ಸಿದ್ದೇಶ್ವರ ಜಾತ್ರೆಯಲ್ಲಿ ಕಿಲಾರಿ, ಜವಾರಿ, ಮುರ್ರಾ; ಒಂದೊಂದು ಹೋರಿಯ ಬೆಲೆ ಲಕ್ಷಾಂತರ ರೂ

news18
Updated:January 14, 2018, 2:47 PM IST
ಸಿದ್ದೇಶ್ವರ ಜಾತ್ರೆಯಲ್ಲಿ ಕಿಲಾರಿ, ಜವಾರಿ, ಮುರ್ರಾ; ಒಂದೊಂದು ಹೋರಿಯ ಬೆಲೆ ಲಕ್ಷಾಂತರ ರೂ
news18
Updated: January 14, 2018, 2:47 PM IST
- ಮಹೇಶ ವಿ. ಶಟಗಾರ, ನ್ಯೂಸ್ 18 ಕನ್ನಡ.

ವಿಜಯಪುರ (ಜ.14): ಒಂದು ಹೋರಿಯ ಬೆಲೆ 1.50 ಲಕ್ಷ ರೂಪಾಯಿ. ಮತ್ತೋಂದು ಹೋರಿಯ ಬೆಲೆ 2 ಲಕ್ಷ. ಮಗದೊಂದು ಹೋರಿಯ ಕಿಮ್ಮತ್ತು 3 ಲಕ್ಷ. ಇದು ಕಂಡ ಬಂದಿದ್ದು, ವಿಜಯಪುರ ಜಿಲ್ಲೆಯ ಎಪಿಎಂಸಿ ತೊರವಿ ಬಳಿ ನಡೆಯುವ ಶ್ರೀ ಸಿದ್ಧೇಶ್ವರ ಜಾನುವಾರುಗಳ ಜಾತ್ರೆ.

ದಕ್ಷಿಣ ಕರ್ನಾಟಕದಲ್ಲಿಯೇ ಅತೀ ಹೆಚ್ಚು ಸಂಖ್ಯೆಯಲ್ಲಿ ಜಾನುವಾರುಗಳ ಸೇರುವ ಜಾತ್ರೆ ಇದಾಗಿದೆ. ಕನಿಷ್ಛ 90 ಸಾವಿರದ ವರೆಗೂ ಜಾನುವಾರುಗಳು ಇಲ್ಲಿ ನೆರೆಯುತ್ತವೆ. 110 ಎಕರೆ ಪ್ರದೇಶದಲ್ಲಿ ಎಲ್ಲಿ ನೋಡಿದರೂ ಜಾನುವಾರುಗಳು, ಎತ್ತು, ಹೋರಿಗಳದ್ದೇ ಹೆಚ್ಚು ಕಾಣುತ್ತಿದ್ದವು.

ಕರ್ನಾಟಕವಷ್ಟೇ ಅಲ್ಲ, ನೆರೆಯ ಮಹಾರಾಷ್ಟ್ರ, ಆಂಧ್ರ ಪ್ರದೇಶದಿಂದಲೂ ಇಲ್ಲಿ ಜಾನುವಾರುಗಳು ಬಂದಿದ್ದು, ಕಳೆದ ಬಾರಿಗೆ ಹೋಲಿಸಿದರೆ ಈ ಸಲ ಮಾರಾಟವೂ ಹೆಚ್ಚಾಗಿದೆ. ಈ ಜಾತ್ರೆಯಲ್ಲಿ ಕಿಲಾರಿ, ಜವಾರಿ, ಕಾರೆಕಾರ, ಮುರ್ರಾ, ಇನ್ನೂ ಹಲ್ಲು ಬಾರದ, ಎರಡು ಹಲ್ಲಿನ, ನಾಲ್ಕು ಹಲ್ಲಿನ ಹೋರಿಗಳ ಪ್ರದರ್ಶನ ಹಾಗೂ ಮಾರಾಟ ಇಲ್ಲಿದ್ದದ್ದು ವಿಶೇಷವಾಗಿದೆ.

ಇಲ್ಲಿ ಮಾರಾಟವಾದ ಎತ್ತುಗಳು ಮತ್ತು ಹೋರಿಗಳನ್ನು ಗುರುತಿಸುವ ವಿಶೇಷ ಸಂಪ್ರದಾಯವೊಂದಿದೆ. ಯಾವ ಜಾನುವಾರು ಮಾರಾಟವಾಗಿದೆಯೋ ಅದರ ಮೇಲೆ ಗುಲಾಲ್ ಅಂದರೆ ಗುಲಾಬಿ ಬಣ್ಣ ಹಾಕುವ ಮೂಲಕ ಅದನ್ನು ರೈತರು ಗುರುತಿಸಲು ಅನುಕೂಲ ಮಾಡಿಕೊಡುತ್ತಾರೆ.

ಈ ಜಾತ್ರೆಯಲ್ಲಿ ಪಾಲ್ಗೊಳ್ಳುವ ಜಾನುವಾರುಗಳಿಗೆ ಅವುಗಳ ಆರೋಗ್ಯಕ್ಕೆ ಅನುಗುಣವಾಗಿ  ಪ್ರಥಮ, ದ್ವಿತೀಯ ಹಾಗೂ ತೃತಿಯ ಬಹುಮಾನಗಳನ್ನು ನೀಡಲಾಗುತ್ತದೆ.  ಇದು ರೈತರು ದನಗಳ ಜಾತ್ರೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ  ಜಾತ್ರೆಯನ್ನು ಆಯೋಜಿಸಲಾಗುತ್ತದೆ.
First published:January 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ