Kiran Mazumdar: ಬೆಂಗಳೂರಿನ ಹದಗೆಟ್ಟ ರಸ್ತೆ ಬಗ್ಗೆ ಕಿರಣ್ ಮಂಜುಂದಾರ್ ಟ್ವೀಟ್; ರಾಜಕಾರಣಿಗಳ ವಿರುದ್ಧ ಕಿಡಿ

ಶ್ರೀರಾಮ್‌ ಬಿಎನ್‌ ಎನ್ನುವವರು ಟ್ವೀಟ್‌ ಮೂಲಕ ಹಂಚಿಕೊಂಡಿದ್ದರು. ಈ ವಿಡಿಯೋವನ್ನು ರಿಟ್ವೀಟ್ ಮಾಡಿರುವ ಷಾ, 'ಇದು ಆಘಾತಕಾರಿ ಮತ್ತು ನಾಚಿಕೆಗೇಡು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಿರಣ್​ ಮಂಜುಂದಾರ್​, ಬೆಂಗಳೂರು ರಸ್ತೆ

ಕಿರಣ್​ ಮಂಜುಂದಾರ್​, ಬೆಂಗಳೂರು ರಸ್ತೆ

  • Share this:
ಬೆಂಗಳೂರು (ಜೂ 8): ರಾಜಧಾನಿ ಬೆಂಗಳೂರಲ್ಲಿ (Bengaluru) ಅನೇಕ ರಸ್ತೆಗಳು (Road) ಗುಂಡಿಬಿದಿದ್ದು, ಹದಗೆಟ್ಟಿದ್ದು, ವಾಹನಗಳು ರಸ್ತೆಗಳಿದ್ರೆ ಮನೆ ತಲುಪೋ ವೇಳೆಗೆ ಸವಾರರು ಬೇಸತ್ತು ಹೋಗಿರುತ್ತಾರೆ ಹದಗೆಟ್ಟ ರಸ್ತೆಗಳ ಬಗ್ಗೆ ಕಳೆದ ಕೆಲ ದಿನಗಳ ಹಿಂದೆ ಟ್ವೀಟ್ (Tweet) ಮೂಲಕ ಬೇಸರ ಹೊರಹಾಕಿದ್ದ ಬಯೋಕಾನ್​​ ಮುಖ್ಯಸ್ಥೆ ಕಿರಣ್​​ ಮಜುಂದಾರ್​ ಷಾ (Kiran Mazumdar Shaw), ಇದೀಗ ಮತ್ತೊಮ್ಮೆ ಅದೇ ವಿಚಾರವನ್ನಿಟ್ಟುಕೊಂಡು ಟ್ವೀಟ್ ಮಾಡಿದ್ದಾರೆ.

ನೈಸ್​​ ರಸ್ತೆ ಜಂಕ್ಷನ್​ ಬಳಿ ಹತ್ತಾರು ಗುಂಡಿ

ಬೆಂಗಳೂರು-ಮೈಸೂರು ನಡುವಿನ ರಸ್ತೆಯ ನೈಸ್​​ ರಸ್ತೆ ಜಂಕ್ಷನ್​ ಸಮೀಪದಲ್ಲಿ ಹತ್ತಾರು ಗುಂಡಿಗಳು ಕಾಣಿಸಿ ಕೊಂಡಿರುವ ವಿಡಿಯೋ ತುಣುಕನ್ನು ಶ್ರೀರಾಮ್‌ ಬಿಎನ್‌ ಎನ್ನುವವರು ಟ್ವೀಟ್‌ ಮೂಲಕ ಹಂಚಿಕೊಂಡಿದ್ದರು. ಈ ವಿಡಿಯೋವನ್ನು ರಿಟ್ವೀಟ್ ಮಾಡಿರುವ ಷಾ, 'ಇದು ಆಘಾತಕಾರಿ ಮತ್ತು ನಾಚಿಕೆಗೇಡು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.



ರಾಜಕಾರಣಿಗಳಿಗೆ ನಾಚಿಕೆ ಆಗ್ಬೇಕು

ಕಳಪೆ ರಸ್ತೆಗಳ ದುಸ್ಥಿತಿ ಆನೇಕಲ್​ ರಾಜಕಾರಣಿಗಳಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಬಯೋಕಾನ್ ಮುಖ್ಯಸ್ಥೆ, ಸರ್ಜಾಪುರ ಸುತ್ತಮುತ್ತಲಿನ ಕೆಟ್ಟ ರಸ್ತೆಗಳ ಬಗ್ಗೆ ಟ್ವೀಟ್ ಮಾಡಿದ್ದರು.

ಹಿಂದೆ ಟ್ವೀಟ್​ ಮಾಡಿ ಛೀಮಾರಿ ಹಾಕಿದ್ದ ಕಿರಣ್​

ಆನೇಕಲ್ ತಾಲೂಕಿನ ಹುಸೂರು-ಸರ್ಜಾಪುರ ರಸ್ತೆ ಸಂಚಾರ ಮಾಡದಿರುವಷ್ಟು ಹದಗೆಟ್ಟಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಉತ್ತಮ ರಸ್ತೆ ಸೌಕರ್ಯ ನೀಡಲು ಸಾಧ್ಯವಾಗದಿದ್ದರೆ ಸರ್ಕಾರ ಬಸ್ ಡಿಪೋ, ವಸತಿ ಗೃಹಗಳನ್ನು ಇಲ್ಲಿ ಯಾಕೆ ನಿರ್ಮಿಸಬೇಕಿತ್ತು ಎಂದು ಖಾರವಾಗಿ ಪ್ರಶ್ನಿಸಿದ್ದರು.

ಹಿಂದೆ ಬೊಮ್ಮಾಯಿಗೆ ಪತ್ರ ಬರೆದಿದ್ದ ಕಿರಣ್​ ಮಜುಂದಾರ್​

ರಾಜ್ಯದಲ್ಲಿ ಧಾರ್ಮಿಕ ವಿಭಜನೆ ಬಿಕ್ಕಟ್ಟನ್ನು ತಡೆಹಿಡಿಯುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ ಅವರು ಒತ್ತಾಯಿಸಿದ್ದಾರೆ.

ಹಿಜಾಬ್, ಮುಸ್ಲಿಂ ವ್ಯಾಪಾರಿಗಳಿಗೆ ಆರ್ಥಿಕ ಭಹಿಷ್ಕಾರ, ಹಲಾಲ್ ಕಟ್-ಜಟ್ಕಾ ಕಟ್ ವಿವಾದಗಳು ಒಂದಾದ ಮೇಲೊಂದರಂತೆ ಸಮಾಜದಲ್ಲಿ ಶಾಂತಿಯನ್ನು ಕದಡುತ್ತಿವೆ. ಇದರಿಂದ ಹಿಂದೂ ಮುಸ್ಲಿಂ ಎಂಬ ಭೇದ ಭಾವ ಹೆಚ್ಚಾಗುತ್ತಿದ್ದು ದ್ವೇಷದ ಭಾವನೆ ಹುಟ್ಟುಹಾಕುತ್ತಿವೆ. ಇವು ಹೀಗೆ ಮುಂದುವರೆದರೆ ರಾಜ್ಯದಲ್ಲಿ ಅಶಾಂತಿ ತಲೆದೋರಿ ಪರಸ್ಪರ ದ್ವೇಷದ ಮನೋಭಾವನೆ ಹುಟ್ಟುಹಾಕುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಹೇಳಿದ್ದಾರೆ

ಕೋಮುವಾದಿಂದ ಜಾಗತಿಕ ನಾಯಕತ್ವ ನಾಶ  

ಈ ಬಗ್ಗೆ ಟ್ವೀಟ್ ಮಾಡಿರುವ ಮಜುಂದರ್‌ ಶಾ ಅವರು, ಹೆಚ್ಚುತ್ತಿರುವ ಧಾರ್ಮಿಕ ವಿಭಜನೆಯನ್ನು ಮುಖ್ಯಮಂತ್ರಿ ಕೂಡಲೇ ಬಗೆಹರಿಸಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ. ಅಲ್ಲದೇ ಐಟಿಬಿಟಿ ಕ್ಷೇತ್ರಗಳಲ್ಲಿ ಕೋಮುವಾದ ಬೆಳೆದರೆ ಅದು ಭಾರತದ ಜಾಗತಿಕ ನಾಯಕತ್ವವನ್ನು ನಾಶ ಮಾಡಲಿದೆ ಎಂದು ಎಚ್ಚರಿಸಿದ್ದಾರೆ. ತಂತ್ರಜ್ಞಾನ ಕ್ಷೇತ್ರವು ಕೋಮುವಾದಿಯಾದರೆ ಅದು ಭಾರತದ ಜಾಗತಿಕ ನಾಯಕತ್ವವನ್ನು ನಾಶ ಮಾಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

'ಕೋಮುವಾದಿ ಬಹಿಷ್ಕಾರ'

ಹಲಾಲ್‌ ಕಟ್ ವಿರುದ್ಧ ರೂಪಿಸಿರುವ ಜಟ್ಕಾ ಕಟ್ ಅಭಿಯಾನ, ಸಂಘಟನೆಗಳು ದೇವಾಲಯಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧ ಹೇರಿರುವುದು ಮುಂತಾದ ವಿವಾದಗಳ ಬಗ್ಗೆ ಮಾತನಾಡಿರುವ ಕಿರಣ್ ಮಜುಂದಾರ್ ಶಾ ಅವರು, ಇದು 'ಕೋಮುವಾದಿ ಬಹಿಷ್ಕಾರ' ಎಂದು ಹರಿಹಾಯ್ದಿದ್ದಾರೆ.

ನಮ್ಮ ಸಿಎಂ ಬಗ್ಗೆ ನನಗೆ ವಿಶ್ವಾಸವಿದೆ. ಈ ಸಮಸ್ಯೆಯನ್ನು ಅವರು ಶಾಂತಿಯುತವಾಗಿ ಪರಿಹರಿಸುತ್ತಾರೆ. ಅಲ್ಲದೇ 'ದುರಾದೃಷ್ಟವಶಾತ್ ಪಟ್ಟಭದ್ರ ಹಿತಾಸಕ್ತಿಗಳು ಈ ವಿಷಯವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ಹೆಮ್ಮೆಯ ಕನ್ನಡಿಗ ಆಗಿರುವ ನಾನು ಇಂತಹ ಘಟನೆಗಳಿಂದ ಆರ್ಥಿಕ ಪ್ರಗತಿ ಕುಂಠಿತವಾಗುವುದನ್ನು ನೋಡಲು ಬಯಸುವುದಿಲ್ಲ. ಈ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ಶ್ರಮಿಸಬೇಕಿದೆ' ಎಂದಿದ್ದರು
Published by:Pavana HS
First published: