HOME » NEWS » State » KICHCHA SUDEEP AWARDED DADA SAHEB PHALKE AWARD IN MUMBAI RMD

ದಾದಾ ಸಾಹೇಬ್ ಫಾಲ್ಕೆ ಭರವಸೆ ನಟ ಪ್ರಶಸ್ತಿ ಮುಡಿಗೇರಿಸಿಕೊಂಡ ಕಿಚ್ಚ ಸುದೀಪ್

ಕಳೆದ ವರ್ಷ ತೆರೆಗೆ ಬಂದಿದ್ದ ಸಲ್ಮಾನ್​ ಖಾನ್​ ಅಭಿನಯದ ‘ದಬಾಂಗ್​ 3’ ಚಿತ್ರದಲ್ಲಿ ಸುದೀಪ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ನಟನೆಗಾಗಿ ಸುದೀಪ್​ಗೆ ದಾದಾ ಸಾಹೇಬ್​ ಫಾಲ್ಕೆ ಭರವಸೆ ನಟ ಪ್ರಶಸ್ತಿ ದೊರೆತಿದೆ.

news18-kannada
Updated:February 21, 2020, 11:12 AM IST
ದಾದಾ ಸಾಹೇಬ್ ಫಾಲ್ಕೆ ಭರವಸೆ ನಟ ಪ್ರಶಸ್ತಿ ಮುಡಿಗೇರಿಸಿಕೊಂಡ ಕಿಚ್ಚ ಸುದೀಪ್
ಕಿಚ್ಚ ಸುದೀಪ್​
  • Share this:
ಮುಂಬೈ: ನಟ ಕಿಚ್ಚ ಸುದೀಪ್​ ದಾದಾ ಸಾಹೇಬ್​ ಫಾಲ್ಕೆ ಭರವಸೆ ನಟ ಪ್ರಶಸ್ತಿ ಸ್ವೀಕರಿಸಿದ್ದಾರೆ. ಮುಂಬೈನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಕಿಚ್ಚ ಈ ಗೌರವ ಸ್ವೀಕರಿಸಿದರು.

ಕಳೆದ ವರ್ಷ ತೆರೆಗೆ ಬಂದಿದ್ದ ಸಲ್ಮಾನ್​ ಖಾನ್​ ಅಭಿನಯದ ‘ದಬಾಂಗ್​ 3’ ಚಿತ್ರದಲ್ಲಿ ಸುದೀಪ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ನಟನೆಗಾಗಿ ಸುದೀಪ್​ಗೆ ದಾದಾ ಸಾಹೇಬ್​ ಫಾಲ್ಕೆ ಭರವಸೆ ನಟ ಪ್ರಶಸ್ತಿ ದೊರೆತಿದೆ.

ಈ ಬಗ್ಗೆ ಟ್ವೀಟ್​ ಮಾಡಿ ಧನ್ಯವಾದ ಹೇಳಿರುವ ಸುದೀಪ್​, “ಗೆಳೆಯರಿಗೆ, ಮಾಧ್ಯಮ ಮಿತ್ರರಿಗೆ, ಸಹೋದ್ಯೋಗಿಗಳಿಗೆ, ಸಹ ಕಲಾವಿದರಿಗೆ, ತಂತ್ರಜ್ಞರಿಗೆ, ನನ್ನ ಕುಟುಂಬ, ನನ್ನ ತಂಡಕ್ಕೆ ಧನ್ಯವಾದಗಳು. ಪರಿಪೂರ್ಣವಾಗಲು ನೀವು ಕಾರಣ. ಉತ್ತಮವಾಗಿ ನಟಿಸಲು ನೀವು ಕಾರಣ,” ಎಂದು ಸುದೀಪ್​ ಧನ್ಯವಾದ ಹೇಳಿದ್ದಾರೆ.ಇದನ್ನೂ ಓದಿ: ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ ಸ್ವೀಕರಿಸಲಾಗುತ್ತಿಲ್ಲ: ಟ್ವೀಟ್​ ಮಾಡಿದ ಅಮಿತಾಭ್​ ಬಚ್ಚನ್​..!

'ದಬಾಂಗ್ 3' ಚಿತ್ರದಲ್ಲಿ ಸುದೀಪ್ ನೆಗೆಟಿವ್​ ಪಾತ್ರ ಮಾಡಿದ್ದರು. ಸಲ್ಮಾನ್ ಖಾನ್ ನಟನೆಯ ಈ ಚಿತ್ರಕ್ಕೆ ಪ್ರಭುದೇವ ಆ್ಯಕ್ಷನ್​ ಕಟ್​ ಹೇಳಿದ್ದರು. ಈ ಚಿತ್ರದ ನಟನೆಗೆ ಸುದೀಪ್​ಗೆ ಈ ಪ್ರಶಸ್ತಿ ಜನವರಿ ತಿಂಗಳಲ್ಲಿ ಘೋಷಣೆ ಆಗಿತ್ತು. ಫೆ.20ರಂದು ಮುಂಬೈನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಸುದೀಪ್​ ಪ್ರಶಸ್ತಿ ಸ್ವೀಕರಿಸಿದ್ದಾರೆ.
First published: February 21, 2020, 11:09 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories