ಬೆಳಗಾವಿ: ಜಿಲ್ಲೆಯ ಬಿಜೆಪಿಯಲ್ಲಿ (Belagavi BJP) ಟಿಕೆಟ್ ಪಡೆಯಲು ಭಾರೀ ಪೈಪೋಟಿ ಆರಂಭವಾಗಿದೆ. ಜಿಲ್ಲೆಯ ಖಾನಾಪುರ ಕ್ಷೇತ್ರದಲ್ಲಿ (Khanapura Assembly Constituency) ಆಕಾಂಕ್ಷಿಗಳು ರಾಜ್ಯ ಅಷ್ಟೇ ಅಲ್ಲದೇ ದೆಹಲಿ (Delhi) ಅಂಗಳದಲ್ಲಿ ಪ್ರಭಾವ ಬಳಸಿ ಟಿಕೆಟ್ ಪಡೆಯಲು ಯತ್ನಿಸಿದ್ದಾರೆ. ಖಾನಾಪುರದಲ್ಲಿ ಒಂದಲ್ಲ, ಎರಡಲ್ಲ 10 ಜನ ಟಿಕೆಟ್ ಆಕಾಂಕ್ಷಿಗಳು ಇದ್ದಾರೆ. ಕೆಲವರು ರಾಜ್ಯಮಟ್ಟದಲ್ಲಿಯ ನಾಯಕರ ಮೂಲಕ ಟಿಕೆಟ್ ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ. ಇನ್ನೂ ಡಾ. ಸೋನಾಲಿ ಸರ್ನೋಬತ್ (Dr.Sonali Sarnobat) ಎಂಬ ಆಕಾಂಕ್ಷಿ ದೆಹಲಿ ಹೋಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Union Minister Amit Shah) ಭೇಟಿಯಾಗಿ ಟಿಕೆಟ್ ಪಡೆಯುವ ಯತ್ನ ನಡೆದಿದೆ.
ರಾಜ್ಯ ಬಿಜೆಪಿ ಉಪಾಧ್ಯಕ್ಷ, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ (Former DCM Laxman Savadi) ಮೂಲಕ ಬಿಜೆಪಿಗೆ ಬಂದಿರೋ ಮಾಜಿ ಶಾಸಕ ಅರವಿಂದ್ ಪಾಟೀಲ್ (Former MLA Arvind Patil) ಸಹ ತೀವ್ರ ಲಾಭಿ ನಡೆಸುತ್ತಿದ್ದಾರೆ.
ಮತ್ತೊಮ್ಮೆ ಟಿಕೆಟ್ಗಾಗಿ ಪ್ರಯತ್ನಿಸುತ್ತಿರುವ ವಿಠ್ಠಲ್ ಹಲಗೇಕರ್
ಡಿಸಿಸಿ ಬ್ಯಾಂಕ್ ರಾಜಕೀಯದಲ್ಲಿ (DCC Bank Politics) ಸವದಿ ಬಣದಲ್ಲಿ ಗಟ್ಟಿಯಾಗಿ ನಿಂತಿರೋ ಅರವಿಂದ್ ಪಾಟೀಲ್, 2018ರಲ್ಲಿ ಅಂಜಲಿ ನಿಂಬಾಳ್ಕರ್ (MLA Anjali Nimbalkar) ವಿರುದ್ಧ ಸೋತಿರುವ ವಿಠ್ಠಲ್ ಹಲಗೇಕರ್ (Vithal Halagekar) ಸಹ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ.
ಬಂಡಾಯ ಸಾಧ್ಯತೆ
ಅಂಜಲಿ ನಿಂಬಾಳ್ಕರ್ ವಿರುದ್ಧ 5,368 ಮತಗಳಿಂದ ಸೋತಿದ್ದ ವಿಠ್ಠಲ್ ಹಲಗೇಕರ್, ಅರವಿಂದ್ ಪಾಟೀಲ್, ಡಾ. ಸೋನಾಲಿ ಸರ್ನೋಬತ್, ಮಂಜುಳಾ ಕಾಪ್ಸೆ, ಸಂಜಯ್ ಕೋಬಲ್, ಧನಶ್ರೀ ಸರದೇಸಾಯಿ, ಜ್ಯೋತಿಬಾ ರೆಹಮಾನೆ, ಪ್ರಮೋದ್ ಕೊಚೇರಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಒಬ್ಬರಿಗೆ ಟಿಕೆಟ್ ಸಿಕ್ಕರೆ ಇನ್ನೊಬ್ಬರು ಪಕ್ಷೇತರಾಗಿ ಸ್ಪರ್ಧೆ ಮಾಡೋ ಸಾಧ್ಯತೆ ಇದ್ದು, ವರಿಷ್ಠರಿಗೆ ದೊಡ್ಡ ತಲೆನೋವು ಆಗಿದೆ. ಬಿಜೆಪಿ ಕಿತ್ತಾಟದಿಂದಲೇ ಲಾಭವಾಗಲಿದೆ ಎಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷ ಇದೆ.
ಖಾನಾಪುರ ಗೆಲ್ಲಲು ಬಿಜೆಪಿ ಪ್ಲ್ಯಾನ್
ಕಳೆದ ಹಲವು ದಶಕಗಳಿಂದ ಎಂಇಎಸ್ ಭದ್ರಕೋಟೆಯಾಗಿದ್ದ ಖಾನಾಪುರದಲ್ಲಿ 2008ರಲ್ಲಿ ಪ್ರಥಮ ಸಲ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ರೆಹಮಾನೆ ಗೆದಿದ್ದರು. ಬಳಿಕ 2018ರಲ್ಲಿ ಮೊದಲ ಸಲ ಕ್ಷೇತ್ರದಲ್ಲಿ ಕಾಂಗ್ರೆಸ್ನ ಅಂಜಲಿ ನಿಂಬಾಳ್ಕರ್ ಸಾಧಿಸಿದ್ದಾರೆ.
ಬಿಜೆಪಿಯಿಂದ 10 ಟಿಕೆಟ್ ಆಕಾಂಕ್ಷಿಗಳು
2023ಕ್ಕೆ ಖಾನಾಪುರದಲ್ಲಿ ಬಿಜೆಪಿ ಗೆಲ್ಲಿಸಲು ಹಿರಿಯ ನಾಯಕರ ಪ್ಲ್ಯಾನ್ ಮಾಡಿದ್ದಾರೆ. ಖಾನಾಪುರ ಕ್ಷೇತ್ರದಲ್ಲಿ ಬಿಜೆಪಿಗೆ ಆಕಾಂಕ್ಷಿಗಳ ಸಂಖ್ಯೆ ದೊಡ್ಡ ಟ್ರಬಲ್ ಆಗಿದೆ. ಖಾನಾಪುರದಲ್ಲಿ ಒಂದಲ್ಲ, ಎರಡಲ್ಲ 10 ಜನ ಟಿಕೆಟ್ ಆಕಾಂಕ್ಷಿಗಳು ಇದ್ದಾರೆ. ಯಾರಿಗೆ ಟಿಕೆಟ್ ಸಿಕ್ಕರು ಉಳಿದವರು ವಿರೋಧ ಮಾಡೋ ಆತಂಕ ಸಹ ಇದೆ.
ಮಕ್ಕಳ ಹಾಗೆ ಪ್ರಮಾಣ ಮಾಡಿಸಿದ್ದ ಸಿಎಂ ಬೊಮ್ಮಾಯಿ
ಖಾನಾಪುರ ಕ್ಷೇತ್ರದ ಆಕಾಂಕ್ಷಿಗಳನ್ನು ಜನಸಂಕಲ್ಪ ಯಾತ್ರೆ (Jana Sankalpa Yatre) ವೇಳೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai), ಶಾಲಾ ಮಕ್ಕಳ ಹಾಗೆ ಸಾಲಿಗಿ ನಿಲ್ಲಿಸಿ ಎಲ್ಲರಿಂದಲೂ ಪ್ರಮಾಣ ಮಾಡಿಸಿದ್ದರು. ಪಕ್ಷದ ಕಾರ್ಯಕರ್ತನಾಗಿ ಪ್ರಾಮಾಣಿಕವಾಗಿ ದುಡಿಯುತ್ತೇನೆ. ಹಲವಾರು ಆಕಾಂಕ್ಷಿಗಳಲ್ಲಿ ನಾನು ಒಬ್ಬ ಆಕಾಂಕ್ಷಿ.
ಪಕ್ಷ ಯಾರಿಗೆ ಟಿಕೆಟ್ ಕೊಟ್ಟರು ಅವರ ಜಯಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಪ್ರಮಾಣ ಮಾಡುತ್ತೇನೆ. ಖಾನಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಪ್ರಮಾಣ ಮಾಡುತ್ತೇವೆ ಎಂದು ಬೋಧಿಸಿದ್ದರು. ಆದರೇ ಈಗ ದೆಹಲಿ ಮಟ್ಟದಲ್ಲಿ ಟಿಕೆಟ್ ಪಡೆಯಲು ಲಾಭಿ ನಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ