ರವಿಕೃಷ್ಣಾ ರೆಡ್ಡಿ, ಎನ್.ಆರ್. ರಮೇಶ್ ವಿರುದ್ಧ ಕೆ.ಜೆ. ಜಾರ್ಜ್ ಮಾನನಷ್ಟ ಮೊಕದ್ದಮೆ

ಜಾರ್ಜ್ ಅವರು ತಮ್ಮ ಮಗ ಮತ್ತು ಮಗಳ ಹೆಸರಲ್ಲಿ ಅಕ್ರಮ ಆಸ್ತಿ ಮಾಡಿದ್ದಾರೆ. ವಿದೇಶದಲ್ಲಿ ಬೇನಾಮಿ ಹೆಸರಲ್ಲಿ ಆಸ್ತಿ ಮಾಡಿದ್ಧಾರೆ ಎಂದು ರವಿಕೃಷ್ಣಾ ರೆಡ್ಡಿ ಇಡಿಗೆ ದೂರು ಕೊಟ್ಟಿದ್ಧಾರೆ.

news18
Updated:November 25, 2019, 5:03 PM IST
ರವಿಕೃಷ್ಣಾ ರೆಡ್ಡಿ, ಎನ್.ಆರ್. ರಮೇಶ್ ವಿರುದ್ಧ ಕೆ.ಜೆ. ಜಾರ್ಜ್ ಮಾನನಷ್ಟ ಮೊಕದ್ದಮೆ
ಕೆಜೆ ಜಾರ್ಜ್​
  • News18
  • Last Updated: November 25, 2019, 5:03 PM IST
  • Share this:
ಬೆಂಗಳೂರು(ನ. 25): ನನ್ನ ವಿರುದ್ಧ ಆಧಾರರಹಿತ ಆರೋಪ ಮಾಡಲಾಗಿದೆ. ನನ್ನ ತೇಜೋವಧೆಯಾಗಿದೆ ಎಂದು ಆಪಾದಿಸಿ ಮಾಜಿ ಸಚಿವ ಕೆ.ಜೆ. ಜಾರ್ಜ್ ಅವರು ರವಿಕೃಷ್ಣಾ ರೆಡ್ಡಿ ಮತ್ತು ಎನ್.ಆರ್. ರಮೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್​​ನಲ್ಲಿ ಜಾರ್ಜ್ ಅವರು ಪಿಸಿಆರ್ (ಖಾಸಗಿ ದೂರು) ದಾಖಲಿಸಿದ್ದಾರೆ.

ನನ್ನ ವಿರುದ್ಧ ಆಧಾರ ರಹಿತ ಹಾಗೂ ಸತ್ಯಕ್ಕೆ ದೂರವಾದ ಆರೋಪಗಳನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಇದರಿಂದ ನನ್ನ ತೇಜೋವಧೆ ಮತ್ತು ಮಾನನಷ್ಟ ಆಗಿದೆ. ಈ ಹಿನ್ನೆಲೆಯಲ್ಲಿ ಇಂದು ಮಾನ ನಷ್ಟ ಪ್ರಕರಣ ಹೂಡಿದ್ದೇನೆ. ಸೆಕ್ಷನ್ 499 ಮತ್ತು 500 ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದೇನೆ ಎಂದು ಮಾಜಿ ಸಚಿವರು ತಿಳಿಸಿದ್ಧಾರೆ.

ಇದನ್ನೂ ಓದಿ: ನೀವು ಸಿಎಂ ಆಗುವುದಾದರೆ ಮಾತ್ರ ಕಾಂಗ್ರೆಸ್​ಗೆ ವೋಟು: ದಲಿತ ಮತದಾರರ ಮಾತಿಗೆ ಜಿ. ಪರಮೇಶ್ವರ್ ಶಾಕ್

ಲಂಚಮುಕ್ತ ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ರವಿಕೃಷ್ಣಾ ರೆಡ್ಡಿ ಅವರು ಕೆ.ಜೆ. ಜಾರ್ಜ್ ಅವರಿಂದ ಅಕ್ರಮ ಆಸ್ತಿ ಗಳಿಕೆಯಾಗಿದೆ ಎಂದು ಆರೋಪಿಸುತ್ತಾ ಬಂದಿದ್ಧಾರೆ. ಜಾರ್ಜ್ ಅವರು ತಮ್ಮ ಮಗ ಮತ್ತು ಮಗಳ ಹೆಸರಲ್ಲಿ ಅಕ್ರಮ ಆಸ್ತಿ ಮಾಡಿದ್ದಾರೆ. ವಿದೇಶದಲ್ಲಿ ಬೇನಾಮಿ ಹೆಸರಲ್ಲಿ ಆಸ್ತಿ ಮಾಡಿದ್ಧಾರೆ ಎಂದು ಇಡಿಗೆ ದೂರು ಕೊಟ್ಟಿರುವ ರವಿ ಕೃಷ್ಣ ರೆಡ್ಡಿ, ವಿದೇಶಗಳಲ್ಲಿರುವ ಜಾರ್ಜ್ ಆಸ್ತಿ ಬಗ್ಗೆ ತನಿಖೆ ನಡೆಸಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ತಮ್ಮ ವಿರುದ್ಧದ ಅಕ್ರಮ ಆಸ್ತಿ ಗಳಿಕೆಯ ಆರೋಪಗಳನ್ನು ಕೆ.ಜೆ. ಜಾರ್ಜ್ ಸಾರಸಗಟಾಗಿ ನಿರಾಕರಿಸುತ್ತಾ ಬಂದಿದ್ಧಾರೆ. ತಾವು ಅಕ್ರಮ ಹಾದಿಯಲ್ಲಿ ಆಸ್ತಿ ಸಂಪಾದನೆ ಮಾಡಿಲ್ಲ. ನ್ಯಾಯಯುತವಾಗಿ ವ್ಯವಹಾರ ಮಾಡಿಕೊಂಡು, ತೆರಿಗೆ ಕಟ್ಟುಕೊಂಡು ಬಂದಿದ್ದೇನೆ ಎಂದು ಜಾರ್ಜ್ ಹಲವು ಬಾರಿ ಸ್ಪಷ್ಟನೆ ಕೊಟ್ಟಿದ್ಧಾರೆ. ಡಿವೈಎಸ್​ಪಿ ಗಣಪತಿ ಸಾವು ಪ್ರಕರಣದಲ್ಲಿ ಸಿಬಿಐನಿಂದ ಕ್ಲೀನ್ ಚಿಟ್ ಪಡೆದಿರುವ ಜಾರ್ಜ್ ಅವರು ಈಗ ಹೊಸ ಆತ್ಮವಿಶ್ವಾಸದಲ್ಲಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 25, 2019, 5:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading