• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Elections 2023: ಚುನಾವಣೆ ಹೊತ್ತಲ್ಲಿ ಜೆಡಿಎಸ್‌ನ ಮತ್ತೊಂದು ವಿಕೆಟ್ ಪತನ; ದಳಪತಿಗಳಿಗೆ ಶಾಕ್!

Karnataka Elections 2023: ಚುನಾವಣೆ ಹೊತ್ತಲ್ಲಿ ಜೆಡಿಎಸ್‌ನ ಮತ್ತೊಂದು ವಿಕೆಟ್ ಪತನ; ದಳಪತಿಗಳಿಗೆ ಶಾಕ್!

ದಳಪತಿಗಳಿಗೆ ಶಾಕ್

ದಳಪತಿಗಳಿಗೆ ಶಾಕ್

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ (Vishweshwar Hegde Kageri) ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ. ಜೆಡಿಎಸ್ ತೊರೆದ ಬಳಿಕ ಶಿವಲಿಂಗೇಗೌಡರು ಕಾಂಗ್ರೆಸ್ ಸೇರಲಿದ್ದಾರೆ.

 • Share this:

ಬೆಂಗಳೂರು: ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪರ್ವ ಮುಂದುವರಿದಿದೆ. ಗುಬ್ಬಿ ಶಾಸಕ ಎಸ್ಆರ್ ಶ್ರೀನಿವಾಸ್ (SR Srinivas) ಬಳಿಕ ಅರಸಿಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡರು (MLA KM Shivalingegowda) ಜೆಡಿಎಸ್ (JDS) ತೊರೆಯುತ್ತಿದ್ದಾರೆ. ಇಂದು ಶಾಸಕ ಸ್ಥಾನಕ್ಕೆ ಶಿವಲಿಂಗೇಗೌಡರು ರಾಜೀನಾಮೆ ನೀಡಲಿದ್ದಾರೆ. ನೂರಾರು ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರೊಂದಿಗೆ ಶಿರಸಿಗೆ ತೆರಳಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ (Vishweshwar Hegde Kageri) ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ. ಜೆಡಿಎಸ್ ತೊರೆದ ಬಳಿಕ ಶಿವಲಿಂಗೇಗೌಡರು ಕಾಂಗ್ರೆಸ್ ಸೇರಲಿದ್ದಾರೆ.


ಕೆ.ಎಂ.ಶಿವಲಿಂಗೇಗೌಡರು ಸತತ ಮೂರು ಬಾರಿ ಅರಸೀಕೆರೆ ವಿಧಾನಸಭಾ ಕ್ಷೇತ್ರದಿಂದ, ಜೆಡಿಎಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2008, 2013, 2018 ರಲ್ಲಿ ಮೂರು ಬಾರಿ ಜೆಡಿಎಸ್‌ನಿಂದ ಶಾಸಕರಾಗಿದ್ದಾರೆ.
ಪರಪ್ಪನ ಅಗ್ರಹಾರಕ್ಕೆ ಮಾಡಾಳ್ ವಿರೂಪಾಕ್ಷಪ್ಪ


ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಏಪ್ರಿಲ್ 11 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಇದೇ ವೇಳೆ ಮಾಡಾಳ್ ವಿರೂಪಾಕ್ಷಪ್ಪ ಪರ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಲೋಕಾಯುಕ್ತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.


km shivalinge gowda resign, karnataka politics update, km shivalinge gowda politics, km shivalinge gowda speech, kannada news, karnataka news, ಕೆಎಂ ಶಿವಲಿಂಗೇಗೌಡ ರಾಜೀನಾಮೆ, ಕೆಎಂ ಶಿವಲಿಂಗೇಗೌಡ ಭಾಷಣ
ಜೆಡಿಎಸ್‌ ಶಾಸಕ ಶಿವಲಿಂಗೇಗೌಡ


ಜಾಮೀನು ಅರ್ಜಿ ವಿಚಾರಣೆಯನ್ನ ಏಪ್ರಿಲ್ 6 ಕ್ಕೆ ಮುಂದೂಡಲಾಗಿದೆ.. ನ್ಯಾಯಂಗ ಬಂಧನ ಹಿನ್ನೆಲೆ ಮಾಡಾಳ್ ವಿರೂಪಾಕ್ಷಪ್ಪನನ್ನ ಲೋಕಾಯುಕ್ತ ಅಧಿಕಾರಿಗಳು ಪೊಲೀಸ್ ವಾಹನದಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ದಿದ್ದಾರೆ.


ಇದನ್ನೂ ಓದಿ:  Karnataka Election 2023: JDS 2ನೇ ಲಿಸ್ಟ್​​ಗೆ ಕ್ಷಣಗಣನೆ! ಸಿಂ'ಹಾಸನ' ಯಾರಿಗೆ? ಫೈನಲ್ ಮಾಡ್ತೀನಿ, ಒತ್ತಡ ತರಬೇಡಿ ಅಂತ HDD ಸೂಚನೆ

top videos


  ಇನ್ನು ಆರೋಗ್ಯ ಸರಿಯಿಲ್ಲದ ಕಾರಣ ಮಾಡಾಳ್​ ಮನೆಯೂಟ, ಬಿಸಿ ನೀರು, ಮೆಡಿಸಿನ್​ಗೆ ಮನವಿ ಮಾಡಿದ್ರು. ಈ ಹಿನ್ನೆಲೆ ಜೈಲು ಬಳಿ ಮಗ ಮಲ್ಲಿಕಾರ್ಜುನ ಮಡಾಳ್ ಆಗಮಿಸಿ ಮಾತ್ರೆ ಮತ್ತು ಅಗತ್ಯ ವಸ್ತುಗಳನ್ನು ನೀಡಿ ವಾಪಸ್ ತೆರಳಿದ್ದಾರೆ. ​

  First published: