ಬೆಂಗಳೂರು: ರಾಜ್ಯದಲ್ಲಿ ತುಪ್ಪಕ್ಕೆ (Ghee) ಹಾಹಾಕರ ಉಂಟಾಗಿದೆ. ಬೇಡಿಕೆ ಹೆಚ್ಚಳವಾಗಿರುವ ಹಿನ್ನೆಲೆ ತುಪ್ಪ (KMF Ghee Demand) ಪೂರೈಸಲು ಕೆಎಂಎಫ್ ಹರಸಾಹಸ ಮಾಡುತ್ತಿದೆ. ಕಳೆದ ಕೆಲವು ದಿನಗಳಿಂದ ದಾಖಲೆ ಪ್ರಮಾಣದಲ್ಲಿ ತುಪ್ಪದ ಬೇಡಿಕೆ ಹೆಚ್ಚಾಗಿದೆ. ಪ್ರತೀ ವರ್ಷ 5 ರಿಂದ 6 ಶೇಕಡಾ ತುಪ್ಪದ ಬೇಡಿಕೆ ಹೆಚ್ಚುತ್ತಿತ್ತು. ಆದ್ರೆ ಈ ಬಾರಿ ತುಪ್ಪಕ್ಕೆ 33% ಬೇಡಿಕೆ ಹೆಚ್ಚಳವಾಗಿದೆ. ತುಪ್ಪ ಸಿಗದೇ ಹೋಟೆಲ್ ಮತ್ತು ಸ್ವೀಟ್ ಅಂಗಡಿ (Hotel And Sweet Shops) ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಈಗಾಗಲೇ ತುಪ್ಪದ ಕೊರತೆ ಉಂಟಾಗಿ ತುಪ್ಪದ ಪದಾರ್ಥ ತಯಾರು ಮಾಡೋದನ್ನು ಹಲವು ಹೋಟೆಲ್ ಮತ್ತು ಸ್ವೀಟ್ ಅಂಗಡಿ ಮಾಲೀಕರು ನಿಲ್ಲಿಸಿದ್ದಾರೆ ಎನ್ನಲಾಗಿದೆ.
ಕಳೆದ ಮೂರು ತಿಂಗಳಿನಿಂದ ಮಾರುಕಟ್ಟೆಯಲ್ಲಿ ತುಪ್ಪದ ಕೊರತೆ ಉಂಟಾಗಿದೆ. ಹೋಟೆಲ್ ಮತ್ತು ಸ್ವೀಟ್ ಅಂಗಡಿ ಮಾಲೀಕರು ಅನೇಕ ಬಾರಿ ತುಪ್ಪದ ಪೂರೈಕೆ ಮಾಡುವಂತೆ ಮನವಿ ಮಾಡಿಕೊಂಡಿವೆ.
ತುಪ್ಪದ ಕೊರತೆಗೆ ಕಾರಣ ಏನು?
*ಹಾಲು ಉತ್ಪಾದನೆ ಕಡಿಮೆಯಾದ ಹಿನ್ನೆಲೆ ತುಪ್ಪ ಉತ್ಪಾದನೆಗೆ ಪೆಟ್ಟು
*ನಂದಿನಿ ತುಪ್ಪದ ದರ ಕಡಿಮೆ, ಹೀಗಾಗಿ ಬೇರೆ ರಾಜ್ಯಗಳಿಂದಲೂ ಬೇಡಿಕೆ
*ನಂದಿನಿ ತುಪ್ಪಕ್ಕೆ ಈ ಬಾರಿ ಮಿತಿ ಮೀರಿದ ಬೇಡಿಕೆ
*ದೇಶದಲ್ಲೇ ಅತೀ ಕಡಿಮೆ ಬೆಲೆಗೆ ಮಾರಾಟವಾಗೋ ಎರಡನೇ ಸ್ಥಾನದಲ್ಲಿರುವ ನಂದಿನಿ ತುಪ್ಪ
*ಮಾಮೂಲಿಗಿಂತ ಶೇಕಡಾ 33% ಹೆಚ್ಚಿದ ಬೇಡಿಕೆ
ಕರುನಾಡಲ್ಲಿ 'ದಹಿ' ದಳ್ಳುರಿ
ನಂದಿನಿ ಹಾಲು, ಮೊಸರು ಬಳಸುವವರ ಸಂಖ್ಯೆ ಕರ್ನಾಟಕದಲ್ಲಿ ಹೆಚ್ಚು ಎಂದರೆ ತಪ್ಪಾಗಲ್ಲ. ಉತ್ತಮ ಗುಣಮಟ್ಟ ಸಿಗುತ್ತೆ ಅನ್ನೋ ಕಾರಣಕ್ಕೆ ಎಲ್ಲರೂ ನಂದಿನಿ ಹಾಲು, ಮೊಸರು ಬಳಸುತ್ತಾರೆ.
ಇದನ್ನೂ ಓದಿ: Rain Alert: ಇಂದಿನಿಂದ 5 ಜಿಲ್ಲೆಗಳಲ್ಲಿ ಭಾರೀ ಮಳೆ; ಮಧ್ಯರಾತ್ರಿಯೇ ತುರ್ತು ಪ್ರಕಟಣೆ, ಜಿಲ್ಲಾಧಿಕಾರಿಗಳಿಗೆ ಸಂದೇಶ
ಆದರೆ ಇದೀಗ ನಂದಿನಿ ಮೊಸರಿನ ಪ್ಯಾಕೆಟ್ ಕಂಡು ಕನ್ನಡಿಗರು ಕೆಂಡವಾಗಿದ್ದರು. ಕರುನಾಡಿನ ಜನರಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಸರ್ಕಾರ ದಹಿ ಮುದ್ರಣವನ್ನು ಹಿಂಪಡೆದುಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ