ಬೆಂಗಳೂರು: ಇಡೀ ಕನ್ನಡ ಚಿತ್ರರಂಗವೇ (Kannada Cinema) ಬೆಚ್ಚಿ ಬೀಳುವಂತೆ ಮಾಡಿದ್ದ ಕೇಸ್. ನಟ ಕಿಚ್ಚ ಸುದೀಪ್‌ಗೆ (Kichcha Sudeep) ಎರಡೆರಡು ಬೆದರಿಕೆ ಪತ್ರಗಳು ಮನೆಗೆ ಬಂದಿದ್ದವು. ಅದೇ ಕೇಸ್ ಸದ್ಯ ಗಂಭೀರ ಸ್ವರೂಪ ಪಡೆದುಕೊಂಡಿದೆ. ಕಾರು ಚಾಲಕ (Car Driver), ಪೋಸ್ಟ್ ಬಗ್ಗೆ ಖಾಕಿ ಜಾಲಾಡುತ್ತಿದೆ. ಕರುನಾಡ ಚಕ್ರವರ್ತಿ ನಟ ಸುದೀಪ್‌ಗೆ ಬೆದರಿಕೆ (Threat) ಕೇಸ್ ತನಿಖೆ ಚುರುಕಾಗಿದೆ. ಮೊದಲ ಬೆದರಿಕೆಗೆ ನಿರ್ಲಕ್ಷ್ಯ ವಹಿಸಿದ್ದ ಸುದೀಪ್, ಮತ್ತೆ ರಿಪೀಟ್ ಆದ ಕೂಡಲೇ ಎಚ್ಚೆತ್ತುಕೊಂಡಿದ್ದಾರೆ. ಯಾವಾಗ ಎರಡನೇ ಪತ್ರ (Letter) ಕೈ ಸೇರಿತೋ ಇದರ ಗಂಭೀರತೆಯನ್ನು ಅರಿತು ಕಾನೂನು ಪ್ರಕ್ರಿಯೆಯೇ ಸೂಕ್ತ ಎಂದು ತಮ್ಮ ಆಪ್ತ ಜಾಕ್ ಮಂಜು ಮೂಲಕ ದೂರು ನೀಡಿದ್ದರು. ಮೊನ್ನೆ ಈ ಬಗ್ಗೆ ಮಾತನಾಡಿದ್ದ ಕಿಚ್ಚ ಬೆದರಿಕ ಪತ್ರ ಕಳುಹಿಸಿದ್ದವರ ಬಗ್ಗೆ ಗುಡುಗಿದ್ದರು.
ದೊಮ್ಮಲೂರಿನಿಂದ 2 ಬೆದರಿಕೆ ಪತ್ರಗಳು ಪೋಸ್ಟ್!
ಮಾರ್ಚ್ 10ರಂದು ಸುದೀಪ್ ಮನೆಗೆ ಮೊದಲ ಬೆದರಿಕೆ ಪತ್ರ ತಲುಪಿತ್ತು. ಆ ಪತ್ರದ ಬಗ್ಗೆ ಅಷ್ಟಾಗಿ ಸುದೀಪ್ ತಲೆ ಕೆಡಿಸಿಕೊಂಡಿರಲಿಲ್ಲ. ಆದರೂ ಇಂಟರ್ನಲ್ ಮಾಹಿತಿ ಕಲೆ ಹಾಕೋದಕ್ಕೆ ಯತ್ನಿಸಿದ್ದರು. ಅದರ ಬೆನ್ನಲ್ಲೆ ಮತ್ತೊಂದು ಪತ್ರ ಬಂದಿದ್ದರಿಂದ ಸಹಜವಾಗಿಯೇ ಗಂಭೀರವಾಗಿ ಪರಿಗಣಿಸಿ ದೂರು ನೀಡಲಾಗಿತ್ತು.
ಇನ್ನು ಆ ಪತ್ರದ ಮೂಲ ಹುಡುಕುತ್ತಾ ಹೋದಾಗ ಸಿಕ್ಕಿದ್ದು ದೊಮ್ಮಲೂರು ಪೋಸ್ಟ್ ಬಾಕ್ಸ್. ಸುದೀಪ್ ಮನೆಗೆ ಬಂದ ಎರಡೂ ಪತ್ರಗಳು ದೊಮ್ಮಲೂರಿನಿಂದ ಬಂದಿತ್ತು. ಹೀಗಾಗಿ ಆ ಪತ್ರವನ್ನ ಯಾರು ಪೋಸ್ಟ್ ಮಾಡಿದ್ದು ಎಂಬುದರ ಬಗ್ಗೆ ಅಲ್ಲಿನ ಸಿಸಿಟಿವಿ ಪರಿಶೀಲನೆಗೆ ಸಿಸಿಬಿ ಮುಂದಾಗಿದೆ.
ಕೆಲವೊಂದು ಸಾಂಧರ್ಭಿಕ ಸಾಕ್ಷಿಗಳ ಅನ್ವಯ ಈ ಹಿಂದೆ ಸುದೀಪ್ ಕಾರು ಚಾಲಕನ ಮೇಲೆ ಅನುಮಾನ ಬಂದಿತ್ತು. ಈ ಕಾರು ಚಾಲಕನನ್ನ ಬಳಸಿಕೊಂಡು ಚಿತ್ರರಂಗದ ಆ ವ್ಯಕ್ತಿ ಕೃತ್ಯವನ್ನ ಎಸಗಿದ್ದನಾ ಎಂಬ ಶಂಕೆ ವ್ಯಕ್ತವಾಗಿದೆ.
ಆ ಕಾರು ಚಾಲಕ ಸಹ ನಾಪತ್ತೆ ಆಗಿದ್ದು, ಇದೊಂದು ಪ್ರೀ ಪ್ಲಾನ್ ಕೃತ್ಯ ಎಂಬುದಕ್ಕೆ ಸಿಸ್ಟಂ ಟೈಪಿಂಗ್ ಪತ್ರವೇ ಸಾಕ್ಷಿ. ಕೈ ಬರಹ ಪತ್ರವನ್ನ ಕಳಿಸಿದರೆ ಸಾಕ್ಷಿ ಸಿಗುತ್ತೆ ಎಂಬ ಕಾರಣಕ್ಕೆ ಟೈಪ್ ಮಾಡಿ ಆ ಪತ್ರವನ್ನ ಪೋಸ್ಟ್ ಮಾಡಲಾಗಿದೆ.
ಈಗ ಸಿಸಿಬಿ ಲೆಟರ್ ಹಾಕಿದ ಪೋಸ್ಟ್ ಬಾಕ್ಸ್ ಬಳಿ ಇರೋ ಸಿಸಿ ಕ್ಯಾಮರಾಗಳನ್ನು ಜಾಲಾಡುತ್ತಿದ್ದಾರೆ. ಸಿಸಿಬಿಯ ಸೈಬರ್ ವಿಂಗ್ ಕೂಡ ಈ ಪ್ರಕರಣದಲ್ಲಿ ಕೆಲಸ ಮಾಡುತ್ತಿದ್ದು, ಮುಂದಿನ ದಿನದಲ್ಲಿ ನಟ ಸುದೀಪ್ಗೂ ನೋಟಿಸ್ ನೀಡಿ ಹೇಳಿಕೆ ಪಡೆಯಲು ಸಿದ್ಧತೆ ನಡೆಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ