Dakshina Kannada: ಡಿಸಿ ಆದೇಶಕ್ಕೂ ಕಿಮ್ಮತ್ತಿಲ್ಲ: ಕಿಂಡಿ ಅಣೆಕಟ್ಟಿನಿಂದ ಆಗುತ್ತಿರುವ ಸಮಸ್ಯೆಯನ್ನು ಕೇಳೋರಿಲ್ಲ!

ಇಲ್ಲಿ ವರ್ತುಲಾಕಾರದಲ್ಲಿ ಸೀರೆ ಹೆಸರಿನ  ಹೊಳೆ ಹರಿಯುತ್ತಿದೆ. ಹೊಳೆ ಸುತ್ತು ಬಳಸಿ ಹರಿಯುತ್ತಿದ್ದು, ಹೊಳೆಯ‌ ಮಧ್ಯೆ ಕಿರು ಸೇತುವೆಯ ಮೂಲಕ ಸಾಗುವ ರಸ್ತೆ ಇದೆ.

ಕಿಂಡಿ ಅಣೆಕಟ್ಟು

ಕಿಂಡಿ ಅಣೆಕಟ್ಟು

  • Share this:
ಪುತ್ತೂರು: ಮಳೆಗಾಲದಲ್ಲಿ (Rainy Season) ಮರದ ತುಂಡು, ಕಸ ತುಂಬಿ ಎರಡು ಬದಿಯ ಹೊಳೆಯ ಮಧ್ಯೆ ಇರುವ ರಸ್ತೆ ಕಡಿತಕ್ಕೆ ಕಾರಣವಾಗುತ್ತಿರುವ ಕಿಂಡಿ ಆಣೆಕಟ್ಟನ್ನು (Kindi dam) ತಕ್ಷಣ ತೆರವುಗೊಳಿಸುವಂತೆ ದಕ್ಷಿಣಕನ್ನಡ ಜಿಲ್ಲಾಧಿಕಾರಿಯವರು (Dakshina Kannada DC) ಮಾಡಿದ ಆದೇಶವನ್ನು ತಾಲೂಕು ಮಟ್ಟದ ಅಧಿಕಾರಿಗಳು, ಸ್ಥಳೀಯಾಡಳಿತ ಜಾರಿಗೊಳಿಸದೇ ಇರುವುದರಿಂದ ಗ್ರಾಮದಲ್ಲಿ  ಅಪಾಯದ ಸ್ಥಿತಿ ಮುಂದುವರೆದಿದೆ. ಇದು ಬಡಗನ್ನೂರು ಗ್ರಾಮದ ಪಟ್ಟೆ ಪರಿಸರದ ಕಥೆ. ಪಟ್ಟೆಯಿಂದ ಮುಂಡೋಳೆ, ಅಂಬಟೆಮೂಳೆ ಮೂಲಕ ಈಶ್ವರಮಂಗಲಕ್ಕೆ ಸಂಪರ್ಕಿಸುವ ಬಹುಮುಖ್ಯ ರಸ್ತೆಯ ಪಟ್ಟೆಯಿಂದ 200 ಮೀಟರ್ ದೂರದಲ್ಲಿ ದಶಕಗಳ ಹಿಂದೆ ಸಣ್ಣ ನೀರಾವರಿ ಇಲಾಖೆಯ ಮೂಲಕ ಕಿಂಡಿ ಆಣೆಕಟ್ಟನ್ನು ನಿರ್ಮಿಸಲಾಗಿದೆ. ಕೆಲವು ವರ್ಷ‌  ಹಲಗೆ ಆಳವಡಿಸಿ ಗ್ರಾಮದ ಕೃಷಿಕರಿಗೆ  ಪ್ರಯೋಜನಕಾರಿಯಾಗಿದ್ದ ಈ ಕಿಂಡಿ ಆಣೆಕಟ್ಟು ಇದೀಗ ಗ್ರಾಮಸ್ಥರಿಗೆ‌ ದೊಡ್ಡ‌ ಕಿರಿಕಿರಿಗೆ  ಕಾರಣವಾಗುತ್ತಿದೆ.

ಸ್ಥಳೀಯರಿಂದಲೇ ತೆರವು ಕಾರ್ಯ 

ಇಲ್ಲಿ ವರ್ತುಲಾಕಾರದಲ್ಲಿ   ಸೀರೆ ಹೆಸರಿನ  ಹೊಳೆ ಹರಿಯುತ್ತಿದೆ. ಹೊಳೆ ಸುತ್ತು ಬಳಸಿ ಹರಿಯುತ್ತಿದ್ದು, ಹೊಳೆಯ‌ ಮಧ್ಯೆ ಕಿರು ಸೇತುವೆಯ ಮೂಲಕ ಸಾಗುವ ರಸ್ತೆ ಇದೆ. ಸೇತುವೆ ಕೇವಲ 10 ಮೀಟರ್ ದೂರದಲ್ಲಿ ಸೇತುವೆಗಿಂತ ಕೆಳಭಾಗದಲ್ಲಿರುವ ಕಿಂಡಿ ಆಣೆಕಟ್ಟಿನಲ್ಲಿ ಮಳೆಗಾಲದಲ್ಲಿ ತೇಳಿ ಬರುವ ಮರದ ತುಂಡು, ಕಸ ಕಡ್ಡಿಗಳು ನಿಂತು ಸರಾಗ ನೀರು ಹರಿಯಲು ಸಮಸ್ಯೆಯಾಗುತ್ತದೆ. ಈ ಸಮಸ್ಯೆ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿದೆ. ಇದರ ಪರಿಣಾಮ ಪಕ್ಕದಲ್ಲಿರುವ ಸ್ಥಳೀಯ ನಿವಾಸಿಯೊಬ್ಬರ ಸುಮಾರು ಅರ್ಧ ಎಕರೆಯಷ್ಟು ಕೃಷಿ ತೋಟ ಕೊರೆದು ಹೋಗಿದೆ. ಜತೆಗೆ ಮಳೆಗಾಲದಲ್ಲಿ ಇಕ್ಕೆಲಗಳ ತೋಡಿನ ನೀರು ಸಂಗಮಗೊಂಡು ರಸ್ತೆಯಲ್ಲಿ ಹರಿದು ರಸ್ತೆಯ ಇಕ್ಕೆಲಗಳಲ್ಲಿ ಕೊರೆತ‌ ಉಂಟಾಗುತ್ತಿದೆ.ಆದರೆ ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಸ್ಥಳೀಯರು ಹಲವು ಬಾರಿ ಕಿಂಡಿ ಅಣೆಕಟ್ಟಿನಲ್ಲಿ‌ ಸಿಲುಕಿರುವ ಮರದ ತುಂಡು, ಕಸ ಕಡ್ಡಿಗಳನ್ನು ತೆರವುಗೊಳಿಸಿದರೂ, ಮತ್ತೆ ಅದೇ ಪ್ರಮಾಣದಲ್ಲಿ ಕಸ ತುಂಬಿಕೊಳ್ಳುತ್ತಿದೆ.ಮಳೆಗಾಲದಲ್ಲಿ ರಸ್ತೆ ಮುಳುಗಡೆ ಸಮಸ್ಯೆ 

ರಸ್ತೆಯನ್ನು ರಕ್ಷಿಸಲು ಗ್ರಾಮಸ್ಥರು ನಡೆಸಿದ ಯಾವುದೇ  ರಕ್ಷಣಾ ಕ್ರಮಗಳು ಪ್ರಯೋಜನಕ್ಕೆ ಬಾರದಂತಾಗಿದೆ.ಬೆಟ್ಟಂಪಾಡಿ, ಪೆರಿಗೇರಿ, ಪಾಣಾಜೆ ಸೇರಿದಂತೆ ವಿವಿಧ ಕಡೆಗಳಿಂದ ಈಶ್ವರಮಂಗಲ ತೆರಳುವವರಿಗೆ ಇದು ಸುಲಭ ದಾರಿ. ಈ ರಸ್ತೆಯಲ್ಲಿ ಪಟ್ಟೆ ಸೇರಿದಂತೆ  ಪುತ್ತೂರು ನಗರಕ್ಕೆ ನೂರಾರು ವಿದ್ಯಾರ್ಥಿಗಳು, ಉದ್ಯೋಗಿಗಳು ತೆರಳುತ್ತಾರೆ. ಮಳೆಗಾಲದಲ್ಲಿ ಹಲವು ಬಾರಿ ರಸ್ತೆ ಮುಳುಗಡೆಯಾಗುತ್ತಿದ್ದು, ಜನರು ಸಂಕಷ್ಟಪಡುತ್ತಿದ್ದಾರೆ. ಸಣ್ಣ ಮಕ್ಕಳ ಸಂಚಾರಕ್ಕಂತೂ ಅಪಾಯಕಾರಿಯಾಗಿದೆ.
ಕಿಂಡಿ ಆಣೆಕಟ್ಟಿನ ಕಾರಣದಿಂದ ಉಂಟಾಗಿರುವ ಸಮಸ್ಯೆಯ ಕುರಿತು ಹಾಗೂ ತೆರವಿಗೆ ಕ್ರಮ ಕೈಗೊಳ್ಳುವಂತೆ ನೂರಾರು ಮಂದಿ ಸಾರ್ವಜನಿಕರ ಸಹಿಯುಳ್ಳ ಮನವಿಯನ್ನು ಬಡಗನ್ನೂರು ಗ್ರಾ.ಪಂ.ನ ಸುಳ್ಯಪದವಿನಲ್ಲಿ ಎಪ್ರಿಲ್‌16 ರಂದು ನಡೆದ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ನೀಡಲಾಗಿತ್ತು.

ಇದನ್ನೂ ಓದಿ: Bakrid: ಕುರಿ, ಮೇಕೆ ವ್ಯಾಪಾರ ಜೋರು; ಹಿಂದೂ ಜನಜಾಗೃತಿ ಸಮಿತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಡಿಸಿ ಆದೇಶಕ್ಕೂ ಕಿಮ್ಮತ್ತಿಲ್ಲ 

ಪರಿಸ್ಥಿತಿಯ ಅರಿವು ಪಡೆದುಕೊಂಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಅಣೆಕಟ್ಟಿನ ತೆರವಿಗೆ ಸ್ಥಳದಲ್ಲೇ ಆದೇಶ ನೀಡಿದ್ದರು. ಆದರೆ ಸಂಬಂಧಪಟ್ಟವರು ವಿಳಂಬ ಧೋರಣೆ ಅನುಸರಿಸಿದ ಪರಿಣಾಮ ಸಮಸ್ಯೆ ಬಿಗಡಾಯಿಸಿದೆ. ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಗೆ ಈ ಜವಾಬ್ದಾರಿ ನೀಡಲಾಗಿದೆ. ಸ್ಥಳೀಯ ಗ್ರಾಮಪಂಚಾಯತ್  ಆಡಳಿತ ಹಾಗೂ ಇಲಾಖೆಯ ಮಧ್ಯೆ ಸಮನ್ವಯದಲ್ಲಿ ಕೊರತೆಯಿಂದಾಗಿ ಈವರೆಗೂ‌ ಕಿಂಡಿ ಅಣೆಕಟ್ಟನ್ನು ತೆರವುಗೊಳಿಸದೆ ಜಿಲ್ಲಾಧಿಕಾರಿಗಳ ಆದೇಶವನ್ನೂ ಗಾಳಿಗೆ ತೂರಲಾಗಿದೆ.
Published by:Kavya V
First published: