ರೇವಣ್ಣ ಕಪಿಮುಷ್ಟಿಯಿಂದ ಕೆಎಂಎಫ್​​ಗೆ​ ಮುಕ್ತಿ; ಬಾಲಚಂದ್ರ ಜಾರಕಿಹೊಳಿ ಅವಿರೋಧ ಆಯ್ಕೆ ಖಚಿತ?

KMF Election : ಒಂದೇ ಕುಟುಂಬದ ಹಿಡಿತದಲ್ಲಿದ್ದ ಕೆಎಂಎಫ್​​​ ಸಂಸ್ಥೆಗೆ ಮತ್ತೆ  ಅಧ್ಯಕ್ಷರಾಗಬೇಕೆಂದು ರೇವಣ್ಣ ಪಿತೂರಿ ಮಾಡಿದ್ದರೂ ಆದರೆ ಅದ್ಯಾವುದೂ ಈಡೇರಲಿಲ್ಲ.- ಎ ಮಂಜು

Seema.R | news18-kannada
Updated:August 31, 2019, 11:38 AM IST
ರೇವಣ್ಣ ಕಪಿಮುಷ್ಟಿಯಿಂದ ಕೆಎಂಎಫ್​​ಗೆ​ ಮುಕ್ತಿ; ಬಾಲಚಂದ್ರ ಜಾರಕಿಹೊಳಿ ಅವಿರೋಧ ಆಯ್ಕೆ ಖಚಿತ?
ಕೆಎಂಎಫ್​ ಅಧ್ಯಕ್ಷ ಸ್ಥಾನದ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಾಲಚಂದ್ರ ಜಾರಕಿಹೊಳಿ
  • Share this:
ಬೆಂಗಳೂರು (ಆ.31): ತೀವ್ರ ಕುತೂಹಲ ಕೆರಳಸಿದ್ದ ಕರ್ನಾಟಕ ಹಾಲು ಒಕ್ಕೂಟ ಚುನಾವಣೆ ಇಂದು ನಡೆಯಲಿದೆ. ಇದೇ ಮೊದಲ ಬಾರಿಗೆ ಈ ಹುದ್ದೆಗೆ ಬಾಲಚಂದ್ರ ಜಾರಕಿಹೊಳಿ ಈ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. 

ಇಂದು ತಮ್ಮ ಬೆಂಬಲಿಗರೊಂದಿಗೆ ಬಾಲಚಂದ್ರ ಜಾರಕಿಹೊಳಿ ನಾಮಪತ್ರ ಸಲ್ಲಿಸಿದ್ದು, ಅವಿರೋಧ ಆಯ್ಕೆಯಾಗುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ರೇವಣ್ಣ ಅವರು ಈಗಾಗಲೇ ನಾಮಪತ್ರ ಸಲ್ಲಿಸಿದ್ದು, ನಿರ್ದೇಶಕರುಗಳು ಜಾರಕಿಹೊಳಿ ಪರ ಇರುವ ಹಿನ್ನೆಲೆ ಅವರು ನಾಮಪತ್ರ ವಾಪಸ್ಸು ಪಡೆಯುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಇನ್ನು ಈ ಕುರಿತು ಮಾತನಾಡಿರುವ ಚುನಾವಣಾಧಿಕಾರಿ ರವಿಕುಮಾರ್​, ಮಧ್ಯಾಹ್ನ 12 ಗಂಟೆ ಬಳಿಕ ನಾಮಪತ್ರ ಪರಿಶೀಲನೆ ಕಾರ್ಯ ನಡೆದು ಚುನಾವಣಾ ಪ್ರಕ್ರಿಯೆ ಆರಂಭವಾಗಲಿದ್ದು, ರಹಸ್ಯ ಮತದಾನದ ಮೂಲಕ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಸಂಜೆ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ ಎಂದರು.

16 ಸದಸ್ಯ ಬಲ ಹೊಂದಿರುವ ಕೆಎಂಎಫ್ ಒಕ್ಕೂಟದಲ್ಲಿ ಕಾಂಗ್ರೆಸ್ ಬೆಂಬಲಿತ 9 ನಿರ್ದೇಶಕರಿದ್ದು, ಜೆಡಿಎಸ್ ಬೆಂಬಲಿತ 3 ನಿರ್ದೇಶಕರು ಹಾಗೂ ನಾಲ್ವರು ನಾಮನಿರ್ದೇಶಿತ ಸದಸ್ಯರಿದ್ದಾರೆ.  ಸರ್ಕಾರದಿಂದ ಬಾಲಚಂದ್ರ ನಾಮ ನಿರ್ದೇಶನ ಮಾಡಿರುವ ಹಿನ್ನೆಲೆ ಅವರ ಆಯ್ಕೆ ಬಹುತೇಕ ಖಚಿತವಾಗಿದೆ.

ಇನ್ನು ಈ ಕುರಿತು ಮಾತನಾಡಿರುವ ಬೆಂಗಳೂರು ಡೈರಿ ಅಧ್ಯಕ್ಷ ಆನಂದ್ ಕುಮಾರ್, ಡಿಕೆ ಶಿವಕುಮಾರ್​ ನಿರ್ದೇಶನದಂತೆ ನಾವೆಲ್ಲ ನಡೆಯುತ್ತಿದ್ದೇವೆ. ಸರ್ಕಾರ ಯಾವುದೇ ಇದೆಯೋ ಹಾಗೇ ಕೇಳಿ ಸಂಸ್ಥೆ ಬೆಳವಣಿಗೆ ಮುಖ್ಯ ಎಂದು ಪಕ್ಷದಿಂದ ಸೂಚನೆ ಸಿಕ್ಕಿದೆ. ಹೀಗಾಗಿ ಸದ್ಯ ನಾವು ಸರ್ಕಾರ ಜಾರಕಿಹೊಳಿ ಅವರಿಗೆ ಬೆಂಬಲ ಸೂಚಿಸಿದ್ದೇವೆ. 13 ಜನ ನಿರ್ದೆಶಕರು ಜಾರಕಿಹೊಳಿ ಪರ‌ ಇದ್ದೇವು. ಇದರಲ್ಲಿ ಯಾವುದೇ ಅನುಮಾನಬೇಡ. ಬಿಜೆಪಿ ನಮಗೆ ಯಾವುದೇ ಆಮಿಷ ಒಡ್ಡಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್​ ನಾಯಕ ಭೀಮಾನಾಯ್ಕ್​ ಕೂಡ ಈ ಹುದ್ದೆ ಮೇಲೆ ಕಣ್ಣಿಟ್ಟಿದ್ದರೂ ರೇವಣ್ಣಗೆ ಭಾರೀ ಪೈಪೋಟಿ ನೀಡಲು ಸಿದ್ಧರಾಗಿದ್ದರು. ಯಾವಾಗ ಈ ಅಖಾಡಕ್ಕೆ ಜಾರಕಿಹೊಳಿ ಪ್ರವೇಶಿಸಿದರೋ ಆಗ ಅವರು ಬಾಲಚಂದ್ರ ಜಾರಕಿಹೊಳಿಗೆ ಬೆಂಬಲಕ್ಕೆ ನಿಂತರು.

ಕೆಎಂಎಫ್​ಗೆ ರೇವಣ್ಣನ ಕಪಿಮುಷ್ಟಿಯಿಂದ ಮುಕ್ತಿದಶಕಗಳ ಕಾಲ ಕೆಎಂಎಫ್​ ಅಧ್ಯಕ್ಷ ಹುದ್ದೆಯನ್ನು ಅನುಭವಿಸಿದ್ದ ರೇವಣ್ಣ ಅವರ ಕಪಿಮುಷ್ಟಿಯಿಂದ ಈ ಬಾರಿ ಕೆಎಂಎಫ್​ ಮುಕ್ತಿ ಪಡೆಯಲಿದೆ ಎಂದು ಬಿಜೆಪಿ ನಾಯಕ ಎ ಮಂಜು ತಿಳಿಸಿದ್ದಾರೆ.

ಒಂದೇ ಕುಟುಂಬದ ಹಿಡಿತದಲ್ಲಿದ್ದ ಕೆಎಂಎಫ್​​​ ಸಂಸ್ಥೆಗೆ ಮತ್ತೆ  ಅಧ್ಯಕ್ಷರಾಗಬೇಕೆಂದು ರೇವಣ್ಣ ಪಿತೂರಿ ಮಾಡಿದ್ದರೂ ಆದರೆ ಅದ್ಯಾವುದೂ ಈಡೇರಲಿಲ್ಲ. ಕೆಎಂಎಫ್​​ ಚುನಾವಣೆ ಮುಂದೂಡಿಕೆಗೆ ನಾನೇ ಕಾರಣ. ಚುನಾವಣೆ ಮುಂದೂಡಿಕೆ ಮಾಡುವಂತೆ  ಆಗ ನಾನೇ ಸಿಎಂ ಯಡಿಯೂರಪ್ಪಗೆ  ಹೇಳಿದೆ ಎಂದರು.

ಇದನ್ನು ಓದಿ: ಹಾಸನ ಹಾಲು ಒಕ್ಕೂಟದಿಂದ ಚಿಕ್ಕಮಗಳೂರು ಬೇರ್ಪಡಿಸಲು ಸೂಚನೆ; ರೇವಣ್ಣಗೆ ಶಾಕ್​ ನೀಡಲು ಮುಂದಾದ ಸಿಎಂ

ಕೆಎಂಎಫ್​ನಲ್ಲಿ ರೇವಣ್ಣ ಅಧ್ಯಕ್ಷ ರಾಗಿದ್ದ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಅವರು ಈ ಸ್ಥಾನಕ್ಕೆ ನ್ಯಾಯ ಸಲ್ಲಿಸಿಲ್ಲ. ರೈತರ ದುಡಿಮೆ ಗೆ ಸೂಕ್ತ ಬೆಲೆ ಸಿಗುತ್ತಿರಲಿಲ್ಲ. ಈ ಸಂಸ್ಥೆ ಒಬ್ಬರ ಪಾಲು ಆಗಬಾರದು. ಇದು ಎಲ್ಲ ರೈತರ ಆಸ್ತಿ ಎಂದರು. 
First published:August 31, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ