ವಿದೇಶದಲ್ಲಿ ಬೇನಾಮಿ ಹಣ ಹೂಡಿಕೆ ಪ್ರಕರಣ: ಡಿಕೆಶಿ ಬೆನ್ನಲ್ಲೀಗ ಕೆ.ಜೆ ಜಾರ್ಜ್​​ಗೆ ‘ಇಡಿ‘ ವಿಚಾರಣೆ ​​

ವಿಚಾರಣೆಗೆ ಮುನ್ನ ಸುದ್ದಿಗಾರರೊಂದಿಗೆ ಮಾತಾಡಿದ ಮಾಜಿ ಸಚಿವ ಕೆ.ಜೆ ಜಾರ್ಜ್​​, ದೇಶದ ಕಾನೂನಿನ ಮೇಲೆ ನಂಬಿಕೆ ಇದೆ. ನನ್ನ ವ್ಯವಹಾರಗಳು ಪಾರದರ್ಶಕವಾಗಿವೆ. ಜಾರಿ ನಿರ್ದೇಶನಾಲಯ ನೋಟಿಸ್​​ ನೀಡಿದಂತೆ ವಿಚಾರಣೆಗೆ ಹಾಜರಾಗುತ್ತಿದ್ದೇನೆ. ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಎಂದರು.

news18-kannada
Updated:January 16, 2020, 1:17 PM IST
ವಿದೇಶದಲ್ಲಿ ಬೇನಾಮಿ ಹಣ ಹೂಡಿಕೆ ಪ್ರಕರಣ: ಡಿಕೆಶಿ ಬೆನ್ನಲ್ಲೀಗ ಕೆ.ಜೆ ಜಾರ್ಜ್​​ಗೆ ‘ಇಡಿ‘ ವಿಚಾರಣೆ ​​
ಕೆಜೆ ಜಾರ್ಜ್​
  • Share this:
ಬೆಂಗಳೂರು(ಜ.16): ಮಾಜಿ ಸಚಿವ ಡಿ.ಕೆ ಶಿವಕುಮಾರ್​​ ಬೆನ್ನಲ್ಲೀಗ ಕಾಂಗ್ರೆಸ್​ನ ಪ್ರಮುಖ ನಾಯಕ ಕೆ.ಜೆ ಜಾರ್ಜ್​​​​ಗೆ ಇ.ಡಿ ಸಂಕಷ್ಟ ಎದುರಾಗಿದೆ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ನೀಡಿದ್ದ ದೂರಿನ ಆಧಾರದ ಮೇರೆಗೆ ಕೆ.ಜೆ ಜಾರ್ಜ್​​ಗೆ ವಿಚಾರಣೆಗೆ ಹಾಜರಾಗುವಂತೆ ನಿನ್ನೆ ​​ಜಾರಿ ನಿರ್ದೇಶನಾಲಯ ನೋಟಿಸ್​ ನೀಡಿತ್ತು. ಅದರಂತೆಯೀಗ ಕೆ.ಜೆ ಇಂದು ವಿಚಾರಣೆಗೆ ಹಾಜರಾಗಿದ್ದಾರೆ. ತನ್ನ ಪುತ್ರ ಮತ್ತು ಪತ್ನಿಯೊಂದಿಗೆ ಕೆ.ಜೆ ಜಾರ್ಜ್​​ ಶಾಂತಿನಗರದಲ್ಲಿರುವ ಇಡಿ ಕಚೇರಿಗೆ ತಮ್ಮ ಲೆಕ್ಕ ಪರಿಶೋಧಕರ ಸಮೇತ ವಿಚಾರಣೆಗೆ ಹಾಜರಾಗಿದ್ದರು.

ವಿಚಾರಣೆಗೆ ಮುನ್ನ ಸುದ್ದಿಗಾರರೊಂದಿಗೆ ಮಾತಾಡಿದ ಮಾಜಿ ಸಚಿವ ಕೆ.ಜೆ ಜಾರ್ಜ್​​, ದೇಶದ ಕಾನೂನಿನ ಮೇಲೆ ನಂಬಿಕೆ ಇದೆ. ನನ್ನ ವ್ಯವಹಾರಗಳು ಪಾರದರ್ಶಕವಾಗಿವೆ. ಜಾರಿ ನಿರ್ದೇಶನಾಲಯ ನೋಟಿಸ್​​ ನೀಡಿದಂತೆ ವಿಚಾರಣೆಗೆ ಹಾಜರಾಗುತ್ತಿದ್ದೇನೆ. ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಎಂದರು.

ಈ ಹಿಂದೆ ಸಾಮಾಜಿಕ ಹೋರಾಟಗಾರ ರವಿಕೃಷ್ಣಾ ರೆಡ್ಡಿ ಕೆ.ಜೆ ಜಾರ್ಜ್​​ ವಿರುದ್ಧ ದೂರು ನೀಡಿದ್ದರು. ಮಾಜಿ ಸಚಿವ ಕೆ.ಜೆ ಜಾರ್ಜ್​​​ ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಿದ್ದಾರೆ. ತಮ್ಮ ಸಂಬಂಧಿಕರ ಹೆಸರಿನಲ್ಲಿ ವಿದೇಶದಲ್ಲಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಆಸ್ಟ್ರೇಲಿಯಾ, ಅಮೆರಿಕಾ ಸೇರಿದಂತೆ ವಿದೇಶಗಳಲ್ಲಿ ಜಾರ್ಜ್​​ ಬೇನಾಮಿ ಆಸ್ತಿ ಹೊಂದಿದ್ದಾರೆ. ಆದರೆ, ಚುನಾವಣೆ ಆಯೋಗಕ್ಕೆ ನೀಡಿರುವ ಮಾಹಿತಿಯಲ್ಲಿ ತಮ್ಮ ಬೇನಾಮಿ ಆಸ್ತಿ ಮತ್ತು ವಿದೇಶಿ ಹೂಡಿಕೆ ಬಗ್ಗೆ ಜಾರ್ಜ್​​ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಈ ಸಂಬಂಧ ಅಗತ್ಯ ದಾಖಲೆಗಳನ್ನೂ ಕೂಡ ಇಡಿಗೆ ಸಲ್ಲಿಸಿದ್ದರು.

ಇದನ್ನೂ ಓದಿ: ಜ.18ಕ್ಕೆ ರಾಜ್ಯಕ್ಕೆ ಅಮಿತ್​​ ಶಾ: ಸಂಪುಟ ವಿಸ್ತರಣೆಗೆ ಸಿಗುತ್ತಾ ಹಸಿರು ನಿಶಾನೆ?

ಜಾರ್ಜ್​​​​ ವಿರುದ್ಧ ಕೂಡಲೇ ತನಿಖೆ ಆರಂಭಿಸಬೇಕು. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ 1999ರಡಿ ಕಠಿಣ ಕ್ರಮ ಕೈಗೊಳ್ಳಬೇಕು. ದೂರು ನೀಡಿ ಎರಡು ತಿಂಗಳಾದರೂ ಇನ್ನೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇಂದಿನಿಂದಲೇ ಇಡಿ ಜಾರ್ಜ್​​ ವಿರುದ್ಧ ತನಿಖೆಗೆ ಮುಂದಾಗಬೇಕು ಎಂದು ರವಿಕೃಷ್ಣಾ ರೆಡ್ಡಿ ಇಡಿ ಅಧಿಕಾರಿಗಳಿಗೆ ಆಗ್ರಹಿಸಿದ್ದರು.

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ನೀಡಿದ್ದ ದೂರಿನ ಅನ್ವಯ ಜಾರ್ಜ್​​ ವಿರುದ್ಧ ಇಡಿ ತನಿಖೆಗೆ ನಡೆಸುತ್ತಿದೆ. ಡಿಕೆಶಿ ಮತ್ತು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಕೇಸ್​​ ರೀತಿಯಲ್ಲೇ ಜಾರ್ಜ್​​ ಪ್ರಕರಣವೂ ತನಿಖೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
First published:January 16, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading