Kitturu ಅರಮನೆ ಮರುಸೃಷ್ಟಿ ಜಾಗ ಗುರುತು; ಜಿಲ್ಲಾಡಳಿತದ ನಿರ್ಧಾರ ವಿರುದ್ಧ ಆಗಸ್ಟ್ 2ರಂದು ಕಿತ್ತೂರು ಬಂದ್

ಈಗ ಬೆಳಗಾವಿಯ ಜಿಲ್ಲಾಡಳಿತ ತೆಗೆದುಕೊಂಡಿರುವ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಅರಮನೆ ನಿರ್ಮಾಣಕ್ಕೆ ಬಚ್ಚನಕೇರಿ ಗ್ರಾಮದಲ್ಲಿರುವ 57 ಎಕರೆ ಜಾಗ ಮೀಸಲಿಡಲು ನಿರ್ಧರಿಸಲಾಗಿದೆ.

ಕಿತ್ತೂರು ಅರಮನೆ

ಕಿತ್ತೂರು ಅರಮನೆ

  • Share this:
ಬೆಳಗಾವಿ: ಕಿತ್ತೂರಲ್ಲಿರುವ ಕೋಟೆ (Kittur Fort) ಪಕ್ಕವೇ ಅರಮನೆ (Palace) ಮರುಸೃಷ್ಟಿ ನಿರ್ಮಾಣದ ಬೇಡಿಕೆ ಇದೆ. ಆದರೆ ಕಿತ್ತೂರು ತಾಲೂಕಿನ ಬಚ್ಚನಕೇರಿ ಗ್ರಾಮದಲ್ಲಿ (Bachchnakeri Village) ಅರಮನೆ ಪ್ರತಿರೂಪ ನಿರ್ಮಾಣಕ್ಕೆ ಜಿಲ್ಲಾಡಳಿತ ನಿರ್ಧಾರಿಸಿದೆ. ಇದು ಈ ಭಾಗದ ಸ್ವಾಮೀಜಿಗಳು (Swamiji) ಹಾಗೂ ಚನ್ನಮ್ಮಾ ಅಭಿಮಾನಿಗಳ (Channammaji Fans) ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಬೆಳಗಾವಿ (Belagavi) ಜಿಲ್ಲಾಡಳಿತದ ನಿರ್ಧಾರ ಖಂಡಿಸಿ ಆಗಸ್ಟ್ 2 ರಂದು ಕಿತ್ತೂರು ಬಂದ್‍ಗೆ (kittur Bandh) ಕರೆ ನೀಡಲಾಗಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ (Azadi Ka Amtith Mahotsava) ಸಂದರ್ಭದಲ್ಲಿ ವಿವಾದ ಏರ್ಪಟ್ಟಿದೆ.

ಕಿತ್ತೂರು ಕೋಟೆಯ ಪ್ರತಿರೂಪದ ಅರಮನೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದಕ್ಕೆ ಈ ಭಾಗದ ಜನರು ಖುಷಿ ಪಟ್ಟಿದ್ದರು. ಹಾಳು ಬಿದ್ದ ಕೋಟೆ ಮತ್ತೆ ಪುನರ್ ನಿರ್ಮಾಣ ಆಗುತ್ತದೆ, ನಮ್ಮ ಚನ್ನಮ್ಮಾಜಿ ಆಳಿದ ಕೋಟೆಯನ್ನು ನಾವು ಕಣ್ತುಂಬಿಕೊಳ್ಳಬಹುದು ಎಂದುಕೊಂಡಿದ್ದರು.

ಜಿಲ್ಲಾಡಳಿತದ ನಿರ್ಧಾರಕ್ಕೆ ತೀವ್ರ ವಿರೋಧ

ಆದರೆ ಈಗ ಬೆಳಗಾವಿಯ ಜಿಲ್ಲಾಡಳಿತ ತೆಗೆದುಕೊಂಡಿರುವ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಅರಮನೆ ನಿರ್ಮಾಣಕ್ಕೆ ಬಚ್ಚನಕೇರಿ ಗ್ರಾಮದಲ್ಲಿರುವ 57 ಎಕರೆ ಜಾಗ ಮೀಸಲಿಡಲು ನಿರ್ಧರಿಸಲಾಗಿದೆ. ಅರಮನೆ ನಿರ್ಮಾಣಕ್ಕೆ ಸರ್ಕಾರಿ ಜಾಗ ಕಿತ್ತೂರು ಪ್ರಾಧಿಕಾರಕ್ಕೆ ನೀಡಲು ಸರ್ಕಾರ ಉದ್ದೇಶಿಸಿದೆ.

ಈ ಸಂಬಂಧ ಬೈಲಹೊಂಗಲ ಉಪವಿಭಾಗಾಧಿಕಾರಿಗೆ ಜಿಲ್ಲಾಧಿಕಾರಿಗಳು ಪತ್ರ ಕೂಡ ಬರೆದಿದ್ದಾರೆ. ಈ ಸಂಬಂಧ ಆಕ್ಷೇಪಗಳಿದ್ದರೆ ಸಮರ್ಥನಿಯ ಕಾರಣ ನೀಡಲು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:  ಮಹಾಮಳೆಗೆ ಕುಸಿದ ಐತಿಹಾಸಿಕ ಕಿತ್ತೂರು ರಾಣಿ ಚೆನ್ನಮ್ಮ ಕೋಟೆ

ಕಿತ್ತೂರು ಬಂದ್‍ಗೆ ಕರೆ

ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಜಿಲ್ಲಾಡಳಿತ ಅವಕಾಶ ನೀಡಿದೆ. ಇದೀಗ ಬಚ್ಚನಕೇರಿಯಲ್ಲಿ ಅರಮನೆ ನಿರ್ಮಾಣಕ್ಕೆ ಮುಂದಾಗಿರುವ ಜಿಲ್ಲಾಡಳಿತ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕಿತ್ತೂರು ಅರಮನೆಯಲ್ಲಿಯೇ ಕೋಟೆಯ ಪ್ರತಿರೂಪ ನಿರ್ಮಾಣ ಆಗಬೇಕು ಎಂದು ಆಗ್ರಹಿಸಿ ಆಗಸ್ಟ್ 2ಕ್ಕೆ ಕಿತ್ತೂರು ಬಂದ್‍ಗೆ ಕರೆ ನೀಡಲಾಗಿದೆ.

ಐತಿಹಾಸಿಕ ಕಿತ್ತೂರು ಕೋಟೆಯ ಪ್ರತಿರೂಪ ಅರಮನೆ ಪಟ್ಟಣದಲ್ಲಿಯೇ ನಿರ್ಮಿಸಬೇಕು ಎಂದು ಆಗ್ರಹಿಸಿ ಕಿತ್ತೂರು ಪಟ್ಟಣ ಬಂದ್ ಮಾಡಲು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿ ಪಂಚಾಕ್ಷರಿ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ನಿಚ್ಚಣಕಿಯ ಮಡಿವಾಳೇಶ್ವರ ಮಠದಿಂದ ಚನ್ನಮ್ಮ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಬಳಿಕ ಬೆಳಗಾವಿಗೆ ಆಗಮಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.

10 ಸಾವಿರ ಜನ ಭಾಗಿಯಾಗಲು ಕರೆ

ಪ್ರತಿಭಟನೆಯಲ್ಲಿ 10 ಸಾವಿರಕ್ಕೂ ಅಧಿಕ ಜನರು ಸೇರುವಂತೆ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮನವಿ ಮಾಡಿಕೊಂಡಿದ್ದಾರೆ.

ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಬ್ರಿಟಿಷ್ ವಿರುದ್ಧ ಹೋರಾಟ ಮಾಡಿದ್ದು ಕಿತ್ತೂರು ರಾಣಿ ಚನ್ನಮ್ಮ. ಕಪ್ಪು ಕಾಣಿಕೆ ವಿರುದ್ಧ ಧ್ವನಿ ಎತ್ತಿ, ಬ್ರಿಟಿಷ್ ಅಧಿಕಾರಿಯನ್ನು ಕೊಂದದ್ದು ಇತಿಹಾಸ. ರಾಣಿಯ ನಂತರವು ಭಂಟ ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದರು.

ಇದನ್ನೂ ಓದಿ:   Kittur Rani Chennamma: ಕಿತ್ತೂರು ರಾಣಿ ಚೆನ್ನಮ್ಮ ಜನ್ಮಸ್ಥಳ ಪಾಳುಬಿದ್ದಿದೆ! ಇಲ್ಲಿದೆ ನೋಡಿ ವಿಡಿಯೋ

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ವಿವಾದ ಸೃಷ್ಟಿಯಾಗಿದೆ‌. ಇದನ್ನು ಜಿಲ್ಲಾಡಳಿತ, ಶಾಸಕರು ಯಾವ ರೀತಿ ಇತ್ಯರ್ಥ ಮಾಡಲಿದ್ದಾರೆ ಎಂಬುದು ಕಾದು ನೋಡಬೇಕು.

10 ಕೋಟಿ ಅನುದಾನ

ಕಿತ್ತೂರು ಐತಿಹಾಸಿಕ ತಾಣಗಳ ಅಭಿವೃದ್ಧಿಗಾಗಿ ಆಯವ್ಯಯದಲ್ಲಿ 50 ಕೋಟಿ ರೂ. ಒದಗಿಸುವುದಾಗಿ ಘೋಷಿಸಲಾಗಿದೆ. ಇದಕ್ಕೆ 2021-22ರಲ್ಲಿ 10 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಇದು ಬೆಳಗಾವಿ ಭಾಗದಲ್ಲಿ ಪ್ರವಾಸೋದ್ಯಮದ ಬೆಳವಣಿಗೆ ಹಾಗೂ ಇತರೇ ಸಂಗತಿಗಳ ಅಭಿವೃದ್ದಿಗೆ ನೆರವಾಗಲಿದೆ.

ಈ ಕ್ರಿಯಾ ಯೋಜನೆಯಡಿ ರಾಣಿ ಚೆನ್ನಮ್ಮನವರ ಸ್ಮಾರಕ ಭವನ ನಿರ್ಮಾಣ, ಚೌಕಿಮಠ ಗದ್ದುಗೆ ಅಭಿವೃದ್ಧಿ ಹಾಗೂ ಕಿತ್ತೂರು ಸಂಸ್ಥಾನದ ಅರಮನೆಯ ಪ್ರತಿರೂಪ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿತ್ತು.
Published by:Mahmadrafik K
First published: