HOME » NEWS » State » KHUSHBU SUNDAR MEETS WITH ACCIDENT ON WAY TO BJPS VEL YATRA IN MADHURANDHAGAM TAMIL NADU SESR

ಬಿಜೆಪಿ ನಾಯಕಿ ಖುಷ್ಭೂ ಸುಂದರ್​ ಕಾರು ಅಪಘಾತ; ದೇವರೇ ನಿಮ್ಮನ್ನು ಕಾಪಾಡಿದ ಎಂದ ಸಿಟಿ ರವಿ

Khushbu Sundar: ಅಪಘಾತ ಕುರಿತು ಆಘಾತ ವ್ಯಕ್ತಪಡಿಸಿರುವ ತಮಿಳುನಾಡು ಉಸ್ತುವಾರಿ ಸಿಟಿ ರವಿ, ದೇವರ ಕೃಪೆಯಿಂದ ನೀವು ಸುರಕ್ಷಿತರಾಗಿದ್ದೀರಾ. ಇದು ಸಮಾಧಾನ ತಂದಿದೆ ಎಂದು ಟ್ವೀಟ್​ ಮಾಡಿದ್ದಾರೆ.

news18-kannada
Updated:November 18, 2020, 6:36 PM IST
ಬಿಜೆಪಿ ನಾಯಕಿ ಖುಷ್ಭೂ ಸುಂದರ್​ ಕಾರು ಅಪಘಾತ; ದೇವರೇ ನಿಮ್ಮನ್ನು ಕಾಪಾಡಿದ ಎಂದ ಸಿಟಿ ರವಿ
ನಟಿ ಖುಷ್ಭೂ ಸುಂದರ್​​
  • Share this:
ಚೆನ್ನೈ (ನ.18): ಬಿಜೆಪಿ ನಾಯಕಿ, ನಟಿ ಖುಷ್ಬೂ ಸುಂದರ್ ಪ್ರಯಾಣಿಸುತ್ತಿದ್ದ​ ಕಾರು ಅಪಘಾತಕ್ಕೆ ಒಳಗಾಗಿದ್ದು, ಕೂದಲೆಳೆ ಅಂತರದಿಂದ ಅವರು ಪಾರಾಗಿದ್ದಾರೆ. ಈ ಕುರಿತು ಟ್ವೀಟರ್​ನಲ್ಲಿ ನಟಿ ಫೋಟೋ ಹಾಕಿದ್ದು, ಪ್ರಾಣಾಪಾಯದಿಂದ ತಾವು ಪಾರಾಗಿದ್ದು, ಸುರಕ್ಷಿತವಾಗಿದ್ದೇನೆ ಎಂದಿದ್ದಾರೆ. ಚೆನ್ನೈನ ಹೊರವಲಯದಲ್ಲಿ ಈ ಅಪಘಾತವಾಗಿದ್ದು, ಅವರು ಬಿಜೆಪಿಯ ವೆಲ್​ಯಾತ್ರೆಗೆ ಭಾಗಿಯಾಗಲು ಕಡಲೂರಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಟ್ಯಾಂಕರ್​ ವಾಹನವೊಂದು ಅವರ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರಿನ ಹಿಂಬದಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಪಘಾತದ ಕುರಿತು ಫೋಟೋದೊಂದಿಗೆ ಮಾಹಿತಿ ಹಂಚಿಕೊಂಡಿರುವ ನಾಯಕಿ ಜನರ ಆಶೀರ್ವಾದ ಮತ್ತು ದೇವರ ದಯೆಯಿಂದ ನಾನು ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದಾರೆ.ಅಪಘಾತ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮತ್ತೊಂದು ಟ್ವೀಟ್​ನಲ್ಲಿ ತಿಳಿಸಿರುವ ಅವರು ಮುರುಗ ನಮ್ಮನ್ನು ಕಾಪಾಡಿದ ಎಂದು ದೇವರನ್ನು ಸ್ಮರಿಸಿದ್ದಾರೆ. ನನ್ನ ಗಂಡ ಮುರುಗನ ಮೇಲೆ ಅಪಾರ ನಂಬಿಕೆ ಇಟ್ಟಿದ್ದರು. ಆತನೇ ನಮ್ಮನ್ನು ರಕ್ಷಿಸಿದ ಎಂದಿದ್ದಾರೆ.ತಮ್ಮ ಕಾರು ಬಲ ಬದಿ ಚಲಿಸುತ್ತಿತ್ತು. ಈ ವೇಳೆ ಕಂಟೇನರ್​ ಟ್ಯಾಂಕರ್​ ವಾಹನ ನುಗ್ಗಿ ಬಂದಿತು. ನಿಯಮ ಮೀರಿ ವಾಹನ ಚಲಾಯಿಸಿದ ಟ್ಯಾಂಕರ್​ ಚಾಲಕನನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಈ ಅಪಘಾತದಿಂದ ಯಾವುದೇ ಹಾನಿ ನನಗೆ ಆಗಿಲ್ಲ. ಹಾಗಾಗಿ ವೆಲ್​ ಯಾತ್ರೆಗೆ ನನ್ನ ಪ್ರಯಾಣ ಮುಂದುವರೆಸುವುದಾಗಿ ಅವರು ತಿಳಿಸಿದ್ದಾರೆ. ನಟಿ ಅಪಘಾತಕ್ಕೆ ಚಿಕ್ಕಮಗಳೂರು ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಕೂಡ ಆಘಾತ ವ್ಯಕ್ತಪಡಿಸಿದ್ದು, ದೇವರೇ ಕೃಪೆಯಿಂದ ನೀವು ಸುರಕ್ಷಿತರಾಗಿದ್ದೀರಾ. ಇದು ಸಮಾಧಾನ ತಂದಿದೆ ಎಂದು ಟ್ವೀಟ್​ ಮಾಡಿದ್ದಾರೆ. ಇನ್ನು ಇತ್ತೀಚೆಗಷ್ಟೇ ಬಿಜೆಪಿ ಉಸ್ತುವಾರಿ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ ತಮಿಳುನಾಡಿನ ಉಸ್ತುವಾರಿಯನ್ನು ಸಿಟಿ ರವಿ ಅವರಿಗೆ ನೀಡಿದ್ದು, ಅಲ್ಲಿನ ಚುನಾವಣಾ ಜವಾಬ್ದಾರಿ ಹೊರೆಸಿದೆ.ಮುಂದಿನ ವರ್ಷ ರಾಜ್ಯದಲ್ಲಿ ನಡೆಯಲಿರುವ ಚುನಾವಣೆ ದೃಷ್ಟಿ ಹಿನ್ನಲೆ ಬಿಜೆಪಿ ರಾಜ್ಯಾದ್ಯಂತ ವೆಲ್​ ಯಾತ್ರೆ ನಡೆಸುತ್ತಿದೆ. ಹಿಂದೂ ಮತಗಳ ಮೇಲೆ ಕಣ್ಣಿಟ್ಟು ಈ ಯಾತ್ರೆ ಕೈಗೊಳ್ಳಲಾಗಿದೆ. ಈ ಯಾತ್ರೆ ವೇಳೆ ರಾಜ್ಯದ ಮುರುಗನ್​ ದೇವಾಲಯಗಳಿಗೆ ಭೇಟಿ ನೀಡಲು ಬಿಜೆಪಿ ಕಾರ್ಯಕರ್ತರು ಯೋಜಿಸಿದ್ದರು. ಆದರೆ, ಇದಕ್ಕೆ ತಮಿಳುನಾಡು ಸರ್ಕಾರ ಅವಕಾಶ ನೀಡಲಿಲ್ಲ. ಕೋವಿಡ್​ ಹಿನ್ನಲೆ ಇದಕ್ಕೆ ಅನುಮತಿ ನೀಡಿಲ್ಲ.ಇನ್ನು ಈ ಯಾತ್ರೆ ನಡೆಸಿದ ಬಿಜೆಪಿ ಅಧ್ಯಕ್ಷ ಮುರುಗನ್​ ಸೇರಿದಂತೆ ಕೆಲವು ಕಾರ್ಯಕರ್ತರನ್ನು ಸರ್ಕಾರ ಬಂಧಿಸಿದ್ದರೂ, ನಾಯಕರು ಯಾತ್ರೆ ಮುಂದುವರೆಸಿದ್ದಾರೆ. ಈ ಯಾತ್ರೆಯಲ್ಲಿ ರಾಜ್ಯದ ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ.

ಇನ್ನು ಇತ್ತೀಚೆಗಷ್ಟೇ ಕಾಂಗ್ರೆಸ್​ ತೊರೆದು ಬಂದಿರುವ ನಟಿ ಖುಷ್ಭೂ ಸುಂದರ್​ ಕೂಡ ಬಿಜೆಪಿಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.
Published by: Seema R
First published: November 18, 2020, 2:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories