ವಿಜಯಪುರದಲ್ಲಿ ನಡೆಯಿತು ಸಾಮರಸ್ಯದ ಉರುಸು- ಖಾಜಾ ಬಂದೆನವಾಜ್ ದರ್ಗಾಕ್ಕೆ ತೆರಳಿ ನಮಿಸಿದ ಜನ ಸಾವಿರಾರು

news18
Updated:August 1, 2018, 8:55 PM IST
ವಿಜಯಪುರದಲ್ಲಿ ನಡೆಯಿತು ಸಾಮರಸ್ಯದ ಉರುಸು- ಖಾಜಾ ಬಂದೆನವಾಜ್ ದರ್ಗಾಕ್ಕೆ ತೆರಳಿ ನಮಿಸಿದ ಜನ ಸಾವಿರಾರು
news18
Updated: August 1, 2018, 8:55 PM IST
- ಮಹೇಶ್ ವಿ. ಶಟಗಾರ, ನ್ಯೂಸ್18 ಕನ್ನಡ

ವಿಜಯಪುರ (ಆ. 01 ): ಭೀಮಾ ತೀರದಲ್ಲಿ ನಡೆಯಿತು ಸಾಮರಸ್ಯದ ಉರುಸು.  ಶತಮಾನಂಗಳಿಂದ ಇಲ್ಲಿ ಆಚರಣೆಯಲ್ಲಿದೆ ಐತಿಹಾಸಿಕ ಉರುಸು.  ರಕ್ತಚರಿತ್ರೆಯ ಇತಿಹಾಸದ ಗ್ರಾಮದಲ್ಲಿನ ಈ ಉರುಸು ಸಾರಿತು ಭಾವೈಕ್ಯತೆಯ ಸಂದೇಶ.

ಭೀಮಾ ತೀರದಲ್ಲಿ ನಡೆಯಿತು ಸಾಮರಸ್ಯದ ಉರುಸು.  ಶತಮಾನಗಳಿಂದ ಇಲ್ಲಿ ಆಚರಣೆಯಲ್ಲಿದೆ ಐತಿಹಾಸಿಕ ಉರುಸು.  ರಕ್ತಚರಿತ್ರೆಯ ಇತಿಹಾಸದ ಗ್ರಾಮದಲ್ಲಿನ ಈ ಉರುಸು ಸಾರಿತು ಭಾವೈಕ್ಯತೆಯ ಸಂದೇಶ. ಈಗಲೂ ಸದಾ ಸುದ್ದಿಯಲ್ಲಿರುವ ವಿಜಯಪುರ ಜಿಲ್ಲೆಯ ಭೀಮಾ ತೀರದ ಉಮರಾಣಿ ಗ್ರಾಮದಲ್ಲಿ ಕೋಮು ಸಾಮರಸ್ಯೆಕ್ಕೆ ಹೆಸರಾಗಿರುವ ಖಾಜಾ ಬಂದೆನವಾಜ್ ಉರುಸು ಅದ್ದೂರಿಯಾಗಿ ನಡೆಯಿತು.

ಮೂರು ದಿನಗಳ ಕಾಲ ನಡೆದ ಈ ಉರಿಸಿನಲ್ಲಿ ಕೇವಲ ಉಮರಾಣಿಯಷ್ಟೇ ಅಲ್ಲ, ಸುತ್ತಮುತ್ತಲಿನ ಮತ್ತು ನೆರೆಯ ಮಹಾರಾಷ್ಟ್ರದಿಂದಲೂ ಜನ ಭಕ್ತರು ಬಂದಿದ್ದರು.  ಹಿಂದೂ-ಮುಸ್ಲಿಂ, ಮೇಲ್ವರ್ಗ, ಕೆಳವರ್ಗ ಎಂಬ ಭೇದವಿಲ್ಲದೇ ಎಲ್ಲರೂ ಈ ದರ್ಗಾಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.  ಶತಮಾನಗಳಿಂದ ಈ ಉರುಸು ನಡೆದುಕೊಂಡು ಬಂದಿದ್ದು, ಇಲ್ಲಿ ಯಾವುದೇ ಕೋಮು ಭಾವನೆಗಳಿಗೆ ಆಸ್ಪದವಿಲ್ಲ.  ಇಲ್ಲಿರುವವರೆಲ್ಲರೂ ಖಾಜಾ ಬಂದೆನವಾಜ್ ಭಕ್ತರು ಎನ್ನುತ್ತಾರೆ ದರ್ಗಾದ ಮುಖ್ಯ ಪೂಜಾರಿ ರೆಹಮಾನ ಬಾಬುಲಾಲ್ ಮುಲ್ಲಾ.

ನಮ್ಮೂರಿನ ಖಾಜಾ ಬಂದೆನವಾಜ್ ಎಲ್ಲರ ಭಕ್ತಿಯ ಕೇಂದ್ರವಾಗಿದೆ.  ಇಲ್ಲಿ ನಾವು ಹಿಂದೂ, ನಾವು ಮುಸ್ಲಿಂ ಎಂಬ ಭಾವನೆಗಳಿಲ್ಲ.  ನಾವೆಲ್ಲ ಒಂದೆ ಎಂಬುದು ಇಲ್ಲೆಲ್ಲ ಎನ್ನುತ್ತಾರೆ ಉಮರಾಣಿ ಗ್ರಾಮ ಪಂಚಾಯಿತಿ ಸದಸ್ಯ ಅಶೋಕ ಭೈರಗೊಂಡ ಮತ್ತು ಮಾಜಿ ಅಧ್ಯಕ್ಷ ಜಗದೀಶ ಭೈರಗೊಂಡ, ಉಮರಾಣಿ.

ಮೂರು ದಿನಗಳ ಈ ಉರುಸಿನಲ್ಲಿ ಹಿಂದೂ ಮತ್ತು ಮುಸ್ಲಿಮರಿಬ್ಬರೂ ಸೇರಿಕೊಂಡು ಅದ್ದೂರಿಯಾಗಿ ಕಾರ್ಯಕ್ರಮ ನಡೆಸಿಕೊಡುತ್ತಾರೆ.  ಮಕ್ಕಳು, ಮಹಿಳೆಯರು ಮತ್ತು ಹಿರಿಯರೆನ್ನದೇ ಎಲ್ಲರೂ ಉತ್ಸಾಹದಿಂದ ಪಾಲ್ಗೋಳ್ಳುತ್ತಾರೆ.  ನಮ್ಮ ಅಜ್ಜ, ಮುತ್ತಜ್ಜನ ಕಾಲದಿಂದಲೂ ಇಲ್ಲಿ ಭೀಮಾ ತಟದಲ್ಲಿ ಜಾತ್ರೆ ನಡೆಯುತ್ತಿದೆ ಎನ್ನುತ್ತಾರೆ ಈ ಗ್ರಾಮದ ಯುವಕರು.

ಭೀಮಾ ನದಿಯ ತಟದಲ್ಲಿರುವ ಈ ದರ್ಗಾದಲ್ಲಿ ನಡೆದ ಈ ಉರುಸು ಕಾರ್ಯಕ್ರಮ ಇಲ್ಲಿನ ಜನರಿಗೆ ಖಾಜಾ ಬಂದೆನವಾಜ್ ಮೇಲಿರುವ ಭಕ್ತಿಗೆ ಸಾಕ್ಷಿಯಾಗಿತ್ತು.  ಈಗಲೂ ಭೀಮಾ ತೀರದ ಧರ್ಮರಾಜ ಚಡಚಣ, ಗಂಗಾಧರ ಚಡಚಣ ಮತ್ತು ಮಹಾದೇವ ಸಾಹುಕಾರ ಭೈರಗೊಂಡ ಅವರಿಂದಾಗಿ ಉಮರಾಣಿ ಗ್ರಾಮದ ಸದಾ ಸುದ್ದಿಯಲ್ಲಿದೆ.  ಈ ಎಲ್ಲರೂ ಕೂಡ ಇದೇ ಉಮರಾಣಿ ಗ್ರಾಮದವರಾಗಿರುವುದು ವಿಶೇಷ.
Loading...

ಆದರೆ, ಇಲ್ಲಿನ ಜನ ಮಾತ್ರ ಇದಾವುದಕ್ಕೂ ತಮಗೂ ಸಂಬಂಧವಿಲ್ಲ ಎಂಬಂತೆ ಇಲ್ಲಿ ನಡೆದ ಉರುಸಿನಲ್ಲಿ ಪಾಲ್ಗೊಂಡು ಗಮನ ಸಳೆದರು.  ಅಷ್ಯೇ ಅಲ್ಲ, ಈ ಜಾತ್ರೆಯಲ್ಲಿ ತಮ್ಮ ಹೋರಿಗಳೊಂದಿಗೆ ಪಾಲ್ಗೊಂಡ ರೈತರು ಉತ್ತಮ ಮಳೆಯಾಗಿ ಸಮೃದ್ಧ ಬೆಳೆ ಬರಲೆಂದು ಖಾಜಾ ಬಂದೆನವಾಜನ್ ನಲ್ಲಿ ಪ್ರಾರ್ಥಿಸಿದರು.
First published:August 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...