ಮುಂದುವರೆದ ಕೆಶಿಪ್ ಶಿಫ್ಟ್ ಹಗ್ಗ ಜಗ್ಗಾಟ..

news18
Updated:August 14, 2018, 12:31 PM IST
ಮುಂದುವರೆದ ಕೆಶಿಪ್ ಶಿಫ್ಟ್ ಹಗ್ಗ ಜಗ್ಗಾಟ..
  • Advertorial
  • Last Updated: August 14, 2018, 12:31 PM IST
  • Share this:
- ಚಂದ್ರಕಾಂತ್ ಸುಗಂಧಿ, ನ್ಯೂಸ್ 18ಕನ್ನಡ 

 ಬೆಳಗಾವಿ ( ಆಗಸ್ಟ್ 14) : ಬೆಳಗಾವಿಯ ಕೆಶಿಪ್ ಕಚೇರಿ ಹಾಸನಕ್ಕೆ ಎತ್ತಂಗಡಿ ಮಾಡಿ ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆ ಆದೇಶ ಹೊರಡಿಸಿದೆ. ಆದರೇ ಇದಕ್ಕೆ ಬೆಳಗಾವಿ ಭಾಗದಲ್ಲಿ ವ್ಯಾಪಕ ಟೀಕೆ ಟಿಪ್ಪಣಿಗಳು ಕೇಳಿ ಬರುತ್ತಿದೆ. ಕಾಂಗ್ರೆಸ್ ಶಾಸಕರೇ ಸರ್ಕಾರ ವಿರುದ್ಧ ತಿರುಗಿ ಬಿದ್ದಿದ್ದು, ಯಾವುದೇ ಕಾರಣಕ್ಕೆ ಕಚೇರಿ ಸ್ಥಳಾಂತರಕ್ಕೆ ಬಿಡಲ್ಲ ಎಂದಿದ್ದಾರೆ.

ಬೆಳಗಾವಿಯ ಸುವರ್ಣ ಸೌಧಕ್ಕೆ ಕಚೇರಿ ಮುಖ್ಯ ಕಚೇರಿ ಸ್ಥಳಾಂತರಿಸಬೇಕು ಎಂಬ ಕೂಗು ಬಲವಾಗಿದೆ. ಆದರೇ ಈ ನಡುವೆ ಬೆಳಗಾವಿಯಲ್ಲಿ ಇರೋ ಕಚೇರಿಯೊಂದು ಹಾಸನಕ್ಕೆ ಎತ್ತಂಗಡಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದು ಉತ್ತರ ಕರ್ನಾಟಕ ಭಾಗದ ಜನರ ಕೆಂಗಣ್ಣಿಗೆ ಗುರಿಯಾಗಿದೆ.

ಈ ಎತ್ತಂಗಡಿ ಹಿಂದೆ ಲೋಕೋಪಯೋಗಿ ಇಲಾಖೆಯ ಸಚಿವ ಹೆಚ್. ಡಿ. ರೇವಣ್ಣ ಇದ್ದಾರೆ ಎಂಬ ಆರೋಪಗಳು ಸಹ ಕೇಳಿ ಬಂದಿವೆ. ಇನ್ನೂ ಯಾವುದೇ ಕಾರಣಕ್ಕೆ ಕೆಶಿಪ್ ಕಚೇರಿ ಹಾಸನಕ್ಕೆ ಎತ್ತಂಗಡಿ ಮಾಡಬಾರದು ಎಂದು ಬೆಳಗಾವಿಯಲ್ಲಿ ಇಂದು ಉತ್ತರ ಕರ್ನಾಟಕ ವಿಕಾಸ ವೇದಿಕೆ ಕಾರ್ಯಕರ್ತರು ಧರಣಿ ನಡೆಸಿದ್ದರು. ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ಮಾಡಿ, ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದ್ದಾರೆ.

ಇನ್ನೂ ಬೆಳಗಾವಿಯ ವಿಭಾಗ ಮಟ್ಟಕ ಕೆಶಿಪ್ ಕಚೇರಿ ಹಾಸನಕ್ಕೆ, ಬಸವನ ಬಾಗೇವಾಡಿಯ ಉಪ ವಿಭಾಗದ ಕೆಶಿಪ್ ಕಚೇರಿ ಬೇಲೂರಿಗೆ ಎತ್ತಂಗಡಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದಕ್ಕೆ ಸ್ವತಃ ಕಾಂಗ್ರೆಸ್ ಶಾಸಕರಿಂದಲೇ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಬೆಳಗಾವಿಯಲ್ಲಿ ಮಾತನಾಡಿದ ಶಾಸಕ ಸತೀಶ್ ಜಾರಕಿಹೊಳಿ, ಬೆಳಗಾವಿಯ ಕೆಶಿಪ್ ಕಚೇರಿಯನ್ನು ಹಾಸನಕ್ಕೆ ಶಿಫ್ಟ್ ಆಗಲು ಬಿಡಲ್ಲ. ಕೆಶಿಪ್ ಮಾಡುವಂತಹ ಅನೇಕ ಕೆಲಸ ನಮ್ಮಲ್ಲಿ ಬಾಕಿ ಉಳಿದಿದೆ. ಈ ಸಂದರ್ಭದಲ್ಲಿ ಕೆಶಿಪ್ ಕಚೇರಿ ಸ್ಥಳಾಂತರ ಮಾಡಬಾರದು. ಕಚೇರಿ ಇಲ್ಲಿಯೇ ಉಳಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇವೆ. ಈ ಬಗ್ಗೆ ಸಿಎಂ ಎಚ್ ಡಿ ಕುಮಾರಸ್ವಾಮಿ ಗಮನ ಸೆಳೆಯುತ್ತೇವೆ ಎಂದರು

ಈ ಎಲ್ಲಾ ಕಚೇರಿಗಳ ಹುದ್ದೆಗಳ ಸಮೇತವಾಗಿ ಕಚೇರಿ ಸ್ಥಳಾಂತರಕ್ಕೆ ಆದೇಶ ಹೊರಡಿಸಲಾಗಿದೆ. ಸಮ್ಮಿಶ್ರ ಸರ್ಕಾರದ ಸೂಪರ್ ಸಿಎಂ ಎಂದೇ ಬಿಂಬಿತವಾಗಿರೋ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಪ್ರಭಾವದಿಂದಲೇ ಈ ಆದೇಶ ಹೊರ ಬಿದ್ದಿದೆ. ಇದು ಉತ್ತರ ಕರ್ನಾಟಕ ಭಾಗದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಂಡು ಕೆಶಿಪ್ ಕಚೇರಿ ಸ್ಥಳಾಂತರ ಕೈ ಬಿಡಬೇಕು. ಇಲ್ಲವಾದಲ್ಲಿ ಇದು ಪ್ರತ್ಯೇಕ ರಾಜ್ಯದ ಕೂಗಿಗೆ ಸರ್ಕಾರವೇ ಆಸ್ಪದ ನೀಡಿದಂತೆ ಆಗುತ್ತದೆ.
Loading...

 
First published:August 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...