HOME » NEWS » State » KING CHALUKYA PERIOD SHIVA TEMPLE RENOVATED IN KOLAR SESR

ಚಾಲುಕ್ಯ ಅರಸರ ಕಾಲದ ಪುರಾತನ ದೇವಾಲಯಕ್ಕೆ ಮರುಜೀವ; ಎಲ್ಲಿದೆ, ಹೇಗಿದೆ ಗೊತ್ತಾ ಈ ಶಿವಮಂದಿರ!

ಜಿಲ್ಲೆಯ ಮಾಲೂರು, ಮುಳಬಾಗಿಲಿನಲ್ಲಿ ಅನೇಕ ದೇವಾಲಯಗಳು ಸೂಕ್ತ ನಿರ್ವಹಣೆ ಇಲ್ಲದೇ ಕಳೆಗುಂದಿವೆ. ಇದರ ಫಲವಾಗಿ ದೇವಾಲಯದ ಸುತ್ತ ಗಿಡಗಂಟೆಗಳು ಬೆಳೆದು ದೇವಾಲಯವಿತ್ತೆ ಎಂಬ ಅನುಮಾನ ಮೂಡುತ್ತದೆ. ಇಂತಹ ದೇವಾಲಯಗಳಿಗೆ ಈಗ ಪುನರ್ಜೀವನ ಕಾರ್ಯಕ್ಕೆ ಇಲ್ಲಿನ ಗ್ರಾಮಸ್ಥರು ಮುಂದಾಗಿದ್ದಾರೆ

Seema.R | news18-kannada
Updated:February 4, 2020, 3:53 PM IST
ಚಾಲುಕ್ಯ ಅರಸರ ಕಾಲದ ಪುರಾತನ ದೇವಾಲಯಕ್ಕೆ ಮರುಜೀವ; ಎಲ್ಲಿದೆ, ಹೇಗಿದೆ ಗೊತ್ತಾ ಈ ಶಿವಮಂದಿರ!
ದೇಗುಲದ ಜೀರ್ಣೋದ್ಧಾರ ಕಾರ್ಯ
  • Share this:
ಕೋಲಾರ (ಫೆ.04): ಬಯಲು ಸೀಮೆಯಾದರೂ ಭವ್ಯ ದೇಗುಲ, ಐತಿಹಾಸಿಕ ಕಲೆ ಸಂಸ್ಕೃತಿಗಳ ಕಲೆಯ ಬೀಡು ಕೋಲಾರ. ಚಾಲುಕ್ಯರು ಆಳಿದ ನಗರವಾದ ಇಲ್ಲಿ ಇತಿಹಾಸ ಸಾರುವ ಅನೇಕ ದೇವಾಲಯಗಳಿವೆ. ಶತಮಾನಗಳ ಹಿಂದಿನ ಈ ದೇಗುಲಗಳು ಸೂಕ್ತ ನಿರ್ವಹಣೆ ಇಲ್ಲದೇ ಸೊರಗಿದೆ.  ಆದರೆ, ಈಗ ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆ ಈ ದೇಗುಲಗಳು ಹೊಸ ರೂಪ ಪಡೆದಿದೆ.

ಇಲ್ಲಿನ ಕಲ್ಲಂಡೂರು ಗ್ರಾಮದ ಚಾಲುಕ್ಯ ಅರಸರ ಕಾಲದ 1.500 ವರ್ಷದ ಐತಿಹಾಸಿಕ ದೇಗುಲ ಮರು ಜೀವ ಪಡೆದಿದ್ದು, ಪ್ರಮುಖ ಆಕರ್ಷಣಿಯ ಕೇಂದ್ರವಾಗಿ ಮಾರ್ಪಟ್ಟಿದೆ.



ಜಿಲ್ಲೆಯ ಮಾಲೂರು, ಮುಳಬಾಗಿಲಿನಲ್ಲಿ ಅನೇಕ ದೇವಾಲಯಗಳು ಸೂಕ್ತ ನಿರ್ವಹಣೆ ಇಲ್ಲದೇ ಕಳೆಗುಂದಿವೆ. ಇದರ ಫಲವಾಗಿ ದೇವಾಲಯದ ಸುತ್ತ ಗಿಡಗಂಟೆಗಳು ಬೆಳೆದು ದೇವಾಲಯವಿತ್ತೆ ಎಂಬ ಅನುಮಾನ ಮೂಡುತ್ತದೆ. ಇಂತಹ ದೇವಾಲಯಗಳಿಗೆ ಈಗ ಪುನರ್ಜೀವನ ಕಾರ್ಯಕ್ಕೆ ಇಲ್ಲಿನ ಗ್ರಾಮಸ್ಥರು ಮುಂದಾಗಿದ್ದಾರೆ.



ಇದಕ್ಕೆ ಕೇಂದ್ರ ಸರ್ಕಾರ 80 ಲಕ್ಷ ನೀಡಿದ್ದು, ರಾಜ್ಯ ಸರ್ಕಾರ 5 ಲಕ್ಷ ಗಳು ದಾನಿಗಳ ನೀಡಿದ ದೇಣಿಗೆ ಸಂಗ್ರಹಿಸಿ, ಗ್ರಾಮಸ್ಥರು ದೇವಾಲಯಕ್ಕೆ ಹೊಸ ರೂಪ ನೀಡಿದ್ದಾರೆ. ಇದಲ್ಲದೆ ದೇಗುಲದಲ್ಲಿ ಈ ಹಿಂದೆ ಅರಸರ ಕಾಲದಲ್ಲಿ ಇದ್ದ ಕಲ್ಲು ಕಂಬ, ಗೋಡೆಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ಯಾವುದೇ ಹಾನಿಯಾಗದಂತೆ ಮುಂಜಾಗ್ರತಾ ಕ್ರಮವಹಿಸಲಾಗಿದೆ.

ಇದನ್ನು ಓದಿ: ಕೆಸಿ ವ್ಯಾಲಿ ಯೋಜನೆಯನ್ನೇ ಬಂಡವಾಳ ಮಾಡಿಕೊಂಡು ಕೆರೆ ಒಡಲಿಗೆ ಕೈ ಹಾಕಿದ ಕಿಡಿಗೇಡಿಗಳುಸಂಪೂರ್ಣವಾಗಿ ನವೀಕರಣಗೊಂಡಿರುವ ದೇವಾಲಯದಲ್ಲಿ ಹೊಸ ಶಿವಲಿಂಗ ಪ್ರತಿಷ್ಟಾಪನೆಗೆ ಗ್ರಾಮಸ್ಥರು ನಿರ್ಧರಿಸಿದ್ದು, ಇದೇ ಫೆ 5ರಂದು ಈ ಕಾರ್ಯಕ್ರಮ ನಡೆಯಲಿದೆ. ಕಾಗೂ  ಡಿಸಿಎಂ ಗೊವಿಂದ ಕಾರಜೋಳ ಆಗಮಿಸುವ ಸಾಧ್ಯತೆ ಇದೆ.

(ವರದಿ: ರಘುರಾಜ್​)
First published: February 4, 2020, 3:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories