Sudeep: ಹುಬ್ಬಳ್ಳಿ ಶಾಲಾ ಮಕ್ಕಳ ಕಣ್ಣೀರಿಗೆ ಮಿಡಿದ ಕಿಚ್ಚ ಸುದೀಪ್: ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಸಕಲ ನೆರವು ಘೋಷಣೆ

ಸುದೀಪ್ ಚಾರಿಟಬಲ್ ಸೊಸೈಟಿಯಿಂದ ಶಾಲೆಯ ಪರ್ಯಾಯ ವ್ಯವಸ್ಥೆಗೆ ನೆರವು ನೀಡುವ ಭರವಸೆ ಸಿಕ್ಕಿದೆ. ಇಂದು ಶಾಲೆಗೆ ಭೇಟಿ ನೀಡಿದ್ದ ಚಾರಿಟಬಲ್ ಸೊಸೈಟಿ ಅಧ್ಯಕ್ಷ ರಮೇಶ್, ನಿರ್ದೇಶಕರಾದ ಪುಟ್ಟರಾಜು ಮತ್ತು ನಾಗೇಂದ್ರ ಮಕ್ಕಳ ನೋವಿಗೆ ಮಿಡಿದಿದ್ದಾರೆ.

ಚಾರಿಟಬಲ್ ಸೊಸೈಟಿ ಅಧ್ಯಕ್ಷ ರಮೇಶ್, ನಿರ್ದೇಶಕರಾದ ಪುಟ್ಟರಾಜು ಮತ್ತು ನಾಗೇಂದ್ರ ಮಕ್ಕಳ ನೋವಿಗೆ ಮಿಡಿದಿದ್ದಾರೆ.

ಚಾರಿಟಬಲ್ ಸೊಸೈಟಿ ಅಧ್ಯಕ್ಷ ರಮೇಶ್, ನಿರ್ದೇಶಕರಾದ ಪುಟ್ಟರಾಜು ಮತ್ತು ನಾಗೇಂದ್ರ ಮಕ್ಕಳ ನೋವಿಗೆ ಮಿಡಿದಿದ್ದಾರೆ.

  • Share this:
ಹುಬ್ಬಳ್ಳಿ (ಮಾ. 17) : ಹುಬ್ಬಳ್ಳಿಯ ರಾಮನಗರ ಹರಿಜನವಾಡ ಶಾಲೆಯ ಮಕ್ಕಳ ಕಣ್ಣೀರಿಗೆ ಕಿಚ್ಚ ಸುದೀಪ್ ಮಿಡಿದಿದ್ದಾರೆ. ನ್ಯಾಯಾಲಯ ಆದೇಶದ ಹಿನ್ನೆಲೆಯಲ್ಲಿ ಗಾಂಧಿವಾಡ ಸೊಸೈಟಿ ಶಾಲೆ ತೆರವುಗೊಳಿಸಿದ್ದರಿಂದ ಬೀದಿಗೆ ಬಿದ್ದ ಶಾಲಾ ಮಕ್ಕಳು ಕಣ್ಣೀರು ಹಾಕೋದನ್ನು ಸಾಮಾಜಿಕ ಜಾಲ ತಾಣದಲ್ಲಿ ಗಮನಿಸಿದ ಸುದೀಪ್ ಮಕ್ಕಳ ನೆರವಿಗೆ ಮುಂದಾಗಿದ್ದಾರೆ. ರಾಮನಗರದಲ್ಲಿರೋ ಹರಿಜನ ಸರ್ಕಾರಿ ಅನುದಾನಿತ ಶಾಲೆಗೆ ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿ ಅಧ್ಯಕ್ಷ ರಮೇಶ್ ಮತ್ತು ನಿರ್ದೇಶಕರು ಭೇಟಿ ನೀಡಿದರು. ಮಕ್ಕಳ ಸಂಕಷ್ಟಕ್ಕೆ ಕಿಚ್ಚ ಸುದೀಪ್ ಸೊಸೈಟಿ ಪ್ರತಿನಿಧಿಗಳು ಸ್ಪಂದಿಸಿದರು. 1956ರಲ್ಲಿ ಆರಂಭವಾಗಿದ್ದ ಶಾಲೆಯನ್ನು ಕಳೆದ ವಾರ ಮುಚ್ಚಲಾಗಿತ್ತು. ಶಾಲೆಯ ಜಾಗವನ್ನು ಗಾಂಧಿವಾಡ ಕೋ ಆಪರೇಟಿವ್ ಸೊಸೈಟಿ ಯಿಂದ ಲೀಜ್ ಗೆ ಪಡೆದಿತ್ತು.

ಲೀಜ್ ಅವಧಿ ಮುಗಿದ ಬಳಿಕ ಈ ಜಾಗವನ್ನು ಸೊಸೈಟಿ ಲೇಔಟ್ ಮಾಡಿ ಮಾರಾಟ ಮಾಡಲಾಗಿತ್ತು. ನ್ಯಾಯಲಯದ ಆದೇಶದ ನಂತರ ಸೊಸೈಟಿ ಶಾಲೆಯನ್ನು ಖಾಲಿ ಮಾಡಿಸಿತ್ತು. ಇದರಿಂದಾಗಿ ನೂರಾರು ವಿದ್ಯಾರ್ಥಿಗಳು, ಶಿಕ್ಷಕರು ಬೀದಿಗೆ ಬೀಳುವಂತಾಗಿತ್ತು.

ಈ ಹಿನ್ನೆಲೆಯಲ್ಲಿ ಮೊದಲು ಶಾಲಾ ಆವರಣದಲ್ಲಿಯೇ ಶಿಕ್ಷಕರು ಪಾಠ ಆರಂಬಿಸಿದ್ದರು. ಅದಾದ ನಂತರ ರಸ್ತೆಯ ಮೇಲೆಯೇ ತರಗತಿಗಳನ್ನು ಅರಂಭಿಸಲಾಗಿತ್ತು. ಸುಡು ಬಿಸಿಲಿನಲ್ಲಿಯೇ ಕುಳಿತು ವಿದ್ಯಾರ್ಥಿಗಳು ಓದುತ್ತಿದ್ದರು.

ಒಂದು ವಾರದ ಹಿಂದೆ ಕೋರ್ಟ್ ಆದೇಶ ತಂದು ಸೊಸೈಟಿ ಮಕ್ಕಳನ್ನು ಹೊರ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಚಾರಿಟೆಬಲ್ ಸೊಸೈಟಿ ಮಕ್ಕಳ ನೆರವಿಗೆ ಮುಂದಾಗಿದೆ. ಮಕ್ಕಳು ಶಾಲೆಗಾಗಿ ಕಣ್ಣೀರು ಹಾಕುತ್ತಿರೋ ದೃಶ್ಯಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಗಮನಿಸಿದ್ದ ನಟ ಕಿಚ್ಚ ಸುದೀಪ್ ತಮ್ಮ ತಂಡವನ್ನು ಹುಬ್ಬಳ್ಳಿಗೆ ಕಳುಹಿಸಿಕೊಟ್ಟಿದ್ದಾರೆ.

ಶಾಲಾ ಮಕ್ಕಳ ಕಣ್ಣೀರಿಗೆ ಕಿಚ್ಚ ಸುದೀಪ್ ಸ್ಪಂದಿಸಿದ್ದಾರೆ. ಸುದೀಪ್ ಚಾರಿಟಬಲ್ ಸೊಸೈಟಿಯಿಂದ ಶಾಲೆಯ ಪರ್ಯಾಯ ವ್ಯವಸ್ಥೆಗೆ ನೆರವು ನೀಡುವ ಭರವಸೆ ಸಿಕ್ಕಿದೆ. ಇಂದು ಶಾಲೆಗೆ ಭೇಟಿ ನೀಡಿದ್ದ ಚಾರಿಟಬಲ್ ಸೊಸೈಟಿ ಅಧ್ಯಕ್ಷ ರಮೇಶ್, ನಿರ್ದೇಶಕರಾದ ಪುಟ್ಟರಾಜು ಮತ್ತು ನಾಗೇಂದ್ರ ಮಕ್ಕಳ ನೋವಿಗೆ ಮಿಡಿದಿದ್ದಾರೆ.

ರಾಮನಗರದಲ್ಲಿರೋ ಶಾಲಾ ಕಟ್ಟಡದ ಬಳಿ ಶಾಲಾ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿದ್ದಾರೆ. ಶಾಲಾ ಆಡಳಿತ ಮಂಡಳಿ ತೆಗೆದುಕೊಳ್ಳುವ ಎಲ್ಲ ನಿರ್ಣಯಕ್ಕೆ ಬೆಂಬಲ ನೀಡೋದಾಗಿ ಭರವಸೆ ನೀಡಿದ್ದಾರೆ.

ಇದನ್ನು ಓದಿ: ಸಿಡಿ ಸಂತ್ರಸ್ತೆ ಪತ್ತೆಗಾಗಿ ವಿಶೇಷ ತಂಡ ರಚಿಸಿದ ಬೆಳಗಾವಿ ಪೊಲೀಸರು

ಕಿಚ್ಚ ಸುದೀಪ್ ಸ್ಪಂದನೆಗೆ ಶಾಲಾ ಮಕ್ಕಳೂ ಮಿಡಿದಿದ್ದಾರೆ. ತಮ್ಮ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿರೋದಕ್ಕೆ ಸುದೀಪ್ ಮತ್ತವರ ತಂಡಕ್ಕೆ ವಿದ್ಯಾರ್ಥಿಗಳು ಧನ್ಯವಾದ ತಿಳಿಸಿದ್ದಾರೆ. ಸದ್ಯಕ್ಕೆ ರಾಮನಗರ ಬಡಾವಣೆಯಲ್ಲಿರೋ ಕಿಂಗ್ಸ್ ಕಿಡ್ಸ್ ಪ್ರಿ ಸ್ಕೂಲ್ ನಲ್ಲಿ ಮಕ್ಕಳಿಗೆ ತಾತ್ಪೂರ್ತಿಕ ವ್ಯವಸ್ಥೆ ಮಾಡಲಾಗಿದೆ.

ಮುಂದೆ ಶಾಲಾ ಆಡಳಿತ ಮಂಡಳಿ ಹೊಸ ಕಟ್ಟಡ ನಿರ್ಮಿಸಲು ಮುಂದಾದರೆ ಆರ್ಥಿಕ ನೆರವು ನೀಡಲಾಗುವುದು. ಹಳೆಯ ಕಟ್ಟಡಕ್ಕೆ ಸಂಬಂಧಿಸಿ ನಡೆಯುವ ಕಾನೂನು ಹೋರಾಟಕ್ಕೂ ನಮ್ಮ ಬೆಂಬಲವಿದೆ.

ಕಾನೂನುನ ಪ್ರಕಾರ ನಡೆಯೋ ಚಟುವಟಿಕೆಗಳಿಗೆ ಬೆಂಬಲವಿದೆ. ಮಕ್ಕಳ ಹಿತದೃಷ್ಟಿಯಿಂದ ಸುದೀಪ್ ಸೂಚನೆ ಮೇರೆಗೆ ಎಲ್ಲ ರೀತಿಯ ಬೆಂಬಲ ಕೊಡ್ತಿದ್ದೇವೆ ಎಂದು ಸುದೀಪ್ ಚಾರಿಟಬಲ್ ಸೊಸೈಟಿ ಅಧ್ಯಕ್ಷ ರಮೇಶ್ ತಿಳಿಸಿದ್ದಾರೆ.

(ವರದಿ - ಶಿವರಾಮ ಅಸುಂಡಿ)
Published by:Seema R
First published: