Kichcha Sudeep: ಕಿಚ್ಚನ ಡಿಜಿಟಲೈಸ್ಡ್ ಅಕ್ಷರ ಕ್ರಾಂತಿ: ಶಾಲಾ ಮಕ್ಕಳಿಗೆ ಸುದೀಪ್ ಕಡೆಯಿಂದ ಉಡುಗೊರೆ

ಚಿಕ್ಕ ಮಕ್ಕಳಿಗೆ ಅನಿಮೇಷನ್ ಮೂಲಕವೂ ಪಾಠ ಮಾಡುವ ಸೌಲಭ್ಯ ಈ ಆ್ಯಪ್‍ನಲ್ಲಿದೆ. ಸದ್ಯ ಈ ಡಾರ್ಕ್ ಬೋರ್ಡ್ ಅನಿಮೇಷನ್ ಎಜುಕೇಷನ್ ಆ್ಯಪ್‍ಅನ್ನು ಮೊದಲು ಕಿಚ್ಚ ಸುದೀಪ ಅವರು ದತ್ತು ಪಡೆದಿರುವ ಸರ್ಕಾರಿ ಶಾಲೆಗಳಲ್ಲಿ ಪರಿಚಯಿಸಿ ನಂತರ ರಾಜ್ಯಾದ್ಯಂತ ಎಲ್ಲ ಸರ್ಕಾರಿ ಹಾಗೂ ಸರ್ಕಾರೇತರ ಶಾಲೆಗಳಿಗೂ ನೀಡುವ ಐಡಿಯಾ ಕಿಚ್ಚ ಸುದೀಪ ಚಾರಿಟೆಬಲ್ ಸೊಸೈಟಿ ಅಧ್ಯಕ್ಷರಾದ ರಮೇಶ್ ಕಿಟ್ಟಿ ಅವರದು

ಅಕ್ಷರ ಕ್ರಾಂತಿಯಲ್ಲಿ ಮತ್ತೊಂದು ಹೆಜ್ಜೆ ಇಟ್ಟ ಅಭಿನಯ ಚಕ್ರವರ್ತಿ

ಅಕ್ಷರ ಕ್ರಾಂತಿಯಲ್ಲಿ ಮತ್ತೊಂದು ಹೆಜ್ಜೆ ಇಟ್ಟ ಅಭಿನಯ ಚಕ್ರವರ್ತಿ

  • Share this:
ಸ್ಯಾಂಡಲ್‍ವುಡ್ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಅವರ ಸಾಮಾಜಿಕ ಕೆಲಸಗಳ ಬಗ್ಗೆ ಎಲ್ಲರಿಗೂ ಗೊತ್ತೇಯಿದೆ. ಕಿಚ್ಚ ಸುದೀಪ್ ಚಾರಿಟೆಬಲ್ ಸೊಸೈಟಿಯ ಮೂಲಕ ಅಭಿನಯ ಚಕ್ರವರ್ತಿ ಕಳೆದ ಕೆಲ ವರ್ಷಗಳಿಂದ ನಾನಾ ಬಗೆಯ ಸಮಾಜ ಸೇವೆಗಳನ್ನು ಮಾಡುತ್ತಿದ್ದಾರೆ. ಕೊರೋನಾ ಸಮಯದಲ್ಲಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯದ ಎಲ್ಲ ಭಾಗಗಳಲ್ಲೂ ನಿರ್ಗತಿಕರು, ಬಡವರು, ಕಷ್ಟದಲ್ಲಿರುವವರಿಗೆ ತಮ್ಮದೇ ರೀತಿಯಲ್ಲಿ ಸಹಾಯ ಹಸ್ತ ಚಾಚುತ್ತಿದ್ದಾರೆ. ಅಷ್ಟೇ ಯಾಕೆ ಹಲವು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುತ್ತಿದ್ದಾರೆ ಕೂಡ. ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಶಾಲೆಗಳು ಬಂದ್ ಆಗಿರುವ ಕಾರಣ ಸದ್ಯ ಕೆಲ ತಿಂಗಳಿನಿಂದ ಆನ್‍ಲೈನ್ ಕ್ಲಾಸ್‍ಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಈಗ ಆನ್‍ಲೈನ್ ಶಿಕ್ಷಣದಲ್ಲೂ ಒಂದು ಆ್ಯಪ್ ಪರಿಚಯಿಸುವ ಮೂಲಕ ಹೊಸ ಬಗೆಯ ಶಿಕ್ಷಣ ಕ್ರಾಂತಿಗೆ ಕಿಚ್ಚ ಸುದೀಪ ಚಾರಿಟೆಬಲ್ ಸೊಸೈಟಿ ಮುಂದಾಗಿದೆ.

ಹೌದು, ಆನ್‍ಲೈನ್ ಕ್ಲಾಸ್‍ಗಳಲ್ಲಿ ಶಿಕ್ಷಕರು ಹಾಗೂ ಮಕ್ಕಳು ಇಬ್ಬರೂ ನಾನಾ ಬಗೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಶಿಕ್ಷಕರಿಗೆ ನೆಟ್‍ವರ್ಕ್ ಸಿಕ್ಕರೆ ಮಕ್ಕಳಿಗೆ ನೆಟ್‍ವರ್ಕ್ ಸಮಸ್ಯೆ, ಮಕ್ಕಳಿಗೆ ನೆಟ್‍ವರ್ಕ್ ಸಿಕ್ಕರೆ ಶಿಕ್ಷಕರಿಗೆ ಸಮಸ್ಯೆ. ಅದರ ನಡುವೆ ಮೊಬೈಲ್ ಕ್ಯಾಮರಾ ಅಥವಾ ಲ್ಯಾಪ್‍ಟಾಪ್ ಅನ್ನು ಸ್ವಲ್ಪ ದೂರದಲ್ಲಿಟ್ಟು ಶಿಕ್ಷಕರು ಬೋರ್ಡ್ ಮೇಲೆ ಬರೆಯುತ್ತಿದ್ದರೆ ಆ ಅಕ್ಷರಗಳು ಮಕ್ಕಳಿಗೆ ಕಾಣಿಸದೇ ಹೆಣಗಾಡುವ ದುಸ್ಥಿತಿಯೂ ಇದೆ. ಆನ್‍ಲೈನ್ ಕ್ಲಾಸ್ ವ್ಯವಸ್ಥೆ ಎಲ್ಲರಿಗೂ ಹೊಸದಾದ ಕಾರಣ ಇಂತಹ ಹತ್ತು ಹಲವು ಸಮಸ್ಯೆಗಳು ಮಕ್ಕಳನ್ನು ಹಾಗೂ ಶಿಕ್ಷಕರನ್ನು ಕಾಡುತ್ತಲೇ ಇವೆ.

Kichcha Sudeep, Kichcha Sudeep Charitable society, Dark Board animation education app, ಡಾರ್ಕ್ ಬೋರ್ಡ್ ಅನಿಮೇಷನ್ ಎಜುಕೇಷನ್ ಆ್ಯಪ್‍, ಕಿಚ್ಚ ಸುದೀಪ ಚಾರಿಟೆಬಲ್ ಸೊಸೈಟಿ, ಕಿಚ್ಚ ಸುದೀಪ ಚಾರಿಟೆಬಲ್ ಸೊಸೈಟಿ ಅಧ್ಯಕ್ಷರಾದ ರಮೇಶ್ ಕಿಟ್ಟಿ, ಕಿಚ್ಚ ಸುದೀಪ್​, Kichcha Sudeep Charitable trust developed special app for online class ae
ಆನ್​ಲೈನ್​ ತರಗತಿಗೆ ಹೊಸ ಆ್ಯಪ್​


ಹೀಗಾಗಿಯೇ ಕಿಚ್ಚ ಸುದೀಪ ಮತ್ತು ಕಿಚ್ಚ ಸುದೀಪ ಚಾರಿಟೆಬಲ್ ಸೊಸೈಟಿಯ ಅಧ್ಯಕ್ಷರಾದ ರಮೇಶ್ ಕಿಟ್ಟಿ ಡಾರ್ಕ್ ಬೋರ್ಡ್ ಅನಿಮೇಷನ್ ಎಜುಕೇಷನ್ ಆ್ಯಪ್‍ಅನ್ನು ಪರಿಚಯಿಸುತ್ತಿದ್ದಾರೆ.

ಇದನ್ನೂ ಓದಿ: Pooja Hegde: ಕ್ಯಾಮೆರಾ ಹಿಡಿದು ಫೋಟೊಶೂಟ್​ಗೆ ಪೋಸ್​ ಕೊಟ್ಟ ಕರಾವಳಿ ಸುಂದರಿ ಪೂಜಾ ಹೆಗ್ಡೆ

ಈ ಡಾರ್ಕ್ ಬೋರ್ಡ್ ಅನಿಮೇಷನ್ ಎಜುಕೇಷನ್ ಆ್ಯಪ್‍ ಅನ್ನು ವಿಶೇಷತೆ ಏನು ಅಂದರೆ ಶಿಕ್ಷಕರು ಬೋರ್ಡ್ ಕಡೆ ಮುಖ ಮಾಡಿ ಮಕ್ಕಳ ಕಡೆ ಬೆನ್ನು ಮಾಡಿ ಪಾಠ ಮಾಡುವ ಅವಶ್ಯಕತೆಯಿಲ್ಲ, ಹಾಗೂ ಅಕ್ಷರ ಕಾಣಿಸದೇ ಮಕ್ಕಳು ಪರದಾಡುವ ಸಮಸ್ಯೆಯೂ ಇಲ್ಲ. ಯಾಕೆ ಅಂದರೆ ಮಕ್ಕಳು ಹಾಗೂ ಶಿಕ್ಷಕರ ಮಧ್ಯೆಯೇ ಬೋರ್ಡ್ ಇರುತ್ತದೆ. ಗ್ಲಾಸ್‍ನಂತಹ ಬೋರ್ಡ್ ಮೇಲೆ ಸ್ಕೆಚ್ ಪೆನ್‍ನಲ್ಲಿ ಬರೆಯುತ್ತಾ, ಮಕ್ಕಳನ್ನು ನೋಡುತ್ತಾ ಶಿಕ್ಷಕರು ಪಾಠ ಮಾಡಬಹುದು. ಆಗ ಮಕ್ಕಳು ಶಿಕ್ಷಕರ ಹಾವ ಭಾವ ನೋಡುತ್ತಾ, ಪಾಠ ಕಲಿಯಬಹುದು, ಬೋರ್ಡ್ ಮೇಲೆ ಬರೆದಿರುವುದನ್ನು ಸರಳವಾಗಿ ನೋಡುತ್ತಾ ತಾವೂ ಬರೆದುಕೊಳ್ಳಬಹುದು.

ಅಷ್ಟೇಅಲ್ಲ, .

ಇದನ್ನೂ ಓದಿ: Weight Loss: ಹೊಸ ಸಿನಿಮಾಗಾಗಿ 15 ಕೆಜಿ ತೂಕ ಇಳಿಸಿಕೊಂಡ ನಟ ಸಿಂಬು

ಹೀಗಾಗಿಯೇ ಈಗಾಗಲೇ ಕಿಚ್ಚ ಸುದೀಪ ಚಾರಿಟೆಬಲ್ ಸೊಸೈಟಿ ವತಿಯಿಂದ ದತ್ತು ಪಡೆದಿರುವ ಸರ್ಕಾರಿ ಶಾಲೆಗಳನ್ನು ಡಿಜಿಟಲೈಸ್ ಮಾಡುವ ಕೆಲಸಗಳೂ ಭರದಿಂದ ಸಾಗಿವೆ. ಇನ್ನು ಕೆಲವೇ ದಿನಗಳಲ್ಲಿ ಈ ಶಾಲೆಗಳ ಅಭಿವೃದ್ದಿ ಕೆಲಸ ಪೂರ್ಣಗೊಳ್ಳಲಿದ್ದು, ಡಾರ್ಕ್ ಬೋರ್ಡ್ ಅನಿಮೇಷನಲ್ ಎಜುಕೇಷನ್ ಆ್ಯಪ್ ಮೂಲಕ ಆನ್‍ಲೈನ್ ಕ್ಲಾಸ್ ಕೂಡ ಶುರುವಾಗಲಿದೆ. ಅದಾಗುತ್ತಲೇ ರಾಜ್ಯ ಸರ್ಕಾರಕ್ಕೂ ಈ ಆಪ್ ಬಗ್ಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಲಿದ್ದಾರೆ ನಟ ಕಿಚ್ಚ ಸುದೀಪ. ಶಿಕ್ಷಣ ಸಚಿವರನ್ನು ಭೇಟಿಯಾಗಿ ಈ ಡಾರ್ಕ್ ಬೋರ್ಡ್ ಕ್ಲಾಸ್ ಬಗ್ಗೆ ತಿಳಿಸಿ ಆನ್‍ಲೈನ್ ಮತ್ತು ಆಫ್‍ಲೈನ್ ಕ್ಲಾಸ್‍ಗಳಲ್ಲಿ ಬಳಸಿಕೊಳ್ಳುವಂತೆ ಕಿಚ್ಚ ಸುದೀಪ ಚಾರಿಟೆಬಲ್ ಸೊಟೈಟಿ ಮನವಿ ಮಾಡಿಕೊಳ್ಳಲಿದ್ದಾರೆ. ಜೊತೆಗೆ ಖಾಸಗಿ ಶಾಲಾ ಶಿಕ್ಷಕರಿಗೂ ಈ ಆಪ್ ಬಳಸುವಂತೆ ಉತ್ತೇಜಿಸುವ ಐಡಿಯಾ ಅವರದು.
Published by:Anitha E
First published: