ರಾಷ್ಟ್ರಗೀತೆ ಹಾಡುವಾಗ ಸುದೀಪ್​ ಮಾಡಿದ ತಪ್ಪು ಹುಡುಕಿ ಬುದ್ಧಿ ಹೇಳಿದ ನೆಟ್ಟಿಗ: ಕಿಚ್ಚನ ಪ್ರತಿಕ್ರಿಯೆ ಹೀಗಿದೆ..!

75ನೇ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಗೀತೆ ಹಾಡುವ ವಿಡಿಯೋ ಹಂಚಿಕೊಳ್ಳುವ ಮೂಲಕ ವಿಶೇಷವಾಗಿ ವಿಶ್​ ಮಾಡಿದ್ದ ಸುದೀಪ್​ ಅವರಿಗೆ ನೆಟ್ಟಿಗರೊಬ್ಬರು ಕೊಂಚ ಖಾರವಾಗಿ ಕಮೆಂಟ್ ಮಾಡಿದ್ದಾರೆ. ಅದಕ್ಕೆ ಸುದೀಪ್​ ಕೊಟ್ಟಿರುವ ಪ್ರತಿಕ್ರಿಯೆ ಈಗ ಸಾಕಷ್ಟು ಮಂದಿಯ ಮೆಚ್ಚುಗೆಗೆ ಪಾತ್ರವಾಗಿದೆ.

ತಪ್ಪು ಒಪ್ಪಿಕೊಂಡ ಸುದೀಪ್​

ತಪ್ಪು ಒಪ್ಪಿಕೊಂಡ ಸುದೀಪ್​

  • Share this:
75ನೇ ಸ್ವಾತಂತ್ರ್ಯ ದಿನಾಚರಣೆಯ  (75th Independence Day) ಸುಸಂದರ್ಭದಲ್ಲಿ, ನಿನ್ನೆ ಸಾಮಾಜಿಕ ಜಾಲತಾಣದ ಮೂಲಕ ಸೆಲೆಬ್ರಿಟಿಗಳು ವಿಶ್​ ಮಾಡಿದ್ದರು. ಒಬ್ಬೊಬ್ಬರು ಒಂದೊಂದು ರೀತಿ ಶುಭ ಕೋರಿದ್ದಾರೆ. ಕೆಲವರು ತಮ್ಮ ವಿಡಿಯೋಗಳ ಮೂಲಕ ವಿಶ್​ ಮಾಡಿದರೆ, ಕಿಚ್ಚ ಸುದೀಪ್​  (Kichcha Sudeep) ರಾಷ್ಟ್ರಗೀತೆ  (National Anthem) ಹಾಡುವ ವಿಡಿಯೋವನ್ನು ಹಂಚಿಕೊಂಡಿದ್ದರು. ನಿನ್ನೆ ಸುದೀಪ್​ ಅವರು ಹಂಚಿಕೊಂಡ ವಿಶೇಷ ವಿಡಿಯೋ ನೋಡಿದ ಅಭಿಮಾನಿಗಳು ಹಾಗೂ ನೆಟ್ಟಿಗರು ಮೆಚ್ಚಿಕೊಂಡಿದ್ದರು. ಆದರೆ ರಾಷ್ಟ್ರಗೀತೆ ಹಾಡುವಾಗ ಸುದೀಪ್ ಅವರು ಮಾಡಿರುವ ಒಂದು ತಪ್ಪು ನಂತರದಲ್ಲಿ ಟೀಕೆಗೆ ಗುರಿಯಾಯ್ತು. ಹೌದು, ನೆಟ್ಟಿಗರೊಬ್ಬರು ಸುದೀಪ್​ ಅವರು ರಾಷ್ಟ್ರಗೀತೆ ಹಾಡುವಾಗ ಮಾಡಿರುವ ತಪ್ಪನ್ನು ಕಂಡು ಹಿಡಿದಿದ್ದಾರೆ. ಅದನ್ನು ಎತ್ತಿ ತೋರಿಸುತ್ತಾ ಕಮೆಂಟ್ ಮಾಡಿದ್ದಾರೆ. ಇದಾದ ನಂತರ ಸಾಕಷ್ಟು ಮಂದಿ ನಟ ಕಿಚ್ಚ ಸುದೀಪ್ ಅವರು ಮಾಡಿದ್ದು ತಪ್ಪು ಎಂದು ಟೀಕಿಸಿದ್ದಾರೆ.

75ನೇ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಗೀತೆ ಹಾಡುವ ವಿಡಿಯೋ ಹಂಚಿಕೊಳ್ಳುವ ಮೂಲಕ ವಿಶೇಷವಾಗಿ ವಿಶ್​ ಮಾಡಿದ್ದ ಸುದೀಪ್​ ಅವರಿಗೆ ನೆಟ್ಟಿಗರೊಬ್ಬರು ಕೊಂಚ ಖಾರವಾಗಿ ಕಮೆಂಟ್ ಮಾಡಿದ್ದಾರೆ. ಸುದೀಪ್​ ಅವರು ರಾಷ್ಟ್ರಗೀತೆ ಹಾಡಿದ್ದನ್ನು ಮೆಚ್ಚಿಕೊಂಡಿದ್ದ ನೆಟ್ಟಿಗರಲ್ಲಿ ಬಹುತೇಕರು ಒಂದು ವಿಷಯವನ್ನು ಗಮನಿಸಿರಲಿಲ್ಲ.

ಕಿಚ್ಚ ಸುದೀಪ್​ ಅವರ ಟ್ವೀಟ್​ ಲಿಂಕ್​ಸಾಮಾನ್ಯವಾಗಿ ರಾಷ್ಟ್ರಗೀತೆಯನ್ನು 48-52 ಸೆಕೆಂಡ್​ ಒಳಗೆ ಹಾಡಬೇಕು. ಆದರೆ ಸುದೀಪ್​ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ 63-65 ಸೆಕೆಂಡ್​ ಇದೆ. ಈ ತಪ್ಪನ್ನು ಗಮನಿಸಿದ ನೆಟ್ಟಿಗರೊಬ್ಬರು ಸರಿಯಾಗಿ ರಾಷ್ಟ್ರೀತೆ ಹಾಡಿ ಸರ್​, ನಿಮ್ಮನ್ನು ತುಂಬಾ ಜನ ಹಿಂಬಾಲಿಸುತ್ತಾರೆ. ನೀವು ಟಾಪ್​ ನಟ ಆಗಿರಬಹುದು. ಆದರೆ 48-52 ಸೆಕೆಂಡ್ಸ್​ ಒಳಗೆ ಹಾಡಬೇಕು ಅನ್ನೋ ಸಾಮಾನ್ಯ ಜ್ಞಾನ ಕೂಡ ಇಲ್ವಾ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Dhruva Sarja: ಮಾರ್ಟಿನ್​ ನಾನಲ್ಲ ಎಂದಿದ್ದೇಕೆ ಧ್ರುವ ಸರ್ಜಾ: ಮಾರಾಟವಾಯ್ತು ಆಡಿಯೋ ರೈಟ್ಸ್​

ನೆಟ್ಟಿಗರೊಬ್ಬರು ಮಾಡಿರುವ ಈ ಕಮಂಟ್​ಗೆ ಸುದೀಪ್​ ಅವರು ಪ್ರತಿಕ್ರಿಯಿಸಿರುವ ರೀತಿ ಈಗ ಮೆಚ್ಚುಗೆಗೆ ಪಾತ್ರವಾಗಿದೆ. ಹೌದು, ಸುದೀಪ್​ ಅವರ ಪ್ರತಿಕ್ರಿಯೆ ಹೀಗಿದೆ... ನಿಮ್ಮ ಕಮೆಂಟ್​ ತುಂಬಾ ಒರಟಾಗಿದೆ... ಆದರೂ ಒಪ್ಪಿಕೊಳ್ಳುತ್ತೇನೆ. ನನ್ನ ದೇಶದ ಮೇಲಿನ ಪ್ರೀತಿಯನ್ನು ನನಗೆ ತಿಳಿದಂತೆ ವ್ಯಕ್ತಪಡಿಸಿದ್ದೇನೆ ಎಂದಿದ್ದಾರೆ.

ಕಿಚ್ಚ ಸುದೀಪ್​ ಅವರ ಲೆಟೆಸ್ಟ್​ ಟ್ವೀಟ್​ ಲಿಂಕ್​ಸುದೀಪ್​ ಅವರು ಮಾಡಿದ ತಪ್ಪನ್ನು ಕಂಡು ಹಿಡಿದು ಕಮೆಂಟ್​ ಮಾಡಿದ ನಂತರ ವಾದ-ಪ್ರತಿವಾದ ಆರಂಭವಾಗಿದೆ. ಸುದೀಪ್​ ಅವರು ದೇಶ ಪ್ರೇಮವನ್ನು ವ್ಯಕ್ತಪಡಿಸಿರುವುದನ್ನು ಸ್ವಾಗತಿಸಬೇಕೇ ಹೊರತು ಟೀಕಿಸುವುದು ಸರಿಯಲ್ಲ ಎಂದು ಕೆಲವು ಹೇಳಿದ್ದಾರೆ. ಮತ್ತೆ ಕೆಲವರು ಟೀಕೆ ಮಾಡಿದ ಕಮೆಂಟ್​ಗಳಲ್ಲಿ ಕೇವಲ ಒಬ್ಬರಿಗೆ ಮಾತ್ರ ಪ್ರತಿಕ್ರಿಯೆ ನೀಡುವುದು ಸರಿಯಾಗ. ಕಮೆಂಟ್​ ಮಾಡಿದ ವ್ಯಕ್ತಿಯನ್ನು ಟ್ಯಾಗ್​ ಮಾಡದೆ ಪ್ರತಿಕ್ರಿಯಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದೂ ಹಲವರು ಅಭಿಪ್ರಾಯ ಪಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಕಿಚ್ಚ ಸುದೀಪ್​ ಅವರಿಗೆ ಟ್ವಿಟರ್​ನಲ್ಲಿ 25 ಲಕ್ಷಕ್ಕೂ ಅಧಿಕ ಹಿಂಬಾಲಕರಿದ್ದಾರೆ. ಇನ್ನು ಕಿಚ್ಚ ಸುದೀಪ್​ ತಮ್ಮ ಪ್ರತಿಯೊಬ್ಬ ಅಭಿಮಾನಿ ಮಾಡುವ ಟ್ವೀಟ್​ಗೂ ಪ್ರತಿಕ್ರಿಯೆ ನೀಡುವ ಮೂಲಕ ಸದಾ ಸಂಪರ್ಕದಲ್ಲಿರುತ್ತಾರೆ. ಇನ್ನು ಇತ್ತೀಚೆಗಷ್ಟೆ ಸುದೀಪ್​ ಅವರು ಬಿಗ್ ಬಾಸ್​ ಕನ್ನಡ ಸೀಸನ್​ 8ರ ನಿರೂಪಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಇದನ್ನೂ ಓದಿ: Pooja Hegde: ಕ್ಯಾಮೆರಾ ಹಿಡಿದು ಫೋಟೊಶೂಟ್​ಗೆ ಪೋಸ್​ ಕೊಟ್ಟ ಕರಾವಳಿ ಸುಂದರಿ ಪೂಜಾ ಹೆಗ್ಡೆ

ಕಿಚ್ಚ ಸುದೀಪ್ ಅವರ ಸಿನಿಮಾ ವಿಷಯಕ್ಕೆ ಬರುವುದಾದರೆ ಕೋಟಿಗೊಬ್ಬ 3 ಹಾಗೂ ವಿಕ್ರಾಂತ್​ ರೋಣ ಸಿನಿಮಾ ರಿಲೀಸ್​ಗೆ ಸಜ್ಜಾಗಿದೆ. ಕೊರೋನಾ ಕಾಟ ಕಡಿಮೆಯಾಗಿ ಸಿನಿಮಾ ಮಂದಿರಗಳು ಪೂರ್ಣ ಪ್ರಮಾಣದಲ್ಲಿ ಸಿನಿಪ್ರಿಯರಿಗಾಗಿ ಬಾಗಿಲು ತೆರೆದಾಗ ಈ ಚಿತ್ರಗಳ ರಿಲೀಸ್​ ದಿನಾಂಕ ಪ್ರಕಟಣೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ವಿಕ್ರಾಂತ್ ರೋಣ ಸಿನಿಮಾದಲ್ಲಿ ಶ್ರೀಲಂಕಾ ಮೂಲದ ಬಾಲಿವುಡ್​ ನಟಿ ಜಾಕ್ವೆಲಿನ್ ಫರ್ನಾಂಡಿಸ್​ ಸಹ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.
Published by:Anitha E
First published: