ಚುನಾವಣಾ ಪೂರ್ವ ಸಮೀಕ್ಷೆ ಎಫೆಕ್ಟ್​;  ಸಿಂಗಪೂರಕ್ಕೆ ತೆರಳಿದ ಕಿಂಗ್​ ಮೇಕರ್​ ಕುಮಾರಸ್ವಾಮಿ

 • News18
 • Last Updated :
 • Share this:
  ಡಿ.ಪಿ ಸತೀಶ್​, ನ್ಯೂಸ್​ 18 ಕನ್ನಡ

  ಬೆಂಗಳೂರು (ಮೇ.13): ರಾಜ್ಯ ಚುನಾವಣಾ ಮತದಾನ ಮುಗಿದ ಬೆನ್ನಲ್ಲೇ ಸಮೀಕ್ಷೆಗಳು ಅತಂತ್ರ ರಾಜಕೀಯದ ಕುರಿತು ಮಾಹಿತಿ ಚೆಲ್ಲಿವೆ. ಈ ಬೆನ್ನಲ್ಲೇ ಹಠಾತ್​ ಬೆಳವಣಿಗೆ ಎಂಬಂತೆ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಸಿಂಗಪುರ ಕಡೆ ಮುಖಮಾಡಿದ್ದಾರೆ.

  ಕರ್ನಾಟಕದ 224 ವಿಧಾನಸಭಾ ಚುನಾವಣಾ ಕ್ಷೇತ್ರಗಳಲ್ಲಿ ಅತಂತ್ರ ಸರ್ಕಾರ ನಿರ್ಮಾಣವಾಗಲಿದ್ದು, ಜೆಡಿಎಸ್​ 'ಕಿಂಗ್​ ಮೇಕರ್'​ ಆಗಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿದೆ. ರಿಪಬ್ಲಿಕ್​ ಟಿವಿ- ಜನ್​ಕೀ ಬಾತ್​  ಮತ್ತು ಎಬಿಪಿ-ಸಿ ವೋಟರ್​ ಬಿಜೆಪಿ 104-116 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ದೊಡ್ಡಪಕ್ಷವಾಗಿ ಹೊರಹೊಮ್ಮಲಿದೆ ಎಂದು ಅಂದಾಜಿಸಿದೆ. ಮತ್ತೆರಡು ಸುದ್ದಿವಾಹಿನಿಗಳು ಕಾಂಗ್ರೆಸ್ ಕ್ರಮವಾಗಿ​ 78 ಮತ್ತು 83-94 ಸ್ಥಾನವನ್ನು ಹಾಗೂ ಜೆಡಿಎಸ್​ 37 ಹಾಗೂ 20-29 ಸ್ಥಾನಪಡೆಯುವಲ್ಲಿ ಸಫಲವಾಗಬಹುದು ಎಂದಿದೆ.

  ಯಾವುದೇ ಪಕ್ಷ ಹೊಸ ಸರ್ಕಾರ ರಚನೆ ಮಾಡಬೇಕಾದರೆ 112 ಎಂಎಲ್​ಎಗಳ ಬೆಂಬಲ ಪಡೆಯುವುದು ಅವಶ್ಯಕವಾಗಿದೆ. ಇದಕ್ಕಾಗಿ ಜೆಡಿಎಸ್​ ಸಹಾಯ ಬೇಕಾಗಿದೆ ಎನ್ನಲಾಗಿದೆ.ಈ ಉದ್ದೇಶದಿಂದ ಕಾಂಗ್ರೆಸ್​ ಮತ್ತು ಬಿಜೆಪಿ ಪಕ್ಷದ ನಾಯಕರುಗಳು ಕುಮಾರಸ್ವಾಮಿ ಮತ್ತು ದೇವೇಗೌಡ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಈ ಕಾರಣದಿಂದ ಕುಮಾರಸ್ವಾಮಿ ಎರಡು ಪಕ್ಷದ ನಾಯಕರನ್ನು ಭೇಟಿಯಾಗಲು ಸಿಂಗಾಪೂರಕ್ಕೆ ತೆರಳಿದ್ದಾರೆ. ಇಲ್ಲಿ ಭೇಟಿಯಾದರೆ ಅದು ದೊಡ್ಡ ಸುದ್ದಿಯಾಗದಂತೆ ಎಂದು ಕುಮಾರಸ್ವಾಮಿ ಆಪ್ತ ಮೂಲಗಳು ತಿಳಿಸಿದೆ.

  ದೇವೇಗೌಡ ಅವರು ಕಳೆದ ದಿನ ತಡರಾತ್ರಿ ಆಪ್ತರೊಂದಿಗೆ  ಸಭೆ ನಡೆಸಿದ್ದು, ಜೆಡಿಎಸ್​ ಬಿಟ್ಟು ಯಾವುದೇ ಪಕ್ಷ ಕೂಡ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.  ಮತದಾನದ ಬಳಿಕ ನ್ಯೂಸ್​ 18 ಜೊತೆಗೆ ಮಾತನಾಡಿದ ಮಾಜಿ ಪ್ರಧಾನಿ ನನ್ನ ಜೀವನದಲ್ಲಿ ನಾನು ವಿಶ್ರಾಂತಿ ಮಾಡಿಲ್ಲ. ಅಲ್ಲದೇ ಭಾನುವಾರ ಕೂಡ ನಾನು ಜನರನ್ನು ಭೇಟಿಯಾಗುತ್ತೇನೆ ಎಂದಿದ್ದರು.

  ಮತ್ತೊಮ್ಮೆ ಅಧಿಕಾರಕ್ಕೆ ಬರುವ ಭರವಸೆಯನ್ನು ಹೊಂದಿರುವ  ಮುಖ್ಯಮಂತ್ರಿ ಸಿದ್ದರಾಮಯ್ಯ ಮತದಾನವಾದ ಬಳಿಕ ಮೈಸೂರಿನಲ್ಲಿ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ನಾನು ಮನೆಯಲ್ಲಿಯೇ ಕುಟುಂಬ ಹಾಗೂ ಮಕ್ಕಳೊಂದಿಗೆ ಕಾಲಕಳೆಯುತ್ತೇನೆ ಎಂದಿದ್ದಾರೆ.

  ಚುನಾವಣಾ ಮತಗಟ್ಟೆಗಳ ಸಮೀಕ್ಷೆ ಕೇವಲ ಮನೋರಂಜನೆ ಯಷ್ಟೇ. ವಾರಂತ್ಯವನ್ನು ಎಂಜಾಯ್​ ಮಾಡಿ ಎಂದು ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ಕೂಡ ಸಲಹೆ ನೀಡಿದ್ದಾರೆ.

  ಶಿಕಾರಿಪುರದಲ್ಲಿ ಮತದಾನವಾದ ಬಳಿಕ ಬೆಂಗಳೂರು ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಮರಳಿದ್ದು, ತಡರಾತ್ರಿ ಆಪ್ತರೊಂದಿಗೆ ಚುನಾವಣಾ ಸಮೀಕ್ಷೆ ಕುರಿತು ಚರ್ಚೆ ನಡೆಸಿದ್ದಾರೆ. ಅಲ್ಲದೇ  ಇಂದು ಮಧ್ಯಾಹ್ನ  ಪತ್ರಿಕಾಗೋಷ್ಠಿಯನ್ನು ನಡೆಸಲಿದ್ದಾರೆ.

  ವರದಿಗಾರರೊಂದಿಗೆ ಮಾತನಾಡಿದ ಅವರು, ಮತಗಟ್ಟೆ ಸಮೀಕ್ಷೆಗಳು ಸುಳ್ಳಾಗಲಿದೆ, ಬಿಜೆಪಿ ಬಹುಮತ ಪಡೆಯಲಿದ್ದು, 17ಕ್ಕೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮತ್ತೊಮ್ಮೆ ಪುನರುಚ್ಚಿಸಿದ್ದಾರೆ.

  2013ರ ಚುನಾವಣೆಯಲ್ಲಿ ಕರ್ನಾಟಕ ಚುನಾವಣೆಯಲ್ಲಿ 71.4ರಷ್ಟು ಮತದಾನವಾಗಿದ್ದು, ಕುತೂಹಲ ಕೆರಳಿಸಿದ್ದ ಈ ಬಾರಿ ಚುನಾವಣೆಯಲ್ಲಿ ಶೇ.70 ರಷ್ಟು ದಾಖಲೆ ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

   
  First published: