂಎಫ್ (KMF) ಸಾರ್ವಜನಿಕರಿಗೆ ಮತ್ತೊಂದು ಶಾಕ್ ನೀಡಿದೆ. ನಂದಿನಿ ಹಾಲಿನಿಂದ ಸಿದ್ಧವಾಗುವ ಎಲ್ಲಾ ಉತ್ಪನ್ನಗಳ ಬೆಲೆಯನ್ನು (Nandini Milk Products) ಏರಿಕೆ ಮಾಡಲಾಗಿದೆ. ಸದ್ದಿಲ್ಲದೇ ಕೆಎಂಎಫ್ ಸಿಹಿ ತಿನಿಸು (Sweet) ಹಾಗೂ ತುಪ್ಪದ ದರ (Ghee Price) ಏರಿಕೆಯಾಗುತ್ತಿವೆ. ಪ್ರತಿ ಉತ್ಪನ್ನದ ಮೇಲೆ 5% ರಿಂದ 15% ದರ ಏರಿಕೆ ಮಾಡಲಾಗುತ್ತಿದೆ. ನವೆಂಬರ್ 24 ರಂದು ಕೆಎಂಎಫ್ ನಂದಿನಿ ಹಾಲು, ಮೊಸರಿನ ದರದ ಮೇಲೆ 2 ರೂಪಾಯಿ ಏರಿಸಿತ್ತು. ಈ ದರ ಏರಿಕೆಯ ಸಂಪೂರ್ಣ ಹಣವನ್ನು ರೈತರಿಗೆ (Farmer) ನೀಡುವುದಾಗಿ ಕೆಎಂಫ್ ಹೇಳಿತ್ತು. ಆದ್ರೆ ಹಾಲು, ಮೊಸರು ದರ ಏರಿಕೆಗೂ ಮೊದಲೇ ಹಂತ ಹಂತವಾಗಿ ಉತ್ಪನ್ನಗಳ ಬೆಲೆಯನ್ನು ಕೆಎಂಎಫ್ ಹೆಚ್ಚಳ (KMF Products) ಮಾಡಿಕೊಂಡು ಬಂದಿದೆ.
ಈಗ ಉತ್ಪನ್ನಗಳ ದರ ಎಷ್ಟಾಗಿದೆ?
* ತುಪ್ಪ 1 ಕೆ.ಜಿ 520 ರಿಂದ 610 ರೂಗೆ ಏರಿಕೆ
* ಪೇಡ 250 ಗ್ರಾಂ 105 ರಿಂದ 140 ರೂಪಾಯಿ ಏರಿಕೆ
* ಮೈಸೂರು ಪಾಕ್ 250 ಗ್ರಾಂ 115 ರಿಂದ 160 ರೂಪಾಯಿಗೆ ಏರಿಕೆ
* ಕೋವಾ 200 ಗ್ರಾಂ 90 ರಿಂದ 100 ರೂಪಾಯಿ ಏರಿಕೆ
* ಜಾಮೂನ್ ಅರ್ಧ ಕೆಜಿ ಟಿನ್ 105 ರಿಂದ 135 ರೂಪಾಯಿಗೆ ಏರಿಕೆ
* ಪ್ಲೇವರ್ಡ್ ಮಿಲ್ಕ್ 20 ರಿಂದ 25 ರೂಪಾಯಿಗೆ ಏರಿಕೆ
* ನಂದಿನಿ ಐಸ್ ಕ್ರೀಂನ ಪ್ರತಿ ಪ್ಯಾಕೇಟ್ ಮೇಲೂ 5 ರೂಪಾಯಿ ಏರಿಕೆ
* ಪನ್ನೀರು ಪ್ರತಿ ಕೆಜಿಗೆ 20 ರೂಪಾಯಿ ಏರಿಕೆ
ಪ್ರತಿ ಲೀಟರ್ಗೆ 2 ರೂ. ದರ ಹೆಚ್ಚಳ
KMF ಆಡಳಿತ ಮಂಡಳಿ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಕೆಎಂಎಫ್ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ, ಹಾಲು, ಮೊಸರಿನ ಬೆಲೆ ಏರಿಕೆ ಬಗ್ಗೆ ಘೋಷಣೆ ಮಾಡಿದ್ದಾರೆ. ಗ್ರಾಹಕರಿಗೆ, ರೈತರಿಗೆ ಹೊರೆಯಾಗದಂತೆ ನಿರ್ಧಾರ ಕೈಗೊಂಡಿದ್ದು, ಹಾಲು ಹಾಗೂ ಮೊಸರು ಪ್ರತಿ ಲೀಟರ್ಗೆ 2 ರೂ. ದರ ಹೆಚ್ಚಳ ಮಾಡಿದ್ದು, ನಾಳಿಯಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದ್ದು, ಗ್ರಾಹಕರು ಸಹಕಾರ ನೀಡಬೇಕು ಎಂದು ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿಕೊಂಡಿದ್ದರು.
ಕೆಎಂಎಫ್ಗೆ ಒತ್ತಡ ಆದ್ರೂ ರೈತರಿಗೆ 193 ಕೋಟಿ ಸಬ್ಸಿಡಿ ರೂಪದಲ್ಲಿ ನೀಡಿದ್ದೇವೆ. ಕ್ಷೀರಭಾಗ್ಯ ಯೋಜನೆಯಿಂದ ಪ್ರತಿನಿತ್ಯ 8 ಲಕ್ಷ ಲೀಟರ್ ಹಾಲು ನೀಡ್ತಿದ್ದೇವೆ. ಸಾಮಾನ್ಯ ದರಕ್ಕಿಂತ ಕಡಿಮೆ ದರಕ್ಕೆ ನೀಡಲಾಗ್ತಿದೆ. ತಿಂಗಳಿಗೆ ಇದರಿಂದ ಸುಮಾರು 10 ಕೋಟಿ ಲಾಸ್ ಆಗ್ತಿದೆ. ನಷ್ಟ ತುಂಬಲು ಬೆಲೆ ಏರಿಕೆ ಅನಿವಾರ್ಯ ಎಂದು ಬಾಲಚಂದ್ರ ಜಾರಕಿಹೋಳಿ ಹೇಳಿದ್ದಾರೆ.
ಇದನ್ನೂ ಓದಿ: Shivaji Statue: ಮಂಗಳೂರಿನಲ್ಲಿ ಮತ್ತೆ ಶಿವಾಜಿ ವಿವಾದ; ಪ್ರತಿಮೆ ನಿರ್ಮಾಣಕ್ಕೆ ಪಾಲಿಕೆ ಅಸ್ತು
ಟೀ-ಕಾಫಿ, ತಿಂಡಿ ದರ
ದುಬಾರಿ ದುನಿಯಾದಲ್ಲಿ ಹಾಲು, ಮೊಸರು ದರದ ಜೊತೆ ಕೆಎಂಫ್ ನ ಎಲ್ಲ ಪ್ರಾಡೆಕ್ಟ್ ಗಳ ದರವೂ ಹೆಚ್ಚು ಮಾಡಿದೆ. ಸದ್ಯಕ್ಕೆ ಹೋಟೆಲ್ ಗಳ ಟೀ-ಕಾಫಿ, ತಿಂಡಿ ದರ ಹೆಚ್ಚಳ ಮಾಡುತ್ತಿಲ್ಲ ಎನ್ನುವುದು ಸದ್ಯದ ಸಮಾಧಾನದ ಸಂಗತಿ. ಆದ್ರೆ ಬೆಂಗಳೂರಿನ ಕೆಲವು ಹೋಟೆಲ್ಗಳು ಕಾಫಿ, ಟೀ ದರವನ್ನು ಹೆಚ್ಚಳ ಮಾಡಿವೆ.
ಮಳೆ ಅಲರ್ಟ್
ಡಿಸೆಂಬರ್ 6ರಂದು ರಾತ್ರಿ 11.30ರ ವೇಳೆಗೆ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ರೂಪಗೊಂಡಿರುವ ಮ್ಯಾಂಡಸ್, ಕಾರೈಕಲ್ನಿಂದ ಸುಮಾರು 840 ಕಿಮೀ ಪೂರ್ವ ಆಗ್ನೇಯಕ್ಕೆ ಮತ್ತು ಚೆನ್ನೈನಿಂದ ಸುಮಾರು 900 ಕಿ ಮೀ ಅಗ್ನೇಯದಲ್ಲಿ ಡಿಪ್ರೆಶನ್ ಆರಂಭಗೊಂಡಿದೆ.
ಇದನ್ನೂ ಓದಿ: Vivek Classroom: 7 ಸಾವಿರಕ್ಕೂ ಅಧಿಕ ತರಗತಿ ಕೊಠಡಿಗೆ ಕೇಸರಿ ಬಣ್ಣ; ಸಿಎಂ, ಸಚಿವ ನಾಗೇಶ್ ಸಮರ್ಥನೆ ಹೀಗಿತ್ತು
ಮುಂದಿನ ದಿನಗಳಲ್ಲಿ ಚಂಡಮಾರುತ ವೇಗ ಪಡೆದುಕೊಳ್ಳಲಿದ್ದು, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಪುದುಚೇರಿಯ ಕರಾವಳಿಗೆ ಅಪ್ಪಳಿಸಲಿದೆ. ಪರಿಣಾಮ ನಾಳೆಯಿಂದ ಡಿಸೆಂಬರ್ 12ರವರೆಗೂ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ