ಬೆಳಗಾವಿ (ಅ. 15): ಉತ್ತರ ಕರ್ನಾಟಕ ಭಾಗದ ಪ್ರಭಾವಿ ಲಿಂಗಾಯತ ನಾಯಕ, ಶಿಕ್ಷಣ ಪ್ರೇಮಿ, ಆರೋಗ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಭಾಕರ ಕೋರೆ (Prabhakar Kore) ಅದ್ಧೂರಿ ಅಮೃತ ಮಹೋತ್ಸವ ಇಂದು ಬೆಳಗಾವಿಯಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಕೇಂದ್ರ ಸಚಿವರು, ಸಿಎಂ (Minister, CM) ಹಾಗೂ ಗಣ್ಯರು ಹಾಜರಿ ಹಾಕಿದ್ದರು. ಕರ್ನಾಟಕ ಅಷ್ಟೇ ಅಲ್ಲ ದೂರದ ದೆಹಲಿ, ಪಕ್ಕದ ಮಹಾರಾಷ್ಟ್ರ-ಗೋವಾದ ಪಕ್ಷಾತೀತವಾಗಿ ರಾಜಕಾರಣಿಗಳು (Politicians) ಸಾಕ್ಷಿ ಆಗಿದ್ರು. ಉಕ ಭಾಗದ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಂಭ್ರಮ ಕಂಡು ಭಾವುಕಾರದ ಪ್ರಭಾಕರ ಕೋರೆ
ಅದ್ಧೂರಿ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಡಾ. ಪ್ರಭಾಕರ ಕೋರೆಗೆ ಪುಸ್ತಕಗಳ ತುಲಭಾರ ನಡೆಸಲಾಯಿತು. ಸಂಭ್ರಮ ಕಂಡು ಭಾವುಕಾರದ ಪ್ರಭಾಕರ ಕೋರೆ ಸಮಾಜ ಮುಖಿ ಕಾರ್ಯ ಮುಂದುವರೆಸುವ ಮಾತನಾಡಿದ್ರು. ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಸಿಎಂ ಬಸವರಾಜ್ ಬೊಮ್ಮಾಯಿ, ಗೋವಾ ಸಿಎಂ ಪ್ರಮೋದ್ ಸಾವಂತ್, ಕೇಂದ್ರ ಸಚಿವರಾದ ಧರ್ಮೆಂದ್ರ ಪ್ರಧಾನ, ಪ್ರಹ್ಲಾದ ಜೋಶಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಜಗದೀಶ ಶೆಟ್ಟರ್, ಸಚಿವರಾದ ಮುರಗೇಶ ನಿರಾಣಿ, ಬೈರತಿ ಬಸವರಾಜ್, ನಾಗೇಶ ಸೇರಿ ರಾಜ್ಯದ ಹಲವು ಸಚಿವರು ಭಾಗಿಯಾಗಿದ್ರು.
ಕೆಎಲ್ಇ ಸಂಸ್ಥೆ ನಿರ್ದೇಶಕರು, ಸಂಸ್ಥೆ ಸಿಬ್ಬಂದಿ, ಸಾವಿರಾರು ಜನರು ಕೋರೆ ಅಮೃತ ಮಹೋತ್ಸವಕ್ಕೆ ಸಾಕ್ಷಿಯಾದ್ರು. ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಡಾ.ಪ್ರಭಾಕರ್ ಕೋರೆ ಅವರು ಕಾರ್ಮೋಡ ವಾತಾವರಣದಂತಹ ಕಠಿಣವಾಗಿದ್ದ ಹಲವಾರು ಸವಾಲುಗಳನ್ನು ಎದುರಿಸಿ, ಕೆ.ಎಲ್.ಇ ಸೊಸೈಟಿಯನ್ನು ಬೆಳೆಸಿದ್ದಾರೆ.
ಇದನ್ನೂ ಓದಿ: Muruga Mutt: ಮುರುಘಾಮಠದಲ್ಲಿ ಪತ್ತೆಯಾದ ಹೆಣ್ಣು ಮಗು ಶಿವಮೂರ್ತಿ ಸ್ವಾಮಿಯದ್ದೇ!? DNA ಟೆಸ್ಟ್ಗೆ ಸಾಮಾಜಿಕ ಕಾರ್ಯಕರ್ತ ಆಗ್ರಹ
ಕೆ.ಎಲ್.ಇ ಸಂಸ್ಥೆ ವಿಶ್ವ ಮಾನ್ಯವಾಗಿ ಬೆಳೆಸಿರುವ ಕೀರ್ತಿ ಕೋರೆ ಅವರಿಗೆ ಸಲ್ಲುತ್ತದೆ ಕೆಎಲ್ಇ ಸಂಸ್ಥೆ ದೇಶದಲ್ಲೇ ದೊಡ್ಡ ಯೂನಿವರ್ಸಿಟಿಯಾಗಿ ಪರಿವರ್ತನೆಯಾಗಿದೆ. ಅದನ್ನು ಕಟ್ಟಲು ಕೋರೆ ಅವರ ಶ್ರಮ ಬಹಳಷ್ಟಿದೆ. ಗ್ರಾಮೀಣ ಬಡ ಜನರಿಗೆ ಶಿಕ್ಷಣ ಒದಗಿಸುವುದು ಅವರ ಮುಖ್ಯ ಗುರಿಯಾಗಿತ್ತು. ತಮ್ಮ ರಾಜಕೀಯ ಜೀವನ ತ್ಯಾಗದ ಜೊತೆಗೆ ಸಮಾಜಮುಖಿ ಕೆಲಸಗಳನ್ನು ಮಾಡಿ ಈ ಸಾಧನೆಯ ಶಿಖರವನ್ನು ಏರಿದ್ದಾರೆ ಎಂದು ಬಣ್ಣಿಸಿದರು.
ಡಾ.ಪ್ರಭಾಕರ್ ಕೋರೆ ಅನೇಕರಿಗೆ ಸ್ಪೂರ್ತಿ
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಕೆಲವು ಜನರನ್ನು ನೋಡಿದ ತಕ್ಷಣ ನಮ್ಮಲ್ಲಿ ಜೀವನೋತ್ಸಾಹ ಉಕ್ಕುತ್ತೆ, ಏನಾದರೂ ಸಾಧಿಸಬೇಕು ಅನಿಸುತ್ತೆ. ಡಾ.ಪ್ರಭಾಕರ್ ಕೋರೆ ಜೀವನ ಇದಕ್ಕೆ ಅದ್ಭುತ ಉದಾಹರಣೆ. ಕೆಎಲ್ಇ ಸಪ್ತರ್ಷಿಗಳು ಭದ್ರ ಬುನಾದಿ ಹಾಕಿದ್ದರು. ಬೆರಳೆಣಿಕೆಯಷ್ಟು ಸಂಸ್ಥೆಗಳಿಂದ ಆರಂಭವಾದ ಕೆಎಲ್ಇ ಏಷ್ಯಾಖಂಡದಲ್ಲೇ ದೊಡ್ಡದಾಗಿ ಬೆಳೆಯಲು ಡಾ.ಪ್ರಭಾಕರ್ ಕೋರೆ ಕಾರಣ.ಡಾ.ಪ್ರಭಾಕರ್ ಕೋರೆ ಫ್ರೀ ವಾರ್ಡ್ ಆಸ್ಪತ್ರೆ ಸ್ಥಾಪಿಸಿ ಬಡವರ ಪಾಲಿನ ದೇವರೆನಿಸಿದ್ದಾರೆ. ಕೆಎಲ್ಇ ಆಸ್ಪತ್ರೆ ಬೆಳಗಾವಿಗೆ ಭೂಷಣ ಪ್ರಾಯವಾಗಿದೆ. ಡಾ.ಪ್ರಭಾಕರ್ ಕೋರೆ ಅಧಿಕಾರವಧಿ ಸಂಸ್ಥೆಯ ಇತಿಹಾಸದಲ್ಲಿ ಸುವರ್ಣಾಕ್ಷರದಿಂದ ಬರೆದಿಡಬೇಕು.
ಡಾ.ಪ್ರಭಾಕರ್ ಕೋರೆ ಕೇವಲ ಕೆಎಲ್ಇ ಚೇರ್ಮನ್ ಅಲ್ಲ. ಕೆಎಲ್ಇ ಸಂಸ್ಥೆ ದೇವಾಲಯ ಆದ್ರೆ, ಆ ದೇವಾಲಯಕ್ಕೆ ಚಿನ್ನದ ಕಳಸ ಇಟ್ಟವರು ಡಾ.ಪ್ರಭಾಕರ್ ಕೋರೆ ಎಂದರು. ಪ್ರಭಾಕರ ಕೋರೆ ಮಾತನಾಡಿ, ರಾಜಕೀಯ ವಲಯದಲ್ಲಿ ನನ್ನ ಬೆಳವಣಿಗೆ ಬದಿಗೊತ್ತಿ ಅನೇಕ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ನಾನು ಕೆ.ಎಲ್.ಇ ಸೊಸೈಟಿಗೆ ಉನ್ನತಿಗೆ ಹೆಚ್ಚು ಒತ್ತು ನೀಡಿದೆ.
ಗ್ರಂಥ, ಪುಸ್ತಕಗಳ ತುಲಾಭಾರ
ಇಂದಿನ ದಿನ ನಮ್ಮ ಬದುಕಿನ ಅತ್ಯಂತ ಮಹತ್ವದ ದಿನವಾಗಿದೆ. ದೇಶ,ವಿದೇಶದಲ್ಲಿ ನಡೆಯುತ್ತಿರುವ ಬಹುದೊಡ್ಡ ಚಿಕಿತ್ಸೆಗಳಾದ, ಮೂತ್ರಪಿಂಡ, ಹೃದಯ ಕಸಿ ಮಾಡುವಷ್ಟು ದೊಡ್ಡ ಆಸ್ಪತ್ರೆಯಾಗಿ ಕೆ.ಎಲ್.ಇ ಆಸ್ಪತ್ರೆ ಸಾಧನೆ ಮಾಡಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಸಹಯೋಗದೊಂದಿಗೆ ರೈತರ ಮಕ್ಕಳಿಗೆ, ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುವು ಎಂದರು. ಇದೇ ಸಂದರ್ಭದಲ್ಲಿ ಡಾ. ಪ್ರಭಾಕರ ಕೋರೆ ಅವರಿಗೆ ಗ್ರಂಥ, ಪುಸ್ತಕಗಳ ತುಲಾಭಾರ ಮಾಡಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ